Subscribe to Gizbot

ಜಿಯೋ ಆಯ್ತು!!...ಏರ್‌ಟೆಲ್, ವೊಡಾಫೋನ್‌ಗೆ ಈಗ "ಡೊಕೊಮೊ" ಚಿಂತೆ!!

Written By:

ಜಿಯೋ ಟೆಲಿಕಾಂ ಮಾರುಕಟ್ಟೆಗೆ ಕಾಲಿಟ್ಟಿ ಎಲ್ಲಾ ಟೆಲಿಕಾಂಗಳ ನಿದ್ದೆಗೆಡಿಸಿದ್ದರೂ ಇಷ್ಟು ದಿವಸ ಹೆಚ್ಚು ಸದ್ದಿಲ್ಲದೇ ಇದ್ದ ಡೊಕೊಮೊ ಇದೀಗ ಅತ್ಯುತ್ತಮ ಆಫರ್‌ಗಳನ್ನು ನೀಡಿ ಗ್ರಾಹಕರ ಗಮನಸೆಳೆಯುತ್ತಿದೆ. ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು 4G ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದರೆ ಡೊಕೊಮೊ ಪ್ರಸ್ತುತ 3G ಸ್ಮಾರ್ಟ್‌ಫೋನ್ ಹೊಂದಿರುವ ಗ್ರಾಹಕರಿಗೆ ಗಾಳಹಾಕಿದೆ.!!

ಬಹುತೇಕ ಜನರು 4G ಹೊಂದಿರುವ ಸ್ಮಾರ್ಟ್‌ಫೊನ್ ಖರೀದಿಸಲು ಸಾಧ್ಯವಾಗಿಲ್ಲ. ಏರ್‌ಟೆಲ್ ಮತ್ತು ವೊಡಾಫೋನ್‌ಗಳು ಇಂತವರನ್ನು ಕಡೆಗಣಿಸಿ ಕೇವಲ 4G ಗ್ರಾಹಕರನ್ನು ಮಾತ್ರ ಸೆಳೆಯಲು ಚಿಂತಿಸಿದ್ದವು. ಹಾಗಾಗಿ ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಚಿಂತಿಸಿರುವ ಡೊಕೊಮೊ ಕಂಪೆನಿ ಸದ್ದಿಲ್ಲದಂತೆ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್‌ಗೆ ಟಾಂಗ್ ನೀಡುತ್ತಿದೆ.

ಜಿಯೋ ಆಯ್ತು!!...ಏರ್‌ಟೆಲ್, ವೊಡಾಫೋನ್‌ಗೆ ಈಗ

ಡೊ..ಡೊ..ಡೊಕೊಮೊ ಆಫರ್!! 103 ರೂ.ಗೆ ಅನ್‌ಲಿಮಿಟೆಡ್ ಕಾಲ್!!

3G ಗ್ರಾಹಕರಿಗೆ ಸದ್ದಿಲ್ಲದಂತೆ ಬಲೆಬೀಸಿರುವ ಡೊಕೊಮೊ 3G ಸ್ಮಾರ್ಟ್ಫೊನ್ ಹೊಂದಿರುವ ನೂತನ ಪೋಸ್ಟ್‌ಪೇಡ್ ಗ್ರಾಹಕರಾಗುವವರಿಗೆ ಅತ್ಯುತ್ತಮ ಆಫರ್ ಒಂದನ್ನು ನಿಡಿದೆ. 350 ರೂಪಾಯಿಗಳಿಗೆ ತಿಂಗಳು ಪೂರ್ತಿ ಅತ್ಯುತ್ತಮ ಉಪಯೋಗವಾಗುವಂತಹ ಆಫರ್ ಒಂದನ್ನು ಬಿಟ್ಟಿದೆ.!

ಜಿಯೋ ಆಯ್ತು!!...ಏರ್‌ಟೆಲ್, ವೊಡಾಫೋನ್‌ಗೆ ಈಗ

350 ರೂಪಾಯಿಗಳ ರೀಚಾರ್ಜ್ ಮಾಡಿದರೆ 5GB 3G ಡೇಟಾ ಮತ್ತು 1000 ನಿಮಿಷಗಳ ದೇಶಾಧ್ಯಂತ ಕರೆ ಮಾಡುವ ಆಫರ್‌ ಅನ್ನು ಡೊಕೊಮೊ ನೀಡಿದೆ. ಇದರ ಜೊತೆಗೆ 250 ಎಸ್‌ಎಮ್‌ಎಸ್ ಮಾಡುವ ಮತ್ತು ಇತರ ಯಾವುದೇ ದರಗಳನ್ನು ವಿಧಿಸುವುದಿಲ್ಲ ಎಂದು ಡೊಕೊಮೊ ಹೇಳಿದೆ. ಹಾಗಾಗಿ, 3G ಗ್ರಾಹಕರು ಏರ್‌ಟೆಲ್‌, ಐಡಿಯಾದಿಂದ ಡೊಕೊಮೊ ಕಡೆಗೆ ಸಾಗುತ್ತಿದ್ದಾರೆ.

English summary
the best Postpaid plans will be yours by docomo. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot