ಕೇವಲ 179ರೂ.ಗೆ ಕುಟುಂಬ ಸದಸ್ಯರು ಈಗ 'ಸ್ಪಾಟಿಫೈ ಮ್ಯೂಸಿಕ್‌' ಕೇಳಬಹುದು!

|

ಪ್ರಸ್ತುತ ಮ್ಯೂಸಿಕ್‌ ಕೇಳಲು ಅನೇಕ ಆನ್‌ಲೈನ್‌ ಆಪ್‌ಗಳು ಸಿಗುತ್ತವೆ. ನೆಚ್ಚಿನ ಹಾಡುಗಳು, ಜನಪ್ರಿಯ ಹಾಡುಗಳನ್ನು ಯಾವಾಗ ಬೇಕಾದರೂ ಕೇಳಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಸದ್ಯ ಭಾರತೀಯ ಮ್ಯೂಸಿಕ್ ಮಾರುಕಟ್ಟೆಯಲ್ಲಿ ವಿಶ್ವದ ಜನಪ್ರಿಯ 'ಸ್ಪಾಟಿಫೈ' ಮ್ಯೂಸಿಕ್ ಸಂಸ್ಥೆಯು ಅಬ್ಬರಿಸುತ್ತಿದ್ದು, ಸ್ಪಾಟಿಫೈ ಸಂಸ್ಥೆಯು ಇದೀಗ ದೇಶಿಯ ಮ್ಯೂಸಿಕ್ ಪ್ರಿಯರಿಗೆ ಬಾರಿ ಸಂತೋಷದ ಸಂಗತಿಯೊಂದನ್ನು ನೀಡಿದೆ.

ಸ್ಪಾಟಿಫೈ

ಹೌದು, ಸ್ವೀಡಿಷ್ ಮೂಲದ 'ಸ್ಪಾಟಿಫೈ' ಕಂಪನಿಯು ಕೇವಲ 179ರೂ.ಗಳಿಗೆ ಈಗ ಹೊಸದಾಗಿ 'ಫ್ಯಾಮಿಲಿ ಪ್ಲ್ಯಾನ್‌' ಚಂದಾದಾರಿಕೆಯನ್ನು ಪರಿಚಯಿಸಿದ್ದು, ಈ ಪ್ಲ್ಯಾನ್‌ ಒಂದು ತಿಂಗಳ ವಾಯಿದೆಯನ್ನು ಒಳಗೊಂಡಿರುತ್ತದೆ. ಕುಟುಂಬದ ಒಟ್ಟು ಆರು ಜನರು ಸ್ಪಾಟಿಫೈ ಮ್ಯೂಸಿಕ್ ಸೌಲಭ್ಯವನ್ನು ಪಡೆಯಬಹುದು. ಹಾಗಾದರೇ ಸ್ಪಾಟಿಫೈ ಮ್ಯೂಸಿಕ್‌ ಆಪ್‌ನ 'ಫ್ಯಾಮಿಲಿ ಪ್ಲ್ಯಾನ್‌' ಕುರಿತಾಗಿ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಫ್ಯಾಮಿಲಿ ಪ್ಲ್ಯಾನ್‌

ಫ್ಯಾಮಿಲಿ ಪ್ಲ್ಯಾನ್‌

ಸ್ಪಾಟಿಫೈ ಮ್ಯೂಸಿಕ್ ಸಂಸ್ಥೆಯು ಹೊಸದಾಗಿ ಫ್ಯಾಮಿಲಿ ಫ್ಯಾಮಿಲಿ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಒಂದು ತಿಂಗಳಿಗೆ ಕೇವಲ 179ರೂ.ಗಳ ಚಂದಾಶುಲ್ಕವನ್ನು ನಿಗದಿಪಡಿಸಿದೆ. ಈ ಪ್ಲ್ಯಾನಿನಲ್ಲಿ ಕುಟುಂಬದ ಆರು ಸದಸ್ಯರು ಪ್ರತ್ಯೇಕವಾಗಿ ಮ್ಯೂಸಿಕ್ ಆಕ್ಸಸ್‌ ಮಾಡಬಹುದಾಗಿದೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟು ಈ ಪ್ಲ್ಯಾನ್ ರೂಪಿಸಲಾಗಿದೆ.

ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!

ಪ್ರಾದೇಶಿಕ ಭಾಷೆಗೆ ಮನ್ನಣೆ

ಪ್ರಾದೇಶಿಕ ಭಾಷೆಗೆ ಮನ್ನಣೆ

ಸ್ಪಾಟಿಫೈ ಮ್ಯೂಸಿಕ್ ಆಪ್ ನಲ್ಲಿ ಹಿಂದಿಯ ಬಾಲಿವುಡ್ ಹಾಡುಗಳೊಂದಿಗೆ ಐದು ಸ್ಥಳೀಯ ಪ್ರಾದೇಶಿಕ ಭಾಷೆಗಳಾದ ಪಂಜಾಬಿ, ತಮಿಳ,ತೆಲಗು, ಮಲಯಾಳಂ ಮತ್ತು ಬಂಗಾಲಿ ಭಾಷೆಗಳನ್ನು ಸಹ ಕೇಳುಗರಿಗೆ ನೀಡಲಾಗುವುದು. ಭಾರತದಲ್ಲಿ ಜನಪ್ರಿಯತೆ ಗಳಿಸಿಲು ಪ್ರದೇಶಿಕ ಭಾಷೆಗಳಿಗೆ ಬೆಂಬಲ ನೀಡುವುದು ಅಗತ್ಯ ಎನ್ನುವುದನ್ನು ಕಂಪನಿ ಅರಿತುಕೊಂಡಿದೆ.

ಪೈಪೋಟಿ

ಪೈಪೋಟಿ

ಸ್ಪಾಟಿಫೈ ಮ್ಯೂಸಿಕ್ ಆಪ್, ದೇಶಿಯ ಜನಪ್ರಿಯ ಮ್ಯೂಸಿಕ್ ಆಪ್‌ಗಳಾದ ಗಾನಾ, ಸಾವನ್ ಮತ್ತು ಆಪಲ್ ಮ್ಯೂಸಿಕ್‌ಗಳೊಂದಿಗೆ ನೇರ ಪೈಪೋಟಿ ನಡೆಸುತ್ತಿದ್ದು, ಹೊಸ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತ ಸಾಗಿದೆ. ಹಾಗೆಯೇ ಆಪಲ್ ಮತ್ತು ಯೂಟ್ಯೂಬ್ ಸಹ ಪ್ರಬಲ್ ಎದುರಾಳಿ ಸಂಸ್ಥೆಗಳೆನಿಸಿವೆ. ಆಪಲ್‌ ಮ್ಯೂಸಿಕ್‌ ಫ್ಯಾಮಿಲಿ ಪ್ಲ್ಯಾನ್‌ ತಿಂಗಳ ಚಂದಾದಾರಿಕೆಯ ಶುಲ್ಕ 149ರೂ.ಗಳಾಗಿದೆ.

ಆಪ್‌ ಡೌನ್‌ಲೋಡ್‌

ಆಪ್‌ ಡೌನ್‌ಲೋಡ್‌

ಸ್ಪಾಟಿಫೈ ಮ್ಯೂಸಿಕ್ ಆಪ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್‌ ಸ್ಟೋರ್‌ಗಳಲ್ಲಿ ದೊರೆಯಲಿದ್ದು, ಅಂಡ್ರಾಯ್ಡ್‌ ಮತ್ತು ಐಓಎಸ್ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರು ಡೇಸ್ಕ್‌ಟಾಪ್‌ನಲ್ಲಿಯೂ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಓದಿರಿ : 'ರಿಯಲ್ ಮಿ ಬಡ್ಸ್‌' ಖರೀದಿಗೆ ಯೋಗ್ಯವೇ?..ಇಲ್ಲಿದೆ ವಿಮರ್ಶೆ!ಓದಿರಿ : 'ರಿಯಲ್ ಮಿ ಬಡ್ಸ್‌' ಖರೀದಿಗೆ ಯೋಗ್ಯವೇ?..ಇಲ್ಲಿದೆ ವಿಮರ್ಶೆ!

Best Mobiles in India

English summary
The Spotify family subscription has been priced at Rs 179 per month. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X