ಸ್ಪೈಸ್‌ ನಿಂದ ‘ಎಸ್‌ ಹುವಾವೇ’ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By: Staff
ಸ್ಪೈಸ್‌ ನಿಂದ ‘ಎಸ್‌ ಹುವಾವೇ’ ಸ್ಮಾರ್ಟ್‌ಫೋನ್‌ ಬಿಡುಗಡೆ

ಹುವಾವೇ ಸಂಸ್ಥೆಯ ಸ್ಮಾರ್ಟ್‌ಫೋನ್ಸ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರುವ ಸಲುವಾಗಿ ಭಾರತೀಯ ಮೂಲದ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ಸ್ಪೈಸ್‌ ಗ್ರೂಪ್ಸ್‌ ಚೀನಾ ಮೂಲದ ಸಂಸ್ಥೆಯಾದಂತಹ ಹುವಾವೇ ಯೊಂದಿಗೆ ಪಾಲುದಾರಿಕೆ ಆರಂಭಿಸಿರುವುದಾಗಿ ಸ್ಪೈಸ್‌ ಗ್ರೂಪ್ಸ್‌ ತಿಳಿಸಿದ್ದು, 'ಎಸ್‌ ಹುವಾವೇ' ಬ್ರಾಂಡ್‌ ಹೆಸರಿನಲ್ಲಿ ನೂತನ ಸ್ಮಾರ್ಟ್‌ಫೋನ್ಸ್‌ಗಳನ್ನು ಹೊರತರಲಿದೆ.

ಅಂದಹಾಗೆ ಸ್ಪೈಸ್‌ ಸಂಸ್ಥಯು ಹುವಾವೇ ಸಂಸ್ಥೆಯೊಂದಿಗೆ ಕೈಜೋಡಿಸಿ 7 ರಿಂದ 10 ಮಾದರಿಯ ಸ್ಮಾರ್ಟ್‌ಫೋನ್ಸ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಅಲ್ಲದೆ ಜಾಗತಿಕವಾಗಿ ಜೂನ್‌ 2013 ರ ವೇಳೆಗೆ 10 ದಶಲಕ್ಷ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದು ಇದರಲ್ಲಿ 7.5 ದಷಲಕ್ಷ 2ಜಿ ಸ್ಮಾರ್ಟ್‌ಫೋನ್ಸ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ ಎಂದು ತಿಳಿಸಿದೆ.

ಸ್ಪೈಸ್‌ ಈಗಾಗಲೇ ತನ್ನಯ ನೂತನ ಆಂಡ್ರಾಯ್ಡ್‌ 3ಜಿ ಸ್ಮಾರ್ಟ್‌ಫೋನ್‌ ಆದಂತಹ ಅಸ್ಸೆಂಡ್ ವೈ 100 ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದೀಗ ಚೀನಾ ಮೂಲದ ಸ್ಮಾರ್ಟ್‌ಫೋನ್ಸ್‌ ತಯಾರಕರಾದ ಹುವಾವೇ ಯೊಂದಿಗೆ ಕೈಜೋಡಿಸಿ ರೂ. 5,990 ದರದಲ್ಲಿ ಎಸ್‌ ಹುವಾವೇ ಸ್ಮಾರ್ಟ್‌ಪೋನ್ಸ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ಅಲ್ಲದೆ ಎಸ್‌ ಹುವಾವೇ ಬ್ರಾಂಡ್‌ ಹೆಸರಿನಲ್ಲಿ 2013ರ ಜೂನ್‌ ಅಂತ್ಯದ ವೇಳೆಗೆ ಒಂದು ದಶಲಕ್ಷ್‌ ಸ್ಮಾರ್ಟ್‌ಫೋನ್ಸ್‌ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಎರಡೂ ಸಂಸ್ಥೆಗಳು ಜಂಟಿಯಾಗಿ ಹೊರತರಲಿರುವ ಎಸ್‌ ಹುವಾವೇ ಸ್ಮಾರ್ಟ್‌ಫೋನ್ಸ್‌ಗಳು ದೇಶದಾದ್ಯಂತ ಸ್ಪೈಸ್‌ ಹಾಟ್‌ ಸ್ಒಆಟ್‌ ರೀಟೇಲ್‌ ಶಾಪ್‌ಗಳಲ್ಲಿ ದೊರೆಯಲಿದೆ.

ಅಂದಹಾಗೆ ಸ್ಪೈಸ್‌ ಇದೀಗ ತಾನೆ ಹೊರತಂದಂತಹ 3ಜಿಸ್ಮಾರ್ಟ್‌ಫೋನ್‌ ಆದಂತಹ ಅಸ್ಸೆಂಡ್‌ 100 ನಲ್ಲಿನ ವಿಶೇಷತೆಗಳೇನೆಂಬುದನ್ನು ತಿಳಿದುಕೊಳ್ಳೋಣ.

  • 2.8 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ.

  • 320 × 240 ರೆಸೆಲ್ಯೂಷನ್‌.

  • 800 ಮೆಘಾಹರ್ಟ್‌ ಕ್ವಾಲ್‌ಕಾಮ್‌ ಸ್ನಾಪ್‌ ಡ್ರಾಗನ್‌ ಪ್ರೊಸೆಸರ್‌.

  • 3.2 MP ಕ್ಯಾಮೆರಾ.

  • 2.3 ಜಿಂಜರ್‌ ಬ್ರಡ್‌ ಓಎಸ್‌.

  • 256 MB RAM.

  • 512 MB ಇಂಟರ್ನಲ್‌ ಮೆಮೊರಿ.

  • 32 GB ವರೆಗಿನ ಮೆಮೊರಿ ವಿಸ್ತರಣೆ.

  • ವೈ-ಫೈ,ಬ್ಲೂಟೂತ್‌, GPS ಹಾಗೂ 3 ಬೆಂಬಲಿತ.

  • ಬೆಲೆ- 5,999 ರೂ.ಗಳು.

Read In English...

10,000 ರೂ.ದರದಲ್ಲಿನ 3ಜಿ ಸ್ಮಾರ್ಟ್‌ಫೋನ್ಸ್‌

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot