Sony ZV-E10 II ವ್ಲೋಗಿಂಗ್ ಕ್ಯಾಮೆರಾ ಲಾಂಚ್; ಅತ್ಯುತ್ತಮ ಫೀಚರ್ಸ್, ಅಚ್ಚರಿಯ ಬೆಲೆ!
ದಿಗ್ಗಜ ಸೋನಿ (Sony) ಸಂಸ್ಥೆಯು ತನ್ನ ಜನಪ್ರಿಯ ZV-E10 ಕ್ಯಾಮೆರಾದ ಎರಡನೇ ತಲೆಮಾರಿನ ZV-E10 II (Sony ZV-E10 II) ಅನ್ನು ಇದೀಗ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಸೋನಿ ZV-E10 II ಕ್ಯಾಮೆರಾವು ಮೂಲ ZV-E10 ಕ್ಯಾಮೆರಾದ ಜನಪ್ರಿಯ ಕ್ರಿಯೇಟಿವ್ ಲುಕ್ಸ್, ಪ್ರಾಡಕ್ಟ್ ಶೋಕೇಸ್ ಸೆಟ್ಟಿಂಗ್, ಬ್ಯಾಕ್‌ಗ್ರೌಂಡ್ ಡಿಫೋಕಸ್ ಹಾಗೂ ವೇರಿ-ಆಂಗಲ್ ಫ್ಲಿಪ್ ಸ್ಕ್ರೀನ್ ಆಯ್ಕೆಗಳನ್ನು ಉಳಿಸಿಕೊಂಡಿದೆ.
ಹೌದು, ಸೋನಿ ಸಂಸ್ಥೆಯು ನೂತನವಾಗಿ ಸೋನಿ ZV-E10 II (Sony ZV-E10 II) ವ್ಲೋಗಿಂಗ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಆಂತರಿಕ ಹಾರ್ಡ್‌ವೇರ್ ಅನ್ನು ಅದರ ಹಿಂದಿನ ಆವೃತ್ತಿಗೆ ಹೋಲಿಸಿದರೆ ಅಪ್‌ಡೇಟ್ ಪಡೆದಿದ್ದು, 26 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಹೆಚ್ಚುವರಿ ಇದರಲ್ಲಿ ಸುಧಾರಿತ ಆಟೊಫೋಕಸ್ ಮತ್ತು ವಿಡಿಯೊ ಸೆರೆಹಿಡಿಯುವ ಸಾಮರ್ಥ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಇನ್ನುಳಿದಂತೆ ಈ ಕ್ಯಾಮೆರಾದ ಫೀಚರ್ಸ್ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸೋನಿ ZV-E10 II ಕ್ಯಾಮೆರಾ ಫೀಚರ್ಸ್
ಈ ಹೊಸ ಕ್ಯಾಮೆರಾವು ಚಿಕ್ಕ ಗಾತ್ರದಲ್ಲಿದ್ದು ಹಗುರವಾಗಿದೆ. ಅಂದಾಜು 377 ಗ್ರಾಂ ತೂಕ ಪಡೆದಿರುವ ಈ ಕ್ಯಾಮೆರಾವು ಫೋಟೋ ಅಥವಾ ವಿಡಿಯೊ ಸೆರೆ ಹಿಡಿಯುವವರ ಕೈಯಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಅಲ್ಲದೇ ಇದು ಸಿನೆಮ್ಯಾಟಿಕ್ ವ್ಲಾಗ್ ಸೆಟ್ಟಿಂಗ್, ಹೊಸ ಲಂಬ ಸ್ವರೂಪದ ಬಳಕೆದಾರರ ಪರಸ್ಪರ ಸಂವಹನ ಸೌಲಭ್ಯ (ಯುಐ), ಸುಧಾರಿತ ಸಾಮರ್ಥ್ಯಕ್ಕಾಗಿ ನವೀಕರಿಸಿದ ದೊಡ್ಡ ಸೋನಿ ಜೆಡ್ ಬ್ಯಾಟರಿ, ಸುಲಭ ನೇರ ಪ್ರಸಾರ ಮತ್ತು ಡೇಟಾ ವರ್ಗಾವಣೆಗೆ ಸುಧಾರಿತ ಸಂಪರ್ಕ ಸೌಲಭ್ಯ ಪಡೆದಿದೆ.
ಅಲ್ಲದೇ ಇದು E PZ 16-50mm F3.5-5.6 OSS II ಕಾಂಪ್ಯಾಕ್ಟ್ APS-C ಪವರ್ ಜೂಮ್ ಲೆನ್ಸ್ ಪ್ರತ್ಯೇಕವಾಗಿ ಪಡೆದುಕೊಂಡಿದೆ. (ಶೀಘ್ರದಲ್ಲೇ ಪ್ರಕಟಿಸಲಾಗುವುದು) ಅಥವಾ ZV-E10 II ನ ಲೆನ್ಸ್ ಕಿಟ್‌ನ ಭಾಗವಾಗಿ ಇದು ದೊರೆಯಲಿದೆ. ನವೀಕರಿಸಿದ ಕಿಟ್ ಲೆನ್ಸ್ ಹಗುರವಾಗಿದೆ ಮತ್ತು ಮೊದಲ ತಲೆಮಾರಿನ ಮಾದರಿಗೆ ಹೋಲಿಸಿದರೆ ಸುಧಾರಿತ ಆಟೊಫೋಕಸ್ (ಎಎಫ್) ಮತ್ತು ವಿಡಿಯೊ ಕಾರ್ಯಕ್ಷಮತೆ ನೀಡುತ್ತದೆ.
ಕ್ಯಾಮೆರಾದ ಕೀ - ಹೈಲೈಟ್ಸ್
ಆಟೋ ಫೋಕಸ್ - ಮಾನವರು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ರಿಯಲ್ ಟೈಮ್‌ನ ಐ AF ಜೊತೆಗೆ 759 ಪಾಯಿಂಟ್ ಫೋಕಲ್ ಪ್ಲೇನ್ ಹಂತ ಪತ್ತೆಹಚ್ಚುವಿಕೆ AF ಜೊತೆಗೆ ರಿಯಲ್ ಟೈಮ್‌ನ ಟ್ರ್ಯಾಕಿಂಗ್ ಸೌಲಭ್ಯ ಪಡೆದುಕೊಂಡಿದೆ.
ಸೆನ್ಸಾರ್ - ಈ ಹೊಸ ಕ್ಯಾಮೆರಾವು 100 ರಿಂದ 32000 ISO ಶ್ರೇಣಿಯೊಂದಿಗೆ 26 ಮೆಗಾ ಪಿಕ್ಸೆಲ್ ಹಿಂಬದಿ ಪ್ರಕಾಶಿತ Exmor R CMOS ಸೆನ್ಸಾರ್ ಸೌಲಭ್ಯ ಇದೆ.
ಲೆನ್ಸ್ ಹೊಂದಾಣಿಕೆ - ಈ ಕ್ಯಾಮೆರಾವು 70 ಸೋನಿ ಇ-ಮೌಂಟ್ ಲೆನ್ಸ್‌ಗಳನ್ನು ಸಪೋರ್ಟ್ ಮಾಡುತ್ತದೆ.
ವೀಡಿಯೊ ಕ್ವಾಲಿಟಿ - ಆಕ್ಟಿವ್ ಮೋಡ್ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 60p ವರೆಗೆ 4K ಫೂಟೇಜ್ 5.6K ಓವರ್‌ಸ್ಯಾಂಪ್ಲಿಂಗ್ ಸೌಲಭ್ಯ ಪಡೆದಿದೆ.
ಬ್ಯಾಟರಿ ಸಾಮರ್ಥ್ಯ - ನವೀಕರಿಸಿದ ದೊಡ್ಡ ಸಾಮರ್ಥ್ಯದ Z ಬ್ಯಾಟರಿ (NP-FZ100) 195 ನಿಮಿಷಗಳ ನಿರಂತರ ಸಿನಿಮಾ ರೆಕಾರ್ಡಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಬೆಲೆ ಹಾಗೂ ಲಭ್ಯತೆ ಮಾಹಿತಿ
ಸೋನಿ ZV-E10 II (Sony ZV-E10 II) ಕ್ಯಾಮೆರಾ ಹಾಗೂ ಲೆನ್ಸ್ ಕಿಟ್ ಎಲ್ಲಾ ಸೋನಿ ಸೆಂಟರ್, ಪ್ರಮುಖ ಬ್ರ್ಯಾಂಡ್ ಸ್ಟೋರ್‌ಗಳು, www.ShopatSC.com ವೆಬ್‌ಸೈಟ್, ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳು, ಅಲ್ಲದೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ - ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಇದೇ ಆಗಸ್ಟ್ 27, 2024 ರಿಂದ ಖರೀದಿಗೆ ಲಭ್ಯ ಇರಲಿದೆ. ಅಂದಹಾಗೆ ZV-E10M2 (ಬಾಡಿ ಮಾತ್ರ) ಬೆಲೆಯು 94,990ರೂ. ಗಳು ಆಗಿದೆ.


Click it and Unblock the Notifications








