55 ಇಂಚಿನ ಸೋನಿ ಸ್ಮಾರ್ಟ್‌ಟಿವಿಗೆ 41% ಡಿಸ್ಕೌಂಟ್! ಆಫರ್ ಮಿಸ್ ಮಾಡಿಕೊಳ್ಳಬೇಡಿ
ಉತ್ತಮವಾದ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಬಹುಪಾಲು ಮಂದಿಗೆ ಆಸೆ ಇರುತ್ತದೆ. ಆದರೆ, ಅಧಿಕ ಬೆಲೆಯಿಂದ ಇದು ಸಾಧ್ಯವಾಗುವುದಿಲ್ಲ. ಆದರೆ, ಟೆಕ್ನಾಲಜಿ ವಿಭಾಗದಲ್ಲಿ ಪ್ರಮುಖ ಸ್ಥಾನದಲ್ಲಿರುವ ಸೋನಿಯ ಸ್ಮಾರ್ಟ್‌ಟಿವಿ ಇದೀಗ ಭಾರೀ ಬೆಲೆ ಇಳಿಕೆಯೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಅತ್ಯುತ್ತಮವಾದ ಸ್ಮಾರ್ಟ್‌ಟಿವಿಯನ್ನು ನಿಮ್ಮ ಮನೆಗೆ ತೆಗೆದುಕೊಂಡು ಬರುವ ಸಮಯ ಬಂದಿದೆ.
ಹೌದು, 55 ಇಂಚಿನ ಸೋನಿ ಸ್ಮಾರ್ಟ್‌ಟಿವಿ ಇದೀಗ 41% ರಿಯಾಯಿತಿ ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಟಿವಿ ಮೂಲಕ ನೀವು 4K ಸಿನಿಮಾಗಳನ್ನು ನೋಡಬಹುದಾಗಿದ್ದು, ಗೂಗಲ್ ಅಸಿಸ್ಟೆಂಟ್ ನಂತಹ ಅಗತ್ಯ ಫೀಚರ್ಸ್‌ಗಳೊಂದಿಗೆ ಪ್ಯಾಕ್ ಆಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು? ಇದರ ಆಫರ್ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸೋನಿ ಅಲ್ಟ್ರಾ HD LED ಸ್ಮಾರ್ಟ್ ಟಿವಿ ಫೀಚರ್ಸ್: ಈ ಸ್ಮಾರ್ಟ್‌ಟಿವಿಯನ್ನು ಆಫರ್ ಬೆಲೆಯಲ್ಲಿ ಖರೀದಿ ಮಾಡುವ ಮೊದಲು ಇದರ ಪ್ರಮುಖ ಫೀಚರ್ಸ್‌ಗಳ ಕಡೆ ಕಣ್ಣಾಯಿಸೋಣ. ಅದರಂತೆ ಈ ಸ್ಮಾರ್ಟ್‌ಟಿವಿ 55 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 3840 x 2160 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ 60 Hz ರಿಫ್ರೆಶ್ ರೇಟ್ ಆಯ್ಕೆಯೊಂದಿಗೆ ಅತ್ಯುತ್ತಮ ಸ್ಮಾರ್ಟ್‌ಟಿವಿಯಾಗಿ ಗುರುತಿಸಿಕೊಂಡಿದೆ.
X1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಟಿವಿ ಶಬ್ದವನ್ನು ಕಡಿಮೆ ಮಾಡಲು ಮತ್ತು ರೆಸಲ್ಯೂಶನ್ ಹೆಚ್ಚಿಸಲು ಸಹಾಯ ಮಾಡುವ ನವೀನ ಅಲ್ಗಾರಿದಮ್‌ಗಳನ್ನು ಒಳಗೊಂಡಿದ್ದು, ವರ್ಧಿತ 4K ಸಿಗ್ನಲ್‌ನಿಂದಾಗಿ ಸ್ಟ್ರೀಮ್ ಮಾಡುವ ಯಾವುದೇ ವಿಡಿಯೋಗಳು ರೋಮಾಂಚಕ ಬಣ್ಣಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಇದರಿಂದ ನಿಮ್ಮ ವಿಡಿಯೋ ನೋಡುವ ಅನುಭವ ಬಹಳ ಉತ್ತಮವಾಗಿರಲಿದೆ.
ಇದರೊಂದಿಗೆ 178 ಡಿಗ್ರಿಯಲ್ಲಿಯೂ ಉತ್ತಮ ವೀಕ್ಷಣೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು, ಸಿನಿಮಾ ಥಿಯೇಟರ್ ಎಫೆಕ್ಟ್ ಇರುವ ಸೌಂಡ್ ಅನ್ನು ನೀಡಲಾದ 20W ಮೂಲಕ ಪಡೆದುಕೊಳ್ಳಬಹುದಾಗಿದೆ. ಯಾಕೆಂದರೆ ಇದು ಡಾಲ್ಬಿ ಆಡಿಯೊ ಸೌಲಭ್ಯವನ್ನು ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿ ವೀಕ್ಷಣೆ ಮಾಡುವಾಗ ಅಥವಾ ಸಂಗೀತ ಆಲಿಸುವಾದ ಅತ್ಯುತ್ತಮವಾದ ಹಾಗೂ ಇಂಪಾದ ಶಬ್ಧದ ಅನುಭವ ಲಭ್ಯವಾಗಲಿದೆ.

ಹಾಗೆಯೇ ಗೂಗಲ್ ಅಸಿಸ್ಟೆಂಟ್ ಫೀಚರ್ಸ್ ಸಹ ಇದ್ದು, ಈ ಮೂಲಕ ಸ್ಮಾರ್ಟ್ ಟಿವಿಯಲ್ಲಿ ಬೇಕಾದ ಕಂಟೆಂಟ್ ಅನ್ನು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದೆ. ಇದರೊಂದಿಗೆ ಭದ್ರತಾ ಕ್ಯಾಮೆರಾಗಳು ಮತ್ತು ಇನ್ನಿತರೆ ಉಪಕರಣಗಳನ್ನು ಈ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ಮಾಡಬಹುದಾಗಿದ್ದು, ಈ ಮೂಲಕ ಒಂದೇ ಡಿವೈಸ್ ಹಲವಾರು ರೀತಿಯಲ್ಲಿ ಬಳಕೆಗೆ ಬರಲಿದೆ.
ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಟಿವಿ ಬ್ಲೂಟೂತ್, ವೈ-ಫೈ, ಮೂರು ಹೆಚ್‌ಡಿಎಮ್‌ಐ ಪೋರ್ಟ್ ಹಾಗೂ ಎರಡು ಯುಎಸ್‌ಬಿ ಪೋರ್ಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್ ಸೇರಿದಂತೆ ವಿವಿಧ ಆಪ್‌ಗಳ ಸೇವೆಯನ್ನು ಈ ಸ್ಮಾರ್ಟ್‌ಟಿವಿ ಮೂಲಕ ಪಡೆದುಕೊಳ್ಳಬಹುದು. ಜೊತೆಗೆ ಸ್ಕ್ರೀನ್ ಮಿರರ್ ಸೌಲಭ್ಯ ಸಹ ಇದೆ.

ಸೋನಿ ಅಲ್ಟ್ರಾ HD LED ಸ್ಮಾರ್ಟ್ ಟಿವಿ ಬೆಲೆ ಹಾಗೂ ಲಭ್ಯತೆ: ಈ ದೊಡ್ಡ ಸ್ಮಾರ್ಟ್‌ಟಿವಿ 99,900ರೂ.ಗಳ ಸಾಮಾನ್ಯ ದರ ಹೊಂದಿದ್ದು, ಈ ಆಫರ್ ಮೂಲಕ ನೀವು 57,990ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಹೀಗಾಗಿ ಇದು 41% ರಿಯಾಯಿತಿ ಪಡೆದುಕೊಂಡಿದೆ. ಜೊತೆಗೆ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಯ ಸೌಲಭ್ಯ ಸಹ ಇದ್ದು, ಇದರಿಂದಾಗಿ ನೀವು ಮತ್ತೆ 11,000ರೂ.ವರೆಗೆ ಹೆಚ್ಚುವರಿ ರಿಯಾಯಿತಿ ಸಹ ಪಡೆಯಬಹುದು. ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.


Click it and Unblock the Notifications








