Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಬ್ಲಾಸ್ಟ್, ರಾತ್ರಿ ಚಾರ್ಜಿಂಗ್‌ಗೆ ಹಾಕಿದ್ರೆ ಹೀಗೆಲ್ಲಾ ಆಗುತ್ತಾ?

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಅವುಗಳಿಗೆ ಕೆಲವು ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಅಂದರೆ ಬ್ಲಾಸ್ಟ್‌ ಆಗುವುದು ಅಥವಾ ಡಿಸ್‌ಪ್ಲೇ ಹಾಳಾಗುವುದು ಕೆಲವು ದಿನಗಳಿಂದೀಚೆಗೆ ಸಾಮಾನ್ಯವಾದ ವಿಷಯವಾಗಿದೆ. ಅದರಂತೆ ನಾಸಿಕ್‌ನಲ್ಲಿ ಮೊಬೈಲ್ ಸ್ಫೋಟ ಉಂಟಾಗಿದ್ದು, ಇದು ಎಲ್ಲರಿಗೂ ಎಚ್ಚರಿಕೆಯ ಸಂದೇಶವಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಸ್ಫೋಟ ಪ್ರಕರಣ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಒಂದು ರೀತಿಯ ಭಯದ ವಾತಾವರಣ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಚಾರ್ಜಿಂಗ್‌ಗೆ ಫೋನ್‌ ಇಟ್ಟಿರುವಾಗ ಅಥವಾ ರಾತ್ರಿ ವೇಳೆ ಚಾರ್ಜಿಂಗ್‌ಗೆ ಇಟ್ಟಿರುವಾಗ ಈ ದುರ್ಘಟನೆಗಳು ಜಾಸ್ತಿ ಆಗುತ್ತವೆ. ಹಾಗಿದ್ರೆ, ಏನಿದು ಘಟನೆ?, ಸ್ಮಾರ್ಟ್‌ಫೋನ್‌ ಬ್ಲಾಸ್ಟ್‌ ಆಗಿದ್ದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸ್ಮಾರ್ಟ್‌ಫೋನ್‌ ಬ್ಲಾಸ್ಟ್,ರಾತ್ರಿ ಚಾರ್ಜಿಂಗ್‌ಗೆ ಹಾಕಿದ್ರೆ ಹೀಗೆಲ್ಲಾ ಆಗುತ್ತಾ?

ಸ್ಮಾರ್ಟ್‌ಫೋನ್‌ ಬ್ಲಾಸ್ಟ್‌: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದ ಆಘಾತಕಾರಿ ಘಟನೆಯಲ್ಲಿ ಮನೆಯೊಳಗೆ ಚಾರ್ಜ್ ಆಗುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡಿದ್ದು, ಸುತ್ತಮುತ್ತಲಿನ ಜನರಿಗೆ ಭಾರೀ ಆತಂಕ ಉಂಟು ಮಾಡಿದೆ. ಅದರಲ್ಲೂ ಎರಡು ಮನೆಯ ಕಿಟಕಿ ಗಾಜುಗಳು ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜುಗಳು ಸಹ ಪುಡಿಪುಡಿಯಾಗಿವೆ ಎಂದರೆ ಈ ಬ್ಲಾಸ್ಟ್‌ ನ ತೀವ್ರತೆ ಹೇಗೆ ಎಂದು ನೀವೇ ಊಹಿಸಿಕೊಳ್ಳಿ.

ಇನ್ನು ಈ ಸ್ಮಾರ್ಟ್ ಫೋನ್‌ ಸ್ಫೋಟದಿಂದಾಗಿ ಸ್ಥಳದಲ್ಲಿದ್ದ ಮೂವರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಮಾಹಿತಿ ತಿಳಿದುಬಂದಿದೆ. ಸದ್ಯಕ್ಕೆ, ಸ್ಫೋಟಗೊಂಡ ಫೋನ್‌ನ ತಯಾರಿಕೆ ಅಥವಾ ಬ್ರ್ಯಾಂಡ್‌ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಘಟನೆಯ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಫೋನ್ ಇರುವ ಸ್ಥಳದ ಬಳಿ ಡಿಯೋಡರೆಂಟ್ ಬಾಟಲಿಯೊಂದು ಕಾಣಿಸಿಕೊಂಡಿದ್ದು, ಇದು ಸ್ಫೋಟವನ್ನು ತೀವ್ರಗೊಳಿಸಿದೆ ಎನ್ನಲಾಗಿದೆ.

