Home
ಸುದ್ದಿಜಾಲ

ಭಾರತದಲ್ಲಿ ಸೋನಿ ಅಲ್ಫಾ 7C ಫುಲ್‌ ಫ್ರೇಮ್‌ ಕ್ಯಾಮೆರಾ ಲಾಂಚ್!..ಬೆಲೆ ಎಷ್ಟು?

ಮಾರುಕಟ್ಟೆಗೆ ನೂತನ ಮಾಡೆಲ್ ಗ್ಯಾಡ್ಜೆಟ್ಸ್‌ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸೋನಿ ಕಂಪನಿಯ ಕ್ಯಾಮೆರಾಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿವೆ. ಸೋನಿಯು ಭಿನ್ನ ಶ್ರೇಣಿಯಲ್ಲಿ ಹಲವು ಕ್ಯಾಮೆರಾ ಮಾಡೆಲ್‌ಗಳನ್ನು ಪರಿಚಯಿಸಿದ್ದು, ಆ ಲಿಸ್ಟಿಗೆ ಈಗ ಹೊಸದಾಗಿ ಮತ್ತೊಂದು ಕ್ಯಾಮೆರಾವನ್ನು ಸೇರ್ಪಡೆ ಮಾಡಿದೆ. ಅದುವೇ ಸೋನಿ ಅಲ್ಫಾ 7C ಫುಲ್‌ ಫ್ರೇಮ್ ಕ್ಯಾಮೆರಾ.

ಸೋನಿ

ಹೌದು, ಜನಪ್ರಿಯ ಸೋನಿ ಕಂಪನಿ ಇದೀಗ ಹೊಸದಾಗಿ ಅಲ್ಫಾ 7C ಫುಲ್‌ ಫ್ರೇಮ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕ್ಯಾಮೆರಾವು SEL2860 ಜೂಮ್‌ ಲೆನ್ಸ್‌ ಹೊಂದಿದ್ದು, 4K ಮಾದರಿಯಲ್ಲಿ ವಿಡಿಯೊ ರೆಕಾರ್ಡಿಂಗ್ ಸಪೋರ್ಟ್‌ ಪಡೆದಿದೆ. ಹಾಗೆಯೇ AI ಆಧಾರಿತ ರಿಯಲ್‌ ಟೈಮ್‌ ಟ್ರ್ಯಾಂಕಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಕ್ಯಾಮೆರಾದ ಫೀಚರ್ಸ್‌ ಹಾಗೂ ಬೆಲೆಯ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫುಲ್‌ ಫ್ರೇಮ್

ಸೋನಿ ಅಲ್ಫಾ 7C ಫುಲ್‌ ಫ್ರೇಮ್ ಕ್ಯಾಮೆರಾವು 24.2ಎಂಪಿ ಸಾಮರ್ಥ್ಯದ 35ಎಂಎಂ ಪೂರ್ಣ-ಫ್ರೇಮ್ Exmor R CMOS ಸೆನ್ಸಾರ್‌ ಅನ್ನು ಹೊಂದಿದೆ. ಹಾಗೆಯೇ ಕ್ಯಾಮೆರಾದೊಳಗೆ BIONZ X ಇಮೇಜ್ ಪ್ರೊಸೆಸರ್ ಇದ್ದು, ಇದು ISO 100 ರಿಂದ ISO 51200 ರವರೆಗೆ ಮೂವಿಸ್‌ ಮತ್ತು ಫೋಟೋ ಚಿತ್ರೀಕರಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಕ್ಯಾಮೆರಾ 3: 2 ರ ಅನುಪಾತವನ್ನು ಹೊಂದಿದೆ. ಕ್ಯಾಮೆರಾದಲ್ಲಿ 6,000 × 4,000 ಪಿಕ್ಸೆಲ್‌ಗಳ ಚಿತ್ರಗಳನ್ನು ತೆಗೆದುಕೊಳ್ಳಬಹುದು.

ವ್ಯೂಫೈಂಡರ್

ಕ್ಯಾಮೆರಾವನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೇ ವ್ಯೂಫೈಂಡರ್ ಅಥವಾ LCD ಯಲ್ಲಿ ಸುಮಾರು 140 ನಿಮಿಷಗಳ ಅವಧಿವರೆಗೂ ಚಿತ್ರೀಕರಣ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ವ್ಯೂಫೈಂಡರ್ ಮೂಲಕ ಸುಮಾರು 680 ಫೋಟೊಗಳನ್ನು ಕ್ಲಿಕ್ ಮಾಡಬಹುದಾಗಿದೆ. ಇನ್ನು LCDಯಲ್ಲಿ ಸುಮಾರು 740 ಫೋಟೊಗಳನ್ನು ಸೆರೆಹಿಡಿಯುವ ಬ್ಯಾಕ್‌ಅಪ್ ಒದಗಿಸಲಿದೆ ಎಂದು ಹೇಳಿದೆ. ಇನ್ನು ಫೋಟೊಗಳನ್ನು JPEG (fine/extra-fine/standard) ಮತ್ತು RAW ಫಾರ್ಮೇಟ್‌ನಲ್ಲಿ ಸೇವ್ ಮಾಡುವ ಆಯ್ಕೆಗಳಿವೆ.

ಅಲ್ಫಾ

ಭಾರತದಲ್ಲಿ ಸೋನಿ ಅಲ್ಫಾ 7C ಫುಲ್‌ ಫ್ರೇಮ್ ಕ್ಯಾಮೆರಾ ಬೆಲೆಯು 1,67,990ರೂ. ಆಗಿದೆ(ಲೆನ್ಸ್ ಹೊರತುಪಡಿಸಿ). ಗ್ರಾಹಕರು ಹೊಸ ಕಿಟ್ ಲೆನ್ಸ್ SEL2860ನೊಂದಿಗೆ ಖರೀದಿಸಿದರೆ, ಕ್ಯಾಮೆರಾದ ಒಟ್ಟು ಬೆಲೆ 1,96,990ರೂ. ಆಗಲಿದೆ. ಸೋನಿ ಅಲ್ಫಾ 7C ಕ್ಯಾಮೆರಾವು ದೇಶದ ಎಲ್ಲ ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತು ಸೋನಿ ಸೆಂಟರ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Sony Alpha 7C has been launched for the Indian market and it is priced at Rs 1,96,990 when bought with the lens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+