smartphones: ದೀಪಾವಳಿ ವಿಶೇಷ ಸೇಲ್: 10 ಸಾವಿರದೊಳಗಿನ ಅತ್ಯುತ್ತಮ ಫೋನ್‌ಗಳಿವು, ಆಫರ್ ಸಹ ಲಭ್ಯ!
ಸ್ಮಾರ್ಟ್‌ಫೋನ್ (smartphones) ಖರೀದಿ ಮಾಡುವುದು ಈಗ ಹಿಂದೆಂದಿಗಿಂತಲೂ ಸುಲಭ. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಸಂದರ್ಭದಲ್ಲಿ ಆಫರ್ ಘೋಷಣೆ ಮಾಡುವುದು ಸಾಮಾನ್ಯವಾದ ವಿಚಾರವಾಗಿದೆ. ಈ ನಡುವೆ ಅಮೆಜಾನ್‌ನಲ್ಲಿ ಈ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಹತ್ತು ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.
ಹೌದು, ದೀಪಾವಳಿ ಹಿನ್ನೆಲೆ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವುದು ಸಂಪ್ರದಾಯದಂತಾಗಿದ್ದು, ಈ ವೇಳೆ ಫೋನ್‌ಗಳು ಸಾಮಾನ್ಯ ಬೆಲೆಗಿಂತ ಇನ್ನೂ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ವಿಭಾಗದಲ್ಲಿ ರೆಡ್ಮಿ, ಐಟೆಲ್, ಸ್ಯಾಮ್‌ಸಂಗ್ (Redmi, Itel, Samsung) ಸೇರಿದಂತೆ ಅನೇಕ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಲಭ್ಯ ಇವೆ. ಅಷ್ಟೇ ಅಲ್ಲದೆ ಬ್ಯಾಂಕ್ ಆಫರ್ ಹಾಗೂ ಕ್ಯಾಶ್ ಬ್ಯಾಕ್ ಆಯ್ಕೆ ಸಹ ಇದ್ದು, ಆಫರ್ ಬೆಲೆಗಿಂತ ಇನ್ನೂ ಕಡಿಮೆ ಬೆಲೆಗೆ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ ಯಾವೆಲ್ಲಾ ಫೋನ್‌ಗಳಿಗೆ ಆಫರ್ ಬೆಲೆ ಎಷ್ಟು ನೋಡೋಣ ಬನ್ನಿ.

ರೆಡ್ಮಿ 12C: ಈ ಫೋನ್ (Redmi 12C) ಅನ್ನು ಕೇವಲ 6,799 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.71 ಇಂಚಿನ ಹೆಚ್‌ಡಿ+ ಡಿಸ್ಪ್ಲೇ ಹೊಂದಿದ್ದು, 500 ನಿಟ್ಸ್ ಬ್ರೈಟ್‌ನೆಸ್ ಆಯ್ಕೆ ಜೊತೆಗೆ ಮೀಡಿಯಾಟೆಕ್ ಹಿಲಿಯೋ G85 ಪ್ರೊಸೆಸರ್ ಬಲ ಪಡೆದುಕೊಂಡಿದೆ. ಹಾಗೆಯೇ 4GB RAM ಮತ್ತು 3GB ವರ್ಚುವಲ್ RAM, 64GB ಇಂಟರ್ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, 50MPಯ ಪ್ರಮುಖ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹಾಗೂ 5MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ. ಹಾಗೆಯೇ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ.
ರೆಡ್ಮಿ A2 : ಈ ಫೋನ್ (Redmi A2) ಅನ್ನು ನೀವು ಈಗ ಕೇವಲ 5,299 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಫೋನ್ 652 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ಟಚ್ ಮಾದರಿ ಹಾಗೂ 400 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮೂಲಕ ಅತ್ಯುತ್ತಮವಾಗಿದೆ. ಇದರೊಂದಿಗೆ ಮೀಡಿಯಾಟೆಕ್ ಹಿಲಿಯೋ G36 ನಲ್ಲಿ ಕಾರ್ಯನಿರ್ವಹಿಸಲಿದ್ದು, 7GB RAM ಹಾಗೂ 64GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 8MP ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮರಾ ಮತ್ತು 5MP ಸೆಲ್ಫಿ ಕ್ಯಾಮರಾದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ.

ಐಟೆಲ್ P55 : ಈ ಸ್ಮಾರ್ಟ್‌ಫೋನ್ (Itel P55) ಅನ್ನು ನೀವು ಅಮೆಜಾನ್‌ನಲ್ಲಿ 9,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಬೆಲೆಗೆ ತಕ್ಕ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಅದರಲ್ಲಿ 6.6 ಇಂಚಿನ HD+ IPS ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಆಯ್ಕೆ ಇದ್ದು, 50MP ನ AI ಡ್ಯುಯಲ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ.
ರಿಯಲ್‌ಮಿ ನಾರ್ಜೋ N53: ಈ ಸ್ಮಾರ್ಟ್‌ಫೋನ್ (Realme Narzo N53) ಅನ್ನು 7,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.74 ಇಂಚಿನ ಡಿಸ್ಪ್ಲೇ ಆಯ್ಕೆ ಪಡೆದಿದ್ದು, ಯೂನಿಸೋಕ್ T612 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಪಡೆದಿದ್ದು, 50MPಸ AI ಮುಖ್ಯ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಮೂಲಕ ಅತ್ಯುತ್ತಮ ಕ್ಯಾಮೆರಾ ಬಜೆಟ್ ಫೋನ್ ಆಗಿದೆ. ಉಳಿದಂತೆ 5000mAh ಸಾಮರ್ದಥ್ಯ್ ಬ್ಯಾಟರಿಯನ್ನು ಈ ಫೋನ್ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M13 : ಈ ಫೋನ್ (Samsung Galaxy M13) ಅನ್ನು 9,228 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 6.6 ಇಂಚಿನ FHD+ ಡಿಸ್ಪ್ಲೇಯೊಂದಿಗೆ ಹೊಂದಿದ್ದು, ಎಕ್ಸಿನೋಸ್ 850 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಅದರಲ್ಲಿ ಪ್ರಮುಖವಾಗಿ 50MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಸೆನ್ಸರ್ ಮತ್ತು 2MP ಡೆಪ್ತ್ ಸೆನ್ಸಾರ್ ನೊಂದಿಗೆ 8MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.


Click it and Unblock the Notifications