ಡಿಯೋಡರೆಂಟ್‌ಗಳು ಹೆಚ್ಚು ಸುಡುವ ವಸ್ತುಗಳನ್ನು ಹೊಂದಿರುತ್ತವೆ. ಒಂದು ಸಣ್ಣ ಸ್ಪಾರ್ಕ್ಗೆ ಒಡ್ಡಿಕೊಂಡಾಗ, ಈ ವಸ್ತುಗಳು ಗಣನೀಯ ಸ್ಫೋಟಕ್ಕೆ ಕಾರಣವಾಗಲಿವೆ. ಇದು ಮೊಬೈಲ್ ಬ್ಲಾಸ್ಟ್ ಅನ್ನು ವಿಶೇಷವಾಗಿ ಅಪಾಯಕಾರಿಯಾಗಿಸಲು ಕಾರಣವಾದ ವಿಷಯವಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಘಟನೆಯ ತನಿಖೆ ನಡೆಯುತ್ತಿದ್ದು, ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅದರಲ್ಲೂ ದೀರ್ಘಾವಧಿಯ ಚಾರ್ಜಿಂಗ್ ನಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದೂ ಸಹ ಹೇಳಲಾಗಿದೆ. ಸಂಭಾವ್ಯ ಸ್ಫೋಟದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುವುದರಿಂದ, ರಾತ್ರಿಯಿಡೀ ಫೋನ್‌ಗಳನ್ನು ಚಾರ್ಜ್‌ನಲ್ಲಿ ಇಡದಂತೆ ತಜ್ಞರು ಸಲಹೆ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ವ್ಯಕ್ತಿಗಳು ಜಾಗರೂಕರಾಗಿರಬೇಕು ಮತ್ತು ಸುರಕ್ಷಿತ ಚಾರ್ಜಿಂಗ್ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದಿದ್ದಾರೆ.

ಜೊತೆಗೆ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್‌ ಮಾಡುವಾಗ ಉತ್ತಮವಾದ ಚಾರ್ಜರ್ ಅನ್ನು ಸಹ ಬಳಕೆ ಮಾಡುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೆ ಮನೆಯ ವಿದ್ಯುತ್‌ ಸಂಪರ್ಕ ಸರಿಯಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ನೀವು ನಿಮ್ಮ ಫೋನ್‌ ಅನ್ನು ಸೇಫ್‌ ಆಗಿ ಇರಿಸಿಕೊಳ್ಳಬಹುದಾಗಿದೆ. ಈ ಮೂಲಕ ಸಂಭಾವ್ಯ ಅಪಾಯಗಳನ್ನು ತಡೆಯಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್‌ಗಳೊಂದಿಗೆ ಚಾರ್ಜರ್‌ ಅನ್ನು ನೀಡುವುದಿಲ್ಲ. ಬದಲಾಗಿ ಇದನ್ನು ಪ್ರತ್ಯೇಕವಾಗಿ ಹಣ ನೀಡಿ ಖರೀದಿ ಮಾಡಬೇಕು. ಆದರೆ ಕೆಲವರು ಹಣ ಉಳಿಸುವ ಉದ್ದೇಶದಿಂದ ಕಡಿಮೆ ದರದ ಚಾರ್ಜರ್‌ ಗಳನ್ನು ಖರೀದಿ ಮಾಡುವುದು ಸಾಮಾನ್ಯವಾಗಿದೆ. ಪರಿಣಾಮ ಫೋನ್‌ಗೆ ಹೊಂದಿಕೊಳ್ಳುವ ಚಾರ್ಜರ್‌ ಅನ್ನು ಬಳಕೆ ಮಾಡಿದ್ರೆ ಈ ರೀತಿಯ ತೊಂದರೆಗಳಿಂದ ಪಾರಾಗಬಹುದು.

ಸ್ಮಾರ್ಟ್‌ಫೋನ್‌ ಬ್ಲಾಸ್ಟ್,ರಾತ್ರಿ ಚಾರ್ಜಿಂಗ್‌ಗೆ ಹಾಕಿದ್ರೆ ಹೀಗೆಲ್ಲಾ ಆಗುತ್ತಾ?

ಉಳಿದಂತೆ ನಿಮ್ಮ ಫೋನ್ ಚಾರ್ಜ್ ಆಗುತ್ತಿರುವಾಗ ಬಳಕೆ ಮಾಡುವುದನ್ನು ತಪ್ಪಿಸಿ, ಅಧಿಕ ಚಾರ್ಜ್ ಮಾಡುವುದನ್ನು ತಪ್ಪಿಸ, ನಿಮ್ಮ ಫೋನ್ ಬಿಸಿಯಾಗಿದ್ದರೆ ಅದನ್ನು ಬಳಕೆ ಮಾಡಬೇಡಿ,
ತಯಾರಕರು ಅನುಮೋದಿಸಿದ ಕೇಬಲ್‌ಗಳು ಮತ್ತು ಚಾರ್ಜರ್‌ಗಳನ್ನು ಬಳಸಿ, ನಿಮ್ಮ ಫೋನ್ ಅನ್ನು ನೇರ ಸೂರ್ಯನ ಬೆಳಕಿನಿಂದ ಮತ್ತು ಶಾಖದ ಮೂಲಗಳಿಂದ ದೂರವಿಡಿ, ಚಾರ್ಜ್ ಮಾಡುವ ಮೊದಲು ನಿಮ್ಮ ಫೋನ್ ತಂಪಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.

Best Mobiles in India

English summary
It is no mistake that the increasing number of mobile blast cases in recent times has created an atmosphere of fear among smartphone users. Meanwhile, a smartphone blasted violently in Nashik.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+