Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಬೆಚ್ಚಿ ಬೀಳಿಸೋ ಘಟನೆ! ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್‌ನಲ್ಲಿ ಬೆಂಕಿ

ಬೇಸಿಗೆ ಆರಂಭ ಆಗುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಥವಾ ಸ್ಫೋಟವಾಗುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ತ್ರಿಶೂರಿನ ತಿರುವಿಳ್ವಮಲದಲ್ಲಿ ಮೊಬೈಲ್ ಸ್ಫೋಟಗೊಂಡು ಆದಿತ್ಯಶ್ರೀ ಎಂಬ ಎಂಟು ವರ್ಷದ ಬಾಲಕಿ ಸಾವಿಗೀಡಾಗಿದ್ದಳು. ಇದೀಗ ದೇಶದಲ್ಲಿ ಮತ್ತೊಂದು ಘಟನೆ ವರದಿಯಾಗಿದ್ದು, ಮೊಬೈಲ್‌ ಬಳಕೆದಾರರು ಈ ಮೂಲಕ ಎಚ್ಚೆತ್ತುಕೊಳ್ಳಬೇಕಿದೆ.

ಹೌದು, ಈ ವೇಳೆ ಸ್ಮಾರ್ಟ್‌ಫೋನ್‌ ಬಳಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಅದರಲ್ಲೂ ಈ ಬೇಸಿಗೆ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಮೇಲೆ ತೀವ್ರ ನಿಗಾ ಇಡಲೇ ಬೇಕು. ಯಾಕೆಂದರೆ ಇಲ್ಲೋರ್ವ ವ್ಯಕ್ತಿಯ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್‌ನಲ್ಲಿ ಇದ್ದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ದೇಶಾದ್ಯಂತ ಸ್ಮಾರ್ಟ್‌ಫೋನ್‌ ಬಳಕೆದಾರರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಹಾಗಿದ್ರೆ, ಬೆಂಕಿ ಕಾಣಿಸಿಕೊಂಡ ಆ ಸ್ಮಾರ್ಟ್‌ಫೋನ್‌ ಯಾವುದು? ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಫೋನ್‌ ಬಳಕೆದಾರರನ್ನು ಬೆಚ್ಚಿ ಬೀಳಿಸೋ ಘಟನೆ! ಜೇಬಿನಲ್ಲಿದ್ದ ಫೋನ್‌ನಲ್ಲಿ ಬೆಂಕಿ

ಜೇಬಿನಲ್ಲಿದ್ದ ಫೋನ್‌ನಲ್ಲಿ ಬೆಂಕಿ: ಹರಿಯಾಣದ ನವೀನ್ ದಹಿಯಾ ಎಂಬ ಯುವಕ ತನ್ನ ಶರ್ಟ್ ಜೇಬಿನಲ್ಲಿ ಇರಿಸಿಕೊಂಡಿದ್ದ ವೇಳೆ ಅಘಾತಕಾರಿ ಘಟನೆ ಜರುಗಿದೆ. ಈ ವೇಳೆ ನವೀನ್‌ಗೆ ಜೇಬಿನ ಬಳಿ ಬಿಸಿ ಅನುಭವ ಆಗಿದೆಯಂತೆ. ನಂತರ ಅಲ್ಲಿಂದ ಸ್ವಲ್ಪ ಹೊಗೆ ಸಹ ಬರಲು ಶುರು ಮಾಡಿದೆ. ತಕ್ಷಣವೇ ಎಚ್ಚೆತ್ತ ಆತ ಫೋನ್‌ ಅನ್‌ ಅನ್ನು ದೂರಕ್ಕೆ ಎಸೆದಿದ್ದಾನೆ. ಈ ಮೂಲಕ ಆತ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಯಾವುದು ಆ ಫೋನ್?: ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ವಿವಿಧ ರೀತಿಯ ಸುಧಾರಿತ ಫೀಚರ್ಸ್‌ ಇರುವ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಈ ಕಾರಣಕ್ಕೆ ಈ ಹಿಂದೆ ಜರುಗುತ್ತಿದ್ದ ಈ ರೀತಿಯ ಘಟನೆಗಳು ಇಂದು ಅಷ್ಟಾಗಿ ಕಂಡುಬರುತ್ತಿಲ್ಲ. ಆದರೂ ರೆಡ್ಮಿ ಫೋನ್‌ಗಳಲ್ಲಿ ಅಲ್ಲಲ್ಲಿ ಈ ರೀತಿಯ ವರದಿಗಳು ಕೇಳಿಬರುತ್ತಿವೆ. ಈ ಯುವಕ ಸಹ ರೆಡ್ಮಿ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದ. ಈ ಫೋನ್ ಖರೀದಿ ಮಾಡಿ ಕೇವಲ ಎರಡು ತಿಂಗಳಾಗಿತ್ತು.

