204 ದಿನಗಳ ನಂತರ ಭೂಮಿಗಿಳಿದ ಗಗನಯಾತ್ರಿಗಳು!..ವೀಡಿಯೋ ನೋಡಿ!

|

204 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅಧ್ಯಯನ ನಡೆಸಿದ್ದ ಗಗನಯಾತ್ರಿಗಳು ಸೋಯುಜ್ ಕ್ಯಾಪ್ಸುಲ್ ಮೂಲಕ ಯಶಸ್ವಿಯಾಗಿ ಭೂಮಿಗೆ ಬಂದಿಳಿದಿರುವ ವಿಡಿಯೋ ಬಿಡುಗಡೆಯಾಗಿದೆ. ಗಗನಯಾತ್ರಿ ಅನ್ನೆ ಮೆಕ್‌ಕ್ಲೇನ್, ಕೆನಡಿಯನ್‌ ಫ್ಲೈಟ್ ಎಂಜಿನಿಯರ್‌ ಡೇವಿಡ್‌ ಸೈಂಟ್‌ ಜಾಕ್ಸ್ ಹಾಗೂ ರಷ್ಯಾದ ಒಲೆಗ್ ಕೊನೊನೆಂಕೊ ಅವರುಗಳು ಸೋಯುಜ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಇಳಿದಿದ್ದಾರೆ.

204 ದಿನಗಳ ನಂತರ ಭೂಮಿಗಿಳಿದ ಗಗನಯಾತ್ರಿಗಳು!..ವೀಡಿಯೋ ನೋಡಿ!

ಈ ಐತಿಹಾಸಿಕ ಘಟನೆಯನ್ನು ನಾಸಾ ಸಹಾಯದಿಂದ ಸ್ಪೇಸ್‌ ಎಕ್ಸ್‌ ಸುದ್ದಿ ಸಂಸ್ಥೆ ಲೈವ್‌ ಕವರೇಜ್ ನೀಡಿದ್ದು, ಕ್ಯಾಪ್ಸುಲ್‌ಗಳು ಕಜಕಿಸ್ತಾನದ ಖಾಲಿ ಮೈದಾನದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ. ಈ ಪ್ರಯಾಣ ಒಟ್ಟಾರೆ ಸುಮಾರು ಮೂರೂವರೆ ಗಂಟೆಗಳಷ್ಟಿರುತ್ತದೆ. ಗಗನಯಾತ್ರಿಗಳ ಜೀವನದ ಅತ್ಯಂತ ಕ್ಲಿಷ್ಟ ಹಾಗೂ ಶ್ರೇಷ್ಠವಾದ ಸಮಯ ಇದಾಗಲಿದೆ. ಈ ಅನುಭವ ರೋಚಕ ಎಂದು ನಾಸಾ ವಿವರಿಸಿದೆ.

ಇದೇ ಮೊದಲ ಬಾರಿ ಕ್ರ್ಯು ಬ್ಲಾಸ್ಟ್‌ವಿಧಾನದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಇಳಿಸಲಾಗಿದೆ. ಬಾಹ್ಯಾಕಾಶ ಕೇಂದ್ರದಿಂದ ಕ್ಯಾಪ್ಸುಲ್ ಬೇರ್ಪಟ್ಟ ಬಳಿಕ ಮೂರು ಹಂತಗಳಲ್ಲಿ ವೇಗ ಕಡಿಮೆ ಮಾಡುತ್ತಾ ಭೂಮಿಗೆ ಬರುವಂತೆ ವಿನ್ಯಾಸ ಮಾಡಲಾಗಿದೆ. ಭೂಮಿಯ ವಾತಾವರಣಕ್ಕೆ ತಲುಪುವ ವೇಳೆ ಕ್ಯಾಪ್ಸುಲ್‌ನ ವೇಗ ಪ್ರತಿ ಗಂಟೆಗೆ 286 ಮೈಲಿಗಳಷ್ಟು ಇರುವುದರಿಂದ ಈ ವೇಳೆ ಕ್ಯಾಪ್ಸುಲ್ ಅತಿಯಾಗಿ ಬಿಸಿಯಾಗಲ್ಪಡುತ್ತದೆ.

ಪೂರ್ವನಿರ್ಧರಿತವಾಗಿ ಈ ಕ್ಯಾಪ್ಸುಲ್ ಹೊರ ಪದರ ಬೆಂಕಿಯ ಚೆಂಡಿನಂತೆ ಉರಿಯುತ್ತದೆ. ಒಳಭಾಗದಲ್ಲಿರುವ ಗಗನಯಾತ್ರಿಗಳು ಸುರಕ್ಷಿತಕ್ಕೆ ಕ್ಯಾಪ್ಸುಲ್‌ನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿರಲಾಗಿರುತ್ತದೆ. ಸುಮಾರು 62 ಮೈಲಿ ಎತ್ತರದಲ್ಲಿ ಈ ಕ್ಯಾಪ್ಸುಲ್ ಹೊರ ಪದರ ಬೆಂಕಿಯ ಚೆಂಡಿನಂತೆ ಉರಿಯುತ್ತದೆ. ಸುಮಾರು ಆರು ನಿಮಿಷಗಳ ಬಳಿಕ ಲ್ಯಾಂಡಿಂಗ್‌ ಪ್ರಕ್ರಿಯೆಯ ಭಾಗವಾಗಿ ಕ್ಯಾಪ್ಸುಲ್‌ನ ಪ್ಯಾರಚೂಟ್‌ ತೆರಲ್ಪಟ್ಟು ವೇಗ ಇಳಿಕೆಯಾಗುತ್ತದೆ.

204 ದಿನಗಳ ನಂತರ ಭೂಮಿಗಿಳಿದ ಗಗನಯಾತ್ರಿಗಳು!..ವೀಡಿಯೋ ನೋಡಿ!

ಓದಿರಿ: ಭಾರತದ ಬಾಹ್ಯಾಕಾಶ ನಿಲ್ದಾಣದ ಸುದ್ದಿ ಕೇಳಿ ಇಡೀ ವಿಶ್ವಕ್ಕೇ ಅಚ್ಚರಿ!..ಏಕೆ ಗೊತ್ತಾ?

ಕ್ಯಾಪ್ಸುಲ್ ಕೆಳಭಾಗಕ್ಕೆ ಬರುತ್ತಿದ್ದಂತೆಯೇ ಆರು ಪ್ರೊಪಲೆಂಟ್ ರಾಕೆಟ್‌ ಮೋಟರ್‌ಗಳು ಆರಂಭಗೊಂಡು ಗಂಟೆಗೆ ಮೂರು ಮೈಲಿಯಷ್ಟು ವೇಗಕ್ಕೆ ಇಳಿಕೆಯಾಗಿ, ಸಾಫ್ಟ್‌ ಲ್ಯಾಂಡಿಂಗ್‌ ಮೂಲಕ ಭೂಮಿಯನ್ನು ಸ್ಪರ್ಶಿಸಿದೆ ಎಂದು ನಾಸಾ ಕ್ಯಾಪ್ಸುಲ್‌ನ ಹಿಂದಿರುಗಿದ ರೋಚಕ ಪ್ರಯಾಣವನ್ನು ವಿವರಿಸಿದೆ. ಕ್ಯಾಪ್ಸುಲ್ ಅನ್ನು ಕಜಕಿಸ್ತಾನದ ಖಾಲಿ ಮೈದಾನದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.

Best Mobiles in India

English summary
The crew completed a 204-day mission spanning 3264 orbits of the Earth and a ... Three astronauts safely returned to Earth on Tuesday after spending more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X