Smartphone Battery :ಇನ್ಮುಂದೆ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ನೀವೇ ಬದಲಾಯಿಸಬಹುದು, ಆದ್ರೆ!?
ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರಿಗೆ ಅವರ ದೇಹದ ಒಂದು ಆಗದಂತೆ ಮಾರ್ಪಟ್ಟಿದ್ದು, ಯಾರನ್ನು ಬಿಟ್ಟರೂ ಸ್ಮಾರ್ಟ್‌ಫೋನ್ ಅನ್ನು ಬಿಡುವುದಿಲ್ಲ ಎನ್ನುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಈ ನಡುವೆ ಸ್ಮಾರ್ಟ್‌ಫೋನ್‌ಗೂ ಬ್ಯಾಟರಿಗೂ ಇದೇ ಸಂಬಂಧ ಇದೆ. ಆದರೆ, ಇನ್ಮುಂದೆ ಸ್ಮಾರ್ಟ್‌ಫೋನ್ ಹಾಗೂ ಬ್ಯಾಟರಿಯನ್ನು ಬೇರ್ಪಡಿಸಬಹುದು.
ಹೌದು, ಈ ಹಿಂದೆ ಲಾಂಚ್ ಆಗುತ್ತಿದ್ದ ಫೋನ್‌ಗಳು ಹಾಗೂ ಕೀಪ್ಯಾಡ್ ಫೋನ್‌ಗಳನ್ನು ಬ್ಯಾಟರಿಯಲ್ಲಿ ಬಳಕೆದಾರರೇ ರಿಮೂವ್ ಮಾಡಬಹುದಾದ ಅಥವಾ ಹೊಸ ಬ್ಯಾಟರಿಯನ್ನು ಖರೀದಿಸಿ ತಾವೇ ಜೋಡಿಸಿಕೊಳ್ಳಬಹುದಾದ ವ್ಯವಸ್ಥೆ ಇತ್ತು.ಆದರೆ,ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಯ್ಕೆ ಇಲ್ಲ. ಸ್ಮಾರ್ಟ್‌ಫೋನ್‌ನಲ್ಲಿ ಏನೇ ತೊಂದರೆ ಆದರೂ ಸಹ ರಿಪೇರಿ ಅಂಗಡಿಗೆ ತೆಗೆದುಕೊಂಡು ಹೋಗಬೇಕು. ಆದರೆ, ಇನ್ಮುಂದೆ ಸ್ಮಾರ್ಟ್‌ಫೋನ್‌ಗಳು ರಿಮೂವಬಲ್ ಬ್ಯಾಟರಿ ಆಯ್ಕೆ ಹೊಂದಿರಲಿವೆ. ಹಾಗಿದ್ರೆ, ಯಾಕೀ ಹೊಸ ನಿರ್ಧಾರ?, ಇದರಿಂದ ಪ್ರಯೋಜನ ಏನು ಎಂಬುದನ್ನು ತಿಳಿಯಲು ಈ ಲೇಖನ ಓದಿರಿ.

ಹೆಚ್ಚು ಪರವಾದ ಮತ ಹಾಕಿದ ಯುಐ: ರಿಮೂವಬಲ್ ಬ್ಯಾಟರಿ ಆಯ್ಕೆ (removable batteries in phones) ಇರುವ ಸ್ಮಾರ್ಟ್ ಡಿವೈಸ್ ಪರ 587 ಯುರೋಪಿಯನ್ ಸಂಸದರು ಮತ ಚಲಾಯಿಸಿದ್ದು, ಇದರ ವಿರುದ್ಧ ಕೇವಲ 9 ಸಂಸದರು ಮತ ಚಲಾವಣೆ ಮಾಡಿದ್ದಾರೆ. ಈ ಕಾರಣದಿಂದ ಇನ್ಮುಂದೆ ಮುಂದಿನ ವರ್ಷಗಳಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ನೀವು ಸುಲಭವಾಗಿ ಓಪನ್ ಮಾಡಿ ನೋಡುವಷ್ಟು ಸರಳ ಶೈಲಿಯನ್ನು ಪಡೆದುಕೊಳ್ಳಲಿವೆ.
