Home
ಸುದ್ದಿಜಾಲ

ಸೋನಿಯಿಂದ ಹೊಸ ಸ್ಮಾರ್ಟ್‌ ಟಿವಿ ಸರಣಿ ಲಾಂಚ್‌; ಅಚ್ಚರಿಯ ಫೀಚರ್ಸ್‌ ಇವೆ!

ಟೆಕ್‌ ದೈತ್ಯ ಸೋನಿ (Sony) ಸಂಸ್ಥೆಯು ತನ್ನ ಬ್ರಾವಿಯಾ (BRAVIA) ಟಿವಿ ಸರಣಿಯಲ್ಲಿ ಹಲವು ಸ್ಮಾರ್ಟ್‌ ಟಿವಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಬ್ರಾವಿಯಾ 2 (BRAVIA 2) ಸರಣಿಯನ್ನು ಪ್ರಾರಂಭ ಮಾಡಿದೆ. ಈ ನೂತನ ಸರಣಿಯಲ್ಲಿ ಸಂಸ್ಥೆಯು S25 ವೇರಿಯಂಟ್‌ ಹಾಗೂ S20 ವೇರಿಯಂಟ್‌ ಅನ್ನು ಲಾಂಚ್ ಮಾಡಿದೆ.

ಹೌದು, ಸೋನಿ ಸಂಸ್ಥೆಯು ತನ್ನ ಹೊಸ ಬ್ರಾವಿಯಾ 2 ಸರಣಿಯಲ್ಲಿ S20 ಹಾಗೂ S25 ವೇರಿಯಂಟ್‌ ಅನ್ನು ಬಿಡುಗಡೆ ಮಾಡಿದೆ. ಇನ್ನು S20 ವೇರಿಯಂಟ್‌ 43 ಇಂಚಿನ ಹಾಗೂ 50 ಇಂಚಿನ ಗಾತ್ರದ ಟಿವಿಗಳನ್ನು ಪಡೆದಿದೆ. ಹಾಗೆಯೇ S25 ವೇರಿಯಂಟ್‌ 55 ಇಂಚಿನ ಮತ್ತು 65 ಇಂಚಿನ ಡಿಸ್‌ಪ್ಲೇ ಗಾತ್ರ ಪಡೆದಿವೆ.

ಸೋನಿಯಿಂದ ಹೊಸ ಸ್ಮಾರ್ಟ್‌ ಟಿವಿ ಸರಣಿ ಲಾಂಚ್‌; ಅಚ್ಚರಿಯ ಫೀಚರ್ಸ್‌ ಇವೆ!

ಇನ್ನು ನೂತನ ಟಿವಿಗಳಜು X-ಪ್ರೊಟೆಕ್ಷನ್ PRO ತಂತ್ರಜ್ಞಾನ ಒಳಗೊಂಡಿದ್ದು, ಧೂಳು, ತೇವಾಂಶ, ವಿದ್ಯುತ್‌ ಏರಿಳಿತದಿಂದ ಆಗುವ ಹಾನಿಗಳಿಂದ ರಕ್ಷಣೆ ನೀಡುವ ಕೆಲಸ ಮಾಡಲಿದೆ. ಅಲ್ಲದೇ ಲೀಡಿಂಗ್ ಸ್ಟ್ರೀಮಿಂಗ್ ಸೇವೆಗಳಿಗೆ (ಓಟಿಟಿ ಆಪ್‌ಗಳಿಗೆ) ತ್ವರಿತವಾಗಿ ಹೋಗಲು ಆರು ಹಾಟ್ ಕೀ ಸೌಲಭ್ಯ ಸಹ ಒದಗಿಸಲಾಗಿದೆ. ಹಾಗಾದರೇ ಸೋನಿ ಸಂಸ್ಥೆಯ ಈ ನೂತನ ಸ್ಮಾರ್ಟ್‌ ಟಿವಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸೋನಿಯ ಹೊಸ ಟಿವಿಗಳು X1 ಪಿಕ್ಚರ್ ಪ್ರೊಸೆಸರ್ ಅನ್ನು ಪಡೆದಿವೆ. ಅಲ್ಲದೇ ಇದು ಶಬ್ದವನ್ನು ಕಡಿಮೆ ಮಾಡುತ್ತದೆ ಹಾಗೂ ಸ್ಪಷ್ಟ ಆಡಿಯೋ ಲಭ್ಯ ಮಾಡಲು ನೆರವಾಗುತ್ತದೆ. ಇನ್ನು ಈ ಟಿವಿಗಳು 4K ರೆಸಲ್ಯೂಶನ್‌ ಸೌಲಭ್ಯ ಸಹ ಪಡೆದಿವೆ. ವೀಕ್ಷಕರು ಆಕ್ಷನ್ ಸಿನಿಮಾ, ಸ್ಪೋರ್ಟ್ಸ್‌ ಅಥವಾ ಇತರೆ ಟಿವಿ ಕಾರ್ಯಕ್ರಮಗಳನ್ನು ನೋಡಲಿ, ವೀಕ್ಷಕರ ವೀಕ್ಷಣೆಯ ಅನುಭವ ಇಮ್ಮಡಿಗೊಳಿಸುತ್ತದೆ.

ಹಾಗೆಯೇ ಈ ಟಿವಿಗಳು ಡಾಲ್ಬಿ ಆಡಿಯೊ ಮತ್ತು ಕ್ಲಿಯರ್ ಫೇಸ್ ತಂತ್ರಜ್ಞಾನ ಇದ್ದು, ರಿಚ್‌ ಬಾಸ್ ಮತ್ತು ಸ್ಪಷ್ಟ ವಾಯಿಸ್‌ ನೀಡಲಿದೆ. ಈ ಮೂಲಕ ವೀಕ್ಷಕರಿಗೆ ಆಡಿಯೊ ಅನುಭವವನ್ನು ಪರಿಣಾಮಕಾರಿಯಾಗಿ ನೀಡುತ್ತದೆ. ಈ ಟಿವಿಗಳು 20W ವ್ಯಾಟ್ ಸ್ಪೀಕರ್‌ಗಳ ಸೌಲಭ್ಯದೊಂದಿಗೆ ಕೆಲಸ ಮಾಡಲಿವೆ.

ಸೋನಿ ಬ್ರಾವಿಯಾ 2 ಸರಣಿಯು ಗೂಗಲ್‌ ಟಿವಿ ಜೊತೆಗೆ ಸ್ಮಾರ್ಟ್ ಫೀಚರ್ಸ್‌ಗಳನ್ನು ಸಹ ಒದಗಿಸುತ್ತದೆ. ಅಲ್ಲದೇ ಬಳಕೆದಾರರು 10,000 ಕ್ಕೂ ಅಧಿಕ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ 700,000 ಕ್ಕೂ ಅಧಿಕ ಸಿನಿಮಾಗಳು ಮತ್ತು ಟಿವಿ ಎಪಿಸೋಡ್‌ಗಳನ್ನು ಪ್ರವೇಶಿಸಬಹುದು.

ಇನ್ನು ಬ್ರಾವಿಯಾ 2 S25 ವೇರಿಯಂಟ್‌ PS5 ಗೇಮರ್‌ಗಳಿಗಾಗಿ ವಿಶೇಷ ಫೀಚರ್ಸ್‌ಗಳಿಗೆ ಸ್ಪಂದಿಸುವ ಗೇಮಿಂಗ್ ಅನುಭವವನ್ನು ಒದಗಿಸಲಿದೆ. ಹಾಗೆಯೇ ಲೋ ಲೇಟೆನ್ಸಿ ಮೋಡ್ ಮತ್ತು ಆಪ್ಟಿಮೈಸ್ ಮಾಡಿದ HDR ಸೆಟ್ಟಿಂಗ್‌ಗಳ ಆಯ್ಕೆ ಸಹ ಪಡೆದಿವೆ. ಇವು ಸುಗಮವಾಗಿ ಗೇಮ್‌ ಆಡಲು ಪೂರಕ ಎನಿಸುತ್ತವೆ.

ಸೋನಿ ಬ್ರಾವಿಯಾ 2 ಸರಣಿಯು ವಾಯಿಸ್‌-ಸಕ್ರಿಯಗೊಳಿಸಿದ ರಿಮೋಟ್ ಅನ್ನು ಪಡೆದಿದ್ದು, ಟಿವಿಯನ್ನು ಕಂಟ್ರೋಲ್‌ ಮಾಡಲು ಉಪಯುಕ್ತ. ಅಲ್ಲದೇ ಸ್ವಂತ ವಾಯಿಸ್‌ ಮೂಲಕ ಕಂಟೆಂಟ್‌ ಸರ್ಚ್ ಮಾಡಲು ಅವಕಾಶ ನೀಡುತ್ತದೆ.

ಅಂದಹಾಗೆ ಸೋನಿ ಸಂಸ್ಥೆಯ ಹೊಸ ಬ್ರಾವಿಯಾ 2 ಸರಣಿಯ 65 ಇಂಚಿನ ವೇರಿಯಂಟ್‌ಗೆ 95,990ರೂ. ಆಗಿದೆ. ಇನ್ನು 55 ಇಂಚಿನ ವೇರಿಯಂಟ್‌ ಬೆಲೆಯು 74,990ರೂ. ಗಳು ಆಗಿದೆ. ಇನ್ನು 50 ಇಂಚಿನ ಮತ್ತು 43 ಇಂಚಿನ ವೇರಿಯಂಟ್‌ ಬೆಲೆಗಳ ಬಗ್ಗೆ ತಿಳಿಸಿಲ್ಲ. ಇನ್ನು ಈ ಹೊಸ ಟಿವಿಗಳು ಪ್ರಮುಖ ಎಲೆಕ್ಟ್ರಾನಿಕ್‌ ಸ್ಟೋರ್‌ಗಳು ಹಾಗೂ ಇ ಕಾಮರ್ಸ್‌ ತಾಣಗಳಲ್ಲಿ ಖರೀದಿಗೆ ಲಭ್ಯ ಇರಲಿವೆ. ಇದೇ ಮೇ 24 ರಿಂದ ಖರೀದಿಗೆ ಲಭ್ಯ.

Best Mobiles in India

English summary
Sony has launched its new BRAVIA 2 series in India. this TV series are available in four screen sizes - 43 inches, 50 inches, 55 inches, and 65 inches. know more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+