ದೇಶದ ಮೊದಲ 'ಸೋನಿ ಕ್ಯಾಮೆರಾ' ಮಳಿಗೆ ಬೆಂಗಳೂರಿನಲ್ಲಿ ಆರಂಭ!

|

ವಿಶ್ವದ ಪ್ರಖ್ಯಾತ ತಂತ್ರಜ್ಞಾನ ಕಂಪೆನಿ ಸೋನಿ ಇಂಡಿಯಾವು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತನ್ನ ಮೊದಲ ಸೋನಿ ಕ್ಯಾಮೆರಾ ಮಳಿಗೆಯನ್ನು ಆರಂಭಿಸಿದೆ. ಕ್ಯಾಮೆರಾ ಮಾರುಕಟ್ಟೆ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವುದರಿಂದ ಗ್ರಾಹಕರಿಗೆ ವಿಶೇಷ ಅನುಭವದ ಮೂಲಕ ಕ್ಯಾಮೆರಾ ಖರೀದಿಗೆ ಸಹಾಯವಾಗಲು ಮಳೆಗೆಯನ್ನು ಆರಂಭಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ನಗರದ ಆನಂದ್‌ರಾವ್‌ ವೃತ್ತದ ಬಳಿ ಇರುವ ಬ್ರಿಗೇಡ್ ಪ್ಲಾಜಾದಲ್ಲಿ ಸೋನಿಯಾ ಮೊದಲ ಕ್ಯಾಮೆರಾ ಮಳಕೆಗೆ ಆರಂಭವಾಗಿದ್ದು, ನೂತನವಾಗಿರುವ ಆರಂಭವಾಗಿರುವ ಈ ಮಳಿಗೆಯಲ್ಲಿ ಕಂಪನಿಯ ಆಲ್ಫಾ ಕ್ಯಾಮೆರಾಗಳ ಶ್ರೇಣಿ ಮತ್ತು ಕ್ಯಾಮೆರಾ ಬಿಡಿಭಾಗಗಳು ಲಭ್ಯವಿವೆ. ಈ ಮೂಲಕ ಕ್ಯಾಮೆರಾ ಕಾರ್ಯಕ್ಷಮತೆಯನ್ನು ನೇರವಾಗಿ ಪರಿಶೀಲಿಸಿ ಖರೀದಿಸುವ ಅವಕಾಶ ಸಿಗಲಿದೆ.

ದೇಶದ ಮೊದಲ 'ಸೋನಿ ಕ್ಯಾಮೆರಾ' ಮಳಿಗೆ ಬೆಂಗಳೂರಿನಲ್ಲಿ ಆರಂಭ!

ಇತ್ತೀಚಿಗೆ ಆನ್‌ಲೈನಿನಲ್ಲಿ ಕ್ಯಾಮೆರಾ ಖರೀದಿ ಪ್ರಮಾಣ ಹೆಚ್ಚಾಗಿತ್ತು. ಆದರೆ, ಸಾವಿರಾರು ರೂಪಾಯಿಗಳನ್ನು ತೆತ್ತು ಖರೀದಿಸುವ ಕ್ಯಾಮೆರಾಗಳನ್ನು ಸೂಕ್ತವಾಗಿ ಪರೀಕ್ಷಿಸದೇ ಮತ್ತು ಇತರೆ ಸಂದೇಹಗಳು ನಿವಾರಣೆಯಾಗದೇ ಖರೀದಿಸಲು ಇದೀಗ ಗ್ರಾಹಕರು ಮನಸ್ಸು ಮಾಡುತ್ತಿಲ್ಲ. ಹಾಗಾಗಿ, ಮಳಿಗೆಯ ಮೂಲಕ ಸೂಕ್ತ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಅತ್ಯಾಧುನಿಕ ಮತ್ತು ವೃತ್ತಿಪರ ಉಪಕರಣಗಳಿಗಾಗಿ ಸೋನಿಯವರ ನವೀನ ಕೊಡುಗೆಗಳ ಕಡೆಗೆ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಈ ಬೇಡಿಕೆಯನ್ನು ವಿಭಿನ್ನ ರೀತಿಯಲ್ಲಿ ಪೂರೈಸಲು ಸಂಸ್ಥೆ ಮುಂದಾಗಿದೆ. ಉತ್ತಮ ದರದಲ್ಲಿ ಕ್ಯಾಮೆರಾ ಖರೀದಿ ಮಾಡಲು ಈ ಮಳಿಗೆ ಸಹಕರಿಸುತ್ತದೆ ಎಂದು ಸೋನಿ ಇಂಡಿಯಾದ ಆಡಳಿತ ನಿರ್ದೇಶಕ ಸುನಿಲ್‌ ನಾಯರ್ ಅವರು ಹೇಳಿದ್ದಾರೆ.

ದೇಶದ ಮೊದಲ 'ಸೋನಿ ಕ್ಯಾಮೆರಾ' ಮಳಿಗೆ ಬೆಂಗಳೂರಿನಲ್ಲಿ ಆರಂಭ!

ನಮ್ಮ ಮೊದಲ ಸೋನಿ ಕ್ಯಾಮೆರಾ ಮಳಿಗೆಯನ್ನು ಪ್ರಾರಂಭಿಸಿದ್ದೇವೆ. ಗ್ರಾಹಕರು ಸೂಕ್ತವಾದ ಉತ್ಪನ್ನಗಳನ್ನು ಆಯ್ಕೆ ಮಾಡಲು ಇದು ಸಹಕರಿಸುತ್ತದೆ. ಹಾಗೂ ಚಿಲ್ಲರೆ ಮಾರಾಟ ಹೆಚ್ಚಿಸಲು ಇನ್ನೂ ಹೆಚ್ಚಿನ ಸಹಾಯ ಮಾಡಲಿದೆ ಎಂದು ಹೇಳಿದ ಅವರು, ಗ್ರಾಹಕರಿಗೆ ಎದುರಾಗುವ ಎಲ್ಲಾ ಸಂದೇಹಗಳನ್ನು ಅಲ್ಲಿನ ಪರಿಣತರು ನಿವಾರಿಸುತ್ತಾರೆ ಎಂದು ಹೇಳುವುದನ್ನು ಮರೆಯಲಿಲ್ಲ.

ಓದಿರಿ: ಬೆಂಗಳೂರಿನಲ್ಲಿ ಬೆಚ್ಚಿಬೀಳುವ ಘಟನೆ!.ಚಾರ್ಜ್ ಹಾಕಿ ಫೋನ್ ಬಳಸುವವರೇ ಇಲ್ಲಿ ನೋಡಿ!

Best Mobiles in India

English summary
Find here first Sony Digital Camera in Bengaluru, Karnataka. Get latest details on Sony Digital Camera, Sony Camera prices, models. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X