Home
ಸುದ್ದಿಜಾಲ

ಸೋನಿ WH-CH720N ಹೆಡ್‌ಫೋನ್ ಲಾಂಚ್: ಬೆಲೆಗೆ ತಕ್ಕ ಫೀಚರ್ಸ್‌!

ಪ್ರಮುಖ ಆಡಿಯೋ ಸ್ಮಾರ್ಟ್‌ಡಿವೈಸ್‌ ತಯಾರಿಕಾ ಸಂಸ್ಥೆಯಾದ ಸೋನಿ ಆಗಾಗ್ಗೆ ಅತ್ಯುತ್ತಮವಾದ ಹಾಗೂ ಸುಧಾರಿತ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇದೀಗ ಹೊಸ ಹೆಡ್‌ಫೋನ್ ಅನ್ನು ಲಾಂಚ್‌ ಮಾಡಿದೆ. ಇದು ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲಿದೆ.

ಹೌದು, ಸೋನಿ ಕಂಪೆನಿಯು ಸೋನಿ WH-CH720N (Sony WH-CH720N ) ಹೆಡ್‌‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದ್ದು, ಈ ಹೆಡ್‌ಫೋನ್ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಅತ್ಯಂತ ಹಗುರವಾಗಿದ್ದು, ಧರಿಸಿದಾಗ ಉತ್ತಮ ಅನುಭವ ನೀಡುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌, ಭಾರತದಲ್ಲಿ ಇದರ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಸೋನಿ WH-CH720N ಹೆಡ್‌ಫೋನ್ ಲಾಂಚ್: ಬೆಲೆಗೆ ತಕ್ಕ ಫೀಚರ್ಸ್‌!

ಸೋನಿ WH-CH720N ಪ್ರಮುಖ ಫೀಚರ್ಸ್‌: ಸೋನಿಯ ಈ ಹೊಸ ಹೆಡ್‌ಫೋನ್ ಪ್ರಮುಖವಾಗಿ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ನೊಂದಿಗೆ ಪ್ಯಾಕ್‌ ಆಗಿದ್ದು, ಇದು ಹಿನ್ನೆಲೆ ಶಬ್ಧವನ್ನು ಕಂಟ್ರೋಲ್ ಮಾಡುವುದರೊಂದಿಗೆ ನೀವು ವಿಡಿಯೋ ನೋಡುವಾಗ ಅಥವಾ ಗೇಮ್‌ ಆಡುವಾಗ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ V1 ಚಿಪ್ ಮತ್ತು ಡ್ಯುಯಲ್ ನಾಯ್ಸ್ ಸೆನ್ಸರ್ ತಂತ್ರಜ್ಞಾನವನ್ನು ಸಹ ಇದು ಹೊಂದಿದೆ.

ಇನ್ನುಳಿದಂತೆ ನೀವು ಹೊರಗಿನ ಶಬ್ಧವನ್ನು ಯಾವ ಪ್ರಮಾಣದಲ್ಲಿ ಕೇಳಲು ಇಚ್ಚಿಸುತ್ತೀರಿ ಎಂಬ ಸೆಟ್ಟಿಂಗ್‌ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ ನೀವು ಯಾವ ಸಮಯದಲ್ಲಿ ಬೇಕಾದರೂ ಬಳಕೆ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಜೊತೆಗೆ ಡಿಜಿಟಲ್ ಸೌಂಡ್ ಎನ್‌ಹಾನ್ಸ್‌ಮೆಂಟ್ ಇಂಜಿನ್ (ಡಿಎಸ್‌ಇಇ) ತಂತ್ರಜ್ಞಾನವನ್ನು ಹೊಂದಿದ್ದು, ಇದು ಸಂಗೀತ ಆಲಿಸುವ ಸಮಯದಲ್ಲಿ ನಿಮ್ಮನ್ನು ಬೇರೆ ಲೋಕದಲ್ಲಿ ತೇಲುವಂತೆ ಮಾಡುತ್ತದೆ.

ಈ ಹೆಡ್‌ಫೋನ್ ಸ್ಪಷ್ಟವಾದ ಶಬ್ಧದೊಂದಿಗೆ ಸಮತೋಲಿತ ಶ್ರುತಿಯನ್ನು ನೀಡಲಿದೆ. ಅಂದರೆ ಯಾವುದೇ ಹಾಡನ್ನು ಆಲಿಸುವಾಗ ಅದರಲ್ಲಿ ಬಳಕೆ ಮಾಡಲಾದ ಎಲ್ಲಾ ರೀತಿಯ ಸೌಂಡ್‌ಗಳು ನಿಮಗೆ ಸ್ಪಷ್ಟವಾಗಿ ಕೇಳುತ್ತವೆ. ಇದರಲ್ಲಿ ಯಾವ ಸೌಂಡ್ ಸಹ ನಿಮ್ಮ ಕಿವಿ ತಲುಪದೆ ಹೋಗುವುದಿಲ್ಲ. ಈ ಮೂಲಕ ಉನ್ನತ ಗುಣಮಟ್ಟದ ಆಡಿಯೊ ಅನುಭವವನ್ನು ಒದಗಿಸಲು ಹೆಡ್‌ಫೋನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಸೋನಿ WH-CH720N ಹೆಡ್‌ಫೋನ್ ಲಾಂಚ್: ಬೆಲೆಗೆ ತಕ್ಕ ಫೀಚರ್ಸ್‌!