ಫೋನ್‌ ಬಳಕೆದಾರರನ್ನು ಬೆಚ್ಚಿ ಬೀಳಿಸೋ ಘಟನೆ! ಜೇಬಿನಲ್ಲಿದ್ದ ಫೋನ್‌ನಲ್ಲಿ ಬೆಂಕಿ

ಈ ಘಟನೆ ನಂತರ ನವೀನ್‌ ರೆಡ್ಮಿ ಗ್ರಾಹಕರ ಸೇವೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆದರೆ, ಅವರು ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಆರೋಪ ಇದೆ. ಹೀಗಾಗಿ ತೃಪ್ತಿಕರ ಪರಿಹಾರ ಸಿಗದಿದ್ದರೆ ರೆಡ್ಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ತಿಳಿಸಿದ್ದಾನೆ. ಅದಾಗ್ಯೂ ಈ ಫೋನ್ ಸುಖಾಸುಮ್ಮನೆ ಯಾಕೆ ಬೆಂಕಿಗೆ ಆಹುತಿಯಾಯಿತು ಎಂದು ತಿಳಿದುಬಂದಿಲ್ಲ. ಆದರೆ, ಈತ ಜಮೀನಿನಲ್ಲಿ ನಿಂತಿದ್ದಾಗ ತೀವ್ರ ಬಿಸಿಲಿನ ತಾಪ ತಾಳಲಾರದೆ ಬೆಂಕಿ ತಗುಲಿರಬಹುದು ಎಂದು ನಂಬಲಾಗಿದೆ.

ಬೆಸಿಗೆಯಲ್ಲಿ ಫೋನ್‌ ಬಿಸಿಯಾಗುವುದನ್ನು ತಡೆಯಲು ಹೀಗೆ ಮಾಡಿ: ನಿಮ್ಮ ಫೋನ್ ಅನ್ನು ನೇರವಾದ ಸೂರ್ಯನ ಬೆಳಕು ಅಥವಾ ತೀವ್ರವಾದ ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ಅಕಸ್ಮಾತ್‌ ನಿಮ್ಮ ಫೋನ್ ಅನ್ನು ಹೊರಗಡೆ ಬಳಕೆ ಮಾಡಲೇ ಬೇಕು ಎಂದಾದರೆ ಮಬ್ಬಾದ ಪ್ರದೇಶದಲ್ಲಿ ಬಳಕೆ ಮಾಡಲು ಪ್ರಯತ್ನಿಸಿ. ಹಾಗೆಯೇ ಫೋನ್ ಸುತ್ತಲೂ ಉತ್ತಮ ಗಾಳಿಯ ಪ್ರಸರಣಕ್ಕೆ ಅನುಕೂಲ ಮಾಡಿಕೊಡಿ.

ನೀವು ಸಕ್ರಿಯವಾಗಿ ಬಳಸದ ಯಾವುದೇ ಆಪ್‌ಗಳನ್ನು ಈ ವೇಳೆ ಅನ್‌ಇನ್‌ಸ್ಟಾಲ್‌ ಮಾಡಿ. ಏಕಕಾಲದಲ್ಲಿ ಅನೇಕ ಆಪ್‌ಗಳು ರನ್ ಮಾಡುವುದರಿಂದ ನಿಮ್ಮ ಫೋನ್ ಹೆಚ್ಚು ಕೆಲಸ ಮಾಡಲು ಮುಂದಾಗುತ್ತದೆ. ಹೀಗಾಗಿ ಫೋನ್ ತಂತಾನೆ ಹೆಚ್ಚಿನ ಶಾಖವನ್ನು ಉತ್ಪಾದಿಸಲು ಕಾರಣವಾಗಬಹುದು.ಇದರೊಂದಿಗೆ ವೈ-ಫೈ, ಬ್ಲೂಟೂತ್‌ ಹಾಗೂ ಜಿಪಿಎಸ್‌ ನಂತಹ ಬಳಕೆಯಾಗದ ಫೀಚರ್ಸ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಿ.

ಫೋನ್‌ ಬಳಕೆದಾರರನ್ನು ಬೆಚ್ಚಿ ಬೀಳಿಸೋ ಘಟನೆ! ಜೇಬಿನಲ್ಲಿದ್ದ ಫೋನ್‌ನಲ್ಲಿ ಬೆಂಕಿ

ಇದರೊಂದಿಗೆ ನಿಮ್ಮ ಫೋನ್ ಬಿಸಿಯಾಗಿದ್ದಾಗ ಚಾರ್ಜ್ ಮಾಡಬೇಡಿ. ಇದು ಬ್ಯಾಟರಿಯು ಮತ್ತೆ ಬಿಸಿಯಾಗಿ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರಲಿದೆ. ಜೊತೆಗೆ ನಿಮ್ಮ ಫೋನ್ ಮಾದರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೂಲಿಂಗ್ ಕೇಸ್ ಅಥವಾ ಕೂಲಿಂಗ್ ಪ್ಯಾಡ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಶಾಖವನ್ನು ಹೊರಹಾಕಲು ಮತ್ತು ನಿಮ್ಮ ಫೋನ್ ಅನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

Best Mobiles in India

English summary
During the summer, you should keep a close eye on your smartphone. Because the smartphone in someone's pocket caught fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+