ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಬೆಲೆ ಎಷ್ಟು?
ಜಪಾನ ಮೂಲಕ ಜನಪ್ರಿಯ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸೋನಿ (Sony) ದೇಶಿಯ ಮಾರುಕಟ್ಟೆಗೆ ಹೊಸದಾಗಿ ಸೋನಿ ಬ್ರೇವಿಯಾ 7 ಮಿನಿ ಎಲ್ಇಡಿ ಸರಣಿ (Sony Bravia 7 Mini LED series) ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಸಂಸ್ಥೆಯು ಬಿಡುಗಡೆ ಮಾಡಿರುವ ನೂತನ ಟಿವಿ ಸರಣಿಯು 4K ರೆಸಲ್ಯೂಶನ್ ಪ್ಯಾನೆಲ್ ಮತ್ತು ಡಾಲ್ಬಿ ವಿಷನ್ ಸ್ಟ್ಯಾಂಡರ್ಡ್ ಸೌಲಭ್ಯ ಪಡೆದಿದ್ದು, IMAX ವರ್ಧಿತ ಪ್ರಮಾಣೀಕರಿಸಲ್ಪಟ್ಟಿವೆ. ಅಲ್ಲದೇ ಅತ್ಯುತ್ತಮ ಗೇಮಿಂಗ್ ಅನುಭವಕ್ಕಾಗಿ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು ಆಟೋಮ್ಯಾಟಿಕ್ ಲೋ ಲೇಟೆನ್ಸಿ ಮೋಡ್‌ನಂತಹ ಫೀಚರ್ಸ್‌ಗಳ ಸಪೋರ್ಟ್ ಸಹ ಪಡೆದಿದೆ.
ಹೌದು, ಸೋನಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ನೂತನವಾಗಿ ಸೋನಿ ಬ್ರೇವಿಯಾ 7 ಮಿನಿ ಎಲ್ಇಡಿ ಸರಣಿ (Sony Bravia 7 Mini LED series) ಸ್ಮಾರ್ಟ್‌ಟಿವಿ ಸರಣಿ ಲಾಂಚ್ ಮಾಡಿದೆ. ಈ ಸರಣಿಯು ಮೂರು ಟಿವಿ ವೇರಿಯಂಟ್‌ಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಲಭ್ಯ ಇವೆ.

ಇನ್ನು ಸೋನಿ ಬ್ರಾವಿಯಾ 7 ಸರಣಿಯ ಸ್ಮಾರ್ಟ್ ಟಿವಿಗಳು ಕಾಗ್ನಿಟಿವ್ ಪ್ರೊಸೆಸರ್ XR ನಿಂದ ರನ್ ಆಗಲಿವೆ. ಇದು ಜನರು ನೋಡುವ ಮತ್ತು ಕೇಳುವ ವಿಧಾನವನ್ನು ಪುನರಾವರ್ತಿಸುತ್ತದೆ ಎಂದು ಸಂಸ್ಥೆಯು ಹೇಳಿದೆ. ಕಾಗ್ನಿಟಿವ್ ಪ್ರೊಸೆಸರ್ XR ಜೊತೆಗೆ ಮಿನಿ LED ಡಿಸ್‌ಪ್ಲೇ ಪ್ಯಾನೆಲ್ ಜೊತೆಗೆ XR ಬ್ಯಾಕ್‌ಲೈಟ್ ಮಾಸ್ಟರ್ ಡ್ರೈವ್ ಮತ್ತು XR ಕಾಂಟ್ರಾಸ್ಟ್ ಬೂಸ್ಟರ್‌ನಂತಹ ಆಯ್ಕೆಗಳನ್ನು ಸಕ್ರಿಯಗೊಳಿಸುತ್ತದೆ.
ಹೊಸ ಪ್ರೊಸೆಸರ್‌ಗಳು XR ಟ್ರಿಲುಮಿನಸ್ ಪ್ರೊ ನಂತಹ ಫೀಚರ್ಸ್‌ಗಳನ್ನು ತರುತ್ತವೆ, ಇದು ಸ್ಕ್ರೀನಿನ ಬಣ್ಣ ವರ್ಣಪಟಲವನ್ನು ಮೂಲಭೂತವಾಗಿ ವಿಸ್ತರಿಸುತ್ತದೆ. ಹಾಗೆಯೇ ಡೈನಾಮಿಕ್ ಫ್ರೇಮ್ ವಿಶ್ಲೇಷಣೆಯ ಮೂಲಕ ವೀಡಿಯೊದಲ್ಲಿನ ಶಬ್ದವನ್ನು ಕಡಿಮೆ ಮಾಡುವ XR ಕ್ಲಿಯರ್ ಇಮೇಜ್.
ಕಂಟೆಂಟ್ ವೀಕ್ಷಣೆಗಾಗಿ, ಸೋನಿಯ ಈ ನೂತನ ಟಿವಿ ಸರಣಿಯು XR 4K ಅಪ್‌ಸ್ಕೇಲಿಂಗ್ ಅನ್ನು ಪಡೆಯುತ್ತದೆ. ಇದು ಹೈ-ರೆಸ್ ವೀಡಿಯೊಗಳ ರೆಸಲ್ಯೂಶನ್ ಅನ್ನು 4K ಗುಣಮಟ್ಟಕ್ಕೆ ಹೆಚ್ಚಿಸುತ್ತದೆ. ಟಿವಿಗಳು ಡಾಲ್ಬಿ ವಿಷನ್‌ಗೆ ಬೆಂಬಲವನ್ನು ಪಡೆಯುತ್ತವೆ, ಇದು ಹೈ ಡೈನಾಮಿಕ್ ರೇಂಜ್ (HDR) ಕಂಟೆಂಟ್ ಅನ್ನು ಕಲರ್ ವೈಬ್ರೆನ್ಸಿ ಮತ್ತು ಕಾಂಟ್ರಾಸ್ಟ್‌ಗೆ ವೃದ್ದಿಸುತ್ತದೆ.
ಸೋನಿ ಬ್ರಾವಿಯಾ 7 ಸರಣಿಯ ಸ್ಮಾರ್ಟ್ ಟಿವಿಗಳು ಸೋನಿ ಪಿಕ್ಚರ್ಸ್ ಕೋರ್ ಸೇವೆಯನ್ನು ಪಡೆದಿದ್ದು, ಅದು IMAX ವರ್ಧಿತ ಸಿನಿಮಾಗಳು ಮತ್ತು ಕಂಟೆಂಟ್ ಅನ್ನಿ ನೀಡುತ್ತದೆ. ವೀಡಿಯೊ ಗುಣಮಟ್ಟಕ್ಕಾಗಿ IMAX ನಿಂದ ಪ್ರಮಾಣೀಕರಿಸಲ್ಪಟ್ಟ ಸ್ಮಾರ್ಟ್ ಟಿವಿಯ ಸ್ಕ್ರೀನ್ ಈ ಸೇವೆಯು ಕಂಟ್ರೋಲ್ ಮಾಡುತ್ತದೆ. ಟಿವಿಗಳಲ್ಲಿನ ಆಡಿಯೊ ಸಿಸ್ಟಮ್ ಡಾಲ್ಬಿ ಅಟ್ಮಾಸ್ ಅನ್ನು ಸಪೋರ್ಟ್ ಮಾಡುತ್ತದೆ. ಇದು ವರ್ಧಿತ ಸರೌಂಡ್ ಸೌಂಡ್ ಎಫೆಕ್ಟ್‌ಗಾಗಿ ಆಬ್ಜೆಕ್ಟ್-ಆಧಾರಿತ ಆಡಿಯೊ ವರ್ಚುವಲೈಸೇಶನ್ ತಂತ್ರಜ್ಞಾನವಾಗಿದೆ.
ಬೆಲೆ ಹಾಗೂ ಲಭ್ಯತೆ ಮಾಹಿತಿ
ಸೋನಿ ಬ್ರಾವಿಯಾ 7 ಸರಣಿಯ 55 ಇಂಚಿನ (K-55XR70) ವೇರಿಯಂಟ್ ಬೆಲೆಯು 182,990ರೂ. ಆಗಿದೆ. ಹಾಗೆಯೇ 65 ಇಂಚಿನ (K-65XR70) ವೇರಿಯಂಟ್ ಬೆಲೆಯು 229,990ರೂ. ಆಗಿದೆ. ಇನ್ನು 75 ಇಂಚಿನ (K-75XR70) ಮುಂದಿನ ದಿನಾಂಕಗಳಲ್ಲಿ ಘೋಷಿಸಲಾಗುವುದು ಎನ್ನಲಾಗಿದೆ. ಇನ್ನು ಈ ಸರಣಿಯ 55 ಇಂಚಿನ ಮತ್ತು 65 ಇಂಚಿನ ಟಿವಿ ವೇರಿಯಂಟ್‌ಗಳು ಈಗ ಭಾರತದಲ್ಲಿ ಸೋನಿ ಸೆಂಟರ್, ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








