ಸೋನಿಯಿಂದ ಪುಟ್ಟ ವೈರ್‌ಲೆಸ್ ಸ್ಪೀಕರ್ ಲಾಂಚ್!..ಇದರ ಸೌಂಡ್ ಮಾತ್ರ ಜಬರ್ದಸ್ತ್!
ಆಡಿಯೋ ಹಾಗೂ ಟೆಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಸೋನಿ ಸಂಸ್ಥೆಯು ಹೊಸದಾಗಿ ಈಗ ಪುಟ್ಟ ವೈರ್‌ಲೆಸ್ ಸ್ಪೀಕರ್ ಅನ್ನು ಲಾಂಚ್ ಮಾಡಿದ್ದು, ಅದುವೇ SRS-XB100 ವೈರ್‌ಲೆಸ್ ಸ್ಪೀಕರ್. ಇದರ ರಚನೆ ಚಿಕ್ಕದಾಗಿದ್ದರೂ, ಇದರ ಸೌಂಡ್ ಅಬ್ಬರ್ ವಿಸ್ತಾರವಾಗಿದೆ. ಇನ್ನು ಈ ಸ್ಪೀಕರ್ 16 ಗಂಟೆಗಳವರೆಗೆ ಪ್ರಬಲ ಬ್ಯಾಟರಿ ಬ್ಯಾಕ್‌ಅಪ್ ಅವಧಿ ಅನ್ನು ಹೊಂದಿದೆ.
ಹೌದು, ಜನಪ್ರಿಯ ಸೋನಿ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ SRS-XB100 ಹೆಸರಿನ ಸಣ್ಣ ವೈರ್‌ಲೆಸ್ ಸ್ಪೀಕರ್ ಅನ್ನು ಪರಿಚಯಿಸಿದೆ. ಇದು ಬ್ಲೂಟೂತ್ ಸಂಪರ್ಕ ವ್ಯವಸ್ಥೆ ಪಡೆದಿದ್ದು, ಎಲ್ಲಿಯಾದರೂ ಇದನ್ನು ಬಳಕೆ ಮಾಡಬಹುದಾಗಿದೆ. ಇದರ ಆಡಿಯೋ ಕ್ವಾಲಿಟಿ ಸಹ ಉತ್ತಮ ಇದ್ದು, ಸ್ಟಿರಿಯೊ ಧ್ವನಿಗಾಗಿ 2ನೇ ಸ್ಪೀಕರ್ ಜೋಡಿಸುವ ಆಯ್ಕೆ ಸಹ ನೀಡಲಾಗಿದೆ.

ಈ ಸ್ಪೀಕರ್ IP67 ರೇಟಿಂಗ್ ಒಳಗೊಂಡಿದ್ದು, ಯಾವುದೇ ಹವಾಮಾನದಲ್ಲಿಯೂ ಸಹ ಉತ್ತಮ ಬಾಳಿಕೆ ಮತ್ತು ಜಲ ಮತ್ತು ಧೂಳು ನಿರೋಧಕ ವಿನ್ಯಾಸ ಹೊಂದಿದೆ. ಹಾಗೆಯೇ ಇದು ಕಾಂಪ್ಯಾಕ್ಟ್ ಆಗಿದ್ದು, ಪೋರ್ಟೆಬಲ್ ವಿನ್ಯಾಸ ಸಹ ಪಡೆದಿದೆ. ಹಾಗಾದರೆ ಈ ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಹಾಗೂ ಬೆಲೆ, ಲಭ್ಯತೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಸೋನಿ SRS-XB100 ಸ್ಪೀಕರ್ ಎಲ್ಲರಿಗೂ ಅತ್ಯಗತ್ಯ ಸಾಧನವಾಗಿದ್ದು, ಇದು ಶಕ್ತಿಶಾಲಿ ಧ್ವನಿಗಾಗಿ ಸ್ಪೀಕರ್ ನಲ್ಲಿ ಪ್ಯಾಸಿವ್ ರೇಡಿಯೇಟರ್ ಅಳವಡಿಸಲಾಗಿದೆ. ವಾಲ್ಯೂಮ್ ಹೆಚ್ಚಿಗೆ ಮಾಡಿದಾಗಲೂ ಸ್ಪಷ್ಟ ಧ್ವನಿ ಮಾಧುರ್ಯ ಒದಗಿಸುವ ಸೌಲಭ್ಯ ಪಡೆದಿದೆ. ಇದು ಸೌಂಡ್ ಡಿಫ್ಯೂಷನ್ ಪ್ರೊಸೆಸರ್ ಸೌಲಭ್ಯ ಹೊಂದಿದ್ದು, ಬಳಕೆದಾರರ ಕೋಣೆಯನ್ನು ಸೌಂಡ್ ಆವರಿಸಲಿದ್ದು, ಸ್ಪಷ್ಟ ಆಡಿಯೋ ನೀಡುತ್ತದೆ.
