ನಿಮ್ಮ ಫೋನ್ ಬ್ಯಾಟರಿ ಹಾಕಲಿದೆ ನಿಮ್ಮ ಬೆನ್ನಿಗೆ ಚೂರಿ

By Shwetha
|

ಇತ್ತೀಚಿನ ದಿನಗಳಲ್ಲಿ ನಿಮ್ಮ ಮೇಲೆ ಕಣ್ಣಿಡುವವರ ಸಂಖ್ಯೆ ಜಾಸ್ತಿಯಾಗಿದೆ. ಹೌದು ಈ ಸುದ್ದಿ ಕೇಳಿ ಹೌಹಾರದಿರಿ. ನಿಮ್ಮ ಮೊಬೈಲ್ ನಿಮ್ಮ ಮೇಲೆಯೇ ಗೂಢಚಾರಿಕೆಯನ್ನು ಮಾಡಲಿದ್ದು ಮೈಯೆಲ್ಲಾ ಕಣ್ಣಾಗಿ ನೀವು ಎಚ್ಚರಿಕೆಯಿಂದಿರಬೇಕಾಗುವ ಸಮಯ ಬಂದೊದಗಿದೆ. ನಿಮ್ಮ ಫೋನ್‌ನ ಬ್ಯಾಟರಿ ಸಾಕು ನಿಮ್ಮೆಲ್ಲಾ ಮಾಹಿತಿಗಳನ್ನು ಗೂಢಚಾರರಿಗೆ ತಿಳಿಸಲು.

ಓದಿರಿ: ಫೋನ್‌ನ ಬ್ಯಾಟರಿ ಜೀವಾಳ ಈ ಸರಳ ಟಿಪ್ಸ್‌ಗಳು

ಹೌದು ಸ್ಮಾರ್ಟ್‌ಫೋನ್ ಬ್ಯಾಟರಿಯ ಮೂಲಕ ಫೋನ್‌ನ ಮಾಲೀಕನ ಕುರಿತ ಸಂಪೂರ್ಣ ಮಾಹಿತಿಯನ್ನು ಅರಿತುಕೊಳ್ಳಬಹುದು ಎಂಬ ಹೊಸ ಸುದ್ದಿ ಕೇಳಿ ಬಂದಿದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಕೆಳಗಿನ ಸ್ಲೈಡರ್‌ಗಳಿಂದ ಮಾಹಿತಿ ಪಡೆದುಕೊಳ್ಳಿ.

ಟ್ರ್ಯಾಕ್ ಮಾಡಲು

ಟ್ರ್ಯಾಕ್ ಮಾಡಲು

ಮಾಲೀಕರ ಮಾಹಿತಿಗಳನ್ನು ಗುರುತಿಸಲು ಮತ್ತು ಇಂಟರ್ನೆಟ್‌ನಾದ್ಯಂತ ಅವರನ್ನು ಟ್ರ್ಯಾಕ್ ಮಾಡಲು ಫೋನ್ ಬ್ಯಾಟರಿಗಳನ್ನು ಬಳಸಲಾಗುತ್ತಿದೆ.

ಸಂರಕ್ಷಣಾ ಕ್ರಮ

ಸಂರಕ್ಷಣಾ ಕ್ರಮ

ಇದಕ್ಕಾಗಿ ಫೋನ್ ಮಾಲೀಕರು ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಸಾಫ್ಟ್‌ವೇರ್ ತುಣುಕನ್ನು

ಸಾಫ್ಟ್‌ವೇರ್ ತುಣುಕನ್ನು

ಎಚ್‌ಟಿಎಮ್ಎಲ್5 ನಲ್ಲಿ ಬಳಸಲಾಗುವ ಸಾಫ್ಟ್‌ವೇರ್ ತುಣುಕನ್ನು ಬಳಸಿಕೊಂಡು ಬ್ಯಾಟರಿಯಿಂದ ಮಾಲೀಕರ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ.

ಬ್ಯಾಟರಿ ಉಳಿಸಲು

ಬ್ಯಾಟರಿ ಉಳಿಸಲು

ಬಳಕೆದಾರರ ಫೋನ್‌ನಲ್ಲಿ ಎಷ್ಟು ಬ್ಯಾಟರಿ ಇದೆ ಎಂಬುದಾಗಿ ಈ ವೆಬ್‌ಸೈಟ್ ತಿಳಿಸುತ್ತದೆ. ಫೋನ್ ನಿಧಾನಗತಿಯಿಂದ ಚಲಿಸುತ್ತಿದ್ದಲ್ಲಿ ಬ್ಯಾಟರಿ ಉಳಿಸಲು ಈ ವೆಬ್‌ಸೈಟ್ ಬಳಕೆದಾರರಿಗೆ ಸಹಾಯ ಮಾಡುತ್ತದೆ.

ಕದಿಯುತ್ತದೆ

ಕದಿಯುತ್ತದೆ

ಆದರೆ ಈ ವೆಬ್‌ಸೈಟ್ ಇದೇ ಮಾಹಿತಿಯನ್ನು ಪಡೆದುಕೊಂಡು ಫೋನ್‌ನಲ್ಲಿರುವ ಮಾಲೀಕರ ಮಾಹಿತಿಯನ್ನು ಕದಿಯುತ್ತದೆ.

ಚಾರ್ಜ್ ಎಷ್ಟಿದೆ

ಚಾರ್ಜ್ ಎಷ್ಟಿದೆ

ಬಳಕೆದಾರರ ಅನುಮತಿ ಇಲ್ಲದೆ ಫೋನ್‌ನಲ್ಲಿ ಚಾರ್ಜ್ ಎಷ್ಟಿದೆ ಎಂಬುದನ್ನು ಈ ವೆಬ್‌ಸೈಟ್ ನೋಡುತ್ತಿದ್ದು, ಮಾಲೀಕರಿಗೆ ತಿಳಿಯದೆಯೇ ಫೋನ್‌ನ ಮಾಹಿತಿಯನ್ನು ಕದಿಯುತ್ತದೆ.

ಮಾಹಿತಿ ಸೋರಿಕೆ

ಮಾಹಿತಿ ಸೋರಿಕೆ

ಬ್ಯಾಟರಿ ಸಾಫ್ಟ್‌ವೇರ್‌ನಲ್ಲಿ ಭದ್ರತಾ ಅಂಶಗಳು ಕಡಿಮೆ ಇರುವುದು ಈ ರೀತಿಯ ಮಾಹಿತಿ ಸೋರಿಕೆಗೆ ಕಾರಣವಾಗಿದೆ.

ವೆಬ್‌ಸೈಟ್‌

ವೆಬ್‌ಸೈಟ್‌

ಬ್ಯಾಟರಿ ಮಾಹಿತಿಯನ್ನು ಕೇಳಿ ವೆಬ್‌ಸೈಟ್‌ಗಳು ನಿಮ್ಮನ್ನು ಸಂಪರ್ಕಿಸಿದಾಗ ಇಲ್ಲವೇ ಅವುಗಳು ಜಾಹೀರಾತನ್ನು ನೀಡುವ ಸಂದರ್ಭದಲ್ಲಿ ನೀವು ಹೆಚ್ಚಿನ ಮುತುವರ್ಜಿಯನ್ನು ಪಾಲಿಸಬೇಕಾಗುತ್ತದೆ.

Best Mobiles in India

English summary
Phone batteries are sending out information that could be used to identify their owners and track them around the internet, even if they have taken very careful privacy precautions, according to a paper by security researchers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X