'ಸೋನಿ A9 II' ಮಿರರ್‌ ಲೆಸ್‌ ಕ್ಯಾಮೆರಾ ಬಿಡುಗಡೆ!.ಬೆಲೆ ಎಷ್ಟು?..ಫೀಚರ್ಸ್‌ ಏನು?

|

ಸ್ಮಾರ್ಟ್‌ಫೋನ್‌ಗಳಲ್ಲಿ ಎಷ್ಟೆ ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್ ಲಭ್ಯವಿದ್ದರು, ಅದು ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಂತಾಗುವುದಿಲ್ಲ. ಫೋಟೊಗ್ರಾಫಿ ಕ್ರೇಜ್‌ ಇರುವವರು ಮತ್ತು ಫೋಟೊಗ್ರಾಫರ್ಸ್‌ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳೇ ಅಚ್ಚುಮೆಚ್ಚು. ಹೀಗಾಗಿ ಕೊರಳಿಗೊಂದು ಅತ್ಯುತ್ತಮ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಹಾಕಿಕೊಳ್ಳದೇ ಇರರು. ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಸೋನಿ ಕಂಪನಿಯು ಇದೀಗ ಹೊಸದೊಂದು ಕ್ಯಾಮೆರಾ ಲಾಂಚ್ ಮಾಡಿದೆ.

ಸೋನಿ A9 II

ಹೌದು, ಜನಪ್ರಿಯ ಸೋನಿ ಸಂಸ್ಥೆಯು ಮಾರುಕಟ್ಟೆಗೆ ಹೊಸದಾಗಿ 'ಸೋನಿ A9 II' ಮಿರರ್‌ ಲೆಸ್‌ ಫ್ಯಾಗ್‌ಶಿಫ್ ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾವು ಸೋನಿಯ 'ಸೋನಿ A9' ಕ್ಯಾಮೆರಾದ ಅಪ್‌ಗ್ರೇಡ್‌ ವರ್ಷನ್ ಆಗಿದ್ದು, ಹಲವು ವಿಶೇಷತೆಗಳಿಂದ ಗಮನಸೆಳೆದಿದೆ. ಈ ಕ್ಯಾಮೆರಾವು 24.2ಎಂಪಿ ಸೆನ್ಸಾರ್‌ನಲ್ಲಿದ್ದು, ಬಯೋನ್ಜಾ ಎಕ್ಸ್‌(Bionz X) ಇಮೇಜ್ ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗಾದರೇ 'ಸೋನಿ A9 II' ಕ್ಯಾಮೆರಾ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯಿರಿ.

ಹೈಲೈಟ್ಸ್‌ ಏನು

ಹೈಲೈಟ್ಸ್‌ ಏನು

ಸೋನಿ A9 II ಕ್ಯಾಮೆರಾವು 24.2 ಮೆಗಾಪಿಕ್ಸಲ್ ಸಾಮರ್ಥ್ಯದ, ಫುಲ್‌ ಫ್ರೇಮ್‌ CMOS ಇಮೇಜ್‌ ಸೆನ್ಸಾರ್‌ ಸೌಲಭ್ಯವನ್ನು ಒಳಗೊಂಡಿದೆ. ಇದರಲ್ಲಿರುವ ಬಯೋನ್ಜಾ ಎಕ್ಸ್‌(Bionz X) ಇಮೇಜ್ ಪ್ರೊಸೆಸರ್‌ ವೇಗವಾಗಿ ಸೆನ್ಸಾರ್‌ ರೀಡ್‌ಔಟ್ ಮಾಡುವ ಸಾಮರ್ಥ್ಯದಲ್ಲಿದ್ದು, ಇದರೊಂದಿಗೆ ಫೇಸ್‌ ಮತ್ತು AE/AF ವಿಭಾಗಗಳಲ್ಲಿ ಹೆಚ್ಚಿನ ಅಪ್‌ಗ್ರೇಡ್‌ ಆಗಿದೆ. ಶಟರ್‌ ಬಟನ್‌ ಆಯ್ಕೆಯಲ್ಲಿಯು 5.5 ಸ್ಟಾಪ್‌ ಆಯ್ಕೆ ನೀಡಲಾಗಿದೆ.

ಫೀಚರ್ಸ್‌ ಮತ್ತು ಸೌಲಭ್ಯಗಳು

ಫೀಚರ್ಸ್‌ ಮತ್ತು ಸೌಲಭ್ಯಗಳು

ಈ ಕ್ಯಾಮೆರಾ 3 ಇಂಚಿನ ಟಚ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 3.76ಮಿಲಿಯನ್ ಪಿಕ್ಸಲ್ ಡಾಟ್ಸ್‌ ಒಳಗೊಂಡಿದೆ. ಕ್ಯಾಮೆರಾದ AF-On ಬಟನ್‌ ಗಾತ್ರದಲ್ಲಿ ಹೆಚ್ಚಳ ಮಾಡಿದ್ದು, ಕ್ಯಾಮೆರಾ ಮೇಲ್ಭಾದಲ್ಲಿ ನೀಡಲಾಗಿದೆ. ಇದರೊಂದಿಗೆ ಫೋಟೊಗಳು ಬ್ಲರ್‌ ಆಗುವುದನ್ನು ತಡೆಯಲು ಶಟರ್‌ ಮೆಕ್ಯಾನಿಸಮ್‌ನಲ್ಲಿಯು ಅಪ್‌ಗ್ರೇಡ್‌ ಮಾಡಲಾಗಿದೆ. 30fps ವೇಗದ ಸಾಮರ್ಥ್ಯದಲ್ಲಿ 4K ವಿಡಿಯೊ ರೆಕಾರ್ಡ್‌ ಸೌಲಭ್ಯ ಹೊಂದಿದೆ.

ಕನೆಕ್ಟಿವಿಟಿ ಸೌಲಭ್ಯಗಳು

ಕನೆಕ್ಟಿವಿಟಿ ಸೌಲಭ್ಯಗಳು

ಕನೆಕ್ಟಿವಿಟಿ ಮತ್ತು ವಾಯರ್‌ಲೆಸ್‌ ಆಯ್ಕೆಗಳಲ್ಲಿಯು ಹಲವು ಹೊಸ ಸೌಲಭ್ಯಗಳನ್ನು ನೀಡಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್‌ USB 3.2 Gen1 ಸಪೋರ್ಟ್‌ ಮಾಡಲಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ UHS-II ಡೇಟಾ ಟ್ರಾನ್ಸ್‌ಫರ್ ವೇಗವು ಅಧಿಕವಾಗಿದೆ. 5GHz ವೇಗದ ವೈಫೈ 802.11ac ಸೌಲಭ್ಯವನ್ನು ಹೊಂದಿದ್ದು, ಹಾಗೆಯೇ SSL or TLS ಫೈಲ್‌ ಟ್ರಾನ್ಸ್‌ಫರ್ ಆಯ್ಕೆಗಳನ್ನು ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ A9 II ಕ್ಯಾಮೆರಾವು ವೃತ್ತಿ ಛಾಯಾಗ್ರಾಹಕರಿಗೆ ಮತ್ತು ಹವ್ಯಾಸಿ ಫೋಟೊಗ್ರಫರ್ಸ್‌ಗೆ ಅತ್ಯುತ್ತಮ ಆಯ್ಕೆ ಅನಿಸಲಿದ್ದು, ಈ ಕ್ಯಾಮೆರಾವು ಇದೇ ನವಂಬರ್‌ ತಿಂಗಳಿನಲ್ಲಿ ಖರೀದಿಗೆ ಲಭ್ಯವಾಗಲಿದೆ. ಬೆಲೆಯು $4,500 ಆಗಿದ್ದು, ಭಾರತದಲ್ಲಿ ಅಂದಾಜು. 3,19,600ರೂ.ಗಳು ಆಗಲಿದೆ ಎಂದು ಊಹಿಸಲಾಗಿದೆ.

Best Mobiles in India

English summary
The Sony A9 II features faster wireless and wired connectivity. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X