Home
ಸುದ್ದಿಜಾಲ

Smartphones: 12GB RAM ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು, ಅದೂ ಸಹ 30 ಸಾವಿರದೊಳಗೆ

ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಬಳಕೆದಾರರಿಗೆ ಅಸಾಧಾರಣ ಅನುಭವ ನೀಡುವ ಕೆಲಸ ಮಾಡುತ್ತಿವೆ. ಅಲ್ಲದೆ ವಿವಿಧ ಬ್ರ್ಯಾಂಡ್‌ಗಳು ಭಿನ್ನ ಫೀಚರ್ಸ್‌ ಆಯ್ಕೆ ಇರುವ ಫೋನ್‌ಗಳನ್ನು ಲಾಂಚ್‌ ಮಾಡಿಕೊಂಡು ಬರುತ್ತಿದ್ದು, ಈ ನಡುವೆ 12GB RAM ಆಯ್ಕೆ ಇರುವ ಫೋನ್‌ಗಳಿಗೆ ಬಹು ಬೇಡಿಕೆ ಇದೆ.

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್‌ ಇರುವ ಫೋನ್‌ಗಳು ಲಭ್ಯ ಇದ್ದು, ಈ ನಡುವೆ ಹೆಚ್ಚಿನ RAM ಇರುವ ಫೋನ್‌ಗಳಿಗೆ ಹೆಚ್ಚು ಹೆಚ್ಚು ಬೇಡಿಕೆ ಇದೆ. ಯಾಕೆಂದರೆ ಫೋನ್‌ಗಳ ಸುಗಮ ಕಾರ್ಯಕ್ಕೆ ಇವು ಉತ್ತಮ ಕೊಡುಗೆ ನೀಡುತ್ತವೆ. ಈ ವಿಭಾಗದಲ್ಲಿ ನೀವು ಫೋನ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಮೊಟೊರೊಲಾ, ಇನ್ಫಿನಿಕ್ಸ್‌, ಒನ್‌ಪ್ಲಸ್‌ (Motorola, Infinix, OnePlus) ಸೇರಿದಂತೆ ಅನೇಕ ಕಂಪೆನಿಯ ಫೋನ್‌ಗಳ ಕಡೆ ಕಣ್ಣಾಯಿಸಬಹುದು. ಹಾಗಿದ್ರೆ, ಬನ್ನಿ ಮೂವತ್ತು ಸಾವಿರದ ಒಳಗೆ ಲಭ್ಯ ಇರುವ 12GB RAM ಆಯ್ಕೆಯ ಟಾಪ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯೋಣ.

12GB RAM ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು, ಅದೂ ಸಹ 30 ಸಾವಿರದೊಳಗೆ

ಮೊಟೊ G84: ಈ ಸ್ಮಾರ್ಟ್‌ಫೋನ್‌ (Moto G84) ಅನ್ನು ನೀವು 20,700ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 6.55 ಇಂಚಿನ FHD+, P-OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120 Hz ರಿಫ್ರೆಶ್ ರೇಟ್‌ ಆಯ್ಕೆ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಬಲ ಪಡೆದಿದ್ದು, 12 GB RAM ನೊಂದಿಗೆ ಈ ಫೋನ್‌ ಕಾಣಿಸಿಕೊಂಡಿದೆ. ಹಾಗೆಯೇ 50 MP + 8 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 3 5G: ಈ ಸ್ಮಾರ್ಟ್‌ಫೋನ್ (OnePlus Nord CE 3 5G) 27,999 ರೂ.ಗಳ ಬೆಲೆ ಹೊಂದಿದ್ದು, 6.7 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120 Hz ರಿಫ್ರೆಶ್ ರೇಟ್‌ ಹೊಂದಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 782G ಪ್ರೊಸೆಸರ್‌ನೊಂದಿಗೆ 12 GB RAM ಬಲ ಪಡೆದಿದೆ. ಇದರಲ್ಲದೆ 50 MP + 8 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.

ಮೊಟೊರೊಲಾ ಎಡ್ಜ್‌ 40 ನಿಯೋ: ಈ ಸ್ಮಾರ್ಟ್‌ಫೋನ್‌ (Motorola Edge 40 Neo) ಅನ್ನು ನೀವು 28,890ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು 6.55 ಇಂಚಿನ FHD+, P-OLED ಡಿಸ್‌ಪ್ಲೇ ಹೊಂದಿದ್ದು, 144 Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7030 ಹಾಗೂ 12 GB RAM ಮೂಲಕ ಉತ್ತಮವಾಗಿ ಕೆಲಸ ಮಾಡಲಿದ್ದು, 50 MP + 13 MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 32 MP ಸೆಲ್ಫಿ ಕ್ಯಾಮೆರಾವನ್ನು ನೋಡಬಹುದು. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಟರ್ಬೊ ಪವರ್ ಚಾರ್ಜಿಂಗ್ ಬೆಂಬಲ ಪಡೆದಿದೆ.

12GB RAM ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು, ಅದೂ ಸಹ 30 ಸಾವಿರದೊಳಗೆ

ಪೊಕೊ X6 ಪ್ರೊ: ಈ ಸ್ಮಾರ್ಟ್‌ಫೋನ್ (Poco X6 Pro) 27,999 ರೂ.ಗಳ ಬೆಲೆಗೆ ಲಭ್ಯ ಇದೆ. ಇದು 6.67 ಇಂಚಿನ FHD+ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಹಾಗೆಯೇ 12 GB RAM ಆಯ್ಕೆ 64 MP + 8 MP + 2 MP ಟ್ರಿಪಲ್ ಪ್ರಾಥಮಿಕ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

12GB RAM ಇರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು, ಅದೂ ಸಹ 30 ಸಾವಿರದೊಳಗೆ

ಇನ್ಫಿನಿಕ್ಸ್‌ ಜೀರೋ 30: ಈ ಫೋನ್‌ (Infinix Zero 30) ಅನ್ನು 22,899 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.78 ಇಂಚಿನ FHD+ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 8020 ಪ್ರೊಸೆಸರ್‌ ಬಲ ಪಡೆದಿದ್ದು, 12 GB RAM ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 108 MP + 13 MP + 2 MP ಟ್ರಿಪಲ್ ರಿಯರ್‌ ಕ್ಯಾಮೆರಾ ಹಾಗೂ 50 MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಹಾಗೆಯೇ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಸೂಪರ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Best Mobiles in India

English summary
Smartphones with high RAM options in the smartphone segment get huge demand. According, here is the list of phones available under 30 thousand and with 12GB RAM option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+