Home
ಸುದ್ದಿಜಾಲ

ಸ್ಮಾರ್ಟ್‌ಫೋನ್ ಹದಿಹರೆಯದವರ ಬಳಕೆ ಮನಸ್ಥಿತಿಯನ್ನು ಸುಧಾರಿಸಲಿದೆಯಂತೆ: ಹೊಸ ವರದಿಯಲ್ಲೇನಿದೆ?

ಸ್ಮಾರ್ಟ್‌ಫೋನ್‌ (Smartphone) ಬಳಕೆ ಸಂಬಂಧ ಆಗಾಗ್ಗೆ ವಿಶೇಷ ಅಧ್ಯಯನವನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಮೂಲಕ ಜನರು ಸ್ಮಾರ್ಟ್‌ಫೋನ್‌ನಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?, ಇದರಿಂದ ಹೊರ ಬರುವುದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ನೀವು ಓದಿರಬಹುದು. ಆದರೆ, ಈ ಹೊಸ ಅಧ್ಯಯನದಲ್ಲಿ ಹೊಸ ವಿಷಯವನ್ನು ಕಂಡುಕೊಳ್ಳಲಾಗಿದ್ದು, ಫೋನ್‌ ಬಳಕೆದಾರರ ಮನಸ್ಥಿತಿಯನ್ನು ಫೋನ್‌ ಬೂಸ್ಟ್‌ ಮಾಡಲಿದೆ ಎಂದು ತಿಳಿದುಬಂದಿದೆ. 253 ಯುಎಸ್ ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯು ಸರಾಸರಿ, ಸ್ಮಾರ್ಟ್‌ಫೋನ್ ಬಳಕೆಯು ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹದಿಹರೆಯದವರಿಗೆ ಸಹಾಯಕವಾಗಬಹುದು ಎಂದು ಬಹಿರಂಗಪಡಿಸಿದೆ.

ಹೌದು, ಈವರೆಗೂ ಸ್ಮಾರ್ಟ್‌ಫೋನ್‌ ಬಳಕೆ ಮಾಡಿದ್ರೆ ಆ ರೀತಿಯ ಸಮಸ್ಯೆಗಳು, ಈ ರೀತಿಯ ಸಮಸ್ಯೆಗಳು ಅನ್ನೋ ವರದಿಗಳನ್ನೇ ನೀವು ನೋಡಿರಬಹುದು. ಆದರೆ ಯಾವುದೇ ವಸ್ತುವನ್ನು ಸಹ ಸರಿಯಾದ ರೀತಿಯಲ್ಲಿ ಬಳಕೆ ಮಾಡಿದ್ರೆ ಮನುಷ್ಯನಿಗೆ ಸಹಾಯ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ 'ಅತಿಯಾದರೆ ಅಮೃತವೂ ವಿಷ' ಅನ್ನೋ ಮಾಹಿತಿ ನಿಮ್ಮ ಗಮನಕ್ಕೆ ಇರಲಿ. ಇನ್ನು 12 ಮತ್ತು 17 ರ ನಡುವಿನ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಯುಎಸ್‌ ನಲ್ಲಿ ನಡೆಸಿದ ಅಧ್ಯಯನವು ಸ್ಮಾರ್ಟ್‌ಫೋನ್ ಅನ್ನು ಬಳಸುವುದರಿಂದ ಅವರ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಹಾಗಿದ್ರೆ ಏನಿದು ಹೊಸ ವಿಚಾರ ಬನ್ನಿ ತಿಳಿಯೋಣ.

ಸ್ಮಾರ್ಟ್‌ಫೋನ್ ಹದಿಹರೆಯದವರ ಬಳಕೆ ಮನಸ್ಥಿತಿಯನ್ನು ಸುಧಾರಿಸಲಿದೆಯಂತೆ..

ಸ್ಮಾರ್ಟ್‌ಫೋನ್‌ ಬಳಕೆಯಿಂದ ಹಲವು ಲಾಭ: ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರಾದ ಮ್ಯಾಟ್ ಮಿನಿಚ್ ಮತ್ತು ಮೇಗನ್ ಮೊರೆನೊ ಅವರು ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್ ಬಳಕೆಯ ಸಕಾರಾತ್ಮಕ ಸಂಬಂಧವನ್ನು ಒದಗಿಸುವ ಆರು ದಿನಗಳ ಅಧ್ಯಯನವನ್ನು ಹೊರತಂದಿದ್ದಾರೆ. ಸರಾಸರಿಯಾಗಿ, 7 ಪಾಯಿಂಟ್ ಸ್ಕೇಲ್‌ನಲ್ಲಿ ಅವರ ಮನಸ್ಥಿತಿ 5 ರಿಂದ 5.5 ಕ್ಕಿಂತ ಕಡಿಮೆಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಯುಎಸ್‌ನಲ್ಲಿ ನಡೆಸಿದ ಅಧ್ಯಯನವು ಸ್ಮಾರ್ಟ್‌ಫೋನ್ ಅನ್ನು ಬಳಸುವುದರಿಂದ ಅವರ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬಹಿರಂಗಪಡಿಸಿದೆ.

ಇದು ಹದಿಹರೆಯದವರು ಈ ಡಿವೈಸ್‌ಗಳಿಗೆ ಪ್ರವೇಶವನ್ನು ಹೊಂದಿರಬೇಕೇ ಎಂಬ ಚರ್ಚೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನ್ಯೂಯಾರ್ಕ್ ವಿಶ್ವವಿದ್ಯಾಲಯ, ಯುಎಸ್‌ಎ ಮತ್ತು ಬಾತ್ ಸ್ಪಾ ವಿಶ್ವವಿದ್ಯಾನಿಲಯ, ಯುಕೆಯ ಸಂಶೋಧಕರು ಈ ವಿಷಯದಲ್ಲಿ ಭಿನ್ನ ಮಾಹಿತಿ ಕಂಡುಕೊಂಡಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸಾಮಾಜಿಕ ಮನಶ್ಶಾಸ್ತ್ರಜ್ಞ ಸಂಶೋಧಕ ಜೊನಾಥನ್ ಹೈಡ್ಟ್, ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಾನಸಿಕ ಆರೋಗ್ಯದ ಹಾನಿಗೆ ಕೊಡುಗೆ ನೀಡುತ್ತಿದೆ ಎಂದು ಹೇಳಿದರೆ, ಬಾತ್ ಸ್ಪಾ ವಿಶ್ವವಿದ್ಯಾಲಯದ ಪೀಟ್ ಎಟ್ಚೆಲ್ಸ್ ಎರಡರ ನಡುವಿನ ಸಂಬಂಧವನ್ನು ಸಾಬೀತುಪಡಿಸಲು ಪುರಾವೆಗಳ ಕೊರತೆಯಿದೆ ಎಂದು ವಾದಿಸಿದ್ದಾರೆ. ಈ ಬಗ್ಗೆ ನ್ಯೂಸ್‌9ಲೈವ್‌ ವರದಿ ಮಾಡಿದೆ.

ಸ್ಮಾರ್ಟ್‌ಫೋನ್ ಹದಿಹರೆಯದವರ ಬಳಕೆ ಮನಸ್ಥಿತಿಯನ್ನು ಸುಧಾರಿಸಲಿದೆಯಂತೆ..

