ಭಾರತದ ಬಾಹ್ಯಾಕಾಶ ನಿಲ್ದಾಣದ ಸುದ್ದಿ ಕೇಳಿ ಇಡೀ ವಿಶ್ವಕ್ಕೇ ಅಚ್ಚರಿ!..ಏಕೆ ಗೊತ್ತಾ?

|

ಬಾಹ್ಯಾಕಾಶ ಪ್ರಪಂಚದಲ್ಲಿ ನಾವೇನು ಕಡಿಮೆ ಇಲ್ಲ ಎಂದು ಈಗಾಗಲೇ ಸಾಧಿಸಿ ತೋರಿಸಿರುವ ನಮ್ಮ ಇಸ್ರೊ ಇದೀಗ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಮುಂದಾಗಿದೆ. 2030ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಲು ಭಾರತ ಉದ್ದೇಶಿಸಿದೆ ಎಂದು ಇಸ್ರೊ ಮುಖ್ಯಸ್ಥ ಕೆ.ಶಿವನ್ ಗುರುವಾರ ಹೇಳಿದ್ದಾರೆ. ಗಗನಯಾನ ಯೋಜನೆ ಬಳಿಕ ಸರ್ಕಾರಕ್ಕೆ ಬಾಹ್ಯಾಕಾಶ ನಿಲ್ದಾಣದ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 5 ರಿಂದ 7 ವರ್ಷಗಳು ಬೇಕಾಗಬಹುದು ಎಂದು ಶಿವನ್ ಹೇಳಿದ ನಂತರ ವಿಶ್ವವೇ ಭಾರತದತ್ತ ತಿರುಗಿ ನೋಡಿದೆ.

ಹೌದು, ಸದ್ಯ ಇಸ್ರೊ ವಿಜ್ಞಾನಿಗಳು ಚಂದ್ರಯಾನ-2 ಯೋಜನೆಯಲ್ಲಿ ತೊಡಗಿಕೊಂಡಿದ್ದು, ಈ ಯೋಜನೆ ಬಳಿಕ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಆದ್ಯತೆ ನೀಡಲಿದ್ದಾರೆ. ನಂತರ ಸಂಪೂರ್ಣವಾಗಿ ಭಾರತಕ್ಕೆ ಸೀಮಿತವಾಗಿರುವ 20 ಟನ್‌ ತೂಕದ ಬಾಹ್ಯಾಕಾಶ ನಿಲ್ದಾಣ ಹೊಂದುವ ಉದ್ದೇಶವನ್ನು ಇಸ್ರೊ ಹೊಂದಿದೆ. ಸುಮಾರು 400 ಕಿಲೋ ಮೀಟರ್‌ ದೂರದಲ್ಲಿ ನಿಲ್ದಾಣವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, 15-20 ದಿನಗಳ ಗನಯಾತ್ರಿಗಳು ಕಾಲ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಶಿವನ್ ಅವರು ತಿಳಿಸಿದ್ದಾರೆ.

ಭಾರತದ ಬಾಹ್ಯಾಕಾಶ ನಿಲ್ದಾಣದ ಸುದ್ದಿ ಕೇಳಿ ಇಡೀ ವಿಶ್ವಕ್ಕೇ ಅಚ್ಚರಿ!.ಏಕೆ ಗೊತ್ತಾ?

