ಸೋನಿ ಎಕ್ಸ್‌ಪಿರಿಯಾ ಏಸ್‌ 3 ಫೋನ್ ಲಾಂಚ್; ಫೀಚರ್ಸ್‌ ಹೇಗಿವೆ?

|

ಟೆಕ್ ವಲಯದಲ್ಲಿ ಸೋನಿ ಕಂಪನಿಯು ತನ್ನ ಎಕ್ಸಪಿರಿಯಾ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಕಂಪನಿಯ ಎಕ್ಸ್‌ಪಿರಿಯಾ ಸರಣಿಯ ಫೋನ್‌ಗಳು ಗುಣಮಟ್ಟ ಹಾಗೂ ಡಿಸೈನ್‌ನಿಂದ ಹೆಚ್ಚು ಗುರುತಿಸಿಕೊಂಡಿವೆ. ಸಂಸ್ಥೆಯು ಎಕ್ಸ್‌ಪಿರಿಯಾ ಸರಣಿಯಲ್ಲಿಯೇ ಈಗ ಹೊಸದಾಗಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಸೋನಿ ಎಕ್ಸ್‌ಪಿರಿಯಾ ಏಸ್‌ 3 ಫೋನ್ ಲಾಂಚ್; ಫೀಚರ್ಸ್‌ ಹೇಗಿವೆ?

ಹೌದು, ಜನಪ್ರಿಯ ಸೋನಿ ಸಂಸ್ಥೆಯು ಇದೀಗ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದ್ದು, ಕಪ್ಪು, ನೀಲಿ, ಬ್ರಿಕ್ ಆರೆಂಜ್ ಮತ್ತು ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನುಳಿದಂತೆ ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ
ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ 720 x 1,496 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ರಚನೆಯನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್‌ ರಕ್ಷಣೆಯನ್ನು ಪಡೆದಿದೆ.

ಪ್ರೊಸೆಸರ್‌ ಸಾಮರ್ಥ್ಯ
ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 480 5G SoC ಪ್ರೊಸೆಸರ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಇದ್ದು, ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಪಡೆದಿದೆ.

ಸೋನಿ ಎಕ್ಸ್‌ಪಿರಿಯಾ ಏಸ್‌ 3 ಫೋನ್ ಲಾಂಚ್; ಫೀಚರ್ಸ್‌ ಹೇಗಿವೆ?

ಕ್ಯಾಮೆರಾ ವಿಶೇಷತೆ
ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಫ್ರಂಟ್ ಸೆಲ್ಫಿ ಕ್ಯಾಮೆರಾವು 5 ಮೆಗಾ ಪಿಕ್ಸಲ್ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಸೌಲಭ್ಯಗಳು
ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದೆ. ಹಾಗೆಯೇ IP68 ರೇಟ್ ಮಾಡಿದ ನೀರು ಮತ್ತು ಧೂಳಿನ ಪ್ರತಿರೋಧ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, 4 ಜಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ.

ಬೆಲೆ ಎಷ್ಟು?
ಸೋನಿ ಎಕ್ಸ್‌ಪಿರಿಯಾ ಏಸ್‌ 3 ಸ್ಮಾರ್ಟ್‌ಫೋನ್ 4GB RAM + 64GB ಆನ್‌ಬೋರ್ಡ್ ಸ್ಟೋರೇಜ್ ರೂಪಾಂತರವನ್ನು ಮಾತ್ರ ಹೊಂದಿದೆ. ಇದರ ಬೆಲೆ ಜಪಾನ್‌ನಲ್ಲಿ JPY 34,408 (ಭಾರತದಲ್ಲಿ ಸುಮಾರು 20,500ರೂ. ಎಂದು ಅಂದಾಜಿಸಲಾಗಿದೆ). ಈ ಸ್ಮಾರ್ಟ್‌ಫೋನ್ ಅನ್ನು ಕಪ್ಪು, ನೀಲಿ, ಬ್ರಿಕ್ ಆರೆಂಜ್ ಮತ್ತು ಗ್ರೇ ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ.

Best Mobiles in India

English summary
Sony Xperia Ace III With Snapdragon 480 5G SoC Launched: Price, Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X