Subscribe to Gizbot

ಕಣ್ ಹೊಡೆದ ಹುಡುಗಿಗೆ ಇನ್‌ಸ್ಟಾಗ್ರಾಮ್ ಫಿದಾ: 2 ದಿನದಲ್ಲಿ 2.4 ಮಿಲಿಯನ್ ಫಾಲೋರ್ಸ್..!

Written By:

ಒಂದೇ ಒಂದು ವಿಡಿಯೋ ಕ್ಲಿಪ್‌ ನಿಂದ ಇಡೀ ದೇಶದಲ್ಲಿ ಸುದ್ದಿಯಾದ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ ನೋಟಕ್ಕೆ ಇನ್‌ಸ್ಟಾಗ್ರಾಮ್ ಬಳಕೆದಾರರು ಫಿದಾ ಆಗಿದ್ದು, ಸುಮಾರು 2.4 ಮಿಲಿಯನ್ ಮಂದಿ ಆಕೆಯನ್ನು ಫಾಲೋ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಇನ್‌ಸ್ಟಾಗ್ರಾಮ್ ಸಹ ಆಕೆಯ ಆಕೌಂಟ್ ಗೆ ಬ್ಲೂ ಟಿಕ್ ನೀಡಿದ್ದು, ಈ ಮೂಲಕ ತನ್ನ ಅಧಿಕೃತ ಮುದ್ರೆಯನ್ನು ಒತ್ತಿದೆ. ಇದರಿಂದಾಗಿ ಆಕೆಯ ಅಭಿಮಾನಿಗಳ ಸಂಖ್ಯೆ ರಾಮಯಾಣದ ಹನುಮಂತನ ಬಾಲದಂತೆ ಬೆಳೆಯುತ್ತಿದೆ ಎನ್ನಲಾಗಿದೆ.

ಕಣ್ ಹೊಡೆದ ಹುಡುಗಿಗೆ ಇನ್‌ಸ್ಟಾಗ್ರಾಮ್ ಫಿದಾ: 2 ದಿನದಲ್ಲಿ 2.4 ಮಿಲಿಯನ್ ಫಾಲೋರ್ಸ

ಈಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದು, ಟ್ವಿಟರ್ ನಲ್ಲಿ ಹವಾ ಕಾಣಬಹುದಾಗಿದೆ. ಆದರೆ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಇನ್‌ಸ್ಟಾಗ್ರಾಮ್‌ನಲ್ಲಿ ಎನ್ನಲಾಗಿದೆ. ಇದಲ್ಲದೇ ಮತ್ತೊಂದು ಸೆಲ್ಫಿ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅದು ಸಹ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ದಾಖಲೆ:

ಹೊಸ ದಾಖಲೆ:

ಮೊನ್ನೆವರೆಗೂ ಕೇರಳದಲ್ಲಿಯೇ ಯಾರಿಗೂ ತಿಳಿಯದ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ಇಂದು ವಿಶ್ವದ ಟಾಪ್ ಸೆಲೆಬ್ರಟಿಗಳಿಗೆ ಸೆಡ್ಡು ಹೊಡೆದಿದ್ದಾಳೆ. ಒಂದೇ ದಿನದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಫಾಲೋ ಆಗಿರುವ ವಿಶ್ವದ ಮೂರನೇ ಸೆಲೆಬ್ರಿಟಿ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಈಕೆ, ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನಂತರದಲ್ಲಿ ಕಾಣಿಸಿಕೊಂಡಿದ್ದಾಳೆ.

ಒಂದೇ ದಿನದಲ್ಲಿ 6 ಲಕ್ಷ ಮಂದಿ:

ಒಂದೇ ದಿನದಲ್ಲಿ 6 ಲಕ್ಷ ಮಂದಿ:

ಕಣ್ ಹೊಡೆದು ಪಡ್ಡೆಗಳ ಹೃದಯ ಗೆದ್ದಿರುವ ಪ್ರಿಯಾ ಪ್ರಕಾಶ್ ವಾರಿಯರ್ ಹಿಂದಿ ಬಿದ್ದರುವ ಅಭಿಮಾನಿಗಳು, ಇನ್‌ಸ್ಟಾಗ್ರಾಮ್ ನಲ್ಲಿ ಒಂದು ದಿನದಲ್ಲಿ ಸುಮಾರು 6 ಲಕ್ಷ ಅಧಿಕ ಸಂಖ್ಯೆಯಲ್ಲಿ ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

2.4 ಮಿಲಿಯನ್ ಪ್ಲಸ್ ಹಿಂಬಾಲಕರು:

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಹಿಂಬಾಲಕ ಸಂಖ್ಯೆ ಬಾಲಂಗೋಚಿಯಂತೆ ಬೆಳೆಯುತ್ತಾ ಸಾಗುತ್ತಿದ್ದು, ಗಂಟೆಗೊಮ್ಮೆ ಬದಲಾಗುತ್ತಿದೆ. ಸದ್ಯ ಅವರನ್ನು 2.4 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದು, ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗಿಂತಲೂ ಹೆಚ್ಚಿನ ಮಂದಿ ಈಕೆಯನ್ನು ಹಿಂಬಾಲಿಸುತ್ತಿದ್ದಾರೆ.

ಹೈಸ್ಕೂಲ್ ಪ್ರೇಮ ಕಥೆ:

ಹೈಸ್ಕೂಲ್ ಪ್ರೇಮ ಕಥೆ:

`ಒರು ಆಡಾರ್ ಲವ್' ಎಂಬ ಮಲಯಾಳಂ ಚಿತ್ರವು ಹೈ ಸ್ಕೂಲ್ ಪ್ರೇಮ ಕಥೆಯನ್ನು ಹೊಂದಿದ್ದು, ಇದರಲ್ಲಿರುವ `ಮಾಣಿಕ್ಯಾ ಮಾಲಾರಾಯಾ ಪೂವಿ' ಹಾಡಿನ ಪ್ರಿಯಾ ಪ್ರಕಾಶ್ ವಾರಿಯರ್ ಕಾಣಿಸಿಕೊಂಡಿದ್ದು, ಒಂದೇ ಒಂದು ತುಣುಕಿನಲ್ಲಿ ಕಣ್ ಹೊಡೆಯುವ ಮೂಲಕ ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಕಣ್ ಹೊಡೆದು ಆನ್‌ಲೈನಿನಲ್ಲಿ ಹವಾ ಎಬ್ಬಿಸಿದ ಮಲಯಾಳಿ ಸುಂದರಿ..! ಯಾರಿವಳು..?

English summary
Priya Prakash Varrier garners 2.4 million followers on Instagram. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot