ಕನ್ನಡದಲ್ಲಿ ಮೊದಲ ಸ್ಪೋರ್ಟ್ಸ್ ಚಾನಲ್: ಆನ್‌ಲೈನ್ ನಲ್ಲೂ ಲಭ್ಯ..!
ಹೌದು ಮೂಲಗಳ ಪ್ರಕಾರ ಸ್ಟಾರ್ ನೆಟ್‌ವರ್ಕ್ ಕನ್ನಡದಲ್ಲಿ ಸ್ಟಾರ್ ಸ್ಪೋರ್ಟ್ಸ್ ಆರಂಭಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಶೀಘ್ರವೇ ಕನ್ನಡಕ್ಕೂ ಕಾಲಿಡಲಿದೆ.
ಈಗಾಗಲೇ ಕನ್ನಡಲ್ಲಿ ಸಿನಿಮಾಗಾಗಿ ಪ್ರತ್ಯೇಕ, ಹಾಡುಗಳಿಗಾಗಿ ಪ್ರತ್ಯೇಕ ಮತ್ತು ಸುದ್ದಿಗಳಿಗಾಗಿಯೇ ಪ್ರತ್ಯೇಕವಾದ ಚಾನಲ್‌ಗಳು, ಭಕ್ತಿ ಪ್ರದಾನ ಚಾನಲ್‌ಗಳನ್ನು ನೋಡಬಹುದಾಗಿತ್ತು, ಇದಕ್ಕೆ ಹೊಸ ಸೇರ್ಪಡೆ ಮೊದಲ ಸ್ಪೋರ್ಟ್ಸ್ ಚಾನಲ್.

ಓದಿರಿ: SMS ಮೂಲಕ ಆಧಾರ್ - ಮೊಬೈಲ್ ಸಂಖ್ಯೆ ಲಿಂಕ್ ಮಾಡಿ..!
ಹೌದು ಮೂಲಗಳ ಪ್ರಕಾರ ಸ್ಟಾರ್ ನೆಟ್‌ವರ್ಕ್ ಕನ್ನಡದಲ್ಲಿ ಸ್ಟಾರ್ ಸ್ಪೋರ್ಟ್ಸ್ ಆರಂಭಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಶೀಘ್ರವೇ ಕನ್ನಡಕ್ಕೂ ಕಾಲಿಡಲಿದೆ ಎನ್ನಲಾಗಿದೆ.

ನವೆಂಬರ್ 16ಕ್ಕೆ ಕಾರ್ಯಾರಂಭ..?
ಸ್ಟಾರ್ ನೆಟ್ ವರ್ಕ್ ಕನ್ನಡದಲ್ಲಿ ಸ್ಟಾರ್ ಸ್ಫೋರ್ಟ್ಸ್ ಚಾನಲ್ ಆರಂಭಿಸಲು ಕಳೆದ ಕೆಲವು ದಿನಗಳಿಂದಲೇ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಪ್ರಕಾರ ನವೆಂಬರ್ 16ರಂದು ಚಾನೆಲ್ ಆರಂಭಿಸಲು ಸ್ಟಾರ್ ನೆಟ್ ವರ್ಕ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಉತ್ತಮ ಮಾರ್ಕೆಟ್:
ಈಗಾಗಲೇ ಕರ್ನಾಟಕದಲ್ಲಿ ಕ್ರೀಡೆಗೆ ಹೆಚ್ಚಿನ ಬೆಲೆ ಇದೆ. ಪ್ರೊ ಲೀಗ್ ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡಗಳು ಈಗಾಗಲೇ ಇರುವುದರಿಂದ ವರ್ಷ ಪೂರ್ತಿ ಕ್ರೀಡಾ ಚಟುವಟಿಕೆ ಇರಲಿದೆ. ಇದರಿಂದ ಉತ್ತಮ ಲಾಭ ಇದೆ ಎನ್ನಲಾಗಿದೆ.

ಕರ್ನಾಟಕ ತಂಡಗಳು:
ಈಗಾಗಲೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ತಂಡಗಳು ಕಾಣಿಸಿಕೊಂಡಿವೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಎಸ್ಎಲ್ ನಲ್ಲಿ ಬೆಂಗಳೂರು ಎಫ್ ಸಿ, ಕರ್ನಾಟಕ ಪ್ರಿಮಿಯರ್ ಲೀಗ್ ಸೇರಿದಂತೆ ಸಾಕಷ್ಟು ತಂಡಗಳು ಇದೆ ಈ ಹಿನ್ನಲೆಯಲ್ಲಿ ಸ್ಟಾರ್ ನೆಟ್ ವರ್ಕ್ ಕನ್ನಡಕ್ಕೂ ಕಾಲಿಟ್ಟಿದೆ.

ಆನ್‌ಲೈನ್‌ನಲ್ಲಿಯೂ ಲಭ್ಯ:
ಇದಲ್ಲದೇ ಕನ್ನಡದಲ್ಲಿ ಬರುವ ಸ್ಟಾರ್ ಸ್ಫೋರ್ಟ್ಸ್ ಚಾನಲ್ ಆನ್‌ಲೈನಿನಲ್ಲಿಯೂ ಸ್ಟ್ರಿಮ್ ಆಗಲಿದೆ. ಇದಲ್ಲದೇ ಕನ್ನಡದಲ್ಲೇ ನೀವು ಕ್ರೀಡೆಗಳನ್ನು ನೋಡಬಹುದಾಗಿದೆ.


Click it and Unblock the Notifications








