Subscribe to Gizbot

ಜಿಯೋಗೆ ಕಾಯುವುದೇಕೆ..? ಬೆಂಗಳೂರಿಗರಿಗೆ ಮಾತ್ರ 1 GBPS ವೇಗದ ಡೇಟಾ ಅತೀ ಕಡಿಮೆ ಬೆಲೆಯಲ್ಲಿ...!

Written By:

ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಆಬ್ಬರಕ್ಕೆ ಟೆಲಿಕಾಂ ಲೋಕದಲ್ಲಿ ಬ್ರೇಕ್ ಹಾಕುವವರು ಯಾರು ಇಲ್ಲ ಎನ್ನಲಾಗಿದೆ. ಆದರೆ ಜಿಯೋ ಹೊಸದಾಗಿ ಪ್ರಾರಂಭಿಸಲು ಮುಂದಾಗಿರುವ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗೆ ಸರಿಯಾದ ಸ್ಪರ್ಧೇಯನ್ನು ನೀಡುವ ಸಲುವಾಗಿ ಸ್ಪೆಕ್ಟ್ರ ಕಂಪನಿಯೂ ಉದಯವಾಗಿದ್ದು, ಅದರಲ್ಲೂ ಬೆಂಗಳೂರಿಗರಿಗೆ ಅತೀ ಕಡಿಮೆ ಬೆಲೆಗೆ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದೆ.

 ಬೆಂಗಳೂರಿಗರಿಗೆ ಮಾತ್ರ 1 GBPS ವೇಗದ ಡೇಟಾ ಅತೀ ಕಡಿಮೆ ಬೆಲೆಯಲ್ಲಿ...!

ಜಿಯೋ ಶೀಘ್ರವೇ ತನ್ನ ಫೈಬರ್ ಸೇವೆಯನ್ನು ಆರಂಭಿಸಿಲಿದೆ ಎನ್ನುವ ಮಾತು ಕೇಳಿ ಬಂದಿದೆ, ಜಿಯೋ ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಡೇಟಾ ಮತ್ತು ಅತೀ ವೇಗದ ಇಂಟರ್ನೆಟ್ ಅನ್ನು ನೀಡಲಿದೆ ಎನ್ನಲಾಗಿದೆ. ಆದರೆ ಜಿಯೋವನ್ನು ಮೀರಿಸುವ ವೇಗದೊಂದಿಗೆ, ಅದಕ್ಕಿಂತ ಕಡಿಮೆ ಬೆಲೆಗೆ ಬ್ರಾಡ್ ಬ್ಯಾಂಡ್ ಸೇವೆಯನ್ನು ಸ್ಟೆಕ್ಟ್ರ ಈಗಾಗಲೇ ಆರಂಭಿಸಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1 GBPS ವೇಗದ ಸೇವೆ:

1 GBPS ವೇಗದ ಸೇವೆ:

ಈಗಾಗಲೇ ರಾಜಧಾನಿ ದೆಹಲಿಯಲ್ಲಿ ತನ್ನ ಸೇವೆಯನ್ನು ಆರಂಭಿಸಿರುವ ಸ್ಪೆಕ್ಟ್ರ, ಬೆಂಗಳೂರಿಗೂ ಸೇವೆಯನ್ನು ವಿಸ್ತಾರ ಮಾಡಿದೆ. ಬೆಂಗಳೂರಿನಲ್ಲಿ 1GBPS ವೇಗದ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಅತೀ ಕಡಿಮೆ ಬೆಲೆ:

ಅತೀ ಕಡಿಮೆ ಬೆಲೆ:

ಬೆಂಗಳೂರಿಗರಿಗಾಗಿಯೇ ಹೊಸ ಮಾದರಿಯ ಆಫರ್ ಬಿಡುಗಡೆ ಮಾಡಿದ್ದು, 'ಸ್ಪೆಕ್ಟ್ರ ಫಾಸ್ಟ್ ಪ್ಯಾಕೆಜ್' ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರು ಅತೀ ವೇಗದ ಇಂಟರ್ನೆಟ್ ಅನ್ನು ಅತೀ ಕಡಿಮೆ ಬೆಲೆಗೆ ಪಡೆದುಕೊಳ್ಳಬಹುದಾಗಿದೆ.

ರೂ.899:

ರೂ.899:

ಬೆಂಗಳೂರಿನಲ್ಲಿ ರೂ.899ಕ್ಕೆ ಸೇವೆಯನ್ನು ನೀಡುತ್ತಿರುವ ಸ್ಪೆಕ್ಟ್ರ 400GB ಡೇಟಾವನ್ನು ಬಳಕೆಗೆ ನೀಡುತ್ತಿದೆ. ಸಾಮಾನ್ಯ ವೇಗ ಬ್ರಾಡ್ ಬ್ಯಾಂಡ್ ಸೇವೆಗಿಂತಲೂ ಇದು ಕಡಿಮೆ ಮೊತ್ತದಾಗಿದೆ ಎನ್ನಲಾಗಿದೆ.

ಡೇಟಾ ಕ್ಯಾರಿ ಮಾಡಬಹುದು:

ಡೇಟಾ ಕ್ಯಾರಿ ಮಾಡಬಹುದು:

ಒಂದು ವೇಳೆ ನಿಮ್ಮ ತಿಂಗಳ ಅವಧಿಯಲ್ಲಿ ನೀವು ಡೇಟಾವನ್ನು ಬಳಕೆ ಮಾಡಿಕೊಳ್ಳದೆ ಉಳಿಸಿಕೊಂಡಿದ್ದರೇ ಅದನ್ನು ಮುಂದಿನ ತಿಂಗಳಿಗೆ ಕ್ಯಾರಿ ಮಾಡಿಕೊಳ್ಳುವ ಅವಕಾಶವನ್ನು ಸ್ಪೆಕ್ಟ್ರ ಮಾಡಿಕೊಟ್ಟಿದೆ. ಬೇರೆ ಯಾವುದೇ ಕಂಪನಿಗಳು ಈ ಮಾದರಿಯ ಅವಕಾಶವನ್ನು ನೀಡಿಲ್ಲ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ದೇಶದಲ್ಲಿಯೇ ನಂಬರ್ 1:

ದೇಶದಲ್ಲಿಯೇ ನಂಬರ್ 1:

ಸ್ಪೆಕ್ಟ್ರ ದೇಶದಲ್ಲಿಯೇ GBPS ವೇಗದಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿರುವ ನಂಬರ್ ಒನ್ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಸ್ಪೆಕ್ಟ್ರ ಬಳಕೆದಾರರು ಗುಣಮಟ್ಟದ ಸೇವೆಯಿಂದ ತೃಪ್ತಿ ಹೊಂದಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಕಣ್ ಹೊಡೆದ ಹುಡುಗಿಗೆ ಇನ್‌ಸ್ಟಾಗ್ರಾಮ್ ಫಿದಾ: 2 ದಿನದಲ್ಲಿ 2.4 ಮಿಲಿಯನ್ ಫಾಲೋರ್ಸ್..!

English summary
Spectra Launches 1 Gbps Broadband Plans in Bengaluru. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot