Home
ಸುದ್ದಿಜಾಲ

ಸೋನಿ ರಿಯಾನ್ ಪಾಕೆಟ್ ಎಸಿ 2 ಅನಾವರಣ; ನೀವು ಹೋದ ಕಡೆಯಲೆಲ್ಲಾ ತಂಗಾಳಿ!

ಇನ್ಮುಂದೆ ಬೇಸಿಗೆ ಜನರನ್ನು ಇನ್ನಿಲ್ಲದಂತೆ ಕಾಡುವುದು ಎಲ್ಲರಿಗೂ ತಿಳಿದ ವಿಚಾರ. ಈ ಕಾರಣಕ್ಕೆ ಜನರು ಹೊಸ ಎಸಿ ಖರೀದಿ ಮಾಡುವುದು ಹೆಚ್ಚಾಗಿದೆ. ಈಗಾಗಲೇ ಎಸಿ ಹೊಂದಿರುವವರು ಸರ್ವಿಸ್‌ ಮಾಡಿಸುತ್ತಿದ್ದಾರೆ. ಆದರೆ, ಇವು ಮನೆ ಅಥವಾ ಆಫೀಸಿಗಷ್ಟೇ ಸೀಮಿತ.

ಹೌದು, ಸಾಮಾನ್ಯವಾಗಿ ಈ ಬೇಸಿಗೆಯಲ್ಲಿ ಮನೆ ಅಥವಾ ಆಫೀಸ್‌ನಲ್ಲಿ ಮಾತ್ರ ಎಸಿ ಬಳಕೆಯನ್ನು ಮಾಡಬಹುದು. ಆದರೆ, ನಡೆದಾಡುವಾಗ, ಎಲ್ಲೋ ಸಂಚಾರ ಮಾಡುವಾಗ, ಸಾಮಾನ್ಯ ಬಸ್‌, ಆಟೋದಲ್ಲಿ ಪ್ರಯಾಣ ಮಾಡುವಾಗಲೂ ಎಸಿ ಅಗತ್ಯ ಎಂದಾದರೆ ಇಲ್ಲಿದೆ ನೋಡಿ ವಿಶೇಷ ಡಿವೈಸ್‌. ಪ್ರಮುಖ ಸ್ಮಾರ್ಟ್‌ಗ್ಯಾಜೆಟ್‌ ತಯಾರಿಕಾ ಸಂಸ್ಥೆಯಾದ ಸೋನಿ ಹೊಸ ಡಿವೈಸ್ ಅನ್ನು ಅನಾವರಣ ಮಾಡಿದ್ದು, ಇದರಿಂದ ಸಾಕಷ್ಟು ಅನುಕೂಲ ಆಗಲಿದೆ.

ಸೋನಿ ರಿಯಾನ್ ಪಾಕೆಟ್ ಎಸಿ 2 ಅನಾವರಣ; ನೀವು ಹೋದ ಕಡೆಯಲೆಲ್ಲಾ ತಂಗಾಳಿ!

ಈಗ ನೀವು ಹೋದ ಕಡೆಯಲೆಲ್ಲಾ ಎಸಿ: ಸೋನಿ ಇದೀಗ ಸೋನಿ ರಿಯಾನ್ ಪಾಕೆಟ್‌ ಎಸಿ 2 (Sony Reon Pocket Ac 2) ಅನ್ನು ಲಾಂಚ್‌ ಮಾಡಿದ್ದು, ಇದು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ನಿಮ್ಮ ಜೇಬಿನಲ್ಲಿ ಸಲೀಸಾಗಿ ಕೂರಲಿದೆ. ಈ ಮೂಲಕ ನಿಮ್ಮ ದೇಹವನ್ನು ಎಂತಹ ಬಿರು ಬಿಸಿಲಿನಲ್ಲೂ ತಂಪಾಗಿಡಲಿದೆ. ಹಾಗೆಯೇ ಈ ಹೊಸ ಡಿವೈಸ್‌ ಆಕರ್ಷಕ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಸೋನಿ ರಿಯಾನ್ ಪಾಕೆಟ್ ಎಸಿ 2 ಫೀಚರ್ಸ್‌: ಈ ಸೋನಿ ರಿಯಾನ್ ಪಾಕೆಟ್ ಎಸಿ 2 ಅನ್ನು ಸೋನಿಯ ಕ್ರೌಡ್‌ಫಂಡಿಂಗ್ ಯೋಜನೆಯ ಅಡಿಯಲ್ಲಿ ಪರಿಚಯಿಸಲಾಗಿದ್ದು, ಇದನ್ನು ನಿಮ್ಮ ಜೇಬಿನಲ್ಲಿ ಇರಿಸಿಕೊಂಡಾಗ ನಿಮ್ಮ ದೇಹದ ಶಾಖವನ್ನು ತೊಡೆದುಹಾಕಲು ಕೆಲಸ ಮಾಡುತ್ತದೆ. ಈ ಡಿವೈಸ್‌ ಮೊಬೈಲ್‌ ಗಿಂತ ಚಿಕ್ಕದಾಗಿದ್ದು, ಇದನ್ನು ನಿಮ್ಮ ಬಟ್ಟೆಯಲ್ಲಿರುವ ಯಾವುದೇ ಜೇಬಿನಲ್ಲಿ ಬೇಕಾದರೂ ಇರಿಸಿಕೊಳ್ಳವಂತೆ ಅನುಕೂಲ ಮಾಡಿಕೊಡಲಾಗಿದೆ.

ಸೋನಿ ರಿಯಾನ್ ಪಾಕೆಟ್ ಎಸಿ 2 ಅನಾವರಣ; ನೀವು ಹೋದ ಕಡೆಯಲೆಲ್ಲಾ ತಂಗಾಳಿ!

ಇದು ತಂಪಾದ ಗಾಳಿಯನ್ನು ನೀಡುವ ಉದ್ದೇಶದಿಂದ ಪ್ಯಾನೆಲ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತದೆ. ವಿಶೇಷ ಎಂದರೆ ಇದನ್ನು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಿಕೊಳ್ಳಬಹುದಾಗಿದ್ದು, ಎಷ್ಟು ಪ್ರಮಾಣದ ತಣ್ಣನೆಯ ಗಾಳಿ ಅಗತ್ಯ ಎಂಬುದನ್ನು ಕಂಟ್ರೋಲ್‌ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಈ ಡಿವೈಸ್‌ ಬ್ಲೂಟೂತ್‌ ಮೂಲಕ ಕೆಲಸ ಮಾಡುತ್ತದೆ.

ಇನ್ನುಳಿದಂತೆ ಈ ಸೋನಿ ರಿಯಾನ್ ಪಾಕೆಟ್ ಎಸಿ 2 ಯನ್ನು ಪೆಲ್ಟಿಯರ್ ಎಲಿಮೆಂಟ್ಸ್‌ ನಿಂದ ತಯಾರಿಸಲಾಗಿದ್ದು, ಈ ಮೂಲಕ ಈ ಡಿವೈಸ್‌ ಅತ್ಯಂತ ವೇಗವಾಗಿ ತಣ್ಣನೆಯ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದು ಬೇಸಿಗೆಗೆ ಮಾತ್ರವಲ್ಲದೆ ಚಲಿಗಾಲದಲ್ಲಿ ಬೆಚ್ಚನೆಯ ಅನುಭವವನ್ನೂ ಸಹ ಇದು ನೀಡುತ್ತದೆ. ಇದರಿಂದಾಗಿ ಒಮ್ಮೆ ಖರೀದಿ ಮಾಡಿದರೆ ಚಳಿಗಾಲ ಹಾಗೂ ಬೇಸಿಗೆಕಾಲ ಎರಡರಲ್ಲೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಸೋನಿ ರಿಯಾನ್ ಪಾಕೆಟ್ ಎಸಿ 2 ಬೆಲೆ ಹಾಗೂ ಲಭ್ಯತೆ: ಇದರ ಬೆಲೆ ವಿಚಾರಕ್ಕೆ ಬರುವುದಾದರೆ ಹಲವು ಮಂದಿಗೆ ಇದು ಬೇಸರ ವಿಷಯವಾಗಿರಲಿದೆ. ಯಾಕೆಂದರೆ ಇದರ ಮೂಲ ಬೆಲೆ ಬರೋಬ್ಬರಿ 10,300 ರೂ. ಗಳು. ಇಷ್ಟೊಂದು ಬೆಲೆ ನೀಡಿ ಭಾರತದ ಸಾಮಾನ್ಯ ಜನರು ಖರೀದಿ ಮಾಡಲು ಸಾಧ್ಯವಿಲ್ಲದಿದ್ದರೂ ಸಹ ನಗರ ಹಾಗೂ ಪಟ್ಟಣವಾಸಿಗಳು ಅದರಲ್ಲೂ ಉದ್ಯೋಗಿಗಳು ಇದರಿಂದ ಹಲವು ಅನುಕೂಲ ಪಡೆದುಕೊಳ್ಳಬಹುದು.

ಸೋನಿ ರಿಯಾನ್ ಪಾಕೆಟ್ ಎಸಿ 2 ಅನಾವರಣ; ನೀವು ಹೋದ ಕಡೆಯಲೆಲ್ಲಾ ತಂಗಾಳಿ!

ಈ ಎಸಿ ಖರೀದಿ ಮಾಡಲು ಸಾಧ್ಯವಿಲ್ಲ ಎನ್ನುವವರು ಕಚೇರಿಯ ಕೆಲಸದ ಸ್ಥಳ ಹಾಗೂ ಸಣ್ಣ ರೂಂಗಳಿಗಾಗಿ ಸಣ್ಣ ಗಾತ್ರದ ಪೋರ್ಟಬಲ್‌ ಎಸಿಗಳನ್ನು ಖರೀದಿ ಮಾಡಬಹುದು. ಈ ಎಸಿಗಳು ಕೇವಲ ಎರಡು ಸಾವಿರ ಒಳಗೆ ಪ್ರಮುಖ ಇ-ಕಾಮರ್ಸ್‌ ತಾಣವಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರುತ್ತವೆ. ಈ ಡಿವೈಸ್‌ಗಳು ಬ್ಯಾಟರಿ ಅಥವಾ ನೆರವಾಗಿ ವಿದ್ಯುತ್‌ ಮೂಲಕ ಕಾರ್ಯನಿರ್ವಹಿಸಲಿದ್ದು, ಇವುಗಳನ್ನೂ ಸಹ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು.

Best Mobiles in India

English summary
Summer is starting and for this reason Sony has launched Sony Reon Pocket AC 2 to use AC anywhere.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+