Home
ಸುದ್ದಿಜಾಲ

ರಿಯಲ್‌ಮಿ ನಾರ್ಜೋ ಸರಣಿ ಫೋನ್‌ಗಳಿಗೆ ವಿಶೇಷ ರಿಯಾಯಿತಿ, ಯಾವೆಲ್ಲಾ ಫೋನ್‌ಗಳಿಗೆ ಎಷ್ಟು ಬೆಲೆ?

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ರಿಯಲ್‌ಮಿ (Realme) ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಅದರಲ್ಲೂ ಭಾರತದಲ್ಲಿ ಈ ಫೋನ್‌ಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಹೆಚ್ಚಾಗಿಯೇ ಇದ್ದು, ಈ ನಡುವೆ ರಿಯಲ್‌ಮಿ ನಾರ್ಜೋ ಸರಣಿ ಫೋನ್‌ಗಳಿಗೆ ವಿಶೇಷ ರಿಯಾಯಿತಿ ಘೋಷಣೆ ಮಾಡಲಾಗಿದೆ.

ಹೌದು, ರಿಯಲ್‌ಮಿ ಫೋನ್‌ಗಳು ಸಾಮಾನ್ಯವಾಗಿ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಪಡೆದುಕೊಂಡಿರುತ್ತವೆ. ಈ ಮೂಲಕ ಗ್ರಾಹಕರು ತಮಗೆ ಅಗತ್ಯ ಇರುವ ಫೋನ್‌ ಅನ್ನು ಖರೀದಿ ಮಾಡುತ್ತಾರೆ. ಆದರೆ, ಈಗ ದುಬಾರಿ ಬೆಲೆಯ ಫೋನ್‌ಗಳೂ ಸಹ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುತ್ತಿರುವುದು ವಿಶೇಷವಾದ ಸಂಗತಿಯಾಗಿದೆ. ಅಂದರೆ ರಿಯಲ್‌ಮಿ ನಾರ್ಜೋ N53, ರಿಯಲ್‌ಮಿ ನಾರ್ಜೋ 60 ಪ್ರೊ 5G ಮತ್ತು ರಿಯಲ್‌ಮಿ ನಾರ್ಜೋ 60X 5G ಸ್ಮಾರ್ಟ್‌ಫೋನ್‌ಗಳು (Realme Narzo N53, Realme Narzo 60 Pro 5G and Realme Narzo 60X 5G Smartphone) ಭಾರೀ ರಿಯಾಯಿತಿ ಪಡೆದುಕೊಂಡಿವೆ.

ರಿಯಲ್‌ಮಿ ನಾರ್ಜೋ ಸರಣಿ ಫೋನ್‌ಗಳಿಗೆ ವಿಶೇಷ ರಿಯಾಯಿತಿ...

ರಿಯಲ್‌ಮಿಯಿಂದ ವಿಶೇಷ ಕೊಡುಗೆ: ರಿಯಲ್‌ಮಿ ಆಗಾಗ್ಗೆ ತನ್ನ ಫೋನ್‌ಗಳಿಗೆ ಆಫರ್‌ ಘೋಷಣೆ ಮಾಡುವುದು ಸಾಮಾನ್ಯವಾದ ವಿಷಯ. ಈ ಫೋನ್‌ಗಳ ವಿಶೇಷ ಕೊಡುಗೆಗಳು ಸೆಪ್ಟೆಂಬರ್ 22 ರಿಂದ ಲಭ್ಯವಿದ್ದು, ಅಮೆಜಾನ್ ಇಂಡಿಯಾ ವೆಬ್‌ಸೈಟ್ ಮತ್ತು ರಿಯಲ್‌ಮಿ (Amazon India website, Realme)ಯ ಅಧಿಕೃತ ಸೈಟ್‌ ಮೂಲಕ ಖರೀದಿ ಮಾಡಬಹುದು. ಈ ಆಫರ್‌ ಸೆಪ್ಟೆಂಬರ್ 27 ರವರೆಗೆ ಲಭ್ಯವಿರುತ್ತವೆ.

ಆಫರ್‌ ವಿವರ: ಅಮೆಜಾನ್ ಮತ್ತು ರಿಯಲ್‌ಮಿ ನಲ್ಲಿ ರಿಯಲ್‌ಮಿ ನಾರ್ಜೋ 60x 5G ಖರೀದಿಯ ಮೇಲೆ ಗ್ರಾಹಕರು 1,000 ರೂ.ಮೌಲ್ಯದ ಕೂಪನ್ ಅನ್ನು ಪಡೆಯಬಹುದಾಗಿದೆ. ರಿಯಲ್‌ಮಿ ನಾರ್ಜೋ 60 ಪ್ರೊ 5G (8GB+128GB) ಹಾಗೂ (12GB+256GB) ವೇರಿಯಂಟ್‌ಗಳ ಮೇಲೆ 6 ತಿಂಗಳ ನೋ ಕಾಸ್ಟ್ EMI ಜೊತೆಗೆ 2,000 ಮೌಲ್ಯದ ಕೂಪನ್ ಪಡೆದುಕೊಳ್ಳಬಹುದು ಹಾಗೆಯೇ 6 ತಿಂಗಳ ನೋ ಕಾಸ್ಟ್ EMI ಜೊತೆಗೆ 1,000 ರೂ. ಮೌಲ್ಯದ ಕೂಪನ್ ಅನ್ನು ಅನ್ನು ರಿಯಲ್‌ಮಿ ನಾರ್ಜೋ 60 ಪ್ರೊ 5G (12GB+1TB) ಗೆ ನೀಡಲಾಗಿದೆ.

ಇದರೊಂದಿಗೆ ರಿಯಲ್‌ಮಿ ನಾರ್ಜೋ N53 (4GB+64GB) ವೇರಿಯಂಟ್ ಬಳಕೆದಾರರು 500 ರೂ.ಗಳ ಬ್ಯಾಂಕ್ ಕೊಡುಗೆಯನ್ನು ಪಡೆದುಕೊಳ್ಳಬಹುದಾಗಿದ್ದು, ರಿಯಲ್‌ಮಿ ನಾರ್ಜೋ N53 (6GB + 128GB) ವೇರಿಯಂಟ್ ಮೇಲೆ 300 ರೂ.ಗಳ ಕೂಪನ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ. ಉಳಿದಂತೆ ಈ ಫೋನ್‌ಗಳ ಸಾಮಾನ್ಯ ದರ ಹಾಗೂ ಆಫರ್ ಬೆಲೆ ಬಗ್ಗೆ ತಿಳಿಯೋಣ ಬನ್ನಿ.

ರಿಯಲ್‌ಮಿ ನಾರ್ಜೋ 60x 5G: ಈ ಸ್ಮಾರ್ಟ್‌ಫೋನ್‌ನ 4GB+128GB ವೇರಿಯಂಟ್‌ಗೆ 12,999ರೂ.ಗಳ ಸಾಮಾನ್ಯ ದರ ಇದ್ದು, 1,000ರೂ. ಕೂಪನ್‌ನೊಂದಿಗೆ 11,999ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ 6GB+128GB ವೇರಿಯಂಟ್‌ 14,499 ರೂ.ಗಳ ಬೆಲೆ ಹೊಂದಿದ್ದು, 13,499 ರೂ.ಗಳ ದರದಲ್ಲಿ ಖರೀದಿ ಮಾಡಬಹುದು. ಇದರೊಂದಿಗೆ 8GB+128GB ವೇರಿಯಂಟ್ 23,999ರೂ.ಗಳ ಬೆಲೆ ಸಾಮಾನ್ಯ ಬೆಲೆ ಹೊಂದಿದ್ದು, 2,000 ರೂ.ಬೆಲೆಯ ಕೂಪನ್‌ ಸಿಗಲಿದೆ.

ರಿಯಲ್‌ಮಿ ನಾರ್ಜೋ 60 ಪ್ರೊ 5G: ಈ ಫೋನ್‌ನ 12GB+256GB ವೇರಿಯಂಟ್‌ ಬೆಲೆ 26,999ರೂ.ಗಳಾಗಿದ್ದು, 24,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ 12GB+1TB ಗೆ 29,999ರೂ.ಗಳಿದ್ದು, ಈ ಸೇಲ್‌ನಲ್ಲಿ 28,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಫೋನ್‌ ಖರೀದಿ ಮೇಲೆ 1,000 ರೂ. ಮೌಲ್ಯದ ಕೂಪನ್‌ ಹಾಗೂ 6 ತಿಂಗಳ ನೋ ಕಾಸ್ಟ್‌ ಇಎಮ್‌ಐ ಲಭ್ಯ ಇದೆ.

ರಿಯಲ್‌ಮಿ ನಾರ್ಜೋ ಸರಣಿ ಫೋನ್‌ಗಳಿಗೆ ವಿಶೇಷ ರಿಯಾಯಿತಿ...

ರಿಯಲ್‌ಮಿ ನಾರ್ಜೋ N53: ಇನ್ನು ಕೊನೆಯ ಫೋನ್‌ನ ವಿಚಾರಕ್ಕೆ ಬಂದರೆ ಈ ಫೋನ್‌ನ 4GB+64GB ವೇರಿಯಂಟ್‌ಗೆ 8,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, 8,499 ರೂ.ಗಳಿಗೆ ನೀವು ಇದನ್ನು ಖರೀದಿ ಮಾಡಬಹುದು. ಹಾಗೆಯೇ 6GB+128GB ವೇರಿಯಂಟ್‌ ಫೋನ್‌ ಬೆಲೆ 10,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, 300ರೂ.ಗಳ ಕೂಪನ್‌ನೊಂದಿಗೆ 10,699ರೂ.ಗಳಿಗೆ ಕೊಂಡುಕೊಳ್ಳಬಹುದು.

Best Mobiles in India

English summary
Realme Narzo N53, Realme Narzo 60 Pro 5G and Realme Narzo 60X 5G smartphones have got huge discounts on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+