ಕರೆ ಸಮಯದಲ್ಲಿಈ ಹೆಡ್‌ಫೋನ್‌ ಮೂಲಕ ಬಳಕೆದಾರರು ವಿಶೇಷವಾದ ಅನುಭವ ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ವಾಯ್ಸ್‌ ಪಿಕಪ್ ಟೆಕ್ನಾಲಜಿ ಅಳವಡಿಸಲಾಗಿದೆ. ಇದಕ್ಕಾಗಿ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳನ್ನು ನೀಡಲಾಗಿದ್ದು, ಉತ್ತಮ ಕರೆ ಅನುಭವ ಇದರಿಂದ ಸಿಗಲಿದೆ. ಜೊತೆಗೆ ಕಡಿಮೆ ಹಿನ್ನೆಲೆ ಶಬ್ದಗಳಿಗಾಗಿ ಮೈಕ್‌ಗಳು ವಿಂಡ್ ನಾಯ್ಸ್ ರಿಡಕ್ಷನ್ ಸ್ಟ್ರಕ್ಚರ್ ಆಯ್ಕೆಯನ್ನೂ ಇದರಲ್ಲಿ ನೀಡಲಾಗಿದೆ.

ಇನ್ನು ಈ ಹೆಡ್‌ಫೋನ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದ್ದು, ವಾಯ್ಸ್‌ ಕಂಟ್ರೋಲ್‌ ಹಾಗೂ ಇನ್ನಿತರೆ ವಿಷಯಕ್ಕೆ ಬಟನ್‌ಗ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಬ್ಲೂಟೂತ್‌ ಆವೃತ್ತಿ 5.2 ಹಾಗೂ ಎಎಸಿ ಮತ್ತು ಎಸ್‌ಬಿಸಿ ಆಡಿಯೊ ಕೊಡೆಕ್‌ಗಳನ್ನು ಹೊಂದಿದ್ದು ಇತರೆ ಹೆಡ್‌ಫೋನ್‌ಗಳಿಗೆ ಹೋಲಿಕೆ ಮಾಡಿದಾಗ ಇದು ಅತ್ಯುತ್ತಮವಾದ ಫೀಚರ್ಸ್‌ಗಳನ್ನು ಹೊಂದಿದೆ.

ಸೋನಿ WH-CH720N ಬ್ಯಾಟರಿ ಸಾಮರ್ಥ್ಯ: ಬ್ಯಾಟರಿ ವಿಷಯದಲ್ಲಿ ಈ ಸೋನಿಯ ಈ ಹಿಂದಿನ ಮಾಡೆಲ್‌ಗಳಿಗೆ ಹೋಲಿಕೆ ಮಾಡಿದರೆ ಇದು ಉತ್ತಮವಾದ ಬ್ಯಾಕಪ್‌ ಹೊಂದಿದೆ. ಯಾಕೆಂದರೆ ಈ ಹೆಡ್‌ಫೋನ್ ನಾಯ್ಸ್ ಕ್ಯಾನ್ಸಲಿಂಗ್‌ನೊಂದಿಗೆ 35 ಗಂಟೆಗಳವರೆಗೆ ಬ್ಯಾಟರಿ ನೀಡಲಿದ್ದು, ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್‌ ಇಲ್ಲದಿರುವಾಗ 50 ಗಂಟೆಗಳ ವರೆಗೆ ಬ್ಯಾಕಪ್‌ ನೀಡಲಿದೆ. ಹಾಗೆಯೇ ಕೇವಲ 3 ನಿಮಿಷದ ಚಾರ್ಜಿಂಗ್‌ನಲ್ಲಿ 1 ಗಂಟೆಯ ಪ್ಲೇಬ್ಯಾಕ್ ಅನ್ನು ನೀಡುತ್ತದೆ ಎಂದು ಕಂಪೆನಿ ದೃಢಪಡಿಸಿದೆ.

ಸೋನಿ WH-CH720N ಹೆಡ್‌ಫೋನ್ ಲಾಂಚ್: ಬೆಲೆಗೆ ತಕ್ಕ ಫೀಚರ್ಸ್‌!

ಸೋನಿ WH-CH720N ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಈ ಸೋನಿ WH-CH720N ಹೆಡ್‌ಫೋನ್‌ಗೆ 9,990 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಕಂಡುಬರುತ್ತದೆ. ಇದನ್ನು ನೀವು ಇಂದಿನಿಂದ ಸೋನಿ ರಿಟೇಲ್ ಸ್ಟೋರ್‌ಗಳಾದ ಸೋನಿ ಸೆಂಟರ್ ಮತ್ತು ಸೋನಿ ಎಕ್ಸ್‌ಕ್ಲೂಸಿವ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ www.ShopatSC.com ಸೇರಿದಂತೆ ಪ್ರಮುಖ ಇ- ಕಾಮರ್ಸ್‌ ಸೈಟ್‌ಗಳ ಮೂಲಕವೂ ಈ ಡಿವೈಸ್‌ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

Best Mobiles in India

English summary
Sony has launched the Sony WH-CH720N headphones in India which comes with noise canceling features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+