Home
ಸುದ್ದಿಜಾಲ

ಭಾರತಕ್ಕೆ ಹಾನರ್‌ ರೀ ಎಂಟ್ರಿ.... ಇಲ್ಲೇ ತಯಾರಾಗಲಿವೆ ಸ್ಮಾರ್ಟ್‌ಫೋನ್‌ಗಳು!

ಭಾರತದ ಹಿಂದೆಂದಿಗಿಂತಲೂ ಈಗ ಮುಂದಿದೆ. ಟೆಕ್‌ ದೈತ್ಯ ಎನಿಸಿಕೊಂಡ ಅದೆಷ್ಟೋ ಕಂಪೆನಿಗಳು ಭಾರದಲ್ಲಿ ಭದ್ರವಾಗಿ ನೆಲೆಯೂರಲು ಮುಂದಾಗಿವೆ. ಈ ನಡುವೆ ತನ್ನ ಸುಧಾರಿತ ಸ್ಮಾರ್ಟ್‌ಫೋನ್‌ಗಳ ಮೂಲಕ ವಿಶೇಷವಾಗಿ ಗುರುತಿಸಿಕೊಂಡಿರುವ ಹಾನರ್‌ (Honor) ಹೊಸ ಹೆಜ್ಜೆ ಇಟ್ಟಿದ್ದು, ಈ ಮೂಲಕ ಭಾರತೀಯರಿಗೆ ಸಂತಸ ನೀಡಲಿದೆ.

ಹೌದು, ಹಾನರ್‌ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳ ಮಾರಾಟವನ್ನು ನಿಲ್ಲಿಸಿತ್ತು.ಆದರೆ, ಸ್ಮಾರ್ಟ್‌ಫೋನ್ ಮೇಕರ್ ಹಾನರ್ ಮರು ಪ್ರಾರಂಭ ಆಗಲಿದ್ದು, 2024ರ ಆರಂಭದಲ್ಲಿ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಹಾಗಿದ್ರೆ, ಏನಿದು ಹಾನರ್‌ನ ಹೊಸ ನಿರ್ಧಾರ?, ಇದರಿಂದ ಕಂಪೆನಿಗೆ ಆಗುವ ಲಾಭಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಭಾರತಕ್ಕೆ ಹಾನರ್‌ ರೀ ಎಂಟ್ರಿ.... ಇಲ್ಲೇ ತಯಾರಾಗಲಿವೆ ಸ್ಮಾರ್ಟ್‌ಫೋನ್‌ಗಳು!

ಹಾನರ್ ಟೆಕ್‌ನೊಂದಿಗೆ ಒಪ್ಪಂದ: ಹಾನರ್ ಇದೀಗ ಹೊಸದಾಗಿ ರೂಪುಗೊಂಡ ಸ್ಥಳೀಯ ಸಂಸ್ಥೆ ಹಾನರ್ ಟೆಕ್ (Honor Tech) ಜೊತೆಗೆ ಪರವಾನಗಿ ಒಪ್ಪಂದವನ್ನು ಪಡೆದಿದ್ದು, ಈ ಮೂಲಕ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ಗೆ ಪ್ರತಿಸ್ಫರ್ಧಿಯಾಗಲು ಎಲ್ಲಾ ತಯಾರಿ ನಡೆಸಿದೆ. ಅದರಲ್ಲೂ ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಹಾನರ್ (smartphone brand Honor) ಇಲ್ಲಿನ ಸ್ಥಳೀಯ ಕಂಪನಿಯೊಂದಿಗೆ ಪರವಾನಗಿ ಒಪ್ಪಂದದ ಮೂಲಕ ಮರುಪ್ರಾರಂಭ ಆಗುತ್ತಿರುವುದು ಭಾರತೀಯರಿಗೆ ಸಂತೋಷದ ವಿಷಯವಾಗಿದೆ.

ಇನ್ನು ಹಾನರ್ ಪುನರಾಗಮನವು ಹೊಸದಾಗಿ ರೂಪುಗೊಂಡ ಗುರುಗ್ರಾಮ್-ಆಧಾರಿತ ಸಂಸ್ಥೆ ಹಾನರ್ ಟೆಕ್‌ನೊಂದಿಗೆ ಕೆಲಸ ಮಾಡಲಿದೆ. ಇದರೊಂದಿಗೆ ಭಾರತದಲ್ಲಿ ಹಾನರ್ ಫೋನ್‌ಗಳ ಮೂರು ವೇರಿಯಂಟ್‌ಗಳನ್ನು ಪ್ರಾರಂಭಿಸುತ್ತದೆ ಎನ್ನಲಾಗಿದೆ. ಈ ವೇರಿಯಂಟ್‌ಗಳು ಸೆಪ್ಟೆಂಬರ್‌ನಲ್ಲಿ ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಉಳಿದಂತೆ ಕಂಪನಿಯು ಸಂಪೂರ್ಣವಾಗಿ ಸ್ಥಳೀಯ ಷೇರುದಾರರ ಒಡೆತನದಲ್ಲಿದ್ದು, ಭಾರತದಲ್ಲಿ ಹಾನರ್-ಬ್ರಾಂಡ್ ಸ್ಮಾರ್ಟ್‌ಫೋನ್‌ಗಳನ್ನು ತಯಾರು ಮಾಡುತ್ತದೆ. ಜೊತೆಗೆ ಸೇಲ್‌ ಮಾಡುವ ಕೆಲಸ ಸಹ ಮಾಡಲಿದೆ.

ಈ ಸಂಬಂಧ ಸಿಇಓ ಮಾಧವ್ ಶೇಠ್‌ (CEO Madhav Sheth) ಮಾಹಿತಿ ನೀಡಿದ್ದು, ಎಲ್ಲಾ ಫೋನ್‌ಗಳನ್ನು ಅಂತಿಮವಾಗಿ ಭಾರತದಲ್ಲಿ ತಯಾರಿಸಲಾಗುವುದು ಎಂದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ ಇಷ್ಟನ್ನು ಮಾತ್ರ ಉಲ್ಲೇಖ ಮಾಡಿದ್ದಾರೆ. ಈ ಮೂಲಕ ಭಾರತದಲ್ಲಿ ಹಾನರ್ ಫೋನ್‌ಗಳ ಸನ್ನಿಹಿತ ಬಿಡುಗಡೆ ಬಗ್ಗೆ ತಿಳಿಸಿದ್ದಾರೆ. ಇನ್ನು ಈ ಹಿಂದೆ ಭಾರತ ಸರ್ಕಾರದೊಂದಿಗಿನ ದೊಡ್ಡ ಸವಾಲೆಂದರೆ ಭಾರತದಲ್ಲಿ ಚೀನೀ ಬ್ರ್ಯಾಂಡ್ ಹೇಗೆ ಜವಾಬ್ದಾರಿಯುತವಾಗಿರಬಹುದು? ಎಂದು. ಆದರೆ, ಈಗ ಅದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಲಾಗಿದೆ ಎಂದಿದ್ದಾರೆ.

ಈ ನಡುವೆ ಚೀನಾ ಹಾಗೂ ಭಾರತಕ್ಕೆ ಟೆಕ್ನಾಲಜಿ ವಿಷಯಕ್ಕೆ ಸಂಬಂಧಿಸಿದಂತೆ ದೊಡ್ಡ ಯುದ್ಧವೇ ನಡೆಯುತ್ತಿದೆ. ಈ ಮೂಲಕ ಚೀನಾ ಸಾಕಷ್ಟು ನಷ್ಟವನ್ನೂ ಸಹ ಅನುಭವಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಚೀನಾದ ವ್ಯವಹಾರಗಳು ಭಾರತದಲ್ಲಿ ಹಲವಾರು ಆಪ್‌ಗಳನ್ನು ನಿಷೇಧಿಸುವುದರೊಂದಿಗೆ ಹೆಣಗಾಡುತ್ತಿದ್ದು, ಅದರ ನೆರೆಹೊರೆಯವರಿಂದ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ತಡೆಯಲು ಹೂಡಿಕೆಗಳ ಮೇಲಿನ ಪರಿಶೀಲನೆಯನ್ನು ಹೆಚ್ಚಿಗೆ ಮಾಡಿದೆ.

ಭಾರತಕ್ಕೆ ಹಾನರ್‌ ರೀ ಎಂಟ್ರಿ.... ಇಲ್ಲೇ ತಯಾರಾಗಲಿವೆ ಸ್ಮಾರ್ಟ್‌ಫೋನ್‌ಗಳು!

ಇನ್ನು ಕೌಂಟರ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ ವಿವೋ, ಶಿಯೋಮಿ, ರಿಯಲ್‌ಮಿ ಮತ್ತು ಇನ್ನಿತರೆ ಕಂಪೆನಿಗಳು 20 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಇದರಲ್ಲಿ ಭಾರತದಲ್ಲಿ ಅಗ್ರ ಮಾರಾಟಗಾರರಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನೊಂದಿಗೆ ಹಾನರ್ ಸ್ಪರ್ಧಿಸುತ್ತದೆ ಎಂದು ಉಲ್ಲೇಖಿಸಿದೆ. ಇದರಿಂದಾಗಿ ಭಾರತದಲ್ಲಿ ಹಾನರ್‌ ದೊಡ್ಡ ಮಟ್ಟದಲ್ಲೇ ಸದ್ದು ಮಾಡಲಿದೆ.

ಅದರಲ್ಲೂ ಹಾನರ್ ಟೆಕ್ 2024 ರಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 5 ಪ್ರತಿಶತ ಪಾಲನ್ನು ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಅಂದರೆ ಕನಿಷ್ಠ 10,000 ಕೋಟಿ ($1.20 ಬಿಲಿಯನ್) ಎಂದು ಸೇಠ್‌ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಇತರೆ ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ನಡುಕ ಸ್ಟಾರ್ಟ್‌ ಆಗಿದೆ.

ಇನ್ನು ಪ್ರಮುಖ ಮೂಲಗಳ ಪ್ರಕಾರ ಹಾನರ್‌ ಕಂಪೆನಿ ಭಾರತದಲ್ಲಿ ಹೊಸದಾಗಿ ಹಾನರ್‌ 90 (Honor 90) ಫೋನ್‌ ಪರಿಚಯಿಸಲು ತಯಾರಿ ನಡೆಸಿದೆ ಎನ್ನಲಾಗಿದೆ. ಈ ಹಾನರ್‌ 90 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ OLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಈ ಡಿಸ್‌ಪ್ಲೇ 1200 x 2664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ ಎನ್ನಲಾಗಿದೆ. ಜೊತೆಗೆ 1,600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಹಾಗೂ 120Hz ರಿಫ್ರೆಶ್ ರೇಟ್‌ ಮೂಲಕ ಹೆಚ್ಚು ಆಕರ್ಷಕವಾಗಿದೆ.

ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 7 ಜನ್ 1 SoC ಪ್ರೊಸೆಸರ್ ಬಲ ಹೊಂದಿರಲಿದ್ದು, ಇದು ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ ಓಎಸ್ 7. 1 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕೆಲಸ ಮಾಡಲಿದೆ. ಉಳಿದಂತೆ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ. ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ನೊಂದಿಗೆ ಬರಲಿದೆ.

Best Mobiles in India

English summary
Honor had stopped selling its smartphones in India, but smartphone maker Honor is set to relaunch and aims to start local production in early 2024. An agreement has been made with Honor Tech for this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+