ನಿಮ್ಮ ಆತ್ಮೀಯರಿಗೆ ಗಿಫ್ಟ್ ನೀಡಬೇಕೆ?: ಇಲ್ಲಿವೆ ಉತ್ತಮ ಸ್ಮಾರ್ಟ್‌ವಾಚ್‌ಗಳು!
ಸ್ಮಾರ್ಟ್‌ವಾಚ್‌ಗಳು ಇಂದು ಟೆಕ್ ವಲಯದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದು, ಪ್ರಮುಖ ಬ್ರ್ಯಾಂಡ್‌ಗಳು ಸುಧಾರಿತ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಹಾಗೆಯೇ ನೀವೇನಾದರೂ ಈ ವೇಳೆ ಹೊಸ ಸ್ಮಾರ್ಟ್‌ವಾಚ್ ಖರೀದಿ ಮಾಡಲು ಮುಂದಾಗಿದ್ದರೆ ಇದು ಬೆಸ್ಟ್ ಸಮಯ. ಯಾಕೆಂದರೆ ಅಮೆಜಾನ್ ಹಲವು ವಾಚ್‌ಗಳ ಮೇಲೆ ಆಫರ್ ಘೋಷಿಸಿದೆ.
ಹೌದು, ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ವಾಚ್‌ಗಳಿದ್ದು, ಇವುಗಳು ಸುಧಾರಿತ ಫೀಚರ್ಸ್ ಪಡೆದಿರುವುದರಿಂದ ಗ್ರಾಹಕರನ್ನು ಹೆಚ್ಚಾಗಿ ತಮ್ಮತ್ತ ಸೆಳೆಯುತ್ತವೆ. ಅದರಂತೆ ಆಪಲ್, ಫಿಟ್‌ಬಿಟ್, ಅಮಾಜ್ಫಿಟ್ ಸೇರಿದಂತೆ ಪ್ರಮುಖ ಸ್ಮಾರ್ಟ್‌ವಾಚ್‌ಗಳಿಗೆ ಭಾರೀ ಬೇಡಿಕೆ ಇದೆ. ಹಾಗೆಯೇ ಅಮೆಜಾನ್‌ನಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಹಾಗೂ ಹೆಚ್ಚು ಆಕರ್ಷಕವಾಗಿರುವ ವಾಚ್‌ಗಳ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿಸಿಕೊಡಲಾಗಿದೆ ಓದಿರಿ.

ಅಮಾಜ್ಫಿಟ್ ಜಿಟಿಆರ್ ಮಿನಿ: ಅಮಾಜ್ಫಿಟ್ ಜಿಟಿಆರ್ ಮಿನಿ ಸ್ಮಾರ್ಟ್‌ವಾಚ್ 1.28 ಇಂಚಿನ ಹೆಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 80+ವಾಚ್ ಫೇಸ್‌ಗಳನ್ನು ಹೊಂದಿದೆ. ಹಾಗೆಯೇ ಇದು 120ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಆಯ್ಕೆ ಹೊಂದಿದ್ದು, 5ATM ವಾಟರ್ ರೆಸಿಸ್ಟೆಂಟ್ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಜೊತೆಗೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ವಾಚ್ 14 ದಿನಗಳ ಬ್ಯಾಕಪ್ ನೀಡಲಿದೆ. ಹಾಗೆಯೇ ಇದನ್ನು ಅಮೆಜಾನ್‌ನಲ್ಲಿ 10,999 ರೂ. ಗಳ ಬೆಲೆಯಲ್ಲಿ ಖರೀದಿಸಬಹುದು.
ಗಾರ್ಮಿನ್ ವೇನು 2 ಪ್ಲಸ್ : ಈ ಸ್ಮಾರ್ಟ್‌ವಾಚ್ 1.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ವಾಚ್ 25 ಸ್ಪೋರ್ಟ್ಸ್ ಅಪ್ಲಿಕೇಶನ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಸಂಯೋಜಿತ ವಾಯ್ಸ್ ಕಾಲ್ ಸೌಲಭ್ಯವನ್ನು ಪಡೆದುಕೊಂಡಿದ್ದು, ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್ ಸಹ ಇದರಲ್ಲಿದೆ. ಈ ಮೂಲಕ ನೀವು ನಿಮ್ಮ ಸ್ಮಾರ್ಟ್‌ಡಿವೈಸ್‌ಗಳನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ಈ ವಾಚ್ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 9 ದಿನ ಬ್ಯಾಕಪ್ ನೀಡಲಿದ್ದು ಅಮೆಜಾನ್‌ನಲ್ಲಿ 50,490ರೂ. ಗಳಿಗೆ ಖರೀದಿ ಮಾಡಬಹುದು.

ಫಿಟ್‌ಬಿಟ್ ವರ್ಸಾ 3: ಈ ಸ್ಮಾರ್ಟ್‌ವಾಚ್ 1.58 ಇಂಚಿನ ಅಮೋಲೆಡ್‌ಡಿಸ್‌ಪ್ಲೇ ಹೊಂದಿದ್ದು, ಇದರೊಂದಿಗೆ ಹೃದಯ ಬಡಿತ, ನಿದ್ರೆ, ಓಟ, ಈಜು ಮತ್ತು ಸೈಕ್ಲಿಂಗ್‌ನಂತಹ ವ್ಯಾಯಾಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲಿದೆ. ಹಾಗೆಯೇ ಇನ್‌ಬಿಲ್ಟ್ ಜಿಪಿಎಸ್ ಆಯ್ಕೆ ಇದ್ದು, ಈ ಮೂಲಕ ನಿಮ್ಮ ನಡಿಗೆಯನ್ನು ಹಾಗೂ ಇನ್ನಿತರೆ ಚಟುವಟಿಕೆಯನ್ನು ಈ ವಾಚ್ ಮೇಲ್ವಿಚಾರಣೆ ಮಾಡುತ್ತದೆ. ಅಂತೆಯೇ ಅಮೆಜಾನ್‌ನಲ್ಲಿ ಈ ವಾಚ್ 16,899 ರೂ.ಗಳ ಬೆಲೆ ಹೊಂದಿದೆ.
ಅಮಾಜ್ಫಿಟ್ ಜಿಟಿಎಸ್ 4 ಮಿನಿ: ಈ ವಾಚ್ ಸಹ ಅಮೆಜಾನ್‌ನಲ್ಲಿ ಹೆಚ್ಚು ಸೇಲ್ ಆಗುತ್ತಿದ್ದು, ಇದು 1.65 ಇಂಚಿನ ಅಮೋಲೆಡ್‌ಡಿಸ್‌ಪ್ಲೇ ಹೊಂದಿದ್ದು, ಅಲೆಕ್ಸಾ, ಇನ್‌ಬಿಲ್ಟ್ ಫಿಟ್‌ನೆಸ್ ಟ್ರ್ಯಾಕರ್ ಹಾಗೂ ಹೃದಯ ಬಡಿತ ಟ್ರ್ಯಾಕಿಂಗ್ ಸೇರಿದಂತೆ 120+ಸ್ಪೋರ್ಟ್ಸ್ ಮೋಡ್‌ಗಳನ್ನು ಇದು ಹೊಂದಿದೆ. ಇನ್ನುಳಿದಂತೆ ಈ ವಾಚ್ ಅನ್ನು ಪೂರ್ಣವಾಗಿ ಚಾರ್ಜಿಂಗ್ ಮಾಡಿದರೆ ನೀವು 15 ದಿನಗಳ ವರೆಗೆ ಬಳಕೆ ಮಾಡಬಹುದು. ಈ ಫೀಚರ್ಸ್‌ಗಳೊಂದಿಗೆ ಈ ವಾಚ್ 6,999 ರೂ.ಗಳ ಬೆಲೆ ಹೊಂದಿದೆ.

ಆಪಲ್ ವಾಚ್ ಅಲ್ಟ್ರಾ: ಈ ವಾಚ್ ಅತ್ಯಂತ ಒರಟಾದ 49 ಮಿಲಿಮೀಟರ್ ತುಕ್ಕು ನಿರೋಧಕ ಟೈಟಾನಿಯಂ ಕೇಸ್ ಅನ್ನು ಹೊಂದಿದ್ದು, ದೊಡ್ಡ ಡಿಜಿಟಲ್ ಕ್ರೌನ್ ಬಟನ್ ಹಾಗೂ ಇತರೆ ಅಗತ್ಯ ಬಟನ್‌ಆಯ್ಕೆ ಪಡೆದಿಕೊಂಡಿದೆ. ಕ್ರೀಡಾಪಟುಗಳು, ಹೊರಾಂಗಣ ಸಾಹಸಿಗಳು ಮತ್ತು ಜಲ ಕ್ರೀಡೆಗಳ ಉತ್ಸಾಹಿಗಳಿಗೆ ಈ ವಾಚ್ ಅನುಕೂಲ. ಹಾಗೆಯೇ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 36 ಗಂಟೆಗಳ ಸುದೀರ್ಘ ಬ್ಯಾಕಪ್ ನೀಡಲಿದ್ದು, ಇದನ್ನು ನೀವು 82,999ರೂ. ಗಳಿಗೆ ಖರೀದಿ ಮಾಡಬಹುದು.


Click it and Unblock the Notifications








