ಸೋನಿ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಲಾಂಚ್!.OLED ಡಿಸ್‌ಪ್ಲೇ!
ಜನಪ್ರಿಯ ಸೋನಿ ಕಂಪನಿಯು ಎಕ್ಸಪಿರಿಯಾ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಸಂಸ್ಥೆಯು ಕಳೆದ ಏಪ್ರಿಲ್‌ನಲ್ಲಿ ಸೋನಿ ಎಕ್ಸ್‌ಪೀರಿಯಾ 10 III ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಇದೀಗ ಅದೇ ಸರಣಿಯಲ್ಲಿ ಮತ್ತೆ ಹೊಸದಾಗಿ ಸೋನಿ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆದಿದೆ.

ಹೌದು, ಜನಪ್ರಿಯ ಸೋನಿ ಸಂಸ್ಥೆಯು ಇದೀಗ ಸೋನಿ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಅನ್ನು ಜಪಾನ್ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇನ್ನು ಈ ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 690 SoC ಪ್ರೊಸೆಸರ್, OLED ಡಿಸ್‌ಪ್ಲೇ, ಹಾಗೂ 6GB RAM ಮತ್ತು 64GB ಸ್ಟೋರೇಜ್ ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಸೋನಿ ಎಕ್ಸ್‌ಪೀರಿಯಾ 10 III ಲೈಟ್ ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

OLED ಡಿಸ್‌ಪ್ಲೇ ಇದೆ
ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ 1,080x2,520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ OLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ 120Hz ರೀಫ್ರೇಶ್ ರೇಟ್ ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ
ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಸ್ನ್ಯಾಪ್‌ಡ್ರಾಗನ್ 690 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್ 11 ಓಎಸ್ ಹಾಗೂ 6GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶ ಮಾಡಿಕೊಟ್ಟಿದೆ.

ತ್ರಿವಳಿ ಕ್ಯಾಮೆರಾ ಸೆನ್ಸಾರ್
ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಫ್ರಂಟ್ ಸೆಲ್ಫಿ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಅದಕ್ಕೆ ಪೂರಕ ಚಾರ್ಜಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಇದರೊಂದಿಗೆ ಈ ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಫೋನಿನ ತೂಕ ಸುಮಾರು 169 ಗ್ರಾಂ. ಸಂಪರ್ಕ ಆಯ್ಕೆಗಳಲ್ಲಿ ವೈ-ಫೈ 802.11 ಎಸಿ, ಬ್ಲೂಟೂತ್ v5.1, ಯುಎಸ್‌ಬಿ ಟೈಪ್-ಸಿ ಪೋರ್ಟ್, 5 ಜಿ ಮತ್ತು ಹೆಚ್ಚಿನವು ಸೇರಿವೆ.

ಬೆಲೆ ಮತ್ತು ಲಭ್ಯತೆ
ಸೋನಿ ಎಕ್ಸ್‌ಪೀರಿಯಾ 10 III ಲೈಟ್ ಸ್ಮಾರ್ಟ್‌ಫೋನ್ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಬೆಲೆಯು ಜಪಾನ್‌ನಲ್ಲಿ JPY 46,800 (ಭಾರತದಲ್ಲಿ ಅಂದಾಜು 31,600ರೂ.ಗಳು ಎಂದು ಊಹಿಸಲಾಗಿದೆ). ಇನ್ನು ಈ ಫೋನ್ ಬಿಳಿ, ನೀಲಿ, ಕಪ್ಪು ಮತ್ತು ಗುಲಾಬಿ ಬಣ್ಣದ ಆಯ್ಕೆಗಳನ್ನು ಪಡೆದಿದೆ.


Click it and Unblock the Notifications








