ಬೆಂಗಳೂರಿನಲ್ಲಿ ಬೆಚ್ಚಿಬೀಳುವ ಘಟನೆ!.ಚಾರ್ಜ್ ಹಾಕಿ ಫೋನ್ ಬಳಸುವವರೇ ಇಲ್ಲಿ ನೋಡಿ!

|

ಮೊಬೈಲ್ ಚಾರ್ಜ್ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದ ವೇಳೆ ಮೊಬೈಲ್​ ದೀಢೀರನೆ ಸ್ಫೋಟಗೊಂಡು ಯುವಕಕೋರ್ವ ಗಂಭೀರವಾಗಿ ಅನಾಹುತಕ್ಕೆ ತುತ್ತಾಗಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದೆ. ಮೊಬೈಲ್ ಸ್ಫೋಟದ ತೀರ್ವತೆಗೆ ಯುವಕನ ಕೈಗೆ ಗಂಭೀರ ಸ್ವರೂಪದ ಹಾನಿಯಾಗಿದ್ದು, ಈ ಘಟನೆಯಲ್ಲಿ ಆತನ ಮೂರು ಎಡಗೈ ಬೆರಳುಗಳು ಛಿದ್ರವಾಗಿವೆ.

ಹೌದು, ಇತ್ತೀಚಿಗೆ ಮೊಬೈಲ್ ಬಳಕೆಯು ಅಪಾಯವನ್ನು ಮೈಮೇಲೆ ಎಳೆದುಕೊಂಡತಾಗಿದ್ದು, ಮೊಬೈಲ್ ಚಾರ್ಜ್ ಹಾಕಿ ತನ್ನ ಸಹೋದ್ಯೋಗಿ ಜೊತೆಗೆ ವಿಡಿಯೋ ಕರೆ ಮಾಡಿದ್ದ ಬಿಹಾರ ಮೂಲದ ಕೂಲಿಕಾರ್ಮಿಕ ತನ್ನ ಮೂರು ಬೆರಳುಗಳನ್ನೂ ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಏಪ್ರಿಲ್ 11 ರಂದೇ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಬೆಚ್ಚಿಬೀಳುವ ಘಟನೆ!.ಚಾರ್ಜ್ ಹಾಕಿ ಫೋನ್ ಬಳಸುವವರೇ ಇಲ್ಲಿ ನೋಡಿ!

ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಳ್ಳುತ್ತಿದ್ದಂತೆಯೇ ಆ ಯುವಕನ ಸ್ನೇಹಿತರು ಶಾಕ್ ಆಗಿದ್ದು, ತಕ್ಷಣವೇ ಆತನನ್ನು ವೈದೇಹಿ ಆಸ್ಪತ್ರಗೆ ದಾಖಲು‌ ಮಾಡಿದ್ದಾರೆ. ಈ ವೇಳೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದರೂ ಯುವಕ ಮೂರು ಬೆರಳು ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮೊಬೈಲ್ ಸ್ಪೋಟದ ತೀರ್ವತೆಯನ್ನು ನೋಡಿ ವೈದ್ಯರು ಗಾಬರಿಯಾಗಿದ್ದಾರೆ.

ಸ್ಪೋಟಗೊಂಡಿರುವುದು ಜಿಯೋ ಪೋನ್ ಎಂದು ಹೇಳಲಾಗಿದ್ದು, ಈ ಬಗ್ಗೆ ಮತ್ತಷ್ಟು ತನಿಖೆ ನಡೆದ ನಂತರ ಸತ್ಯಾಸತ್ಯತೆ ಹೊರಬೀಳಿಲಿದೆ. ಮೊಬೈಲ್‌ಗಳ ಸ್ಪೋಟದಿಂದ ಇತ್ತೀಚಿಗೆ ಅನಾಹುತಗಳು ಹೆಚ್ಚುತ್ತಿವೆ. ಬೆಂಕಿಯ ಉಂಡೆಯಂತಿರುವ ಸ್ಮಾರ್ಟ್‌ಫೋನ್‌ಗಳ ಬಳಕೆಯಲ್ಲಿ ಸ್ವಲ್ಪ ಯಾಮಾರಿದರೂ ಕೂಡ ಕಷ್ಟವೇ. ಹಾಗಾಗಿ, ನೀವು ಈ ತಪ್ಪುಗಳನ್ನು ಮಾಡಲೇಬೇಡಿ.

ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ!

ಬ್ಯಾಕ್ ಪೌಚ್‌ನಿಂದ ಮೊಬೈಲ್ ಸ್ಪೋಟ!

ಮೊಬೈಲ್ ಸುರಕ್ಷಿತವಾಗಿರಲಿ ಎಂದು ಬಳಸುವ ಬ್ಯಾಕ್ ಪೌಚ್ ನಿಮ್ಮ ಮೊಬೈಲ್ ಸಿಡಿಯಲು ಮುಖ್ಯ ಕಾರಣಗಳಲ್ಲಿ ಒಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಮೊಬೈಲ್ ಅನ್ನು ಹೆಚ್ಚು ಬಳಸಿದಾಗ ಆ ಮೊಬೈಲ್ ಹೆಚ್ಚು ಬಿಸಿಯಾಗುತ್ತದೆ. ಮೊಬೈಲ್ ಬಿಸಿಯಾದಾಗ ಬ್ಯಾಕ್ ಪೌಚ್‌ಗಳು ಉಷ್ಣತೆಯನ್ನು ಹೊರಹಾಕಲು ಬಿಡುವುದಿಲ್ಲ. ಇದರ ಒತ್ತಡ ತಡೆಯಲಾರದೆ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತವೆ ಎಂದು ತಿಳಿಸಿದೆ.

ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ

ಚಾರ್ಜಿಂಗ್ ವೇಳೆ ಮೊಬೈಲ್ ಬಳಕೆ

ಚಾರ್ಜಿಂಗ್ ವೇಳೆ ಸ್ಮಾರ್ಟ್‌ಫೋನ್ ಬಳಕೆ ಕೂಡ ಮೊಬೈಲ್ ಫೋನ್‌ನ ಸ್ಫೋಟಕ್ಕೆ ಮತ್ತೊಂದು ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನಿನ ಮದರ್ ಬೋರ್ಡ್‌ಗೆ ಚಾರ್ಜಿಂಗ್ ಒತ್ತಡ ಹೆಚ್ಚು ಬೀಳುವುದು ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಹೇಳಿದ್ದಾರೆ. ಮೊಬೈಲ್ ಬ್ಯಾಟರಿ ಬಾಳಿಕೆಯನ್ನು ಅದರ ಸಾಫ್ಟ್‌ವೇರ್ ತಂತ್ರಜ್ಞಾನ ನಿಯಂತ್ರಿಸಿದರೂ ಸಹ ಅದರ ಒತ್ತಡವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಳಪೆ ಪವರ್ ಬ್ಯಾಂಕ್

ಕಳಪೆ ಪವರ್ ಬ್ಯಾಂಕ್

ಕಳಪೆ ಗುಣಮಟ್ಟದ ಪವರ್‌ಬ್ಯಾಂಕ್ ಕೂಡ ಮೊಬೈಲ್ ಸ್ಪೋಟಕ್ಕೆ ಕಾರಣ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಾಗಿ, ಪವರ್ ಬ್ಯಾಂಕ್ ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಮತ್ತು ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ.

ಪದೇ ಪದೇ ಮೊಬೈಲ್ ಚಾರ್ಜ್

ಪದೇ ಪದೇ ಮೊಬೈಲ್ ಚಾರ್ಜ್

ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ ಇದರಿಂದ ಕೂಡ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ (80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿದ ನಂತರ ಬಳಕೆ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ಮಾರ್ಟ್‌ಫೋನಿನ ಬ್ಯಾಟರಿ ಸ್ಪೋಟವಾಗಬಹುದು ಎಂದಿದ್ದಾರೆ.

ಕಳಪೆ ಚಾರ್ಜರ್ ಬಗ್ಗೆ ಎಚ್ಚರ!

ಕಳಪೆ ಚಾರ್ಜರ್ ಬಗ್ಗೆ ಎಚ್ಚರ!

ಮೊಬೈಲ್ ಜೊತೆಗೆ ಬಂದಿದ್ದ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಚಾರ್ಜರ್ ಹಾಳಾದರೆ ಹಣ ಉಳಿಸುವ ಸಲುವಾಗಿ ಕಳಪೆ ಚಾರ್ಜರ್‌ಗಳನ್ನು ಖರೀದಿಸಿ ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಫಾಸ್ಟ್ ಚಾರ್ಜರ್ ಬೇಡ!

ಫಾಸ್ಟ್ ಚಾರ್ಜರ್ ಬೇಡ!

ಫಾಸ್ಟ್ ಚಾರ್ಜರ್‌ಗಳನ್ನು ಆ ತಂತ್ರಜ್ಞಾನ ಅಳವಡಿಕೆಯಾಗಿಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬೇಡಿ. ಫಾಸ್ಟ್ ಚಾರ್ಜರ್‌ನಲ್ಲಿ ಹೈ ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್ ಆದರೂ ಯಾವಾಗಲೂ ತ್ವರಿತ ಚಾರ್ಜರ್‌ಗಳನ್ನು ಬಳಸುವುದು ಒಳ್ಳೆಯದಲ್ಲ. ಹಾಗಾಗಿ, ಇದು ನಿಮ್ಮ ನೆನಪಿನಲ್ಲಿರಲಿ.

ಅದರದ್ದೇ ಆದ ಚಾರ್ಜರ್

ಅದರದ್ದೇ ಆದ ಚಾರ್ಜರ್

ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್'ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್'ಗಳು ಇತರ ಚಾರ್ಜರ್'ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಬಹುತೇಕ ಬೇರೆ ಯಾವ ಚಾರ್ಜರ್ ಕೂಡ ಸರಿಯಾಗಿ ಹೋಲಿಕೆಯಾಗುವುದಿಲ್ಲ. ಇನ್ನು ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸದಿರುವುದು ಸಹ ನಿಮ್ಮ ಬ್ಯಾಟರಿ ನಿರ್ವಹಣೆಗೆ ಉತ್ತಮ.

Best Mobiles in India

English summary
Mobile Blast in Bangalore. Man using phone while charging it loses three fingers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X