ಇನ್ನು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕರಾದ ಮ್ಯಾಟ್ ಮಿನಿಚ್ ಮತ್ತು ಮೇಗನ್ ಮೊರೆನೊ ಅವರು ಹದಿಹರೆಯದವರಲ್ಲಿ ಸ್ಮಾರ್ಟ್‌ಫೋನ್ ಬಳಕೆಯ ಸಕಾರಾತ್ಮಕ ಸಂಬಂಧವನ್ನು ಒದಗಿಸುವ ಆರು ದಿನಗಳ ಅಧ್ಯಯನವನ್ನು ಹೊರತಂದಿದ್ದಾರೆ. ಅವರು ಯುಎಸ್‌ ನಲ್ಲಿ ಆರು ದಿನಗಳ ಅಧ್ಯಯನದಲ್ಲಿ ಪಾಲ್ಗೊಳ್ಳಲು 253 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಿಗೆ 30 ಸಣ್ಣ ಸಮೀಕ್ಷೆಗಳನ್ನು 9 AM ನಿಂದ 9 PM ನಡುವೆ ಯಾದೃಚ್ಛಿಕ ಸಮಯದಲ್ಲಿ ಕಳುಹಿಸಿದರು. ಇದಾದ ನಂತರ ವಿದ್ಯಾರ್ಥಿಗಳ ಮನಸ್ಥಿತಿಯನ್ನು 7 ಪಾಯಿಂಟ್ ಪ್ರಮಾಣದಲ್ಲಿ ಲೆಕ್ಕಹಾಕಲಾಯಿತು.

ಸರಾಸರಿಯಾಗಿ, 7 ಪಾಯಿಂಟ್ ಸ್ಕೇಲ್‌ನಲ್ಲಿ ಅವರ ಮನಸ್ಥಿತಿ 5 ರಿಂದ 5.5 ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಇದು ಅವರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಸೂಚಿಸಬಹುದು. ಹದಿಹರೆಯದವರು ತಮ್ಮ ಫೋನ್‌ಗಳನ್ನು ಬಳಸುವಾಗ ಮೂಡ್‌ ಬೂಸ್ಟ್‌ ಆಗುವ ಬಗ್ಗೆ ವರದಿ ಮಾಡಿದ್ದಾರಂತೆ ಮತ್ತು ಅವರು ತಮ್ಮ ಫೋನ್‌ಗಳನ್ನು ಬಳಸುವ ಸಮಯದಲ್ಲಿ ಅವರ ಮನಸ್ಥಿತಿಗಳು ಸುಧಾರಿಸಿದೆ ಎಂದು ಅವರು ತಿಳಿಸಿದ್ದಾರೆ.

ಸ್ಮಾರ್ಟ್‌ಫೋನ್‌ಗಳು ಹದಿಹರೆಯದವರಿಗೆ ಒಳ್ಳೆಯದು ಎಂದು ಈ ಅಧ್ಯಯನವು ಸೂಚಿಸುತ್ತದೆ. ಇದಕ್ಕೆ ಸಂಶೋಧಕರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ, ಸ್ಮಾರ್ಟ್‌ಫೋನ್ ಒಳ್ಳೆಯದು ಅಥವಾ ಕೆಟ್ಟದ್ದು ಅಂತೇನು ಇಲ್ಲ. ಸ್ಮಾರ್ಟ್‌ಫೋನ್‌ ಮೂಡ್ ಮ್ಯಾನೇಜ್‌ಮೆಂಟ್ ಡಿವೈಸ್‌ ಆಗಿದ್ದು, ಅದು ಹಾನಿಕಾರಕವಲ್ಲ. ಆದರೆ ಹದಿಹರೆಯದವರು ಸ್ಮಾರ್ಟ್‌ಫೋನ್‌ಗಳಿಗೆ ವ್ಯಸನಿಯಾಗುತ್ತಿದ್ದರೆ ಮತ್ತು ಅವರ ಮನಸ್ಥಿತಿಯನ್ನು ಕಂಟ್ರೋಲ್‌ ಮಾಡಲು ಬೇರೆ ಯಾವುದೇ ಮಾರ್ಗವನ್ನು ಕಲಿಯದಿದ್ದರೆ, ಅದು ವ್ಯಸನಕಾರಿ ಅಥವಾ ಒತ್ತಾಯದ ನಡವಳಿಕೆಯಾಗಬಹುದು ಎಂದಿದ್ದಾರೆ. ಮುಖ್ಯವಾಗಿ, ಇದರೊಂದಿಗೆ ಹದಿಹರೆಯದವರಿಗೆ ಸ್ಮಾರ್ಟ್‌ಫೋನ್ ಬಳಕೆ ಹಾನಿಕಾರಕ ಎಂದು ನಮ್ಮ ಫಲಿತಾಂಶಗಳಲ್ಲಿ ಎಲ್ಲಿಯೂ ತಿಳಿದುಬಂದಿಲ್ಲ ಎಂದೂ ಸಹ ಮಿನಿಚ್ ಹೇಳಿದ್ದಾರೆ.

