ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!

|

ಜನಪ್ರಿಯ ಟೆಕ್‌ ಸಂಸ್ಥೆ ಸೋನಿಯು ಇತ್ತೀಚಿಗೆ ಭಾರತದಲ್ಲಿ ಸ್ಮಾರ್ಟ್‌ಫೋನ್‌ ಉತ್ಪಾದನೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು, ಈ ಬೆನ್ನಲ್ಲೇ ಪೂರ್ಣ ಆಸಕ್ತಿಯನ್ನು ಆಡಿಯೊ ಮತ್ತು ಗೃಹ ಉತ್ಪನ್ನಗಳತ್ತ ನೀಡಿದೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ಹೊಸದಾಗಿ HT-Z9F ಹೆಸರಿನ ಸೌಂಡ್‌ ಬಾರ್‌ವೊಂದನ್ನು ಪರಿಚಯಿಸಿದ್ದು, ಈ ಡಿವೈಸ್‌ ಡಾಲ್ಬಿ ಆಟ್ಮೊಸ್‌ ಸೌಂಡ್‌ ತಂತ್ರಜ್ಞಾನವನ್ನು ಒಳಗೊಂಡಿದೆ.

ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!

ಹೌದು, ಸೋನಿ ಕಂಪನಿಯು ಭಾರತೀಯ ಮಾರುಕಟ್ಟೆಗೆ ನೂತನ HT-Z9F ಸೌಂಡ್‌ಬಾರ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿದ್ದು, 3.1 ಚಾನಲ್‌ ಮಾದರಿಯಲ್ಲಿದೆ. ಹಾಗೆಯೇ ಈ ಡಿವೈಸ್‌ ಇನ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌ (Built-in Chromecast) ಸೌಲಭ್ಯವನ್ನು ಸಹ ಹೊಂದಿದ್ದು, ಸಬ್‌ವೂಫರ್‌ಗಳ ಮೂಲಕ 5.1 ಚಾನಲ್‌ ಮಾದರಿಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದಾದ ಆಯ್ಕೆಯು ಇದೆ. ಇದರೊಂದಿಗೆ ಡಾಲ್ಬಿ ಆಟ್ಮೊಸ್‌ ಸೌಂಡ್‌ ಲೋಡೆಡ್‌ ಆಗಿದೆ.

ಸೋನಿಯಿಂದ ಹೊಸ ಸೌಂಡ್‌ಬಾರ್ ಬಿಡುಗಡೆ!.ಬೆಲೆ ಮಾತ್ರ ದುಬಾರಿ!

ಇದೇ ಜುಲೈ 8ರಂದು ಈ ಡಿವೈಸ್‌ನ ಮೊದಲ ಸೇಲ್‌ ಆರಂಭವಾಗಲಿದೆ. ಅಧಿಕೃತ ಸೋನಿ ಶಾಪ್‌ಗಳಲ್ಲಿ ಮತ್ತು ಇ ಕಾಮರ್ಸ್‌ ಜಾಲತಾಣಗಳಲ್ಲಿ ಪ್ರಿ ಬುಕ್ಕಿಂಗ್ ಪ್ರಕ್ರಿಯೆಯು ಶುರುವಾಗಿದ್ದು, ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಕಂಪನಿಯ SA-Z9R ಸ್ಪೀಕರ್‌ ಸಹ ಲಭ್ಯವಾಗುವ ಅವಕಾಶವು ಇದೆ. ಹಾಗಾದರೇ ಸೋನಿ HT-Z9F ಸೌಂಡ್‌ಬಾರ್‌ ಡಿವೈಸ್‌ ಇತರೆ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು? ಓದಿರಿ : ಪತಂಜಲಿ ಮೆಸೆಜ್‌ ಆಪ್‌ ಈ ಬಾರಿ ಪುಟಿದೆಳುವುದೇ?..ಹಾಗಾದ್ರೆ ವಾಟ್ಸಪ್‌ ಕಥೆ ಏನು?

ಬೆಸ್ಟ್‌ ಸೌಲಭ್ಯಗಳು

ಬೆಸ್ಟ್‌ ಸೌಲಭ್ಯಗಳು

ಸೋನಿಯ HT-Z9F ಸೌಂಡ್‌ಬಾರ್‌ ಡಿವೈಸ್‌ 4K HRD ವಿಡಿಯೊಗೆ ಬೆಂಬಲ ನೀಡುವ ಆಯ್ಕೆಯನ್ನು ಹೊಂದಿದ್ದು, ಈ ಸೌಲಭ್ಯವನ್ನು HDMI ARC ಮೂಲಕ ಕನೆಕ್ಟ್‌ ಮಾಡಬಹುದಾಗಿದೆ. ಇದರೊಂದಿಗೆ ಲೆಟೆಸ್ಟ್‌ ಬ್ಲೂಟೂತ್ ಕನೆಕ್ಟಿವಿಟಿ, LAN, USB ಮತ್ತು ಆಪ್ಟಿಕಲ್ ಇನ್‌ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಹಾಗೆಯೇ ಈ ಡಿವೈಸ್‌ ರಿಮೋಟ್ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದೆ.

ವಾಯಿಸ್‌ ಅಸಿಸ್ಟಂಟ್ ಬೆಂಬಲ

ವಾಯಿಸ್‌ ಅಸಿಸ್ಟಂಟ್ ಬೆಂಬಲ

ಸದ್ಯ ಇತ್ತೀಚಿನ ಸ್ಮಾರ್ಟ್‌ಡಿವೈಸ್‌ಗಳಲ್ಲಿ ವಾಯಿಸ್‌ ಅಸಿಸ್ಟಂಟ್ ಫೀಚರ್‌ ಕಾಮನ್‌ ಆಗಿದ್ದು, ಸೋನಿಯ ಈ ಸೌಂಡ್‌ಬಾರ್‌ ಸಹ ಗೂಗಲ್‌ ಅಸಿಸ್ಟಂಟ್ ಮತ್ತು ಅಮೆಜಾನ್ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್‌ ಆಯ್ಕೆಯನ್ನು ಬೆಂಬಲಿಸಲಿದೆ. ಹೀಗಾಗಿ ವಾಯಿಸ್‌ ಕಮಾಂಡ್‌ ಮೂಲಕವೇ ಸೌಂಡ್‌ಬಾರ್‌ ಅನ್ನು ಬಳಕೆದಾರರು ನಿಯಂತ್ರಿಸಬಹುದಾಗಿದೆ.

ಓದಿರಿ : 'ಜಬ್ರಾ ಇಲೈಟ್‌ 85H' ಬ್ಲೂಟೂತ್ ಹೆಡ್‌ಫೋನ್‌ ಲಾಂಚ್!..ಹೇಗಿವೆ ಗೊತ್ತಾ ಫೀಚರ್ಸ್‌!ಓದಿರಿ : 'ಜಬ್ರಾ ಇಲೈಟ್‌ 85H' ಬ್ಲೂಟೂತ್ ಹೆಡ್‌ಫೋನ್‌ ಲಾಂಚ್!..ಹೇಗಿವೆ ಗೊತ್ತಾ ಫೀಚರ್ಸ್‌!

ಕ್ರೋಮ್‌ಕಾಸ್ಟ್‌ ಕನೆಕ್ಟಿವಿಟಿ

ಕ್ರೋಮ್‌ಕಾಸ್ಟ್‌ ಕನೆಕ್ಟಿವಿಟಿ

ಸೋನಿಯ ಹೊಸ ಸೌಂಡ್‌ಬಾರ್‌ ಡಿವೈಸ್‌ ಇನ್‌ಬಿಲ್ಟ್‌ ಕ್ರೋಮ್‌ಕಾಸ್ಟ್‌ ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದುಕೊಂಡಿದ್ದು, ಸುಲಭವಾಗಿ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದರೊಂದಿಗೆ ವೈ ಫೈ ಕನೆಕ್ಟಿವಿಟಿ ಆಯ್ಕೆಯನ್ನು ನೀಡಲಾಗಿದ್ದು, ಇದು ಸಹ ಕ್ರೋಮ್‌ಕಾಸ್ಟ್‌ಗೆ ಕನೆಕ್ಟಿವಿಟಿಗೆ ಬೆಂಬಲ ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸೋನಿ HT-Z9F ಸೌಂಡ್‌ಬಾರ್‌ ಇದೇ ಜುಲೈ 8ರಂದು ಸೇಲ್‌ ಆರಂಭಿಸಲಿದೆ. ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯು ಸಹ ಶುರುವಾಗಿದ್ದು, ಈ ಡಿವೈಸ್‌ನ ಬೆಲೆಯು 59,990ರೂ.ಗಳು ಆಗಿದೆ. ಕಂಪನಿಯ ಅಧಿಕೃತ ಶಾಪ್‌, ಮಲ್ಟಿಬ್ರ್ಯಾಂಡ್‌ ಎಲೆಕ್ಟ್ರಾನಿಕ್ಸ್‌ ರಿಟೈಲ್‌ ಶಾಪ್‌ಗಳಲ್ಲಿ ಮತ್ತು ಪ್ರಮುಖ ಇ ಕಾಮರ್ಸ್‌ ಜಾಲತಾಣಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!ಓದಿರಿ : ವೊಡಾಫೋನ್ ಹೊಸ ಐಡಿಯಾ!.ಕುಟುಂಬದ ಮೊಬೈಲ್‌ ಬಿಲ್‌ನಲ್ಲಿ ಶೇ.80%ರಷ್ಟು ಉಳಿಕೆ!

Best Mobiles in India

English summary
The new Sony HT-Z9F soundbar has a dedicated subwoofer and optional rear speakers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X