ಈ ಮೂಲಕ ಇನ್ಮುಂದೆ ಈ ಹೊಸ ಕಾನೂನು ಸ್ಮಾರ್ಟ್‌ಗ್ಯಾಜೆಟ್(smart gadgets) ತಯಾರಕರು ವಿಶೇಷ ಟೂಲ್ಸ್ ಅಗತ್ಯವಿರುವ ಫೋನ್‌ಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲಿದೆ. ಅಂದರೆ ಬಳಕೆದಾರರು ಕನಿಷ್ಠ ಬ್ಯಾಟರಿಗಳನ್ನಾದರೂ ಸ್ವತಃ ಬದಲಾಯಿಸಲು ಸಾಧ್ಯವಾಗುತ್ತದೆ. ಆದರೆ, ಈ ಕಾನೂನು ಸಂಪೂರ್ಣವಾಗಿ ಜಾರಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ 2027 ರ ಆರಂಭದಲ್ಲಿ ಇದು ಜಾರಿಯಾಗಬಹುದು ಎಂದು ವರದಿಗಳಿಂದ ತಿಳಿದುಬಂದಿದೆ.
ಸದ್ಯಕ್ಕೆ ಈ ಕಾನೂನು ಯುರೋಪಿಯನ್ ಒಕ್ಕೂಟಕ್ಕೆ ಮಾತ್ರ ಅನ್ವಯಿಸಲಿದ್ದು, ಮುಂದಿನ ದಿನಗಳಲ್ಲಿ ಈ ಒಕ್ಕೂಟಕ್ಕೆ ಸೇರದ ಬೇರೆ ರಾಷ್ಟ್ರಗಳು ಸಹ ಇದನ್ನು ಜಾರಿ ಮಾಡಬಹುದು ಅಥವಾ ಮಾಡದೆ ಇರಬಹುದು. ಆದರೆ, ಇಲ್ಲಿ ಫೋನ್ ತಯಾರಕರ ನಿರ್ಧಾರವನ್ನು ಸಹ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ಸ್ಮಾರ್ಟ್ ಫೋನ್ ತಯಾರಕರು ನಿರ್ದಿಷ್ಟವಾಗಿ ಬ್ಯಾಟರಿಗಾಗಿ ಪ್ರತ್ಯೇಕ ಪ್ರದೇಶಗಳು ಇರುವ ಹಾಗೆ ಫೋನ್‌ಗಳನ್ನು ವಿನ್ಯಾಸಗೊಳಿಸುತ್ತಿಲ್ಲ.
ಇದರಿಂದ ಲಾಭ ಏನು?: ಈ ಕಾನೂನಿನ ಪ್ರಮುಖ ಗುರಿ ಏನೆಂದರೆ ಪರಿಸರ ತ್ಯಾಜ್ಯವನ್ನು ಕಡಿತಗೊಳಿಸುವುದು. ಆದರ, ಇದು ಕೇವಲ ಫೋನ್‌ಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಇತರೆ ಸ್ಮಾರ್ಟ್ ಡಿವೈಸ್‌ಗಳೂ ಸಹ ಸೇರಿವೆ. ಅದಾಗ್ಯೂ ಎಮ್‌ಇಪಿ ಗಳು ಬ್ಯಾಟರಿಗಳ ಬಗ್ಗೆ ಹೆಚ್ಚು ಜವಾಬ್ದಾರಿಯನ್ನು ಹೊಂದಿರಬೇಕೆಂದು ಟೆಕ್ ಉದ್ಯಮಗಳನ್ನು ಆಗ್ರಹಿಸುತ್ತಾರೆ. ಯಾಕೆಂದರೆ ಇವರು ಕಟ್ಟುನಿಟ್ಟಾದ ತ್ಯಾಜ್ಯ ಸಂಗ್ರಹಣೆ ಗುರಿ, ತ್ಯಾಜ್ಯ ಮರುಬಳಕೆ ಸೇರಿದಂತೆ ಮಹತ್ವದ ಕಾರ್ಯಗಳ ಮೇಲೆ ಕೇಂದ್ರೀಕರಿಸಿದ್ದಾರೆ.