ಹಾಗೆಯೇ ಹಿಂದಿನ ಯಾವುದೇ ಭಾವನೆಗಳನ್ನು ನೆನಪಿಸಿಕೊಳ್ಳುವ ಬದಲು ನೈಜ ಸಮಯದಲ್ಲಿ ಬದುಕಲು ಈ ಫೋನ್‌ಗಳು ಸಹಾಯ ಮಾಡಲಿವೆ ಎಂದು ಮಿನಿಚ್ ಮತ್ತು ಮೊರೆನೊ ಅವರನ್ನು ಪೀಟ್ ಎಟ್ಚೆಲ್ಸ್ ಶ್ಲಾಘಿಸಿದ್ದಾರೆ. ಅದು ತಪ್ಪುದಾರಿಗೆಳೆಯಬಹುದು. ಆದಾಗ್ಯೂ, ಮೂಡ್ ಮ್ಯಾನೇಜ್‌ಮೆಂಟ್‌ಗಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ವ್ಯಸನಕಾರಿ ಎಂದು ಸೂಚಿಸುವ ಪ್ರಯತ್ನಗಳನ್ನು ಎಟ್ಚೆಲ್ಸ್ ಒಪ್ಪಿಕೊಂಡಿಲ್ಲ.

ಸ್ಮಾರ್ಟ್‌ಫೋನ್ ಹದಿಹರೆಯದವರ ಬಳಕೆ ಮನಸ್ಥಿತಿಯನ್ನು ಸುಧಾರಿಸಲಿದೆಯಂತೆ..

ಅದೇನೇ ಇರಲಿ, ಯಾವುದೇ ಅಧ್ಯಯನ ಏನು ಹೇಳಿದರೂ ಸಹ ನಮ್ಮ ನಿಯಂತ್ರಣ ನಮ್ಮ ಬಳಿಯೇ ಇದೆ ಅನ್ನೋದು ಮಾತ್ರ ನಿಮಗೆ ತಿಳಿದಿರಲಿ. ಮನುಷ್ಯ ಒಳ್ಳೆಯ ವಿಚಾರವನ್ನು ಗ್ರಹಿಸುವುದಕ್ಕಿಂತ ಕೆಟ್ಟ ವಿಚಾರದ ಕಡೆ ಹೆಚ್ಚು ವಾಲುತ್ತಾನೆ, ಆಕರ್ಷಿತನಾಗುತ್ತಾನೆ. ಇದನ್ನು ಕಂಟ್ರೋಲ್‌ ಮಾಡಿಕೊಂಡರೆ ಉತ್ತಮ ಜೀವನ ಖಂಡಿತಾ ಸಾಧ್ಯ. ಈ ಕಾರಣಕ್ಕೆ ಮಿತವಾಗಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಡಿವೈಸ್‌ಗಳನ್ನು ಬಳಕೆ ಮಾಡುವ ಮೂಲಕ ಮುಂದೆ ಆಗುವ ಸಮಸ್ಯೆಗಳಿಂದ ಪಾರಾಗಬಹುದಾಗಿದೆ.

Best Mobiles in India

English summary
If you have used a smartphone till now, you may have seen reports of such problems, But in this study it was found that teenagers can get better mood by using smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+