ಆನ್‌ಲೈನ್‌ನಲ್ಲಿ ಫ್ರಿಜ್‌ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಅಚ್ಚರಿ; ಕೈ ಸೇರಿತು ಲಕ್ಷ ಹಣ!

|

ಪ್ರಸ್ತುತ ಜನರು ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿ ಮಾಡಲು ಮುಂದಾಗುತ್ತಾರೆ. ಆನ್‌ಲೈನ್‌ ಮೂಲಕ ಖರೀದಿ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡಿರುವ ವರದಿಗಳನ್ನು ಕೇಳಿರುತ್ತಿರಿ. ಆದರೆ ಇಲ್ಲೊಬ್ಬ ಆಸಾಮಿ ಆನ್‌ಲೈನ್‌ ಮೂಲಕ ಫ್ರಿಜ್ ಖರೀದಿಸಿದ್ದಾನೆ. ಫ್ರಿಜ್ ಜೊತೆಗೆ ಕಂತೆ ಕಂತೆ ನೋಟು ಆತನ ಕೈ ಸೇರಿವೆ.

ಆನ್‌ಲೈನ್‌ನಲ್ಲಿ ಫ್ರಿಜ್‌ ಖರೀದಿಸಿದ ವ್ಯಕ್ತಿಗೆ ಅಚ್ಚರಿ; ಕೈ ಸೇರಿತು ಲಕ್ಷ ಹಣ!

ಹೌದು, ಆನ್‌ಲೈನ್‌ ಮೂಲಕ ಖರೀದಿಸಿದ ಫ್ರಿಜ್ ‌ನಿಂದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬನ ಅದೃಷ್ಟ ಬದಗಿ ಬಂದಿದ್ದು, ಬರೋಬ್ಬರಿ 96 ಲಕ್ಷ ರೂ. ಹಣ ಆತನಿಗೆ ಲಭಿಸಿದೆ. ವರದಿಯ ಪ್ರಕಾರ, ಆ ವ್ಯಕ್ತಿ ದಕ್ಷಿಣ ಕೊರಿಯಾದ ಜೆಜು ದ್ವೀಪದ ನಿವಾಸಿಯಾಗಿದ್ದು, ಈ ಹಣದ ಬಗ್ಗೆ ಆತನಿಗೆ ತಿಳಿದಿರಲಿಲ್ಲ. ಆ ವ್ಯಕ್ತಿ ಆಗಸ್ಟ್ 6 ರಂದು ನಗದು ರಸೀದಿ ವರದಿ ಸಲ್ಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಫ್ರಿಜ್ ಸ್ವಚ್ಛಗೊಳಿಸುವಾಗ ಇದರಲ್ಲಿ 96 ಲಕ್ಷ ರೂಪಾಯಿ ಪತ್ತೆಯಾಗಿದೆ ಎಂದು ತಿಳಿಸಿದ್ದಾನೆ.

ಆನ್‌ಲೈನ್‌ನಲ್ಲಿ ಫ್ರಿಜ್‌ ಖರೀದಿಸಿದ ವ್ಯಕ್ತಿಗೆ ಅಚ್ಚರಿ; ಕೈ ಸೇರಿತು ಲಕ್ಷ ಹಣ!

ತಾನು ಸ್ವಚ್ಛಗೊಳಿಸಿದ್ದ ಫ್ರಿಡ್ಜ್ ಇತ್ತೀಚೆಗಷ್ಟೇ ಆನ್‌ಲೈನ್ ಮೂಲಕ ಖರೀದಿಸಿದ್ದು ಎಂದು ಆತ ತಿಳಿಸಿದ್ದಾನೆ. ಎಂಬಿಸಿ ನ್ಯೂಸ್ ನಲ್ಲಿ ಬಂದ ವರದಿಯ ಪ್ರಕಾರ, ಹಣವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಪ್ಯಾಕ್ ಮಾಡಿ ಫ್ರಿಜ್ ನ ಕೆಳಭಾಗಕ್ಕೆ ಅಂಟಿಸಲಾಗಿತ್ತು. ಈ ನೋಟುಗಳನ್ನು ಫ್ರಿಡ್ಜ್‌ಗೆ ಅಂಟಿಸಲಾಗಿತ್ತು. ಹೀಗಿದ್ದರೂ ಆ ವ್ಯಕ್ತಿ ಈ ಹಣವನ್ನು ಪೊಲೀಸರಿಗೆ ನೀಡಿದ್ದಾನೆ. ಬಳಿಕ ಪೊಲೀಸರು ರೆಫ್ರಿಜರೇಟರ್‌ ಡೆಲಿವರಿ ಮಾಡಿದ ಆನ್‌ಲೈನ್ ಮಾರಾಟಗಾರರನ್ನು ಗುರುತಿಸಿ ವಿಚಾರಣೆಗೆ ಆದೇಶಿಸಲಾಗಿದೆ.

ಆನ್‌ಲೈನ್‌ನಲ್ಲಿ ಫ್ರಿಜ್‌ ಖರೀದಿಸಿದ ವ್ಯಕ್ತಿಗೆ ಅಚ್ಚರಿ; ಕೈ ಸೇರಿತು ಲಕ್ಷ ಹಣ!

ಈ ಪ್ರಕರಣದ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು ಇದು ಬಹಳ ದೊಡ್ಡ ಮೊತ್ತವಾಗಿದ್ದು, ಅಪರೂಪದ ಪ್ರಕರಣವಾಗಿದೆ. ಫ್ರಿಡ್ಜ್‌ನ ಮಾಲೀಕರು ಪೊಲೀಸರಿಗೆ ಹಣವನ್ನು ಹಿಂದಿರುಗಿಸಿದರೂ, ಗ್ರಾಹಕ ಮತ್ತೆ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ದಕ್ಷಿಣ ಕೊರಿಯಾದ ಲಾಸ್ಟ್ ಅಂಡ್ ಫೌಂಡ್ ಆಕ್ಟ್ ಅಡಿಯಲ್ಲಿ, ಮಾಲೀಕರನ್ನು ಪತ್ತೆ ಮಾಡಲಾಗದಿದ್ದರೆ, ಇದನ್ನು ಪಡೆದವರಿಗೆ ಈ ಹಣ ಉಳಿಸಿಕೊಳ್ಳುವ ಹಕ್ಕಿದೆ ಎಂದಿದ್ದಾರೆ.

ಇನ್ನು ಈ ಹಣದ ಮಾಲೀಕ ಪತ್ತೆಯಾದರೂ ಒಟ್ಟು ಮೊತ್ತದ 22% ಅನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಬಳಿಕ ಬಾಕಿ ಮೊತ್ತವನ್ನು ನೀಡಲಾಗುತ್ತದೆ. ಇನ್ನು ಈ ಹಣದ ಹಿಂದೆ ಕ್ರಿಮಿನಲ್ ಸಂಪರ್ಕವಿದ್ದರೆ ಅದನ್ನು ಯಾರಿಗೂ ನೀಡಲಾಗುವುದಿಲ್ಲ ಎನ್ನಲಾಗಿದೆ.

Best Mobiles in India

English summary
South Korean Man Finds Money In Bought Used Refrigerator.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X