ಈಗಿರುವ ಫೋನ್‌ಗಳಲ್ಲಿ ರಿಮೂವಬಲ್ ಬ್ಯಾಟರಿ ಆಯ್ಕೆ ಯಾಕಿಲ್ಲ?: ಮೊದಲೇ ತಿಳಿಸಿದಂತೆ ಈ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಬ್ಯಾಟರಿಗಳನ್ನು ಬದಲಾಯಿಸಬಹುದಿತ್ತು. ಇದಕ್ಕಾಗಿ ಯಾವುದೇ ವಿಶೇಷವಾದ ಟೂಲ್ಸ್‌ಗಳ ಅಗತ್ಯ ಇರಲಿಲ್ಲ. ಇದಕ್ಕಾಗಿ ಹೀಟ್ ಗನ್‌ಗಳು ಅಥವಾ ವಿಶೇಷ ತರಬೇತಿ ಅಗತ್ಯವಿರಲಿಲ್ಲ. ಆದರೆ, ತೆಳುವಾದ ಮತ್ತು ಹಗುರವಾದ ಸ್ಮಾರ್ಟ್‌ಡಿವೈಸ್ ಬಳಕೆ ಹೆಚ್ಚಾದಂತೆ ಈ ನಿಯಮ ಬದಲಾಗಿ ಬ್ಯಾಟರಿಯನ್ನು ತೆಗೆಯಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕೆಂದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಚಿಕ್ಕ ಒಳಾಂಗಣ ಪ್ರದೇಶ ಹೊಂದಿದ್ದು, ಹಿಂಭಾಗದ ಕವರ್ ಅನ್ನು ತೆಗೆದುಹಾಕುವುದು ಕಷ್ಟಕರವಾದ ಕೆಲಸವಾಗುತ್ತದೆ.

ಜಲನಿರೋಧಕ ಮತ್ತು ಬಾಳಿಕೆ: ಅನೇಕ ಆಧುನಿಕ ಸ್ಮಾರ್ಟ್‌ಫೋನ್‌ಗಳನ್ನು ಜಲನಿರೋಧಕ ಅಥವಾ ಡಸ್ಟ್-ನಿರೋಧಕವಾಗಿ ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಫೋನ್‌ಗಳು ರೇಟಿಂಗ್ ಅನ್ನು ಸಹ ಹೊಂದಿರಲಿವೆ. ಈ ಕಾರಣಕ್ಕಾಗಿ ತೆಗೆಯಲಾಗದ ಬ್ಯಾಟರಿಗಳೊಂದಿಗೆ ಫೋನ್ ಪ್ಯಾಕ್ ಆಗುತ್ತದೆ. ಇನ್ನು ಇಷ್ಟು ಭದ್ರವಾಗಿ ಮುಚ್ಚುವುದು ನೀರಿನ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಬ್ಯಾಟರಿ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಾಗುತ್ತದೆ.
ಇದಿಷ್ಟು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ತೆಗೆಯಲಾಗದ ಬ್ಯಾಟರಿ ಆಯ್ಕೆ ಇರುವ ಸ್ಮಾರ್ಟ್‌ಡಿವೈಸ್‌ಗಲ್ಲಿ ತಯಾರಕರು ವಾಯರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆ ಹಾಗೂ ದೊಡ್ಡ ಬ್ಯಾಟರಿ ಗಾತ್ರಗಳಂತಹ ಹೆಚ್ಚುವರಿ ಫೀಚರ್ಸ್ ಅನ್ನು ನೀಡುತ್ತಿರುವುದು ಒಂದು ರೀತಿಯ ವರದಾನವೂ ಹೌದು. ಹಾಗೂ ತೆಗೆಯಬಹುದಾದ ಬ್ಯಾಟರಿಯೊಂದಿಗೆ ಫೋನ್ ಅನ್ನು ವಿನ್ಯಾಸಗೊಳಿಸಲು ಬ್ಯಾಟರಿ ಲ್ಯಾಚ್‌ಗಳು ಮತ್ತು ಕನೆಕ್ಟರ್‌ಗಳಂತಹ ಹೆಚ್ಚುವರಿ ಘಟಕಗಳ ಅಗತ್ಯವಿರುತ್ತದೆ. ಆದರೆ ಇದಕ್ಕೆ ಕಡಿಮೆ ಘಟಕಗಳ ಅಗತ್ಯ ಇದೆ.


Click it and Unblock the Notifications








