ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ನ ಫೋನ್ ಬೇಕೆ?, ಇಲ್ಲಿವೆ ನೋಡಿ ಬೆಸ್ಟ್ ಸ್ಮಾರ್ಟ್‌ಫೋನ್
ಸ್ಮಾರ್ಟ್‌ಫೋನ್ ಹೊಂದುವುದು ಅದರಲ್ಲೂ ಅತ್ಯುತ್ತಮವಾದ ಫೀಚರ್ಸ್ ಆಯ್ಕೆಯ ಹೊಸ ಸ್ಮಾರ್ಟ್‌ಫೋನ್ ಹೊಂದಿರುವುದು ಪ್ರತಿಯೊಬ್ಬರ ಕನಸು. ಈ ನಡುವೆ ಕೆಲವು ಬ್ರ್ಯಾಂಡ್ ಗಳು ಹೊಸ ಹೊಸ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ತಕ್ಕ ಹೊಸ ಫೋನ್‌ಗಳಿಗೆ ಅಪ್‌ಗ್ರೇಡ್ ಆಗುತ್ತಿದ್ದಾರೆ.
ಹೌದು, ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗ ಗ್ರಾಹಕರು ವಿವಿಧ ರೀತಿಯಲ್ಲಿ ಅವುಗಳನ್ನು ಪರಿಶೀಲನೆ ಮಾಡುವುದು ಉಂಟು. ಅಂದರೆ ಬ್ಯಾಟರಿ ಸಾಮರ್ಥ್ಯ, ಪ್ರೊಸೆಸರ್, ಡಿಸ್‌ಪ್ಲೇ ಹಾಗೂ ಇನ್ನಿತರೆ ಸೌಲಭ್ಯ. ಅದಾಗ್ಯೂ ಬಹುಪಾಲು ಗ್ರಾಹಕರು ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾ ಫೀಚರ್ಸ್‌ಗೆ ಹೆಚ್ಚಿನ ಗಮನ ಹರಿಸಿದ್ದು, ಅದರಂತೆ ನಾವಿಲ್ಲಿ ಇತ್ತೀಚಿಗೆ ಲಾಂಚ್ ಆದ ಹಾಗೂ ಅತ್ಯುತ್ತಮ ಕ್ಯಾಮೆರಾ ಸೆನ್ಸರ್ ಹೊಂದಿರುವ ಇಪ್ಪತ್ತು ಸಾವಿರದ ಒಳಗೆ ಲಭ್ಯ ಇರುವ ಹೊಸ ಸ್ಮಾರ್ಟ್‌ಫೋನ್‌ಗಳ ಮಾಹಿತಿ ನೀಡಿದ್ದೇವೆ.

ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G : ಈ ಫೋನ್ ಅನ್ನು ನೀವು 19,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ 6.72 ಇಂಚಿನ 392 PPI, ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 8 GB RAM ಆಯ್ಕೆ ಹೊಂದಿದೆ. ಇನ್ನು ಪ್ರಮುಖ ವಿಷಯಕ್ಕೆ ಬಂದರೆ 108 MP + 2 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 11x 5G : ಈ ಫೋನ್ ನಿಮಗೆ 16,999 ರೂ.ಗಳ ಬೆಲೆಯಲ್ಲಿ ಲಭ್ಯ ಇದ್ದು, ಇದು 6.72 ಇಂಚಿನ 392 PPI, ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಆಯ್ಕೆ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್ ಬಲ ಹೊಂದಿದ್ದು, 6 GB RAM ಮೂಲಕ ಅತ್ಯುತ್ತಮ ಕಾರ್ಯಕ್ಷಮತೆ ನೀಡಲಿದೆ. ಇದರೊಂದಿಗೆ 64 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ M34: ಈ ಸ್ಯಾಮ್‌ಸಂಗ್ ಫೋನ್ 18,795 ರೂ.ಗಳ ಬೆಲೆ ಹೊಂದಿದ್ದು, ಇದು 6.5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಮೂಲಕ ವಿಶೇಷ ಎನಿಸಿದೆ. ಜೊತೆಗೆ ಸ್ಯಾಮ್‌ಸಂಗ್ ಎಕ್ಸಿನೋಸ್ 1280 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಫೋನ್ 6GB RAM ಆಯ್ಕೆ ಯೊಂದಿಗೆ 50MP + 8MP + 2MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 13MP ಸೆಲ್ಫಿ ಕ್ಯಾಮೆರಾ ಹೊಂದಿದೆ.
ಶಿಯೋಮಿ ರೆಡ್ಮಿ ನೋಟ್ : ಈ ಫೋನ್ ಅನ್ನು ನೀವು 16,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದು 6.67 ಇಂಚಿನ 395 PPI, ಸೂಪರ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, 120 Hz ರಿಫ್ರೆಶ್ ರೇಟ್ ಮೂಲಕ ಅತ್ಯುತ್ತಮ ಫೋನ್‌ಗಳ ಸಾಲಿಗೆ ಸೇರಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 4 ಜನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ 48 MP + 8 MP + 2 MP ಟ್ರಿಪಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ.

ರಿಯಲ್‌ಮಿ 11: ಈ ಫೋನ್ ನಿಮಗೆ 18,999ರೂ.ಗಳ ಬೆಲೆಯಲ್ಲಿ ಲಭ್ಯ ಇರಲಿದೆ. ಇದು 6.72 ಇಂಚಿನ 392 PPI, ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಫೋನ್ ಸಹ 120 Hz ರಿಫ್ರೆಶ್ ರೇಟ್ ಹೊಂದುವ ಮೂಲಕ ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡಲಿದೆ. ಉಳಿದಂತೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 108 MP + 2 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 16 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.


Click it and Unblock the Notifications








