ಸ್ಮಾರ್ಟ್‌ಫೋನ್ ಬಳಕೆದಾರರು ತಿಳಿಯಲೇಬೇಕಾದ 8 ರಹಸ್ಯ ಕೋಡ್‌ಗಳು!
ಸ್ಮಾರ್ಟ್‌ಫೋನ್‌ಗಳು ಇಂದಿಗೂ ಹಲವಾರು ಜನರಿಗೆ ತಿಳಿಯದ ಕೆಲವು ಸೀಕ್ರೇಟ್ ವಿಷಯಗಳನ್ನು ಹೊಂದಿರುತ್ತವೆ. ಈ ಕೋಡ್‌ಗಳನ್ನು ಬಳಕೆ ಮಾಡಿಕೊಂಡು ಬಳಕೆದಾರರು ಸುಲಭವಾಗಿ ಅಗತ್ಯ ಸೇವೆ ಪಡೆದುಕೊಳ್ಳಬಹುದು. ಈ ಕೋಡ್‌ಗಳ ಮೂಲಕ ನಿಮ್ಮ ಫೋನ್ ಬಗ್ಗೆ ತಿಳಿಯಬಹುದು, ನಿಮ್ಮ ಫೋನ್‌ಗೆ ಯಾವುದೇ ಸಮಸ್ಯೆ ಉಂಟಾಗದಂತೆ ತಡೆಯಬಹುದು.
ಹೌದು, ಸ್ಮಾರ್ಟ್‌ಫೋನ್‌ಗಳು ಅನೇಕ ಬಳಕೆದಾರರಿಗೆ ತಿಳಿದಿಲ್ಲದ ಫೀಚರ್ಸ್‌ಗಳನ್ನು ಹೊಂದಿದ್ದು, ಅದರಲ್ಲಿ ಪ್ರಮುಖವಾಗಿರುವುದು ಹಾಗೂ ಬಹಳ ಜನರಿಗೆ ತಿಳಿಯದೇ ಇರುವುದು ಮೌಲ್ಯಯುತ ಮಾಹಿತಿಯನ್ನು ಒದಗಿಸುವ ರಹಸ್ಯ ಸಂಕೇತಗಳು. ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ರೀತಿಯ ರಹಸ್ಯ ಸಂಕೇತಗಳಿದ್ದು, ಒಂದು ಅನ್‌ಸ್ಟ್ರಕ್ಚರ್ಡ್ ಸರ್ವೀಸ್ ಡೇಟಾ (USSD) ಮತ್ತೊಂದು ಮುಖ್ಯ ಯಂತ್ರ ಇಂಟರ್ಫೇಸ್ (MMI) ಕೋಡ್‌ಗಳು. ಹಾಗಿದ್ರೆ, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

#0#: ನಿಮ್ಮ ಸ್ಮಾರ್ಟ್‌ಫೋನ್ ಎಲ್ಲಾ ರೀತಿಯಲ್ಲೂ ಸರಿಯಾಗಿದೆಯಾ ಎಂದು ತಿಳಿದುಕೊಳ್ಳಲು ನೀವು ಸ್ಮಾರ್ಟ್‌ಫೋನ್ ರಿಪೇರಿ ಅಂಗಡಿಗೆ ಹೋಗುವ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಫೋನ್‌ನ ಡಿಸ್‌ಪ್ಲೇ, ಸ್ಪೀಕರ್, ಕ್ಯಾಮೆರಾ ಮತ್ತು ಸೆನ್ಸರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ನಿರ್ಧರಿಸಲು ನಿಮ್ಮ ಫೋನ್‌ನಲ್ಲಿ #0# ಎಂದು ಟೈಪ್ ಮಾಡಿದರೆ ಸಾಕು ಇದರಿಂದ ನಿಮಗೆ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ.
*#07#: ಈ ಕೋಡ್ ಬಗ್ಗೆ ಕೆಲವರಿಗೆ ತಿಳಿದಿರುತ್ತದೆ. ಈ ಕೋಡ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಹೊರಸೂಸುವ ವಿಕಿರಣದ ಪ್ರಮಾಣವನ್ನು ತಿಳಿದುಕೊಳ್ಳಬಹುದು. ಅಂದರೆ, ಈ ನಿಮ್ಮ ಫೋನ್‌ನ ನಿರ್ದಿಷ್ಟ ಅಬ್ಸಾರ್ಪ್ಶನ್ ರೇಟ್ (SAR) ಮೌಲ್ಯವನ್ನು ಇದು ನೀಡುತ್ತದೆ. ಈ SAR ಮೌಲ್ಯವು ಯಾವಾಗಲೂ 1.6ಕ್ಕಿಂತ ಕಡಿಮೆಯಿರಬೇಕು. ಜಾಸ್ತಿ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್ ತೊಂದರೆಯಲ್ಲಿದೆ ಎಂದರ್ಥ.

