ಹೊಸ 'ಸೋನಿ ಎಕ್ಸ್‌ಪಿರಿಯಾ 5' ಫೀಚರ್ಸ್‌ ಹೇಗಿವೆ ಗೊತ್ತಾ?..ಬೆಲೆ?

|

ಜನಪ್ರಿಯ ಸೋನಿ ಕಂಪನಿಯು ಇತ್ತೀಚಿಗೆ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿರಲಿಲ್ಲ. ಆದರೆ ಬರ್ಲಿನ್‌ನಲ್ಲಿ ನಡೆಯುತ್ತಿರುವ IFA-2019 ಟೆಕ್ ಕಾರ್ಯಕ್ರಮದಲ್ಲಿ ಇದೇ ಸಪ್ಟೆಂಬರ್ 5ರಂದು ಸೋನಿಯು ತನ್ನ ಎಕ್ಸಪಿರಿಯಾ ಸರಣಿಯಲ್ಲಿ ಹೊಸದೊಂದು ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ ಭಾರೀ ಖುಷಿ ನೀಡಿದ್ದು, ಸ್ಮಾರ್ಟ್‌ಫೋನ್ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಎಕ್ಸ್‌ಪಿರಿಯಾ 5

ಹೌದು, ಸೋನಿಯು ಎಕ್ಸಪಿರಿಯಾ ಸರಣಿಯಲ್ಲಿ ಇದೀಗ ಎಕ್ಸ್‌ಪಿರಿಯಾ 5 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದೇ ಸೆಪ್ಟೆಂಬರ 18ರಿಂದ ಪ್ರಿ-ಆರ್ಡರ್‌ ಆರಂಭವಾಗಲಿದೆ. ಹಾಗಾದರೇ ಸೋನಿ ಎಕ್ಸಪಿರಿಯಾ 5 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

1080x2520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 21:9 ಆಗಿದ್ದು, 10-bit ಕಲರ್ ಗ್ರೇಡಿಯೆಶನ್ ಪಡೆದಿದೆ. ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 6 ನೀಡಲಾಗಿದ್ದು, ಸಿನಿಮಾ ವೈಲ್ಡ್‌ ಡಿಸ್‌ಪ್ಲೇ ಆಗಿದೆ. ಡಿಸ್‌ಪ್ಲೇಯ ಒಟ್ಟು ಸುತ್ತಳತೆಯು 6.2 x 2.6 x 0.3 ಇಂಚುಗಳಾಗಿದೆ.

ಓದಿರಿ : ಫೋನಿನಲ್ಲಿ ನೆಟ್‌ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್‌!ಓದಿರಿ : ಫೋನಿನಲ್ಲಿ ನೆಟ್‌ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್‌!

ಪ್ರೊಸೆಸರ್‌ ಸಾಮರ್ಥ್ಯ

ಈ ಸ್ಮಾರ್ಟ್‌ಫೋನ್ X24 LTE ಬೆಂಬಲಿತವಾಗಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಆಂಡ್ರಾಯ್ಡ್‌ 9 ಓಎಸ್‌ ಹಾಗೂ 6GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಪಡೆದುಕೊಂಡಿರುವ ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 512GB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ

ಸೋನಿ ಎಕ್ಸ್‌ಪಿರಿಯಾ 5 ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾವು ಸಹ 12ಎಂಪಿ ಸೆನ್ಸಾರ್‌ನಲ್ಲಿವೆ. ಮೂರು ಕ್ಯಾಮೆರಾಗಳು ಸೂಪರ್ ವೈಲ್ಡ್‌ ಆಂಗಲ್ ಸೆನ್ಸಾರ್‌ ಹೊಂದಿದ್ದು, 2x ಜೂಮ್ ಸಾಮರ್ಥ್ಯವನ್ನು ಒಳಗೊಂಡಿವೆ. ಫ್ರಂಟ್ ಕ್ಯಾಮೆರಾವು 8ಎಂಪಿ ಸೆನ್ಸಾರ್‌ ಪಡೆದಿದೆ.

ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!

ಬ್ಯಾಟರಿ ಮತ್ತು ಸೌಲಭ್ಯಗಳು

ಈ ಫೋನ್ 3,140mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಜೊತೆಗೆ 18W ನ ಯುಎಸ್‌ಬಿ ಸಪೋರ್ಟ್‌ ಇರುವ ಎಕ್ಸ್‌ಪಿರಿಯಾ ಚಾರ್ಜರ್ ನೀಡಲಾಗಿದೆ. ಇದರೊಂದಿಗೆ ಬ್ಲೂಟೂತ್ 5, ಎನ್‌ಎಫ್‌ಸಿ, ಯುಎಸ್‌ಬಿ 3.1, ಯುಎಸ್‌ಬಿ ಟೈಪ್-ಸಿ ಪೋರ್ಟ್‌, ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಸೌಂಡ್, ಆಡಿಯೊ ಜಾಕ್ ಸೇರಿದಂತೆ ಸ್ಟಿರಿಯೊ ಸ್ಪಿಕರ್ಸ್‌ಗಳನ್ನು ಪಡೆದುಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಸೋನಿ ಎಕ್ಸ್‌ಪಿರಿಯಾ 5 ಸ್ಮಾರ್ಟ್‌ಫೋನ್ ಯುರೋಪ್‌ನ ಕೆಲವು ಪ್ರಮುಖ ಸ್ಥಳಗಳಲ್ಲಿ ಇದೇ ಸೆಪ್ಟಂಬರ್ 20ರಂದು ಪ್ರಿ ಆರ್ಡರ್ ಶುರುವಾಗಲಿದೆ. ಅಕ್ಟೊಬರ್ ಮೊದಲ ವಾರದಲ್ಲಿ ಗ್ರಾಹಕರ ಕೈ ಸೇರಲಿದೆ. ಬ್ಲೂ, ಬ್ಲ್ಯಾಕ್, ಗ್ರೇ ಮತ್ತು ರೆಡ್‌ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಬೆಲೆಯು €799(ಅಂದಾಜು 63,100ರೂ) ಆಗಿರಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಸೋನಿ ಎಕ್ಸ್‌ಪಿರಿಯಾ 5 ಸ್ಮಾರ್ಟ್‌ಫೋನ್ ಎಂಟ್ರಿ ಬಗ್ಗೆ ನಿಖರ ಮಾಹಿತಿ ಅಲಭ್ಯ.

ಓದಿರಿ : ಇನ್‌ಫಿನಿಕ್ಸ್ ಹಾಟ್ 8 ವಿಮರ್ಶೆ : ಅಗ್ಗದ ಬೆಲೆ ದೈತ್ಯ ಬ್ಯಾಟರಿ ಲೈಫ್.!ಓದಿರಿ : ಇನ್‌ಫಿನಿಕ್ಸ್ ಹಾಟ್ 8 ವಿಮರ್ಶೆ : ಅಗ್ಗದ ಬೆಲೆ ದೈತ್ಯ ಬ್ಯಾಟರಿ ಲೈಫ್.!

Best Mobiles in India

English summary
Sony Xperia 5 smartphone comes with a 6.10-inch display and Snapdragon 855 processor. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X