Home
ಸುದ್ದಿಜಾಲ

ಸೋನಿಯಿಂದ ಹೊಸ ಸ್ಮಾರ್ಟ್‌ಫೋನ್‌ ಘೋಷಣೆ.. ಕ್ಯಾಮೆರಾಗೆ ಗ್ರಾಹಕರು ಫಿದಾ!

ಟೆಕ್‌ ಮಾರುಕಟ್ಟೆಯಲ್ಲಿ ದಿಗ್ಗಜ ಸ್ಥಾನದಲ್ಲಿ ಇರುವ ಸೋನಿ ಸಂಸ್ಥೆಯು ಈ ಹಿಂದೆ ಎಕ್ಸ್‌ಪೀರಿಯಾ ಹೆಸರಿನ ಸ್ಮಾರ್ಟ್‌ಫೊನ್‌ಗಳ ಮೂಲಕ ಮೊಬೈಲ್‌ ಪ್ರಿಯರನ್ನು ಆಕರ್ಷಿಸಿತ್ತು. ಆ ಬಳಿಕ ಯಾವುದೇ ಮೊಬೈಲ್‌ ಉತ್ಪನ್ನ ಲಾಂಚ್‌ ಮಾಡದೆ ದೂರವಿದ್ದ ಸೋನಿ ಇದೀಗ ಮತ್ತೆ ಸ್ಮಾರ್ಟ್‌ಫೋನ್‌ ವಲಯಕ್ಕೆ ಎಂಟ್ರಿ ಆಗುವ ಸೂಚನೆ ಹೊರಹಾಕಿದೆ.

ಹೌದು, ಸೋನಿ ಸಂಸ್ಥೆಯು ಇದೀಗ ನಿರೀಕ್ಷಿಸಿದಂತೆ ಆನ್‌ಲೈನ್ ಈವೆಂಟ್‌ನಲ್ಲಿ ತನ್ನ ಹೊಸ ಸೋನಿ ಎಕ್ಸ್‌ಪೀರಿಯಾ 1 VI ಫೋನ್‌ ಅನ್ನು ಘೋಷಿಸಿದೆ. ಈ ಫೋನ್‌ ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿ ಇದ್ದು, ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 SoC ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿದೆ. ಇದು LPTO ಮಾದರಿಯ ಡಿಸ್‌ಪ್ಲೇ ಅನ್ನು ಪಡೆದಿದೆ.

ಸೋನಿಯಿಂದ ಹೊಸ ಸ್ಮಾರ್ಟ್‌ಫೋನ್‌ ಘೋಷಣೆ.. ಕ್ಯಾಮೆರಾಗೆ ಗ್ರಾಹಕರು ಫಿದಾ!

ಹಾಗೆಯೇ ಸೋನಿಯ ಈ ಹೊಸ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 52 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದರೇ ಸೋನಿಯ ಈ ನೂತನ ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಸೋನಿ ಎಕ್ಸ್‌ಪೀರಿಯಾ 1 VI ನಿರೀಕ್ಷಿತ ಫೀಚರ್ಸ್‌

ಸೋನಿ ಎಕ್ಸ್‌ಪೀರಿಯಾ 1 VI ಸ್ಮಾರ್ಟ್‌ಫೋನ್‌ 6.5 ಇಂಚಿನ FHD+ OLED ಡಿಸ್‌ಪ್ಲೇ ಹೊಂದಿದ್ದು, 1080 x 2340 ಪಿಕ್ಸಲ್‌ ರೆಸಲ್ಯೂಶನ್‌ ಸಪೋರ್ಟ್‌ ಪಡೆದಿದೆ. ಈ ಡಿಸ್‌ಪ್ಲೇ 19.5:9 ಅನುಪಾತ ಪಡೆದಿದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಇದಲ್ಲದೆ ಡಿಸ್‌ಪ್ಲೇ 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಕೂಡ ಬೆಂಬಲಿಸಲಿದೆ. ಗೊರಿಲ್ಲಾ ಗ್ಲಾಸ್‌ ವಿಕ್ಟಸ್‌ 2 ಸಪೋರ್ಟ್‌ ಸಹ ಇದೆ.

ಸೋನಿ ಎಕ್ಸ್‌ಪೀರಿಯಾ 1 VI ಸ್ಮಾರ್ಟ್‌ಫೋನ್‌ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 3 SoC ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಅಲ್ಲದೇ ಎಸ್‌ಡಿ ಕಾರ್ಡ್‌ ಮೂಲಕ 1.5TB ವರೆಗೂ ಮೆಮೊರಿ ವಿಸ್ತರಿಸುವ ಆಯ್ಕೆ ಇದೆ.

ಸೋನಿ ಎಕ್ಸ್‌ಪೀರಿಯಾ 1 VI ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 52 ಮೆಗಾ ಪಿಕ್ಸೆಲ್ ಸೆನ್ಸಾರ್‌ ಆಗಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಹಾಗೂ ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಟೆಲಿಫೋಟೋ ಸೆನ್ಸಾರ್‌ ಅನ್ನು ಪಡೆದಿರಲಿವೆ. ಇನ್ನು ಮುಂಭಾಗದಲ್ಲಿ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಿದೆ.

ಸೋನಿ ಎಕ್ಸ್‌ಪೀರಿಯಾ 1 VI ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 30W (USB PD) ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಇದೆ. ಈ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಪಡೆದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್‌, 3.5 mm ಆಡಿಯೊ ಜಾಕ್, Qi ವೈರ್‌ಲೆಸ್ ಚಾರ್ಜಿಂಗ್ ಹಾಗೂ ಬ್ಯಾಟರಿ ಶೇರಿಂಗ್ ನಂತಹ ಆಯ್ಕೆಗಳು ಇರಲಿವೆ.

ಬೆಲೆ ಹಾಗೂ ಲಭ್ಯತೆ

ಸೋನಿ ಎಕ್ಸ್‌ಪೀರಿಯಾ 1 VI (Sony Xperia 1 VI) ಫೋನ್‌ ಆರಂಭಿಕ ವೇರಿಯಂಟ್‌ ಬೆಲೆ ಯುರೋಪ್‌ನಲ್ಲಿ 1399 ಯುರೋಗಳು (ಭಾರತದಲ್ಲಿ ಅಂದಾಜು 1,26,500ರೂ. ಎನ್ನಲಾಗಿದೆ) ಇನ್ನು ಈ ಫೋನ್‌ ಬ್ಲ್ಯಾಕ್‌, ಪ್ಲಾಟಿನಂ ಸಿಲ್ವರ್ ಹಾಗೂ ಖಾಕಿ ಕಲರ್‌ ಆಯ್ಕೆಗಳಲ್ಲಿ ಲಭ್ಯ ಇರಲಿದೆ. ಇನ್ನು ಈ ಫೋನ್‌ ಜೂನ್ 3 ರಿಂದ ಯುಕೆ, ಯುರೋಪ್ ಮತ್ತು ಇತರೆ ಕೆಲವು ದೇಶಗಳಲ್ಲಿ ಲಭ್ಯ ಆಗಲಿದೆ.

Best Mobiles in India

English summary
Sony Xperia 1 VI with Snapdragon 8 Gen 3 announced. check specifications, price, camera and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+