ಕೈ ಗೆಟಕುವ ಬೆಲೆಯ ಎರಡು ಹೊಸ ಇಯರ್‌ಫೋನ್‌ ಲಾಂಚ್‌ ಮಾಡಿದ ಸ್ನೋಕರ್‌ ಸಂಸ್ಥೆ!

|

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಇಯರ್‌ಫೋನ್ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿದೆ. ಈಗಾಗಲೇ ಹಲವು ಸಂಸ್ಥೆಗಳು ತಮ್ಮ ವಿಭಿನ್ನ ಮಾದರಿಯ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಸ್ನೋಕೋರ್ ಸಂಸ್ಥೆ ತನ್ನ ಹೊಸ ಐರಾಕರ್ ಸ್ಟಿಕ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ಮತ್ತು ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌ ಹೊಸ ವಿನ್ಯಾಸದ ಮಾದರಿಯನ್ನು ಹೊಂದಿದೆ. ಅಲ್ಲದೆ ಐರಾಕರ್ ಸ್ಟಿಕ್ಸ್ ಅನ್ನು ಎರಡು ಬಣ್ಣ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಸ್ನೋಕರ್‌

ಹೌದು, ಸ್ನೋಕರ್‌ ಸಂಸ್ಥೆ ತನ್ನ ಹೊಸ ಐರಾಕರ್ ಸ್ಟಿಕ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್ ಮತ್ತು ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್‌ ಬಿಡುಗಡೆ ಮಾಡಿದೆ. ಇದರಲ್ಲಿ ಸ್ನೋಕರ್‌ ಬಾಸ್ ಡ್ರಾಪ್ಸ್ ಇಯರ್‌ಬಡ್ಸ್‌ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ ಈ ಎರಡೂ ಇಯರ್‌ಫೋನ್‌ಗಳು ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿವೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಮದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ನೋಕರ್ ಪ್ಯಾಕ್‌ನ ಐರಾಕರ್ ಸ್ಟಿಕ್ಸ್ ಇಯರ್‌ಬಡ್ಸ್‌

ಸ್ನೋಕರ್ ಪ್ಯಾಕ್‌ನ ಐರಾಕರ್ ಸ್ಟಿಕ್ಸ್ ಇಯರ್‌ಬಡ್ಸ್‌

ಸ್ನೋಕರ್ ಪ್ಯಾಕ್‌ನ ಐರಾಕರ್ ಸ್ಟಿಕ್ಸ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ 14.2mm ಡೈನಾಮಿಕ್ ಬಾಸ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಆಂಡ್ರಾಯ್ಡ್ ಅಥವಾ ಐಒಎಸ್ ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಲು ಬ್ಲೂಟೂತ್ 5.0 ಅನ್ನು ಬಳಸಬಹುದಾಗಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಸ್ವತಂತ್ರ ಚಿಪ್ ವಿನ್ಯಾಸವನ್ನು ಹೊಂದಿದ್ದು, ಇದು ಏಕ ಅಥವಾ ಡಬಲ್ ಇಯರ್‌ಫೋನ್ ಮೋಡ್‌ಗಳ ನಡುವೆ ನೀವು ಮನಬಂದಂತೆ ಬದಲಾಯಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಇಯರ್‌ಬಡ್‌ಗಳು 20Hz ನಿಂದ 20,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ಅನ್ನು ಹೊಂದಿದ್ದು, ಕಡಿಮೆ, ಮಧ್ಯ ಮತ್ತು ಉನ್ನತ ಶ್ರೇಣಿಯ ಫ್ರಿಕ್ವೆನ್ಸಿಗಳಲ್ಲಿ ಸ್ಪಷ್ಟ ಗಾಯನವನ್ನು ಒದಗಿಸುತ್ತದೆ.

