ಕಡಿಮೆ ಬೆಲೆಯಲ್ಲಿ 'ಸೌಂಡ್‌ಒನ್' ಇಯರ್‌ಬಡ್ಸ್‌ ಬಿಡುಗಡೆ!..ಸಖತ್‌ ಸೌಂಡ್‌!

|

ಸದ್ಯ ಇಯರ್‌ಬಡ್ಸ್‌ ಡಿವೈಸ್‌ಗಳು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್‌ಫೋನ್‌ ಬಳಕೆದಾರರು ಅದರಲ್ಲೂ ಹೆಚ್ಚಿನ ಫೋನ್‌ ಕರೆಗಳನ್ನು ಪಡೆಯುವವರು ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳಿಗೆ ಮೋರೆ ಹೋಗುವುದು ಸಾಮಾನ್ಯವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಗಳ ತರಹೇವಾರಿ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಲಭ್ಯ ಇವೆ. ಆದ್ರೆ ಇದೀಗ ಹಾಂಗ್‌ಕಾಂಗ್‌ ಮೂಲಕದ ಆಡಿಯೊ ಕಂಪನಿಯು ಸೇರ್ಪಡೆಯಾಗಿದೆ.

ಕಡಿಮೆ ಬೆಲೆಯಲ್ಲಿ 'ಸೌಂಡ್‌ಒನ್' ಇಯರ್‌ಬಡ್ಸ್‌ ಬಿಡುಗಡೆ!..ಸಖತ್‌ ಸೌಂಡ್‌!

ಹೌದು, ಹಾಂಗ್‌ಕಾಂಗ್ ಮೂಲದ 'ಸೌಂಡ್‌ಒನ್' ಕಂಪನಿಯು ಭಾರತೀಯ ಮಾರುಕಟ್ಟೆಗೆ 'ಸೌಂಡ್‌ಒನ್ X6' ಹೆಸರಿನ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ ಡಿವೈಸ್‌ ಬಿಡುಗಡೆ ಮಾಡಿದೆ. ಬ್ಲೂಟೂತ್ ಕನೆಕ್ಟಿವಿಟಿ ಸೌಲಭ್ಯ ಪಡೆದಿರುವ ಈ ಡಿವೈಸ್‌ಗಳು ಕಂಫರ್ಟ್‌ ಡಿಸೈನ್‌ ಹೊಂದಿದ್ದು, ಕಿವಿಯಿಂದ ಜಾರದ ರಚನೆಯನ್ನು ಪಡೆದಿವೆ. ಹಾಗಾದರೇ ಸೌಂಡ್‌ಒನ್‌ X6 ಇಯರ್‌ಬಡ್ಸ್‌ ಇತರೆ ವಿಶೇಷತೆಗಳೆನು ಮತ್ತು ಇತರೆ ಬೆಸ್ಟ್‌ ಟ್ರೂ ಇಯರ್‌ಬಡ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಸೌಂಡ್ಒನ್‌ X6

ಸೌಂಡ್ಒನ್‌ X6

ವಾಯರ್‌ಲೆಸ್‌ ಬ್ಲೂಟೂತ್ ಸೌಲಭ್ಯವ ಈ ಇಯರ್‌ಬಡ್ಸ್‌ ಡಿವೈಸ್‌ ಅತ್ಯುತ್ತಮ ಸೌಂಡ್‌ ಕ್ವಾಲಿಟಿಯನ್ನು ಹೊಂದಿದ್ದು, ಜೊತೆಗೆ ಬ್ಯಾಟರಿ ಬ್ಯಾಕ್‌ಅಪ್‌ ಸಹ ಬೆಸ್ಟ್‌ ಇನ್‌ ಕ್ಲಾಸ್‌ ಸ್ಥಿತಿಗತಿಯನ್ನು ಒಳಗೊಂಡಿದೆ. ಮೂರು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಪಡೆದಿಕೊಂಡಿದ್ದು, ಬ್ಯಾಟರಿಯು 0 ಇಂದ ಶೇ. 100% ಚಾರ್ಜ್‌ ಆಗಲು ಕೇವಲ ಎರಡು ಗಂಟೆ ಸಮಯ ಮಾತ್ರ ತೆಗೆದುಕೊಳ್ಳುತ್ತದೆ. ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೇ ನಿರಂತರ 5 ಗಂಟೆಗಳ ಕಾಲ ಮ್ಯೂಸಿಕ್ ಕೇಳಲು ಬ್ಯಾಟರಿ ಬ್ಯಾಕ್‌ಅಪ್‌ ಬೆಂಬಲ ನೀಡಲಿದೆ.

