ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಪ್ರಿಂಟಿಂಗ್ ಮಶೀನ್‌ಗೆ ಪೇಪರ್ ಹಾಕಿ ಹಾಕಿ ಸುಸ್ತಾಗಿ ಹೋಗಿದ್ದೀರಾ? ಹಾಗಾದ್ರೆ ಇನ್ನೂ ಮುಂದೆ ಪೇಪರ್ ಹಾಕಲು ಸುಸ್ತಾಗಬೇಕಿಲ್ಲ.ಹೊಸ ಪ್ರಿಂಟರ್‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದು ಸುಲಭವಾಗಿ ಪ್ರಿಂಟರ್‌ನಲ್ಲಿ ಪ್ರಿಂಟ್ ತೆಗೆಯಬಹುದು.
ಹೌದು.ಪ್ರಿಂಟಿಂಗ್ ಮಶೀನ್ ಇತಿಹಾಸದಲ್ಲೇ ಅಭಿವೃದ್ಧಿ ಪಡಿಸದ ಹೊಸ ಯಂತ್ರವನ್ನು ವಿದ್ಯಾರ್ಥಿ ಸಂಶೋಧಕರೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಹೊಸ ಸಂಶೋಧನೆ ವಿಶ್ವದ ಪ್ರತಿಷ್ಠಿತ ಜೇಮ್ಸ್ ಡೈಸನ್ ಪ್ರಶಸ್ತಿಯ (James Dyson Award) ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದ್ದು ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ಏನಿದು ಈ ಹೊಸ ತಂತ್ರಜ್ಞಾನ,ಹೇಗೆ ಪ್ರಿಂಟ್ ತೆಗೆಯಬಹುದು ಎನ್ನುವ ಮಾಹಿತಿ ಇಲ್ಲಿದೆ,ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ: ಪ್ಲಾಸ್ಟರ್ ಆಫ್ ಬ್ಯಾಂಡೇಜ್ ಬದಲಿಗೆ ಹೊಸ 3ಡಿ ಫೈಬರ್ ಗ್ಲಾಸ್ ಬ್ಯಾಂಡೇಜ್

ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಫ್ರಾನ್ಸ್ ದೇಶದ ವಿದ್ಯಾರ್ಥಿ ಮುಗಿ ಯಮಾಮೊಟೊ(Mugi Yamamoto) ಸ್ಟ್ಯಾಕ್(Stack)ಹೊಸ ಇಂಕ್‌ಜೆಟ್ ಪ್ರಿಂಟರ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಿಂಟರ್‌ನಲ್ಲಿ ಪೇಪರ್‌ನ್ನು ಬಲಗಡೆ,ಎಡಗಡೆ ಅಥವಾ ಮೇಲುಗಡೆ ಹಾಕಿದರೆ ಪ್ರಿಂಟ್ ಆಗುತಿತ್ತು.ಆದರೆ ಈ ಪ್ರಿಂಟರ್‌ನಲ್ಲಿ ಹಾಗಲ್ಲ. ಪ್ರಿಂಟರ್ ಕೆಳಗಡೆಯಿಂದ ಪೇಪರ್‌ನ್ನು ಪ್ರಿಂಟ್ ಮಾಡುತ್ತದೆ.

ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಇನ್ನೂ ಬಳಕೆದಾರರು ಇಂತಿಷ್ಟೇ ಪ್ರಮಾಣದ ಪೇಪರನ್ನು ಪ್ರಿಂಟ್ ಮಾಡಲು ಇಡಬೇಕಾಗಿಲ್ಲ. ಪೇಪರ್‌ಗಳ ಮೇಲೆ ಪ್ರಿಂಟರ್ ಇರಿಸಿದರೆ ಆಯಿತು. ಪ್ರಿಂಟ್ ಆಯ್ಕೆ ನೀಡಿದ ಕೂಡಲೇ ಪ್ರಿಂಟರ್ ಪ್ರಿಂಟ್ ತೆಗೆಯಲು ಆರಂಭಿಸುತ್ತದೆ.ತೆಗೆದ ಪ್ರಿಂಟ್ ಮೇಲುಗಡೆ ಬರುತ್ತಿರುತ್ತದೆ.

ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಈ ಪ್ರಿಂಟರ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಸದ್ಯಕ್ಕೆ ಎ4 ಅಳತೆಯ ಪೇಪರ್‌ಗಳನ್ನು ಪ್ರಿಂಟ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಿಂಟರ್‌ಗೆ ಮತ್ತಷ್ಟು ವಿಶೇಷತೆಗಳನ್ನು ಸೇರಿಸಲು ಸಂಶೋಧಕರು ಮುಂದಾಗುತ್ತಿದ್ದಾರೆ.

ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಸದ್ಯಕ್ಕೆ ಇದು ಕಿರಿಯ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನಗಳಿಗೆ ನೀಡುವ ವಿಶ್ವ ಮಟ್ಟದ ಜೇಮ್ಸ್ ಡೈಸನ್ ಪ್ರಶಸ್ತಿಯ (James Dyson Award) ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದೆ.

ಹೊಸ ಪ್ರಿಂಟರ್:ಪೇಪರ್ ಮೇಲೆ ಇಡಿ. ಪ್ರಿಂಟ್ ತೆಗೆಯಿರಿ
ಸ್ಟ್ಯಾಕ್(Stack)ಹೊಸ ಇಂಕ್‌ಜೆಟ್ ಪ್ರಿಂಟರ್

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು: www.mugiyamamoto.com

Click it and Unblock the Notifications