ಐರಾಕರ್

ಐರಾಕರ್ ಸ್ಟಿಕ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಮಲ್ಟಿಫಂಕ್ಷನಲ್ ಬಟನ್ ಕಂಟ್ರೋಲ್‌ ಅನ್ನು ಹೊಂದಿದ್ದು, ಟ್ರ್ಯಾಕ್‌ಗಳನ್ನು ಪ್ಲೇ ಅಥವಾ ವಿರಾಮಗೊಳಿಸಲು ಬಳಸಬಹುದಾಗಿದೆ. ಇದನ್ನು ಎರಡು ಬಾರಿ ಒತ್ತುವುದರಿಂದ ಮುಂದಿನ ಹಾಡಿಗೆ ಬದಲಾಗುತ್ತದೆ. ಜೊತೆಗೆ ಅದನ್ನು ಮೂರು ಬಾರಿ ಟ್ಯಾಪ್ ಮಾಡುವುದರಿಂದ ಹಿಂದಿನ ಟ್ರ್ಯಾಕ್‌ಗೆ ಮರಳಬಹುದಾಗಿದೆ. ಇದಲ್ಲದೆ ಗುಂಡಿಯನ್ನು ಒತ್ತುವುದು ಮತ್ತು ಹಿಡಿದಿಟ್ಟುಕೊಳ್ಳುವುದರಿಂದ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಕ್ರಿಯಗೊಳಿಸುತ್ತದೆ. ಇನ್ನು ಈ ಇಯರ್‌ಬಡ್ಸ್ 40mAh ಬ್ಯಾಟರಿಯನ್ನು ಬೆಂಬಲಿಸಿದ್ದು, ಚಾರ್ಜಿಂಗ್ ಕೇಸ್ 300mAh ಬ್ಯಾಟರಿಯನ್ನು ಹೊಂದಿದೆ. ಇದು ಒಟ್ಟು 16 ಗಂಟೆಗಳ ಪ್ಲೇಟೈಮ್ ನೀಡುತ್ತದೆ.

ಸ್ನೋಕರ್ ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್

ಸ್ನೋಕರ್ ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್

ಸ್ನೋಕರ್ ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್ 14.3mm ಬಾಸ್ ಬೂಸ್ಟ್ ಡ್ರೈವರ್‌ಗಳನ್ನು ಬಳಸುವುದರಿಂದ, ಸ್ನೋಕರ್ ಬಾಸ್ ಡ್ರಾಪ್ಸ್ ವೈರ್ಡ್ ಇಯರ್‌ಫೋನ್‌ಗಳು ಒನ್-ಬಟನ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತವೆ. ಇದನ್ನು ಒಂದು ಕ್ಲಿಕ್‌ನಲ್ಲಿ ಮ್ಯೂಸಿಕ್‌ ಅನ್ನು ಪ್ಲೇ ಮಾಡಲು / ವಿರಾಮಗೊಳಿಸಲು ಮತ್ತು ಮುಂದಿನ ಹಾಡಿಗೆ ಬದಲಾಯಿಸಲು ಎರಡು ಬಾರಿ ಬಳಸಬಹುದಾಗಿದೆ. ಅಲ್ಲದೆ ಕರೆಗಳನ್ನು ಸ್ವೀಕರಿಸಲು ಮತ್ತು ನಿರಾಕರಿಸಲು ಇದನ್ನು ಬಳಸಬಹುದಾಗಿದೆ. ಜೊತೆಗೆ ಎರಡು ಸೆಕೆಂಡುಗಳ ಕಾಲ ಗುಂಡಿಯನ್ನು ಹಿಡಿದಿಟ್ಟುಕೊಳ್ಳುವುದರಿಂದ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಸಕ್ರಿಯಗೊಳಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ನೋಕರ್ ಐರಾಕರ್ ಸ್ಟಿಕ್ಸ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಬೆಲೆ ಭಾರತದಲ್ಲಿ 1,499ರೂ. ಆಗಿದೆ. ಅಲ್ಲದೆ ಇದು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಅಮೆಜಾನ್ ಮೂಲಕ ಲಬ್ಯವಾಗಲಿದೆ. ಇನ್ನು ಸ್ನೋಕರ್ ಬಾಸ್ ಡ್ರಾಪ್ಸ್ ಇಯರ್‌ಫೋನ್‌ಗಳ ಬೆಲೆ ರೂ. 449 ಆಗಿದ್ದು, ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

Read more about:
English summary
Snokor iRocker Stix TWS earbuds and Bass Drops wired earphones have been launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X