ಸೌಂಡ್‌ಒನ್ X6 ಲಭ್ಯತೆ ಮತ್ತು ಬೆಲೆ

ಸೌಂಡ್‌ಒನ್ X6 ಲಭ್ಯತೆ ಮತ್ತು ಬೆಲೆ

ಹಾಂಗ್‌ಕಾಂಗ್‌ ಮೂಲದ ಸೌಂಡ್‌ಒನ್‌ X6 ಟ್ರೂ ಇಯರ್‌ಬಡ್ಸ್‌ ಡಿವೈಸ್‌ 7,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದ್ದು, ಆರಂಭದಲ್ಲಿ ಡಿಸ್ಕೌಂಟ್‌ ಆಫರ್‌ ಸಹ ದೊರೆಯಲಿದೆ. ಹಾಗೆಯೇ ಈ ಡಿವೈಸ್‌ ಇದೀಗ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಮ್ ಸೇರಿದಂತೆ ಜನಪ್ರಿಯ ಇ ಕಾಮರ್ಸ್‌ ಜಾಲತಾಣಗಳಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯಿಂದ ಒಂದು ವರ್ಷ ವಾರಂಟಿ ಸಹ ಇದೆ.

ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌! ಓದಿರಿ : ಫೋನಿನಲ್ಲಿ ನೆಟ್‌ಫ್ಲೆಕ್ಸ್ ವೀಕ್ಷಿಸಲು ಬೆಸ್ಟ್‌ ಪ್ರೀಪೇಡ್‌ ಪ್ಲ್ಯಾನ್ಸ್‌!

ಸೋನಿ WF-1000XM3

ಸೋನಿ WF-1000XM3

ಸೋನಿ ಕಂಪನಿಯ ಈ ಟ್ರೂ ಇಯರ್‌ಬಡ್ಸ್‌ 18ಗಂಟೆಗಳ ಬ್ಯಾಟರಿ ಲೈಫ್‌ ಅನ್ನು ಒಳಗೊಂಡಿದ್ದು, ಹಾಗೆಯೇ ಆನ್‌ಬೋರ್ಡ್‌ ಬ್ಯಾಟರಿ ಲೈಫ್‌ 6ಗಂಟೆಗಳಾಗಿವೆ. ಸೌಂಡ್‌ ಕ್ವಾಲಿಟಿಯು ಅತ್ಯುತ್ತಮವಾಗಿದ್ದು, 6mm ಸಾಮರ್ಥ್ಯದ ಆಡಿಯೊ ಡ್ರೈವರ್ಸ್‌ಗಳನ್ನು ಹೊಂದಿದೆ. ಡಿವೈಸ್‌ 20-20,000Hz ಫ್ರಿಕ್ವೇನ್ಸಿ ತರಂಗಾಂತರಗಳಲ್ಲಿದ್ದು, ನಾಯಿಸ್‌ ಕ್ಯಾನ್ಸೆಲೇಶನ್ ಸೌಲಭ್ಯವನ್ನು ಪಡೆದಿದೆ.

ಜಬ್ರಾ ಇಲೇಟ್‌ 65t

ಜಬ್ರಾ ಇಲೇಟ್‌ 65t

ಜಬ್ರಾ ಕಂಪನಿಯ ಇಲೇಟ್‌ 65t ಟ್ರೂ ಇಯರ್‌ಬಡ್ಸ್‌ 25 ಗಂಟೆಗಳ ಬ್ಯಾಟರಿ ಲೈಫ್‌ ಅನ್ನು ಒಳಗೊಂಡಿದ್ದು, ಹಾಗೆಯೇ ಆನ್‌ಬೋರ್ಡ್‌ ಬ್ಯಾಟರಿ ಲೈಫ್‌ 2.5 ಗಂಟೆಗಳಾಗಿವೆ. ಸೌಂಡ್‌ ಕ್ವಾಲಿಟಿಯು ಅತ್ಯುತ್ತಮವಾಗಿದ್ದು, ಆಡಿಯೊ ಡ್ರೈವರ್ಸ್‌ಗಳು ಉತ್ತಮವಾಗಿವೆ. 8m ವಾಯರ್‌ಲೆಸ್‌ ವ್ಯಾಪ್ತಿಯನ್ನು ಪಡೆದಿದ್ದು, ನಾಯಿಸ್‌ ಕ್ಯಾನ್ಸೆಲೇಶನ್ ಸೌಲಭ್ಯವನ್ನು ಸಹ ಪಡೆದಿದೆ.

ಬಿಟ್ಸ್‌ ಪವರ್‌ಬಿಟ್ಸ್‌ ಪ್ರೊ

ಬಿಟ್ಸ್‌ ಪವರ್‌ಬಿಟ್ಸ್‌ ಪ್ರೊ

ಬಿಟ್ಸ್‌ ಕಂಪನಿಯ ಪವರ್‌ಬಿಟ್ಸ್‌ ಪ್ರೊ ಇಯರ್‌ಬಡ್ಸ್‌ ಡಿವೈಸ್‌ 16 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, 9ಗಂಟೆಗಳ ಆನ್‌ಬೋರ್ಡ್‌ ಬ್ಯಾಟರಿಶಕ್ತಿ ಹೊಂದಿದೆ. 20-20,000Hz ಫ್ರಿಕ್ವೇನ್ಸಿ ವ್ಯಾಪ್ತಿಯನ್ನು ಹೊಂದಿದ್ದು, ಅತ್ಯುತ್ತಮ ಸೌಂಡ್‌ ಡ್ರೈವರ್ಸ್‌ಗಳ ಬೆಂಬಲ ಸಹ ಪಡೆದುಕೊಂಡಿದೆ. ಜೊತೆಗೆ ನಾಯಿಸ್‌ ಕ್ಯಾನ್ಸೆಲೇಶನ್ ಸೌಲಭ್ಯವನ್ನು ಸಹ ಪಡೆದಿದೆ.

ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ! ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಬಡ್ಸ್‌

ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಬಡ್ಸ್‌

7 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿರುವ ಸ್ಯಾಮ್‌ಸಂಗ್‌ ಗ್ಯಾಲ್ಯಾಕ್ಸಿ ಬಡ್ಸ್‌ ಡಿವೈಸ್‌ 6 ಗಂಟೆಗಳ ಆನ್‌ಬೋರ್ಡ್‌ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 20-20,000Hz ಫ್ರಿಕ್ವೇನ್ಸಿ ತರಂಗಾಂತರ ವ್ಯಾಪ್ತಿಯನ್ನು ಹೊಂದಿದ್ದು, ಡೈನಾಮಿಕ್ ಸೌಂಡ್‌ ಔಟ್‌ಪುಟ್‌ ನೀಡಲಿದೆ. 5.8mm ಆಡಿಯೊ ಡ್ರೈವರ್ಸ್‌ಗಳನ್ನು ಒಳಗೊಂಡಿದೆ. ಪ್ರತಿ ಬಡ್ಸ್ ತೂಕವು 5.6ಗ್ರಾಂಆಗಿದೆ.

ಓದಿರಿ : ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್! ಓದಿರಿ : ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್!

Best Mobiles in India

English summary
According to the announcement, the company has priced the Bluetooth earphones at Rs 7,990. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X