ಅಡುಗೆ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುತ್ತೀರಾ?

Written By:

ಸ್ಮಾರ್ಟ್‌ಫೋನ್‌ಗಳಲ್ಲಿ ರೆಸಿಪಿ ಕುರಿತಾದ ವೆಬ್‌ಸೈಟ್ ಅನ್ನು ಹುಡುಕಿ ಅಡುಗೆ ಮಾಡುವವರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗಿದ್ದು ಇದರಲ್ಲಿ ಮಿಲೇನಿಯಲ್ಸ್ (1980 ರ ನಂತರ ಜನಿಸಿದವರು) ಸಂಖ್ಯೆಯೇ ಅಧಿಕವಾಗಿದೆ. ಅಡುಗೆ ಕೋಣೆಗೆ ಈ ವರ್ಗದವರನ್ನು ಸ್ಮಾರ್ಟ್‌ಫೋನ್ ಹೆಚ್ಚು ಬರುವಂತೆ ಮಾಡುತ್ತಿದ್ದು, ನಿಜಕ್ಕೂ ಇದು ಗಮನಾರ್ಹ ಬೆಳವಣಿಗೆ ಎಂದೆನಿಸಿದೆ.

ಅಡುಗೆ ಮಾಡುವಾಗ ಸ್ಮಾರ್ಟ್‌ಫೋನ್ ಬಳಸುತ್ತೀರಾ?

ಮಿಲೇನಿಯಲ್ಸ್ ಅಡುಗೆ ಕೋಣೆ ಹೊಕ್ಕೊಡನೆ ಕೈಯಲ್ಲಿ ಸ್ಮಾರ್ಟ್‌ಫೋನ್ ಹಿಡಿದುಕೊಳ್ಳುವುದು ಸಾಮಾನ್ಯ ಅಂಶವಾಗಿದ್ದು ಇವರು ಖಾದ್ಯ ತಯಾರಿಗೆ ಸ್ಮಾರ್ಟ್‌ಫೋನ್ ಅನ್ನೇ ಹೆಚ್ಚು ಅವಲಂಬಿಸಿದ್ದಾರೆ ಎಂದು ಗೂಗಲ್ ಅಧ್ಯಯನ ತಿಳಿಸಿದೆ. 25 ರಿಂದ 34 ವಯಸ್ಸಿನ ಒಳಗಿರುವ 59 ಶೇಕಡದಷ್ಟು ಜನರು ಅಡುಗೆ ಕೋಣೆಗೆ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಹೋಗುತ್ತಾರೆ.

ಓದಿರಿ: ಗಿನ್ನೀಸ್ ದಾಖಲೆ ಮಾಡಿದ ಟಾಪ್ ಡಿವೈಸ್‌ಗಳು

ಇನ್ನು ಇವರು ಇಷ್ಟಪಡುವ ಟಾಪ್ ಸರ್ಚ್‌ಗಳ ಪಟ್ಟಿಯಲ್ಲಿ ಖಾದ್ಯಗಳಾದ ಚಾಕಲೇಟ್ ಚಿಪ್ ಕುಕೀಸ್, ಬಾಳೆಹಣ್ಣು ಬ್ರೆಡ್, ಮೆಟಾಲಾಫ್, ಪ್ಯಾನ್‌ಕೇಕ್ ಮೊದಲಾದವುಗಳು ಒಳಗೊಂಡಿವೆ. ಇನ್ನು ನಾವು ನಡೆಸಿರುವ ಅಧ್ಯಯನದ ಪ್ರಕಾರ ಮಿಲೇನಿಯಲ್‌ಗಳು ಅಡುಗೆಯನ್ನು ಹೆಚ್ಚು ಮಾಡುತ್ತಾರೆ ಎನ್ನಲಾಗಿದೆ.

English summary
If your hubby wants to cook your favourite pancake again this weekend, thank the smartphone for his changed attitude towards the kitchen. With search engines to find how-to-cook recipes just a click away, smartphones are pushing many millennials (those born after 1980) back into the kitchen.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot