ಹಾಲು ಜೇನಿನ ಸಂಸಾರಕ್ಕೆ ಸ್ಮಾರ್ಟ್‌ಫೋನ್‌ ಹಿಂಡಲಿದೆ ಹುಳಿ

Written By:

ನಿಮ್ಮ ಸಂಗಾತಿಯೊಂದಿಗೆ ನೀವು ಇರುವಾಗ ಫೋನ್‌ನಲ್ಲಿ ನೀವು ಹೆಚ್ಚು ವ್ಯಸ್ತರಾಗಿರುವುದು ನಿಮ್ಮ ಸುಖಮಯ ದಾಂಪತ್ಯಕ್ಕೆ ಹುಳಿ ಹಿಂಡಲಿದೆ ಎಂಬುದಾಗಿ ಸಂಶೋಧಕರು ಅನ್ವೇಷಿಸಿದ್ದಾರೆ. ದಾಂಪತ್ಯವನ್ನು ಹಾಳು ಮಾಡುವುದರ ಜೊತೆಗೆ ಒತ್ತಡ ಮತ್ತು ಖಿನ್ನತೆಯನ್ನು ಹೆಚ್ಚಿಸಲು ನಿಮ್ಮ ಬಳಿ ಇರುವ ಜಂಗಮವಾಣಿಗೆ ಚಿಟಿಕೆ ಹೊಡೆಯುವ ಕೆಲಸವಾಗಿದೆಯಂತೆ.

ಓದಿರಿ: ಏಲಿಯನ್‌ಗಳಿಂದ ಭೂಮಿಯ ಮೇಲೆ ದಾಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಖಮಯ ದಾಂಪತ್ಯ

ಸುಖಮಯ ದಾಂಪತ್ಯ

ಸುಖಮಯ ದಾಂಪತ್ಯ

ಸುಖಮಯ ದಾಂಪತ್ಯದ ನಡುವೆ ನಿಮ್ಮ ಫೋನ್ ಮೂಗುತೂರಿಸುವುದು ಸತಿಪತಿಯರ ನಡುವೆ ಇರಿಸು ಮುರಿಸನ್ನು ಉಂಟುಮಾಡುತ್ತದೆಯಂತೆ ಮತ್ತು ಇದರಿಂದ ದಾಂಪತ್ಯ ಒಡಕುಗಳು ಸಂಭವಿಸುತ್ತವೆ.

ಫೋನ್‌ನ ಅಪರಿಮಿತ ಬಳಕೆ

ಫೋನ್‌ನ ಅಪರಿಮಿತ ಬಳಕೆ

ಫೋನ್‌ನ ಅಪರಿಮಿತ ಬಳಕೆ

ಅಧ್ಯಯನ ಮಂಡಳಿಯು 453 ವಯಸ್ಕರನ್ನು ಈ ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದು, ಫೋನ್‌ನ ಅಪರಿಮಿತ ಬಳಕೆ ಇವರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎಂಬುದನ್ನು ಕಂಡುಕೊಂಡಿದೆಯಂತೆ.

ತೊಂದರೆ

ತೊಂದರೆ

ತೊಂದರೆ

ತಮ್ಮ ಸಂಗಾತಿಯೊಡನೆ ಇರುವಾಗ ಎಷ್ಟು ಜನರು ತಮ್ಮ ಫೋನ್ ಅನ್ನು ಬಳಸುತ್ತಾರೆ ಮತ್ತು ಅದರಿಂದ ಅವರಿಗೆ ಯಾವ ರೀತಿಯ ತೊಂದರೆ ಉಂಟಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ.

ಕಿರಿಕಿರಿ

ಕಿರಿಕಿರಿ

ಕಿರಿಕಿರಿ

ಇನ್ನು ಇವರುಗಳ ನಡುವೆ ಫೋನ್ ಬಂದಾಗ ಹೆಚ್ಚಿನ ಜೋಡಿಗಳು ಕಿರಿಕಿರಿಯನ್ನು ಅನುಭವಿಸಿರುವುದು ಕಂಡುಬಂದಿದೆ ಅಂತೆಯೇ ಖಿನ್ನತೆ ಈ ಜೋಡಿಗಳಲ್ಲಿ ಉಂಟಾಗಿದೆ

ಫೋನ್ ಬಳಕೆ

ಫೋನ್ ಬಳಕೆ

ಫೋನ್ ಬಳಕೆ

ಇನ್ನು ಸಂಗಾತಿಯೊಡನೆ ಇರುವಾಗ ಫೋನ್ ಬಳಕೆಗೆ ಕೇವಲ ಸ್ವಲ್ಪ ಜನರು ಮಾತ್ರ ಅನುಮೋದನೆಯನ್ನು ನೀಡಿದ್ದು ಇನ್ನುಳಿದವರು ಫೋನ್ ಬಳಕೆ ನಮಗೆ ಸರಿಬರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ದಾಂಪತ್ಯದಲ್ಲಿ ಬಿರುಕನ್ನು ಉಂಟುಮಾಡಿದೆ

ದಾಂಪತ್ಯದಲ್ಲಿ ಬಿರುಕನ್ನು ಉಂಟುಮಾಡಿದೆ

ದಾಂಪತ್ಯದಲ್ಲಿ ಬಿರುಕನ್ನು ಉಂಟುಮಾಡಿದೆ

ಇನ್ನು ಸಮೀಕ್ಷೆಗೆ ಒಳಪಡಿಸಿದ ಮೂರನೇ ಒಂದು ಭಾಗದಷ್ಟು ಜನರು ಸ್ಮಾರ್ಟ್‌ಫೋನ್‌ಗಳು ತಮ್ಮ ದಾಂಪತ್ಯದಲ್ಲಿ ಬಿರುಕನ್ನು ಉಂಟುಮಾಡಿದೆ ಎಂದೇ ಹೇಳಿಕೊಂಡಿದ್ದಾರೆ.

ವಿರಸ

ವಿರಸ

ವಿರಸ

ಅಂತೂ ಫೋನ್ ಬಳಕೆಯಿಂದಾಗಿ ಸಂಗಾತಿಗಳಲ್ಲಿ ವಿರಸ ಏರ್ಪಡುತ್ತಿರುವುದು ಖೇದಕರ ಸಂಗತಿ ಎಂದೆನಿಸಿದರೂ ಸನಿಹವಿರುವ ಸಂದರ್ಭದಲ್ಲಿ ಈ ಉಪಕರಣದ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Attending to your smartphone while spending time with your partner may come at a far greater cost than you imagine as researchers have found that use of cellphone can ruin romantic relationships and increase levels of depression.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot