Subscribe to Gizbot

ಕುಸಿದ ಮಾರುಕಟ್ಟೆ!..48 ಸಾವಿರ "ಸೋನಿ ಎಕ್ಸ್‌ಪೀರಿಯಾ ಎಕ್ಸ್" ಬೆಲೆ ಈಗ 24,000 !!

Written By:

ಸೋನಿ ಕಂಪೆನಿಯ ಸ್ಟೈಲಿಶ್ ಸ್ಮಾರ್ಟ್‌ಫೋನ್‌ಗಳೆಂದರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು!..ಉತ್ತಮ ಫೀಚರ್ ಹೊಂದಿರುವ ಸೋನಿ ಸ್ಮಾರ್ಟ್‌ಫೋನ್‌ಗಳನ್ನು ಹೈ ಎಂಡ್ ಸ್ಮಾರ್ಟ್‌ಫೊನ್‌ಗಳೆಂದೇ ಎಲ್ಲರೂ ಕರೆಯುತ್ತಾರೆ. ಹಾಗಾಗಿಯೇ ಸೋನಿ ಇತ್ತೀಚಿಗೆ ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿತು.!!

ಅತ್ಯುತ್ತಮ ಬ್ರಾಂಡ್ ಆಗಿರುವ ಸೋನಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬೆಲೆಯನ್ನು ಹೊಂದಿದ್ದರಿಂದಲೇ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದ್ದು, ಇದೀಗ ಸೋನಿ ಸ್ಮಾರ್ಟ್‌ಫೋನ್‌ ಬೆಲೆ ಭಾರಿ ಇಳಿಕೆಯಾಗಿದೆ. ಸೋನಿ ಎಕ್ಸ್‌ಪೀರಿಯಾ ಎಕ್ಸ್ ಸ್ಮಾರ್ಟ್‌ಫೋನ್‌ ಮೇಲೆ ಶೇಕಡ 50% ಬೆಲೆ ಇಳಿಕೆಯಾಗಿದೆ.

ಕುಸಿದ ಮಾರುಕಟ್ಟೆ!..48 ಸಾವಿರ

ಜಿಯೋ ಆಯ್ತು!!...ಏರ್‌ಟೆಲ್, ವೊಡಾಫೋನ್‌ಗೆ ಈಗ "ಡೊಕೊಮೊ" ಚಿಂತೆ!!

ಬಿಡುಗಡೆಯಾದಾಗ 48 ಸಾವಿರ ಬೆಲೆ ಹೊಂದಿದ್ದ ಸೋನಿ ಎಕ್ಸ್‌ಪೀರಿಯಾ ಎಕ್ಸ್ ಸ್ಮಾರ್ಟ್‌ಫೊನ್ 24,000 ರೂ.ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕಿದೆ. ಕೇವಲ ಎರಡುವಾರದ ಮೊದಲು 10 ಸಾವಿರ ಬೆಲೆ ಇಳಿಕೆಯಾಗಿದ್ದು, ಇದೀಗ ಮತ್ತೆ 14,000 ರೂ. ಬೆಲೆ ಇಳಿಕೆಯಾಗಿದೆ.!!

ಕುಸಿದ ಮಾರುಕಟ್ಟೆ!..48 ಸಾವಿರ

5 ಇಂಚ್ ಡಿಸ್‌ಪ್ಲೇ, ಕ್ವಲ್ಕಾಮ್ ಸ್ನಾಪ್‌ಡ್ರಾಗನ್ 650 ಪ್ರೊಸೆಸರ್, 3GB RAM , 64GB ಆಂತರಿಕ ಮೆಮೊರಿ ಹೊಂದಿರುವ ಸೋನಿ ಎಕ್ಸ್‌ಪೀರಿಯಾ ಎಕ್ಸ್ ಅತ್ಯುತ್ತಮ ಕ್ಯಾಮೆರಾ ಒಳಗೊಂಡಿದೆ. 23 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸೋನಿ ಎಕ್ಸ್‌ಪೀರಿಯಾ ಎಕ್ಸ್ ಸ್ಮಾರ್ಟ್‌ಫೋನ್‌ ಹೊಂದಿದೆ.

English summary
Sony Xperia is now avaialble at a price of Rs 24,990 at Flipkart.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot