Home
ಸುದ್ದಿಜಾಲ

10,000ರೂ.ಒಳಗೆ ಲಭ್ಯ ಈ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ಗಳು ಇಂದು ಎಲ್ಲರಿಗೂ ಅಗತ್ಯವಾಗಿ ಬೇಕಾದ ಡಿವೈಸ್‌ಗಳಾಗಿದ್ದು, ಈ ಮೂಲಕ ಜನರು ತಮಗೆ ಬೇಕಾದ ಎಲ್ಲಾ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಪ್ರಮುಖ ಕಂಪೆನಿಗಳು ಸುಧಾರಿತ ಫೀಚರ್ಸ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುತ್ತಿದ್ದು, ಈ ಫೋನ್‌ಗಳು ಅಗ್ಗದ ದರದಿಂದ ದುಬಾರಿ ಬೆಲೆಯನ್ನು ಹೊಂದಿವೆ.ಅದಾಗ್ಯೂ ನೀವು ಅತ್ಯುತ್ತಮ ಫೀಚರ್ಸ್‌ ಇರುವ ಫೋನ್‌ಗಳನ್ನು 10,000ರೂ.ಒಳಗೆ ಖರೀದಿ ಮಾಡಬಹುದು.

ಹೌದು, ಸಾಮಾನ್ಯವಾಗಿ ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳು ವಿವಿಧ ಆಕರ್ಷಕ ಫೀಚರ್ಸ್‌ ಹೊಂದಿರುವುದಿಲ್ಲ. ಆದರೆ, ಇತ್ತೀಚೆಗೆ ಲಾಂಚ್‌ ಆಗಿರುವ ಕೆಲವು ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್‌ನೊಂದಿಗೆ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಹಾಗೆಯೇ ಈ ಫೋನ್‌ಗಳಿಗೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳಲ್ಲಿ ದೊಡ್ಡ ಮಟ್ಟದ ಡಿಸ್ಕೌಂಟ್‌ ಸಹ ಇದೆ. ಹಾಗಿದ್ರೆ ಬನ್ನಿ 10,000 ರೂ.ಒಳಗೆ ಸಿಗುವ ಅತ್ಯುತ್ತಮ ಫೋನ್‌ಗಳ ವಿವರವನ್ನು ತಿಳಿದುಕೊಳ್ಳೋಣ.

10,000ರೂ.ಒಳಗೆ ಲಭ್ಯ ಈ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳು!

ನೋಕಿಯಾ C32: ಈ ಸ್ಮಾರ್ಟ್‌ಫೋನ್ 8,999 ರೂ.ಗಳ ಬೆಲೆಗೆ ಲಭ್ಯ ಇದ್ದು, ಇದು 4 GB RAM ಮತ್ತು 64 GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ ಈ ಫೋನ್‌ನ ಪ್ರತಿಸ್ಪರ್ಧಿಗಳ ವಿರುದ್ಧ ಹೋಲಿಕೆ ಮಾಡಲು ಪರಿಗಣಿಸಬೇಕಾದ ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದುದು ಆಂಡ್ರಾಯ್ಡ್‌ ಯುಐ. ಇದರೊಂದಿಗೆ IP52 ರೇಟಿಂಗ್ ಅನ್ನು ಹೊಂದಿದ್ದು, ನೀರು ಮತ್ತು ಧೂಳಿಗೆ ಪ್ರತಿರೋಧ ಒಡ್ಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಒಂದು ಪೂರ್ಣ ಚಾಜಿಂಗ್‌ನಲ್ಲಿ ಮೂರು ದಿನಗಳ ಬ್ಯಾಟರಿ ಬ್ಯಾಕಪ್‌ ಸಿಗಲಿದೆ.

ರೆಡ್ಮಿ A2: ಈ ಫೋನ್‌ ಅನ್ನು ನೀವು 6,299 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ ತನ್ನ ಬೆಲೆ ವಿಭಾಗದಲ್ಲಿ ಸಾಟಿಯಿಲ್ಲದ ಪ್ರಭಾವಶಾಲಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗುವುದಿಲ್ಲ. ಯಾಕೆಂದರೆ ಇದು 6.52 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು. ಆಕ್ಟಾ-ಕೋರ್ ಹಿಲಿಯೋ G36 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್‌ ಆಗಿದ್ದು, ಪೂರ್ಣ ಚಾರ್ಜಿಂಗ್‌ನಲ್ಲಿ ಎರಡು ದಿನಗಳ ಬ್ಯಾಟರಿ ಬ್ಯಾಕಪ್‌ ಲಭ್ಯ.

10,000ರೂ.ಒಳಗೆ ಲಭ್ಯ ಈ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳು!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04: ಈ ಫೋನ್ ಈ ಬೆಲೆಯ ವಿಭಾಗದಲ್ಲಿ ಇತ್ತೀಚೆಗೆ ಹೆಚ್ಚು ಸೇಲ್‌ ಆಗುತ್ತಿದೆ. ಅಂತೆಯೇ ಇದು 8,499ರೂ.ಗಳ ಬೆಲೆ ಹೊಂದಿದ್ದು, 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದಿದ್ದು, 1080p ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಇನ್ನುಳಿದಂತೆ ಯುಎಸ್‌ಬಿ ಟೈಪ್‌-ಸಿ ಪೋರ್ಟ್ ಮೂಲಕ ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆದಿದ್ದು, ಇದಕ್ಕಾಗಿ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಪೊಕೊ C51: ಈ ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 7,249ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 4GBRAM ಹಾಗೂ 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಈ ಫೋನ್‌ ಅನ್ನು ರೆಡ್ಮಿ A2 ಪ್ಲಸ್‌ಗೆ ಹೋಲಿಕೆ ಮಾಡಬಹುದಾಗಿದೆ. ಇನ್ನು 8 MP ರಿಯರ್‌ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಇದ್ದು, 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಮೊಟೊರೊಲಾ G13: ಈ ಫೋನ್ 9,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಆಗುತ್ತಿದ್ದು, 6.5 ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್‌ ರೇಟ್‌ ಹಾಗೂ 400 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದ್ದು, ಮೀಡಿಯಾಟೆಕ್ MT6769Z ಹಿಲಿಯೊ G85 ಪ್ರೊಸೆಸರ್‌ ಬಲದಲ್ಲಿ ಕಾರ್ಯನಿರ್ವಹಿಸಲಿದೆ. 50 MP ಮುಖ್ಯ ಕ್ಯಾಮೆರಾದ ಆಯ್ಕೆಯೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಇದರಲ್ಲಿದೆ.

10,000ರೂ.ಒಳಗೆ ಲಭ್ಯ ಈ ಅತ್ಯುತ್ತಮ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳು!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13: ಈ ಫೋನ್ 11,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು ನೀವು ಇದನ್ನು 9,699ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಬೆಲೆಯೊಂದಿಗೆ ಈ ಫೋನ್ ಮೀಸಲಾದ ಅಲ್ಟ್ರಾವೈಡ್ ಲೆನ್ಸ್ ಸೇರಿದಂತೆ ಶಕ್ತಿಯುತ ಕ್ಯಾಮರಾ ರಚನೆ ಹೊಂದಿದ್ದು, ಎಕ್ಸಿನೋಸ್ 850 ಪ್ರೊಸೆಸರ್‌ ಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 64GB/128GB ಸ್ಟೋರೇಜ್‌ ಸಾಮರ್ಥ್ಯ ಇದ್ದು, 6000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದೆ.

Best Mobiles in India

English summary
Here is a list of the best phones to buy under Rs 10000. These phones come with different features from each other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+