*#06#: ನಿಮ್ಮ ಸ್ಮಾರ್ಟ್ ಏನಾದರೂ ಕಳೆದುಹೋದರೆ ಅದನ್ನು ಪತ್ತೆ ಮಾಡಲು ಮೊದಲು ನಿಮ್ಮ ಇಂಟರ್‌ನ್ಯಾಶನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ (IMEI) ನಂಬರ್ ಅನ್ನು ಬಳಕೆ ಮಾಡಬೇಕು. ಇದಕ್ಕಾಗಿ ಮೊದಲೇ ಈ ನಂಬರ್ ಅನ್ನು ಪತ್ತೆ ಮಾಡಿ ಎಲ್ಲಾದರೂ ಬರೆದು ಇಟ್ಟುಕೊಳ್ಳಿ ಇದಕ್ಕಾಗಿ ನೀವು *#06# ಎಂದು ಟೈಪ್ ಮಾಡಬೇಕಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್ ಎಲ್ಲಿದೆ ಎಂದು ಪೊಲೀಸರು ಸುಲಭವಾಗಿ ಕಂಡುಕೊಳ್ಳುತ್ತಾರೆ.
##4636##: ಈ ಕೋಡ್ ಬಹಳ ದೊಡ್ಡದಾಗಿದ್ದರೂ ಸಹ ನಿಮಗೆ ಅಗತ್ಯ ಮಾಹಿತಿ ನೀಡುವ ಕೋಡ್ ಇದಾಗಿದೆ. ಈ ಕೋಡ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಇಂಟರ್ನೆಟ್ ಮತ್ತು ವೈ-ಫೈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಫೋನ್ ಏನಾದರೂ ಸಮಸ್ಯೆಗೆ ಒಳಗಾಗಿದೆಯಾ ಅಥವಾ ನಿಮ್ಮ ವ್ಯಾಪ್ತಿಯಲ್ಲಿ ಏನಾದರೂ ನೆಟ್‌ವರ್ಕ್ ಸಮಸ್ಯೆ ಇರಬಹುದೇ ಎಂದು ತಿಳಿಯಲು ಸಹಕಾರಿಯಾಗಲಿದೆ.
##34971539##: ಸಾಮಾನ್ಯವಾಗಿ ಎಲ್ಲಾ ಫೋನ್‌ಗಳಲ್ಲಿ #0# ಕೋಡ್ ಕೆಲಸ ಮಾಡುವುದಿಲ್ಲ. ಅದರ ಬದಲು ನೀವು ##34971539## ನ ದೀರ್ಘ ಕೋಡ್ ಅನ್ನು ಬಳಕೆ ಮಾಡುವ ಮೂಲಕ ನಿಮ್ಮ ಫೋನ್‌ನ ಕ್ಯಾಮೆರಾ ಸಾಮರ್ಥ್ಯ ಹೇಗಿದೆ, ಸರಿಯಾಗಿ ಕೆಲಸ ಮಾಡುತ್ತಿದೆಯಾ ಅಥವಾ ಅದರಲ್ಲಿ ಏನಾದರೂ ಸಮಸ್ಯೆ ಉಂಟಾಗಿದೆಯಾ ಎಂದು ತಿಳಿದುಕೊಳ್ಳಬಹುದಾಗಿದೆ.
*#*#759#*#* : ಈ ಕೋಡ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಎಂಟ್ರಿ ಮಾಡಿದರೆ ಅಪ್ಲಿಕೇಶನ್ ಸ್ಥಾಪನೆಗೆ ಸಂಬಂಧಿಸಿದ ಮಾಹಿತಿ ಜೊತೆಗೆ ಇತರ ಡೇಟಾದೊಂದಿಗೆ RLZ ಡೀಬಗ್ UI ಅನ್ನು ಪ್ರದರ್ಶಿಸಲಾಗುತ್ತದೆ. ಈ ಇಂಟರ್ಫೇಸ್ ಮೂಲಕ OEM ಮೋಡ್ ಅನ್ನು ಆನ್ ಮತ್ತು ಆಫ್ ಮಾಡಲು ಸಹ ಸಾಧ್ಯವಿದ್ದು, ಇದಕ್ಕಾಗಿ ಶಾರ್ಟ್‌ಕಟ್ ಆಗಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಕೋಡ್‌ಗಳ ಹೊರಾತಾಗಿಯೂ ಜನಪ್ರಿಯ ಆಂಡ್ರಾಯ್ಡ್ ಬ್ರ್ಯಾಂಡ್‌ಗಳಾದ ಆಸುಸ್ ಗೂಗಲ್, ಎಲ್‌ಜಿ, ಮೊಟೊರೊಲಾ, ನೋಕಿಯಾ, ಒಪ್ಪೋ, ರಿಯಲ್‌ಮಿ, ಸ್ಯಾಮ್‌ಸಂಗ್ ಸೇರಿದಂತೆ ವಿವಿಧ ಕಂಪೆನಿಗಳು ತಮ್ಮದೇ ಆದ ಕೋಡ್ ಗಳನ್ನು ನಿಖರ ಮಾಹಿತಿ ತಿಳಿದುಕೊಳ್ಳುವ ಉದ್ದೇಶದಿಂದ ಪಡೆದುಕೊಂಡಿವೆ. ಇವು ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ನೀಡುತ್ತವೆ.


Click it and Unblock the Notifications