ಇಲ್ಲಿಯವರೆಗೂ ಸಾಧನೆಗಳ ಮೆಟ್ಟಿಲುಗಳಲ್ಲೇ ಹತ್ತಿ ಬಂದಿರುವ ಇಸ್ರೊವಿನ ಈ ಯೋಜನೆ ಈಗ ಗಗನಕುಸುಮವಾಗಿ ಕಾಣುತ್ತಿದೆ. ಏಕೆಂದರೆ, ಈಗಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮಾನವ ಭೂಮಿಯ ಮೇಲೆ ನಿರ್ಮಿಸಿರುವ ಅತ್ಯಂತ ದುಬಾರಿ ವಸ್ತು ಆಗಿರುವುದರಿಂದ, ಇಂತಹದೊಂದು ಯೋಜನೆಗೆ ಇಸ್ರೊ ಅಡಿಪಾಯ ಹಾಕುತ್ತಿದೆ ಎಂದಾಗ ವಿಶ್ವವೇ ಕಣ್ಣರಳಿಸಿ ನೋಡುತ್ತಿದೆ. ಮಾನವನ ಕಲ್ಪನೆ ಮೀರಿದ ಮತ್ತು ಭೇದಿಸಲು ಸಾಧ್ಯವಾಗದ ಒಂದು ಕಲ್ಪನೆಯನ್ನೇ ನಿಜ ಮಾಡಿದ ಈ 'ಸ್ಪೇಸ್ ಸ್ಟೇಷನ್' ಹುಟ್ಟಿದ ಕಥೆಯೇ ರೂಮಾಂಚನಕಾರಿಯಾಗಿದೆ.

ಅಂತಾರಾಷ್ಟ್ರಿಯ ನಿಲ್ದಾಣದ ಬಗ್ಗೆ ನಾವು ದಿನವೂ ಸುದ್ದಿಗಳನ್ನು ಕೇಳುತ್ತಲೇ ಇದ್ದರೂ ಸಹ ಅದು ಹೇಗಿದೆ ಎಂಬ ಕಲ್ಪನೆ ಹೆಚ್ಚು ಜನರಿಗೆ ಇರುವುದಿಲ್ಲ. ಸುಮಾರು 450 ಟನ್ ತೂಕದ ವಸ್ತುವೊಂದನ್ನು ಮಾನವನು ಅಂತರಿಕ್ಷದಲ್ಲಿ ಹಾರಿಬಿಟ್ಟಿದ್ದಾನೆ ಎಂಬ ಕಲ್ಪನೆಯೇ ರೊಮಾಂಚಕವಾದರೂ ಈ ಬಗ್ಗೆ ತಿಳಿಯದವರೇ ಹೆಚ್ಚು. ಹಾಗಾಗಿ, ಇಂದಿನ ಲೇಖನದಲ್ಲಿ ಇತಿಹಾಸದಲ್ಲೇ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತುವಿನ ರೋಮಾಂಚಕ ಕಥೆಯೊಂದನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ.

ಬಾಹ್ಯಾಕಾಶ ನಿಲ್ದಾಣ ಎಂಬ ಕಲ್ಪನೆ!

ಬಾಹ್ಯಾಕಾಶ ನಿಲ್ದಾಣ ಎಂಬ ಕಲ್ಪನೆ!

ವಿಜ್ಞಾನದ ಪ್ರಗತಿ ಹೊಂದಿದಂತೆ ಅಂತರಿಕ್ಷದಲ್ಲಿ ಮಾನವನ ಚಟುವಟಿಕೆಗಳು ಹೆಚ್ಚಿದವು. ಅಂತರಿಕ್ಷದ ರಹಸ್ಯವರಿಯಲು ಹೆಜ್ಜೆಇಟ್ಟ ಮಾನವ ಮೊದಲು ಅಂತರಿಕ್ಷಕ್ಕೆ ಹಾರಿ ಇನ್ನೂ ನೂರು ವರ್ಷಗಳು ಕಳೆದಿಲ್ಲವಾದರೂ ಮಾನವ ಸಾಧನೆ ಅಪಾರವಾಗಿತ್ತು. ರಷ್ಯಾ ದೇಶ ಮೊದಲು ಅಂತರಿಕ್ಷಕ್ಕೆ ಹಾರಿ ರೆಕ್ಕೆಪುಕ್ಕ ಕಟ್ಟಿದರೆ, ಅಮೆರಿಕಾ ರಷ್ಯಾದ ಮೇಲೆ ಪೈಪೋಟಿ ನಡೆಸಿ ಅಂತರಿಕ್ಷಕ್ಕೆ ದಾಪುಗಾಲಿಟ್ಟಿತು. ಇದಾದ ನಂತರ ಬಾಹ್ಯಾಕಾಶಕ್ಕೆ ಜಿಗಿಯುವ ಯಾತ್ರಿಗಳಿಗೆ ನಿಲ್ದಾಣ ಒಂದು ಬೇಕು ಎಂದಾಗ ಈ 'ಬಾಹ್ಯಾಕಾಶ ನಿಲ್ದಾಣ'ದ ಕಲ್ಪನೆ ಹುಟ್ಟಿ ಸಾಕಾರವಾಯಿತು.

ಬಾಹ್ಯಾಕಾಶ ನಿಲ್ದಾಣ ಎಂದರೆ ಏನು?

ಬಾಹ್ಯಾಕಾಶ ನಿಲ್ದಾಣ ಎಂದರೆ ಏನು?

ಗಗನಯಾತ್ರಿಗಳ ಮಧ್ಯಂತರ ನಿಲ್ದಾಣವೆನ್ನಬಹುದಾದ ಇಂಟರ್‌ನ್ಯಾಷನಲ್ ಸ್ಪೇಸ್‌ಸ್ಟೇಷನ್ ಎಂಬುದು ನಿಕಟ ಕಕ್ಷೆಯಲ್ಲಿ ಸ್ಥಾಪಿಸಲ್ಪಟ್ಟ ದೊಡ್ಡದೊಂದು ಬಾಹ್ಯಾಕಾಶ ಯಾನ ಅಥವಾ ನೌಕೆ ಎಂದು ಹೇಳಬಹುದು. ಸುಲಭವಾಗಿ ಹೇಳಬೇಕು ಎಂದರೆ ಸಾಮಾನ್ಯ ಉಪಗ್ರಹಗಳಿಗೆ ಹೊಲಿಸಿದಲ್ಲಿ ಇದು ಗಾತ್ರದಲ್ಲಿ ದೊಡ್ಡದಾದ ವಸ್ತು ಎಂದೇ ಹೇಳಬಹುದು. ಆದರೆ, ಇದರಲ್ಲಿ ಗಗನ ಯಾತ್ರಿಗಳು ವಾಸ್ತವ್ಯ ಹೂಡಲು ಬೇಕಾಗುವ ಎಲ್ಲಾ ಸಕಲ ಸೌಲಭ್ಯಗಳು ಇರುವುದರಿಂದ ಇದು ಬಾಹ್ಯಾಕಾಶ ನಿಲ್ದಾಣವಾಗಿದೆ.

ಬಾಹ್ಯಾಕಾಶ ನಿಲ್ದಾಣ ಹುಟ್ಟಿದ್ದು ಹೇಗೆ?

ಬಾಹ್ಯಾಕಾಶ ನಿಲ್ದಾಣ ಹುಟ್ಟಿದ್ದು ಹೇಗೆ?

ನಾವು ಪ್ರತಿದಿನ ಕೇಳುವ ಬಾಹ್ಯಾಕಾಶ ನಿಲ್ದಾಣ ಒಂದೇ ಬಾರಿ ಹುಟ್ಟಲಿಲ್ಲ. ಮಾನವನ ಸತತ ಪರಿಶ್ರಮದ ಫಲವಾಗಿ ದಶಕಗಳಲ್ಲಿ ಪೂರ್ಣಗೊಂಡ ಒಂದು ನಿಲ್ದಾಣವಿದು.! ವಿವಿಧ ದೇಶಗಳ ವಿವಿಧ ಪ್ರದೇಶಗಳಿಂದ ಕಳುಹಿಸಲ್ಪಟ್ಟ ಸಾಮಗ್ರಿಗಳನ್ನು ಅಂತರಿಕ್ಷದಲ್ಲೇ ಜೋಡಿಸಿ ಈ ಸ್ಪೇಸ್ ಸ್ಟೇಷನ್‌ನ್ನು ಸ್ಥಾಪಿಸಲಾದ ಮಾನವ ನಿರ್ಮಿತ ದುಬಾರಿ ವಸ್ತು. 1998 ರಂದು ಈ ಸ್ಪೇಸ್ ಮೊದಲ ಭಾಗ ಕಂಟ್ರೋಲ್ ಮಾಡ್ಯೂಲ್ ಜೈರಯಾವನ್ನು ರಷ್ಯಾ ಕಳುಹಿಸಿದ ನಂತರ ವಿವಿಧ ದೇಶಗಳಿಂದ ಹಲವು ಬಿಡಿಬಾಗಗಳನ್ನು ಕಳುಹಿಸಿ ಈ ನಿಲ್ದಾಣವನ್ನು ರೂಪಿಸಲಾಯಿತು.

ಈ ನಿಲ್ದಾಣ ಪ್ರತಿಯೊಂದು ಭಾಗಗಳ ಯಾನ!

ಈ ನಿಲ್ದಾಣ ಪ್ರತಿಯೊಂದು ಭಾಗಗಳ ಯಾನ!

ಮೊದಲೇ ಹೇಳಿದಂತೆ ಬಾಹ್ಯಾಕಾಶಕ್ಕೆ ವಿವಿಧ ಭಾಗಗಳನ್ನು ಕಳುಹಿಸಿ ಅವುಗಳನ್ನು ಅಂತರಿಕ್ಷದಲ್ಲೇ ಜೋಡಿಸಿ ಈ ಸ್ಪೇಸ್ ಸ್ಟೇಷನ್ ತಯಾರಿಸಲಾಯಿತು. ಈ ನಿಲ್ದಾಣದ ಪ್ರತಿಯೊಂದು ಭಾಗ/ಮಾಡ್ಯೂಲ್‌ ಅನ್ನು ಒಂದು ಯಾನ ಎಂದೇ ಹೇಳಬಹುದು. ಅಂದರೆ, ಇದು ನಿರಂತರವಾಗಿ ಭೂಮಿಯ ಪ್ರದಕ್ಷಣೆ ಹಾಕುತ್ತಿರುವ ಹಲವು ಮಾಡ್ಯೂಲ್‌ಗಳ ಒಂದು ವಸ್ತು ಎಂದು ಹೇಳಬಹುದು. ಯಾವಾಗಲೂ ಭೂಮಿಯನ್ನು ಸುತ್ತುತ್ತಲೇ ಇರುವ ಇದು ಸುಮಾರು ಒಂದೂವರೆ ಗಂಟೆಯಲ್ಲಿ ಒಂದು ಸುತ್ತು ಸುತ್ತುತ್ತದೆ ಎಂಬುದೇ ವಿಶೇಷ.!

ಪೂರ್ಣ ತಯಾರಿಗೆ ಬೇಕಾಗಿದ್ದು 13 ವರ್ಷ!

ಪೂರ್ಣ ತಯಾರಿಗೆ ಬೇಕಾಗಿದ್ದು 13 ವರ್ಷ!

1998 ರಂದು ಈ ಸ್ಪೇಸ್ ಮೊದಲ ಭಾಗ ಕಂಟ್ರೋಲ್ ಮಾಡ್ಯೂಲ್ ಹಾರಿದರೆ, ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ವಿವಿಧ ಭಾಗಗಳನ್ನು ಕಳುಹಿಸಿ ಅವುಗಳನ್ನು ಅಂತರಿಕ್ಷದಲ್ಲೇ ಜೋಡಿಸಿ ಸ್ಪೇಸ್ ಸ್ಟೇಷನ್ ತಯಾರಿಸಲಾಯಿತು. ನವಂಬರ್ 2000ದಲ್ಲಿ ಅಂತರಿಕ್ಷ ಯಾತ್ರಿಗಳ ತಂಡ ಈ ಸ್ಪೇಸ್ ಸ್ಟೇಷನ್ ತಲುಪುವಷ್ಟು ವಾಸ್ತವ್ಯಕ್ಕೆ ಯೋಗ್ಯವಾಯಿತು. ತದನಂತರ ನಾಸಾದ ಮುಂದಾಳತ್ವದಲ್ಲಿ ರಷಿಯಾ, ಜಪಾನ, ಕೆನಡಾ ಮುಂತಾದ 16 ದೇಶಗಳ ಅನೇಕ ಭಾಗಗಳನ್ನು ಸ್ಪೇಸ್ ಸ್ಟೇಷನ್‌ಗೆ ಜೋಡಿಸಿ 2011ರಲ್ಲಿ ಸಂಪೂರ್ಣ ನಿರ್ಮಾಣ ಮಾಡಲಾಯಿತು.

ಹೇಗಿದೆ ಆ 'ಬಾಹ್ಯಾಕಾಶ ನಿಲ್ದಾಣ'?

ಹೇಗಿದೆ ಆ 'ಬಾಹ್ಯಾಕಾಶ ನಿಲ್ದಾಣ'?

'ಬಾಹ್ಯಾಕಾಶ ನಿಲ್ದಾಣ' ಒಂದು ಫುಟ್‌ಬಾಲ್ ಮೈದಾನಕ್ಕಿಂತಲೂ ವಿಶಾಲವಾಗಿದೆ ಎಂದರೆ ನಿಮ್ಮ ಕಲ್ಪನೆಗೆ ಅದರ ಚಿತ್ರ ಬಂದಿರಬೇಕು. 108.5ಮೀಟರ್ ಉದ್ದ, 72.8ಮೀಟರ ಅಗಲ ಹಾಗೂ 20 ಮೀಟರ ಎತ್ತರವಾಗಿರುವ ಒಂದು ಮಾನವ ನಿರ್ಮಿತ ನಾಡ್ಯೂಲ್ ಆಗಿ ಬಾಹ್ಯಾಕಾಶ ನಿಲ್ದಾಣ ರೂಪುಗೊಂಡಿದೆ. ಎರಡು ಬೋಯಿಂಗ್ 747 ವಿಮಾನಗಳಷ್ಟು ವಿಸ್ತಾರವುಳ್ಳ ಜಾಗ ಇದರ ಮೇಲಿದೆ. ಒಟ್ಟಾರೆಯಾಗಿ 6 ಗಗನಯಾತ್ರಿಗಳ ತಂಡ ಇದರಲ್ಲಿ ಬದುಕಬಹುದಾದ ಸೌಲಭ್ಯವನ್ನು ನೀಡಲಾದ ಹಾರಾಡುತ್ತಿರುವ ಯಂತ್ರದಂತೆ ಬಾಹ್ಯಾಕಾಶ ನಿಲ್ದಾಣವಿದೆ.

ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತು!

ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತು!

ನಿಮಗೆ ಗೊತ್ತಿರಲಿ 'ಬಾಹ್ಯಾಕಾಶ ನಿಲ್ದಾಣ'ವು ಈ ವರೆಗೂ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತು ಆಗಿದೆ.! ಇದಕ್ಕೆ ತಗುಲಿದ ವೆಚ್ಚ 16000 ಕೋಟಿ ರೂಪಾಯಿಗಳು ಎಂದರೆ ನೀವು ನಂಬಲೇಬೇಕು. ಕೆಲ ಮೂಲಗಳ ಪ್ರಕಾರ, ಇದಕ್ಕೆ 16000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗಿದೆ ಎಂದು ಹೇಳಲಾಗಿದೆ.ಆದರೆ ಅಂತರಿಕ್ಷದ ಮಹಾನ್ ಹೆಜ್ಜೆಯಾದ ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಎಷ್ಟು ವೆಚ್ಚವಾದರೂ ಇಂತಹದೊಂದು ಸಾಧನೆ ಮಾನವನಿಂದ ಆಗಿದೆ ಎನ್ನುತ್ತಾರೆ ವಿಜ್ಞಾನಗಳು.

'ಬಾಹ್ಯಾಕಾಶ ನಿಲ್ದಾಣ'ದ ವಿಶೇಷತೆಗಳು ಏನು?

'ಬಾಹ್ಯಾಕಾಶ ನಿಲ್ದಾಣ'ದ ವಿಶೇಷತೆಗಳು ಏನು?

450 ಟನ್ ತೂಕದ ಈ ಅಂತಾರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣ ಪ್ರತಿಘಂಟೆಗೆ 28000ಕಿ.ಮೀ ವೇಗದಿಂದ ಭೂಮಿಯ ಪ್ರದಕ್ಷಣೆ ಹಾಕುತ್ತಿದೆ. ಅಂದರೆ, ಪ್ರತಿ ಸೆಕೆಂಡ್‌ಗೆ 7.66 ಕಿ.ಮೀ ವೇಗದಲ್ಲಿ ಇದು ಚಲಿಸುತ್ತದೆ.! ಪ್ರತಿ 90 ನಿಮಿಷದಲ್ಲಿ ಭೂಮಿಯ ಒಂದು ಸುತ್ತನ್ನು ಸುತ್ತುವಷ್ಟು ವೇಗವನ್ನು ಹೊಂದಿರುವ ಇದು ಪ್ರತಿದಿನಕ್ಕೆ 16 ಬಾರಿ ಭೂಮಿಯನ್ನು ಪ್ರದಕ್ಷಣೆ ಹಾಕುತ್ತದೆ. ಮಾನವರಿಗೆ ಆಕಾಶದಲ್ಲಿ ಚಂದ್ರ ಮತ್ತು ಶುಕ್ರ ಗ್ರಹದ ನಂತರ ಮೂರನೇ ಅತ್ಯಂತ ಹೊಳೆಯುವ ಆಕಾಶಕಾಯ ಕೂಡ ಇದಾಗಿದೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು.

ಅಲ್ಲಿ ಯಾತ್ರಿಗಳು ಹೇಗೆ ಬದುಕುತ್ತಾರೆ?

ಅಲ್ಲಿ ಯಾತ್ರಿಗಳು ಹೇಗೆ ಬದುಕುತ್ತಾರೆ?

ಈ ಸ್ಪೇಸ್ ಸ್ಟೇಷನ್‌ಗೆ ಪ್ರಯಾಣ ಬೆಳೆಸುವ ಮುನ್ನವೇ ಗಗನಯಾತ್ರಿಗಳನ್ನು ಈ ಕಠಿಣ ಪರಿಸ್ಥಿತಿಗೆ ಸಜ್ಜುಗೊಳಿಸಲಾಗುತ್ತದೆ. ವಿಶಿಷ್ಟ ಸ್ಪೇಸ್ ಸೂಟ್ ಹೊತ್ತು ಗಗನಯಾತ್ರಿಗಳು ಅಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಅವರುಗಾಳಿಯಲ್ಲಿ ತೇಲುತ್ತಲೇ ದಿನಕ್ಕೆ ಮೂರು ಬಾರಿ ಆಹಾರ ಸೇವಿಸಬೇಕಾಗುತ್ತದೆ. ಯಾತ್ರಿಗಳ ಮೂತ್ರವನ್ನು ಶುದ್ಧೀಕರಿಸಿ ಮತ್ತೆ ಸ್ಪೇಸ್ ಸ್ಟೇಷನ್‌ನ ಕುಡಿಯುವ ನೀರಿನ ಘಟಕಕ್ಕೆ ಸಾಗಿಸಲಾಗುತ್ತದೆ. ಯಾತ್ರಿಗಳಿಗೆ ನಿದ್ರಿಸಲು ಸ್ಲೀಪ್ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದೆ. ಕೆಲವೇ ಕೆಲವು ಅವಶ್ಯಕತೆಗಳನ್ನು ಬಳಸಿಕೊಂಡು ಅಲ್ಲಿ ಜೀವಿಸಬೇಕಿದೆ.

'ಬಾಹ್ಯಾಕಾಶ ನಿಲ್ದಾಣ'ದ ಉಪಯೋಗವೇನು?

'ಬಾಹ್ಯಾಕಾಶ ನಿಲ್ದಾಣ'ದ ಉಪಯೋಗವೇನು?

ಮೊದಲ ಮಾನವನ ಕನಸಾಗಿ ಹುಟ್ಟಿದ 'ಬಾಹ್ಯಾಕಾಶ ನಿಲ್ದಾಣ' ಮಾನವನ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದೆ. ಅಂತರಿಕ್ಷ ಯಾತ್ರಿಗಳು ಸ್ಪೇಸ್ ಸ್ಟೇಷನ್ ಹೊರಗೆ ನಡೆದಾಡಿ ಅನುಭವ ಪಡೆಯುತ್ತಾರೆ. ಸುಮಾರು 15000ಕ್ಕೂ ಹೆಚ್ಚು ಸಂಶೋಧನೆಗಳನ್ನು ನಿಲ್ದಾಣದಲ್ಲಿ ಮಾಡಲಾಗಿದೆ.ಮಾನವನ ಮೇಲೆ ಭಾರ ಹೀನತೆಯ ಸ್ಥಿತಿಯಾದ ಮೈಕ್ರೋ ಗ್ರ್ಯಾವಿಟಿಯಂತಹ ಪ್ರಯೋಗಗಳು ಅಲ್ಲಿ ನಡೆಯುತ್ತವೆ. ಒಟ್ಟಿನಲ್ಲಿ ಬಾಹ್ಯಾಕಾಶವನ್ನು ಅರಿಯುವಂತಹ ಎಲ್ಲ ಕೆಲಸಗಳು ಅಲ್ಲಿ ನಡೆಯುತ್ತಿರುತ್ತವೆ.

20 ವರ್ಷಗಳ ನಿರಂತರ ಕಾರ್ಯಾಚರಣೆ

20 ವರ್ಷಗಳ ನಿರಂತರ ಕಾರ್ಯಾಚರಣೆ

ಸುಮಾರು 450 ಟನ್ ತೂಕದ ಅಂತಾರಾಷ್ಟ್ರಿಯ ನಿಲ್ದಾಣ 20 ವರ್ಷಗಳ ನಿರಂತರ ಕಾರ್ಯಾಚರಣೆಯಲ್ಲಿದೆ. ಅಂತರಿಕ್ಷ ಯಾತ್ರಿಗಳಿಗೆ ಬೇಕಾಗುವ ಎಲ್ಲ ವಸ್ತುಗಳನ್ನು ಕಾಲ ಕಾಲಕ್ಕೆ ಭೂಮಿಯಿಂದ ತಲುಪಿಸಲಾಗುತ್ತದೆ. ಇನ್ನೂ ಸುಲಲಿತವಾಗಿ ಕಾರ್ಯನಿರ್ವಹಿಸುತ್ತಿರುವ ಮಾನವ ನಿರ್ಮಿತ ಅತ್ಯಂತ ದುಬಾರಿ ವಸ್ತು ಸ್ಪೇಸ್ ಸ್ಟೇಷನ್ ಹತ್ತಲು ಭಾರತದ ಇಸ್ರೊ ಕೂಡ ತಯಾರಾಗಿದೆ. ಇಂತಹದೊಂದು ವಸ್ತು ತಯಾರಾಗಿ ಮಾನವನ ಇತಿಹಾಸದಲ್ಲೇ ಮೈಲಿಗಲ್ಲನ್ನು ಸೃಷ್ಟಿಸಿದೆ.

Best Mobiles in India

English summary
sro chief K Sivan has said India will set up its own space.after populating space with satellites and sending probes to Moon and Mars, India will have an address in the skies.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X