ಅಂದಹಾಗೆ ಈ ಸ್ಪೀಕರ್ IP67 ರೇಟಿಂಗ್ ಪಡೆದಿದ್ದು, ಎಲ್ಲ ಹವಾಮಾನದಲ್ಲಿ ಸೂಕ್ತ ಎನಿಸುತ್ತದೆ. ಇದು ಜಲ ಮತ್ತು ಧೂಳು ನಿರೋಧಕ ವಿನ್ಯಾಸ ಹೊಂದಿದೆ. ಇನ್ನು ಈ ಸ್ಪೀಕರ್‌ನ ಪ್ರಮುಖ ಹೈಲೈಟ್ ಎಂದರೆ ಅದು ಇದರ ಬ್ಯಾಟರಿ ಆಗಿದೆ. ಏಕೆಂದರೆ SRS-XB100 ಸ್ಪೀಕರ್ ಸತತ 16 ತಾಸುಗಳ ಬ್ಯಾಟರಿ ಬ್ಯಾಕ್-ಅಪ್ ಅನ್ನು ನೀಡಲಿದೆ. ಹೀಗಾಗಿ ಗ್ರಾಹಕರಿ ತಡೆ ರಹಿತ ಮ್ಯೂಸಿಕ್ ಅನುಭವ ಪಡೆಯಬಹುದು. ಸೋನಿ SRS- XB100 ಸ್ಪೀಕರ್ ಅನ್ನು USB ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು.
ಈ ಸ್ಪೀಕರ್ ಕಾಂಪ್ಯಾಕ್ಟ್ ಆಗಿದ್ದು ಮತ್ತು ಹಗುರವಾದ ವಿನ್ಯಾಸ ಹೊಂದಿದೆ. ಹೀಗಾಗಿ ಇದನ್ನು ಸುಲಭವಾಗಿ ಕೊಂಡೊಯ್ಯುಬಹುದಾಗಿದೆ. ಅಧಿಕ ಸ್ಟಿರಿಯೊ ಸೌಂಡ್‌ಗಾಗಿ 2ನೇ ಸ್ಪೀಕರ್ ಜೋಡಿಸುವ ಆಯ್ಕೆಯನ್ನು ಸಹ ಸೋನಿಯ ಈ ಸ್ಪೀಕರ್ ನೀಡುತ್ತದೆ. ಬಳಕೆದಾರರು 2 ಸ್ಪೀಕರ್‌ಗಳನ್ನು ಒಟ್ಟಿಗೆ ಲಿಂಕ್ ಮಾಡುವ ಮೂಲಕ, ಹೆಚ್ಚಿನ ಸೌಂಡ್ ವ್ಯವಸ್ಥೆ ರೂಪಿಸಲು ಅವಕಾಶ ಇದೆ.
ಇನ್ನು ಈ ಸ್ಪೀಕರ್‌ಗೆ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಂತಹ ಬ್ಲೂಟೂತ್ ಸಕ್ರಿಯಗೊಳಿಸಿದ ಡಿವೈಸ್‌ಗಳನ್ನು ಸುಲಭವಾಗಿ ಜೋಡಿಸಬಹುದಾಗಿದೆ. ಹಾಗೆಯೇ ಈ ಸ್ಪೀಕರ್ ಅಂತರ್ನಿರ್ಮಿತ ಮೈಕ್ರೊಫೋನ್ ಸೌಲಭ್ಯ ಪಡೆದಿದ್ದು, ಬಳಕೆದಾರರು ಸ್ಪೀಕರ್ ಮೂಲಕ ನೇರವಾಗಿ ಹ್ಯಾಂಡ್ಸ್-ಫ್ರೀ ಕರೆ ಮಾಡಬಹುದಾಗಿದೆ. ಎಕೋ ಕ್ಯಾನ್ಸಲಿಂಗ್‌ನೊಂದಿಗೆ ಉತ್ತಮವಾದ, ಸ್ಪಷ್ಟವಾದ ಕರೆ ಮಾಡಬಹುದಾಗಿದೆ.
ಬೆಲೆ, ಆಫರ್ ಮತ್ತು ಲಭ್ಯತೆಯ ಮಾಹಿತಿ : ಸೋನಿ ಸಂಸ್ಥೆಯು ಲಾಂಚ್ ಮಾಡಿರುವ SRS- XB100 ಸ್ಪೀಕರ್ ಬೆಲೆ 4,990ರೂ. ಇನ್ನು ಈ ಸ್ಪೀಕರ್ ಜುಲೈ 20, 2023 ರಿಂದ ಖರೀದಿಗೆ ಲಭ್ಯ ಇರುತ್ತದೆ. ಅಂದಹಾಗೆ ಈ ಸ್ಪೀಕರ್ ಅನ್ನು ಗ್ರಾಹಕರು ಸೋನಿಯ ರಿಟೇಲ್ ಸ್ಟೋರ್‌ಗಳಲ್ಲಿ (ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ಕ್ಲೂಸಿವ್), www.ShopatSC.com ಪೋರ್ಟಲ್, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು ಮತ್ತು ಇತರೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿಯೂ ಸಹ ಖರೀದಿ ಮಾಡಬಹುದು.


Click it and Unblock the Notifications








