ಇದೀಗ 'ಟಿಕ್​ಟಾಕ್' ಹಿಂದೆ ಬಿದ್ದ 'ಸ್ನ್ಯಾಪ್​ಚ್ಯಾಟ್'!

|

ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಿರುವ ಸ್ನ್ಯಾಪ್​ಚ್ಯಾಟ್ ಇದೀಗ ಟಿಕ್​ಟಾಕ್ ಹಿಂದೆ ಬಿದ್ದಿದೆಯಾ?. ಹೀಗೊಂದು ಪ್ರಶ್ನೆ ಮೂಡಲು ಕಾರಣವಾಗಿದ್ದು ಸ್ನ್ಯಾಪ್​​ಚ್ಯಾಟ್ ಕೂಡ ಇನ್ಮುಂದೆ ತನ್ನ ಎಲ್ಲಾ ಪೋಸ್ಟ್​ಗಳಿಗೂ ಮ್ಯೂಸಿಕ್​ ಬಳಸುವ ಆಯ್ಕೆ ಕೊಡಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಸ್ನ್ಯಾಪ್​ಚ್ಯಾಟ್​ ಈ ಬಗ್ಗೆ ಪ್ರಮುಖ ಮ್ಯೂಸಿಕ್ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ.

ಹೌದು, ಈ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಈಗಾಗಲೇ ಸ್ನ್ಯಾಪ್​ಚ್ಯಾಟ್​ ಈ ಬಗ್ಗೆ ಪ್ರಮುಖ ಮ್ಯೂಸಿಕ್ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ. ಮುಂದಿನ ದಿನಗಳಲ್ಲಿ ಇಂತಹ ಒಂದು ವಿಶೇಷ ಆಯ್ಕೆಯನ್ನು ನೀಡಲಿದೆ ಎಂದು ತಿಳಿಸಿವೆ. ಟಿಕ್​ಟಾಕ್​, ಇನ್​ಸ್ಟಾಗ್ರಾಮ್​ನಲ್ಲಿರುವ ಈ ಆಯ್ಕೆ ಇದೀಗ​ ಸ್ನ್ಯಾಪ್​ಚಾಟ್ ಆಪ್​ನಲ್ಲೂ ಯೋಜನೆ ನಡೆಯುತ್ತಿದೆ.

ಇದೀಗ 'ಟಿಕ್​ಟಾಕ್' ಹಿಂದೆ ಬಿದ್ದ 'ಸ್ನ್ಯಾಪ್​ಚ್ಯಾಟ್'!

ವಿವಿಧ ಫಿಲ್ಟರ್​​​ಗಳನ್ನ ಯೂಸ್​ ಮಾಡಿ ಫೋಟೋ ಅಥವಾ ವಿಡಿಯೋ ಮಾಡಿ ಕಳುಹಿಸೋದು ಸ್ನ್ಯಾಪ್​​ಚಾಟ್ ವಿಶೇಷತೆಯಾಗಿದ್ದು, ಇನ್ಮುಂದೆ ಇಂತಹ ಯಾವುದೇ ಪೋಸ್ಟ್​ ಕಳುಹಿಸುವಾಗ ಅಥವಾ ಅಪ್ಲೋಡ್​ ಮಾಡೋವಾಗ ಇದಕ್ಕೆ ಹಾಡು ಸೇರಿಸುವ ಮೂಲಕ ಮತ್ತಷ್ಟು ಕಲರ್​ಫುಲ್​ ಮಾಡಬಹುದು. ಇದರಿಂದ ಸ್ನ್ಯಾಪ್​ಚ್ಯಾಟ್ ಬಳಕೆ ಮತ್ತಷ್ಟು ರಂಗಾಗಬಹುದು ಎನ್ನಲಾಗಿದೆ.

ಸದ್ಯ ಈ ಸ್ನ್ಯಾಪ್​ಚಾಟ್​​ ಬೇಬಿ ಫೇಸ್​ ಫಿಲ್ಟರ್​ ಸಿಕ್ಕಾಪಟ್ಟೆ ಟ್ರೆಂಡ್​ ಆಗಿದ್ದು, ಜನರು ಬಾಲ್ಯಕ್ಕೆ ವಾಪಸ್​ ಹೋಗುವಂತಹ ಈ ಫೀಚರ್ ಮೂಲಕ ತಮ್ಮ ಫೋಟೋಗಳನ್ನ ಎಡಿಟ್ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ, ​ಜನಪ್ರಿಯ ಸೆಲೆಬ್ರಿಟಿಗಳಿಗೆ ಹಾಗೂ ರಾಜಕಾರಣಿಗಳಿಗೂ ಕೂಡ ಈ ಬೇಬಿ ಫಿಲ್ಟರ್​ ಹಾಕಿದ್ರೆ ಹೇಗಿರುತ್ತೆ ಅಂತ ಟೆಸ್ಟ್​ ಮಾಡಿ ನೋಡಿ ಆನಂದ ಪಡುತ್ತಿದ್ದಾರೆ.

ಇದೀಗ 'ಟಿಕ್​ಟಾಕ್' ಹಿಂದೆ ಬಿದ್ದ 'ಸ್ನ್ಯಾಪ್​ಚ್ಯಾಟ್'!

ಆಪ್‌ಗಳಲ್ಲಿ ಹೊಸ ಫಿಲ್ಟರ್​​ ಪರಿಚಯಿಸಿದಾಗಲೆಲ್ಲಾ ಜನ ಅವನ್ನು ಟ್ರೈ ಮಾಡುತ್ತಾರೆ. ಅದರಲ್ಲಿ ಕೆಲವೊಂದು ಫಿಲ್ಟರ್​ಗಳು ಟ್ರೆಂಡ್​ ಆಗುತ್ತೆ. ಕೆಲವೊಂದು ಸಾಮಾನ್ಯವಾಗಿ ಕಾಣುತ್ತವೆ. ಈಗ ಆ ಲಿಸ್ಟ್​​​ಗೆ ಹೊಸ ಎಂಟ್ರಿ 'ಬೇಬಿ ಫೇಸ್​ ಫಿಲ್ಟರ್' ಸೇರಿದೆ​. ಈ ಹೊಸ ಫೀಚರ್ ದೊಡ್ಡವರನ್ನು ಬಾಲ್ಯದಲ್ಲಿ ಹೇಗಿರಬಹುದು ಎಂಬುದನ್ನು ಪಕ್ಕಾ ಲೆಕ್ಕ ಹಾಕಿ ತೋರಿಸುವುದು ಇದಕ್ಕೆ ಕಾರಣವಾಗಿದೆ.

ಓದಿರಿ: ನೀವು ಕೂಡ ಮೊಬೈಲ್ ಪಕ್ಕದಲ್ಲಿಯೇ ಇಟ್ಟು ಮಲಗುತ್ತೀರಾ?..ಈ ಶಾಕಿಂಗ್ ನ್ಯೂಸ್ ಕೇಳಿ!

Best Mobiles in India

English summary
Snapchat reportedly is trying to secure broad rights to catalogues from Universal Music Group, Sony Music Entertainment, and Warner Music Group. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X