ಮಹಾರಾಷ್ಟ್ರದ ಗ್ರಾಮದಲ್ಲಿ ಆತಂಕ ಮೂಡಿಸಿದ ಚೀನಾದ ರಾಕೆಟ್ ಅವಶೇಷ!

|

ಇತ್ತೀಚಿಗೆ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೆಲವು ಪ್ರದೇಶಗಳಲ್ಲಿ ರಾತ್ರಿ ಆಕಾಶದಲ್ಲಿ ಬೆಳಕಿನ ಗೆರೆಯೊಂದು ಗೋಚರಿಸಿದೆ. ಅಮೆರಿಕಾ ವಿಜ್ಞಾನಿಗಳ ಪ್ರಕಾರ, ಉಲ್ಕಾಪಾತದಂತೆ ಕಾಣಿಸಿಕೊಂಡ ಈ ಗೆರೆಯು ವಾಸ್ತವವಾಗಿ ಚೀನಾದ ರಾಕೆಟ್ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸಿದ ಅವಶೇಷವಾಗಿದೆ.

ಮಹಾರಾಷ್ಟ್ರದ ಗ್ರಾಮದಲ್ಲಿ ಆತಂಕ ಮೂಡಿಸಿದ ಚೀನಾದ ರಾಕೆಟ್ ಅವಶೇಷ!

ತಜ್ಞರ ಪ್ರಕಾರ, ಏಪ್ರಿಲ್ 2 ರಂದು ರಾತ್ರಿ ಸಂಭವಿಸಿದ್ದು ಚೀನಾವು ಫೆಬ್ರವರಿ 2021 ರಲ್ಲಿ ಉಡಾವಣೆಯಾದ ಚೀನಾದ ಚಾಂಗ್ ಝೆಂಗ್ 5 ಬಿ ರಾಕೆಟ್ (Chang Zheng 5B) ಶನಿವಾರ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದ್ದು ಭಾರತದ ಮೇಲೆ ಆಕಾಶದಲ್ಲಿ ಸುಟ್ಟುಹೋಗಿದೆ ಎನ್ನಲಾಗಿದೆ.

ಮಹಾರಾಷ್ಟ್ರದ ಗ್ರಾಮದಲ್ಲಿ ಆತಂಕ ಮೂಡಿಸಿದ ಚೀನಾದ ರಾಕೆಟ್ ಅವಶೇಷ!

ಮಹಾರಾಷ್ಟ್ರದ ಚಂದ್ರಾಪುರದ ಸಿಂಧೇವಾಹಿಯ ಲಾಡ್ಬೋರಿ ಗ್ರಾಮದಲ್ಲಿ ಚೀನಾದ ಈ ರಾಕೆಟ್‌ನ ಅವಶೇಷಗಳು ಪತ್ತೆಯಾಗಿವೆ. ರಾಕೆಟ್‌ ಮರುಪ್ರವೇಶದ ವೇಳೆ ಹೆಚ್ಚಿನ ಅವಶೇಷಗಳು ಮರು ಪ್ರವೇಶದಲ್ಲಿ ಸುಟ್ಟು ಹೋಗುತ್ತವೆ ಮತ್ತು ಯಾವುದೇ ಹಾನಿ ಉಂಟುಮಾಡುವ ಸಾಧ್ಯತೆಯಿಲ್ಲ. ಗ್ರಾಮದ ಪಂಚಾಯತ್ ಕಟ್ಟಡದ ಹಿಂದೆ ಬಿದ್ದಿದ್ದ 10 x 10 ಅಡಿ ಲೋಹದ ಉಂಗುರ ಸೇರಿದಂತೆ ಅನೇಕ ದೊಡ್ಡ ಲೋಹದ ತುಂಡುಗಳನ್ನು ಗ್ರಾಮಸ್ಥರು ಕಂಡುಕೊಂಡಿದ್ದಾರೆ. ಈ ಘಟನೆಯು ಗ್ರಾಮದ ಜನರಲ್ಲಿ ಕೆಲಕಾಲ ಆತಂಕವನ್ನು ಉಂಡು ಮಾಡಿತ್ತು. ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಧ್ಯಮದವರೊಬ್ಬರು ಪತ್ತೆಯಾದ ಅವಶೇಷಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಗ್ರಾಮದಲ್ಲಿ ಆತಂಕ ಮೂಡಿಸಿದ ಚೀನಾದ ರಾಕೆಟ್ ಅವಶೇಷ!

ಇಸ್ರೋ ಅಧಿಕಾರಿಗಳು ಯುನೈಟೆಡ್ ಸ್ಟೇಟ್ಸ್ ಸ್ಪೇಸ್ ಕಮಾಂಡ್ (USspacecom) ನಿಂದ ಎಚ್ಚರಿಕೆಗಳನ್ನು ಉಲ್ಲೇಖಿಸಿ CZ-3B R/B (ಲಾಂಗ್ ಮಾರ್ಚ್ ಉಡಾವಣಾ ವಾಹನದಿಂದ ಚೈನೀಸ್ ರಾಕೆಟ್ ಬಾಡಿ); ಸ್ಟಾರ್‌ಲಿಂಕ್ 1831 ಮತ್ತು ಕಾಸ್ಮಾಸ್ ಇರಿಡಿಯಮ್ ಉಪಗ್ರಹಗಳ ಘರ್ಷಣೆಯ ಅವಶೇಷಗಳಿಂದ ಎರಡು ಸಣ್ಣ ವಸ್ತುಗಳು, ಒಟ್ಟು ನಾಲ್ಕು ಬಾಹ್ಯಾಕಾಶ ಅವಶೇಷಗಳು ಶನಿವಾರ ಭೂಮಿಯ ವಾತಾವರಣವನ್ನು ಮರು ಪ್ರವೇಶಿಸುವ ನಿರೀಕ್ಷೆಯಿದೆ ಎನ್ನುವ ಮಾಹಿತಿ ತಿಳಿಸಿತ್ತು.

ಭಾರತವು ತನ್ನ ನೇತ್ರಾ ಯೋಜನೆಯ ಮೂಲಕ ಬಾಹ್ಯಾಕಾಶ ವಸ್ತುಗಳ ವೀಕ್ಷಣಾ ಸೌಲಭ್ಯಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಯುಎಸ್‌ ಸ್ಪೇಸ್‌ಕಾಮ್‌ನಿಂದ (USspacecom) ಪಟ್ಟಿ ಮಾಡಲಾದ 25,000 ಕ್ಕೂ ಹೆಚ್ಚು ದೊಡ್ಡ ವಸ್ತುಗಳನ್ನು ಪತ್ತೆ ಮಾಡಲು ರಾಡಾರ್‌ಗಳು ಮತ್ತು ಆಪ್ಟಿಕಲ್ ಸಂವೇದಕಗಳಂತಹ ಸಾಕಷ್ಟು ಮೂಲಸೌಕರ್ಯಗಳ ಅಗತ್ಯ ಇರುತ್ತದೆ.

ಬಾಹ್ಯಾಕಾಶದಲ್ಲಿನ ಹೆಚ್ಚುತ್ತಿರುವ ವಸ್ತುಗಳ ಸಂಖ್ಯೆಯಿಂದಾಗಿ, ವಿಶೇಷವಾಗಿ ಕಡಿಮೆ ಭೂಮಿಯ ಕಕ್ಷೆಯಲ್ಲಿ ಮರು ಪ್ರವೇಶಗಳು ಹೆಚ್ಚು ಸಾಮಾನ್ಯವಾಗುತ್ತಿವೆ, ವಿಜ್ಞಾನಿಗಳು ಪ್ರಸ್ತುತ, ಎಲ್ಲಾ ಮರು-ಪ್ರವೇಶಗಳನ್ನು ಪತ್ತೆಹಚ್ಚಲು ಹಾಗೂ ವೀಕ್ಷಣಾ ಡೇಟಾವನ್ನು ಒದಗಿಸಲು USspacecom ಅವಲಂಬಿಸಿದ್ದಾರೆ.

Best Mobiles in India

English summary
Space Debris Found In Maharashtra Village Likely From China Rocket.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X