ಸೋನಿ ಪ್ಲೇಸ್ಟೇಷನ್ 5 ಕ್ರಿಕೆಟ್ 24 ಘೋಷಣೆ! ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವೋ ಹಬ್ಬ
ಭಾರತದಲ್ಲಿ ಗೇಮಿಂಗ್ ವಲಯ ಯಶಸ್ವಿಯಾಗಿ ಬೆಳೆಯುತ್ತಿದೆ. ಈ ಕಾರಣಕ್ಕೆ ಟೆಕ್ ದೈತ್ಯರು ಗೇಮಿಂಗ್ ವಿಭಾಗಕ್ಕೆ ಹೆಚ್ಚಿನ ಮಹತ್ವವನ್ನೂ ಸಹ ನೀಡುತ್ತಾ ಬರುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಆನ್‌ಲೈನ್ ಗೇಮ್ ಪ್ರಿಯರಿಗೆ ಒಳ್ಳೆಯ ಸುದ್ದಿ ನೀಡಲಾಗಿದೆ. ಅಂದರೆ ಪ್ಲೇಸ್ಟೇಷನ್ ಇಂಡಿಯಾ PS5 ಕನ್ಸೋಲ್ ಕ್ರಿಕೆಟ್ 24 ಅನ್ನು ಪ್ರಸ್ತುತಪಡಿಸುತ್ತದೆ. ಕ್ರಿಕೆಟ್ 24 ಅತ್ಯುತ್ತಮ ಗ್ರಾಫಿಕ್ಸ್‌ನೊಂದಿಗೆ ಸಂಪೂರ್ಣ ವಿಡಿಯೋ ಗೇಮ್ ಸಿಮ್ಯುಲೇಶನ್ ಆಗಿದ್ದು, ಇದನ್ನು ಬಿಗ್ ಆಂಟ್ ಸ್ಟುಡಿಯೋ ಅಭಿವೃದ್ಧಿಪಡಿಸಿದೆ. ಭಾರತದ T20 ತಂಡಗಳ ಆವೃತ್ತಿಯೇ ಈ ಆಟದಲ್ಲಿಯೂ ಲಭ್ಯವಿರುತ್ತದೆ.
ಹೌದು, ಅಕ್ಟೋಬರ್ 8 ರಿಂದ ಭಾರತದಲ್ಲಿ ಕ್ರಿಕೆಟ್ 24 (Sony PlayStation 5 Cricket 24 Indian Edition ) ಲಭ್ಯವಿರುತ್ತದೆ ಎಂದು ಸೋನಿ ಘೋಷಣೆ ಮಾಡಿದೆ. ಈ ಗೇಮ್ ಗ್ರಾಹಕರಿಗೆ ನಿಜವಾದ ಕ್ರಿಕೆಟ್ ಪಂದ್ಯದ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಆಟ ಪ್ರೇಮಿಗಳಲ್ಲದೆ ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚಾಗಿ ಇಷ್ಟವಾಗುವ ರೀತಿಯಲ್ಲಿ ಕ್ರಿಕೆಟ್ 24 ಅನ್ನು ಪರಿಚಯಿಸಲಾಗಿದೆ. ಈ ಗೇಮ್ 50 ಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಗ್ರಾಫಿಕ್ಸ್ ಬೆಂಬಲವನ್ನು ಪಡೆಯಲಿದೆ.

ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ಕ್ರಿಕೆಟ್ ಸಂಭ್ರಮ : ಕ್ರಿಕೆಟ್ 24 ರ ತಳಪಾಯವೇ ಅತ್ಯಾಧುನಿಕ ಪ್ಲೇಸ್ಟೇಷನ್ 5 ಕನ್ಸೋಲ್‌ನ ಬೆಂಬಲವಾಗಿದೆ. ಇದರ ಸಹಾಯದಿಂದ ಅತ್ಯುತ್ತಮ ಯಂತ್ರಾಂಶವೂ ಸಿದ್ಧವಾಗುತ್ತಿದ್ದು ಈ ಕಾರಣದಿಂದಾಗಿ, ಗೇಮ್ ಗ್ರಾಹಕರಿಗೆ ಹೆಚ್ಚು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಡ್ಯುಯಲ್‌ಸೆನ್ಸ್ ವೈರ್‌ಲೆಸ್ ಕಂಟ್ರೋಲ್ ಗೇಮ್‌ನ ದೃಢೀಕರಣವನ್ನು ಹೆಚ್ಚಿಸಲು ಸಹಾಯ ಮಾಡಲಿದ್ದು, ಇದು ಪ್ರತಿ ಗೇಮಿಂಗ್ ಚಲನೆಯಲ್ಲಿ ನಿಖರತೆ ಮತ್ತು ಸ್ಪಂದಿಸುವಿಕೆಯನ್ನು ಖಾತ್ರಿಗೊಳಿಸುತ್ತದೆ.
ಎಚ್‌ಡಿಎಂಐ ಕೇಬಲ್, ಎಸಿ ಪವರ್ ಕಾರ್ಡ್ ಮತ್ತು ಯುಎಸ್‌ಬಿ ಕೇಬಲ್‌ನಂತಹ ಅಗತ್ಯ ಟೂಲ್ಸ್ ಅನ್ನು ಒಳಗೊಂಡಂತೆ ಗ್ರಾಹಕರು ಈ ಗೇಮ್ ಬಾಕ್ಸ್ ಅನ್ನು ಪಡೆಯಲಿದ್ದಾರೆ. ಗ್ರಾಹಕರಿಗೆ ಸಹಾಯ ಮಾಡಲು ಕೆಲವು ವಿಶೇಷ ವಸ್ತುಗಳನ್ನು ಸಹ ಈ ವೇಳೆ ನೀಡಲಾಗುತ್ತದೆ. ಅಕ್ಟೋಬರ್ 8 ರಿಂದ ಗ್ರಾಹಕರು PS5 ಕನ್ಸೋಲ್ - ಕ್ರಿಕೆಟ್ 24 ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
PS5 ಕನ್ಸೋಲ್ ಅನ್ನು ಇತ್ತೀಚಿನ ಸಿಸ್ಟಮ್ ಸಾಫ್ಟ್‌ವೇರ್ ಆವೃತ್ತಿಗೆ ನವೀಕರಿಸಬೇಕಾಗಿದ್ದು, ಉತ್ತಮ ಇಂಟರ್ನೆಟ್ ಸಂಪರ್ಕದ ಸೇವೆಯ ಅಗತ್ಯವಿದೆ ಎಂದು ಕಂಪೆನಿ ಹೇಳಿದೆ. ಇನ್ನು ಸೋನಿ ಹಲವು ವರ್ಷಗಳಿಂದ ಅನೇಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದು, ಗೇಮಿಂಗ್‌ನ ಹೊರತಾಗಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಸ್ಮಾರ್ಟ್‌ಟಿವಿ, ಡಿಜಿಟಲ್ ಇಮೇಜಿಂಗ್, ವೈಯಕ್ತಿಕ ಆಡಿಯೊ, ಮನರಂಜನೆ ಮತ್ತು ಕಾರ್ ಆಡಿಯೋದಂತಹ ಹಲವಾರು ಸೇವೆಗಳನ್ನು ನೀಡುತ್ತದೆ. ಕಂಪನಿಯನ್ನು 1994 ರಲ್ಲಿ ನಿರ್ಮಾಣ ಆಗಿದೆ.
ಇನ್ನು PS5 ಕನ್ಸೋಲ್ ಬೆಲೆ ವಿಚಾರಕ್ಕೆ ಬರೋದಾದರೆ 57,990ರೂ. ನಿಗದಿ ಮಾಡಲಾಗಿದೆ. ಆದರೆ ಆನ್-ಸೇಲ್ ಆಫರ್ ಪ್ರಕಾರ ಗ್ರಾಹಕರು 47,990ರೂ.ಗೆ ಇದನ್ನು ಖರೀದಿ ಮಾಡಬಹುದಾಗಿದೆ. ವಿಷಯ ಏನೆಂದರೆ ಈ ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ. ಮೊದಲೇ ಹೇಳಿದಂತೆ. ನಾವು ಮೊದಲೇ ತಿಳಿಸಿದಂತೆ ಅಕ್ಟೋಬರ್ 8 ರಂದು ಸೇಲ್‌ಗೆ ಲಭ್ಯ ಇರಲಿದೆ.
ಇನ್ನು ಈ PS5 ಕನ್ಸೋಲ್ ಅನ್ನು ಗ್ರಾಹಕರು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಶಾಪ್‌ಎಸ್‌ಸಿ ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಅದಾಗ್ಯೂ ಆಫ್‌ಲೈನ್‌ನಲ್ಲಿ ಸಹ ಖರೀದಿಗೆ ಅವಕಾಶ ನೀಡಲಾಗಿದ್ದು, ಸೋನಿ ಸೆಂಟರ್, ಕ್ರೋಮಾ, ರಿಲಯನ್ಸ್ ಮತ್ತು ವಿಜಯ್ ಸೇಲ್ಸ್ ಶೋರೂಮ್‌ಗಳಲ್ಲಿ ಇದು ಲಭ್ಯವಿರುತ್ತವೆ. ಆಯ್ದ ಚಿಲ್ಲರೆ ವ್ಯಾಪಾರಿಗಳ ಮೂಲಕವೂ ಕ್ರಿಕೆಟ್ 24 ಲಭ್ಯವಿರುತ್ತದೆ ಎಂದು ಸೋನಿ ತಿಳಿಸಿದೆ.


Click it and Unblock the Notifications








