ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

|

ಸ್ಪೀಕರ್‌ ಖರೀದಿಸುವಾಗ ಮ್ಯೂಸಿಕ ಪ್ರಿಯರು ಸೌಂಡ್‌ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅತ್ಯುತ್ತಮ ಸೌಂಡ್ ಗುಣಮಟ್ಟಕ್ಕೆ ಹೆಸರುವಾಸಿ ಆಗಿರುವ ಕಂಪನಿಗಳ ಲಿಸ್ಟ್‌ನಲ್ಲಿ ಸೋನಿ ಎವರ್‌ಗ್ರೀನ್ ಸ್ಥಾನ ಪಡೆದುಕೊಂಡಿದೆ. ಇದೀಗ ಸೋನಿ ಕಂಪನಿಯು ಹೊಸ ಪಾರ್ಟಿ ಬ್ಲೂಟೂತ್‌ ಸ್ಪೀಕರ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಪೀಕರ್‌ ತನ್ನ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವ ಲಕ್ಷಣಗಳನ್ನು ಹೊರಹಾಕಿದೆ.

ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

ಹೌದು, ಸೋನಿ ಕಂಪನಿಯು SRS-XB22 ಮತ್ತು SRS-XB32 ಹೆಸರಿನ ವಾಯರ್‌ಲೆಸ್‌ ಬ್ಲೂಟೂತ್‌ ಪಾರ್ಟಿ ಸ್ಪೀಕರ್‌ ಅನ್ನು ಬಿಡುಗಡೆ ಮಾಡಿದ್ದು, ಪೋರ್ಟೆಬಲ್ ಮಾದರಿಯಲ್ಲಿವೆ. ಗ್ರಾಹಕರು ಚಿಕ್ಕ ಪುಟ್ಟ ಪಾರ್ಟಿಗಳಿಗೆ ಈ ಸ್ಪೀಕರ್ಸ್‌ಗಳನ್ನು ಜೊತೆಗೆ ಕೊಂಡೊಯ್ಯಬಹುದುದಾಗಿದೆ. ಈ ಬ್ಲೂಟೂತ್‌ ಸ್ಪೀಕರ್ಸ್‌ಗಳು ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 24ಗಂಟೆಗಳ ಬ್ಯಾಟರಿ ಬಾಳಿಕೆಯ ಸಾಮರ್ಥ್ಯವನ್ನು ಪಡೆದುಕೊಂಡಿವೆ.

ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

ಗ್ರಾಹಕರು ಸೋನಿ ಕಂಪನಿಯ 'ಫಿಯೆಸ್ಟೆಬಲ್ ಅಪ್ಲಿಕೇಶನ್' ಮತ್ತು 'ಸೋನಿ ಮ್ಯೂಸಿಕ್ ಸೆಂಟರ್ ಅಪ್ಲಿಕೇಶನ್'ಗಳಿಗೆ ವಾಯರ್‌ಲೆಸ್‌ ಸ್ಪೀಕರ್ಸ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದ್ದು, ಆ ಮೂಲಕ ಗ್ರಾಹಕರು ಫೋನ್‌ ಮೂಲಕ ಸ್ಪೋಕರ್ಸ್‌ಗಳಲ್ಲಿ ತಮ್ಮ ಫೇವರೆಟ್‌ ಪ್ಲೇಲಿಸ್ಟ್‌ಗಳನ್ನು ಪ್ಲೇ ಮಾಡಬಹುದು. ಹಾಗೆಯೇ ಸ್ಪೀಕರ್‌ ವ್ಯಾಲ್ಯೂಮ್‌ ಅನ್ನು ಫೋನಿನಲ್ಲಿಯೇ ನಿಯಂತ್ರಿಸಬಹುದು.

ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!

ಈ ಬ್ಲೂಟೂತ್‌ ಪಾರ್ಟಿ ಸ್ಪೀಕರ್ಸ್‌ಗಳು ಗೂಗಲ್‌ ಅಸಿಸ್ಟಂಟ್ ಮತ್ತು ಆಪಲ್ ಸಿರಿ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಇನ್‌ಬಿಲ್ಟ್‌ ಆಗಿ ಪಡೆದುಕೊಂಡಿದ್ದು, ಹೀಗಾಗಿ ಆಂಡ್ರಾಯ್ಡ್‌ ಮತ್ತು ಐಓಎಸ್‌ ಮಾದರಿಯ ಡಿವೈಸ್‌ಗಳಿಗೆ ಪೂರ್ಣ ಬೆಂಬಲ ಇದೆ. ಅವುಗಳಲ್ಲಿ XB32 ಸ್ಪೀಕರ್ ಮಲ್ಟಿ ಕಲರ್ ಎಲ್‌ಇಡಿ ಲೈಟ್‌ ಆಯ್ಕೆಯನ್ನು ಸಹ ಪಡೆದುಕೊಂಡಿದ್ದು, ಪಾರ್ಟಿಗೆ ಲೈಟಾಗಿ ಲೈಟ್‌ ಎಫೆಕ್ಟ್ ನೀಡಬಹುದು.

ಮಾರುಕಟ್ಟೆಗೆ ಬಿಡುಗಡೆ ಆಗಿರುವ ಸೋನಿ ಕಂಪನಿಯ SRS-XB22 ಸ್ಪೀಕರ್ ಬೆಲೆಯು 7,490ರೂ.ಗಳು ಆಗಿದ್ದು, ಬ್ಲ್ಯಾಕ್‌, ಬ್ಲೂ, ರೆಡ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯ. ಹಾಗೆಯೇ ಸೋನಿಯ SRS-XB32 ಸ್ಪೀಕರ್ ಬೆಲೆಯು 10,990ರೂ.ಗಳು ಆಗಿದೆ. ಇದೇ ಜೂನ್ 15ರ ನಂತರ ಖರೀದಿಗೆ ಲಭ್ಯವಾಗಲಿವೆ ಎಂದು ಹೇಳಲಾಗಿದೆ.

ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!ಓದಿರಿ : ಯುವತಿ ಜೊತೆ ಬೈಕ್‌ ಸ್ಟಂಟ್ ಮಾಡಿದ ಯುವಕ!..ಟಿಕ್‌ಟಾಕ್‌ನಲ್ಲಿ ವಿಡಿಯೊ ವೈರಲ್‌!

Best Mobiles in India

English summary
The new Sony Extra Bass wireless speakers are meant to be used primarily for parties. The SRS-XB22 comes at Rs 7,490 while the SRS-XB32 is priced at Rs 10,990. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X