ವಾಟ್ಸಪ್‌ ಸ್ಕ್ಯಾಮ್‌ ಬಗ್ಗೆ ಎಚ್ಚರವಿರಿ!..OTP ನೀಡಿ ಯಾಮಾರಬೇಡಿ.!

|

ಬ್ಯಾಂಕಿನ ಕೆಲಸಗಳನ್ನು ಮುಗಿಸಿಕೊಳ್ಳಲು ಇದೀಗ ಬ್ಯಾಂಕಿಗೆ ಹೋಗಲೇ ಬೇಕೆಂದೆನು ಇಲ್ಲ. ಪ್ರಸ್ತುತ ಸ್ಮಾರ್ಟ್‌ಪೋನ್‌ ಮೂಲಕ ಆನ್‌ಲೈನ್‌ ಬ್ಯಾಂಕಿಂಗ್ ವ್ಯವಹಾರ ಸಾಕಷ್ಟು ಅನುಕೂಲಕರವಾಗಿದ್ದು ಮತ್ತು ಸುರಕ್ಷಿತವೂ ಆಗಿದೆ. ಆದರೆ ನೀವು ಸ್ವಲ್ಪ ಯಾಮಾರಿದಿರೋ ನಿಮ್ಮ ಹಣ ಮಂಗಮಾಯ ಮಾಡುವ ಸ್ಮಾರ್ಟ್‌ ದಾರಿಗಳನ್ನು ಖದೀಮರು ಕಂಡುಕೊಂಡಿದ್ದಾರೆ.

ವಾಟ್ಸಪ್‌ ಸ್ಕ್ಯಾಮ್‌ ಬಗ್ಗೆ ಎಚ್ಚರವಿರಿ!..OTP ನೀಡಿ ಯಾಮಾರಬೇಡಿ.!

ಗ್ರಾಹಕರಿಗೆ ಬ್ಯಾಂಕಿನಿಂದ ಕರೆ ಮಾಡಿರುವುದಾಗಿ ಹೇಳಿ ಅವರ ಬ್ಯಾಂಕ್ ಖಾತೆಯ ವ್ಯಯಕ್ತಿಕ ಮಾಹಿತಿಗಳನ್ನು ಪಡೆದು ಹಣ ದೋಚುವ ಘಟನೆಗಳನ್ನು ಕೇಳಿದ್ದೆವೇ ಆದರೆ ಇದೀಗ ಪ್ರಮುಖ ಮೆಸೆಜಿಂಗ್ ಆಪ್‌ ವಾಟ್ಸಪ್‌ ಮೂಲಕ ಬ್ಯಾಂಕ್ ಖಾತೆ ಮಾಹಿತಿ ಕೇಳಿ ಹಣ ದೋಚುವ ಪ್ರಯತ್ನಗಳು ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಹಕರು ಜಾಗೃತರಾಗಿರಬೇಕು ಎಂದು ಎಸ್‌ಬಿಐ ತಿಳಿಸಿದೆ.

ವಾಟ್ಸಪ್‌ ಸ್ಕ್ಯಾಮ್‌ ಬಗ್ಗೆ ಎಚ್ಚರವಿರಿ!..OTP ನೀಡಿ ಯಾಮಾರಬೇಡಿ.!

ವಾಟ್ಸಪ್‌ನಲ್ಲಿ ಬ್ಯಾಂಕ್‌ ಖಾತೆಯ ಮಾಹಿತಿ ಕೇಳಿ ಯಾವುದಾರೂ ಮೆಸ್ಸೆಜ್ ಬಂದರೇ ಅಂಥ ಯಾವುದೇ ಅನುಮಾನಾಸ್ಪದ ಮಸ್ಸೆಜ್‌ಗಳಿಗೆ ಪ್ರತಿಕ್ರಿಯೇ ನೀಡಬಾರದು. ಆ ಕುರಿತು ಬ್ಯಾಂಕಿಗೆ ಮಾಹಿತಿ ನೀಡಿ. ಹಾಗಾದರೇ ಖದೀಮರು ವಾಟ್ಸಪ್ ಮೂಲಕ ಯಾವ ರೀತಿ ಪ್ರಯತ್ನಗಳನ್ನು ನಡೆಸುತ್ತಾರೆ ಮತ್ತು ಗ್ರಾಹಕರಿಗೆ ಫ್ರಾಡ್‌ ಮೆಸ್ಸೆಜ್ ಬಂದರೇ ಏನು ಮಾಡಬೇಕು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಕಳ್ಳರ ಹೊಸ ದಾರಿ.!

ಕಳ್ಳರ ಹೊಸ ದಾರಿ.!

ಖದೀಮರು OTP ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಅವರ ವಿಶ್ವಾಸ ಗೆಲ್ಲುತ್ತಾರೆ. ಇದರಿಂದ ಗ್ರಾಹಕರು ನಿಜವಾದ OTP ಯನ್ನು ಹಂಚಿಕೊಳ್ಳಲು ಮುಂದಾಗುತ್ತಾರೆ ಇದು ಒಂದು ಪ್ರಯತ್ನವಾದರೇ, ಗ್ರಾಹಕರ ವಾಟ್ಸಪ್‌ಗೆ ಲಿಂಕ್ ಒಂದನ್ನು ಕಳುಹಿಸಿ ಅದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಲು ತಿಳಿಸುತ್ತಾರೆ. ಅದು ದುರುದ್ದೇಶದ ಆಪ್‌ ಆಗಿದ್ದು, OTP ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ.!

ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ.!

ಬ್ಯಾಂಕ್‌ ಸಿಬ್ಬಂದಿ ಎಂದು ಕರೆಮಾಡಿ ನಿಮ್ಮ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಅನ್ನು ಹೊಸ ಕಾರ್ಡಿಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬೇಕು ಎಂದು ಹೇಳಿ ಅವರು ಡೇಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ನಂಬರ್, CVV ನಂಬರ್, ಕಾರ್ಡ್‌ ಮಾನ್ಯತೆಯ ಕಡೆ ದಿನಾಂಕದ ಮಾಹಿತಿಯನ್ನು ಕೇಳಿ ಪಡೆಯುತ್ತಾರೆ ನಂತರದಲ್ಲಿ SMS ಅಥವಾ ವಾಟ್ಸಪ್‌ನಲ್ಲಿ ಕನ್ಫರ್ಮ್‌ಮೇಶನ್ ಮೆಸ್ಸೆಜ್ ಬರುತ್ತದೆ ಎಂದು ಹೇಳುತ್ತಾರೆ.

ದೃಢಿಕರಣ ಮೆಸ್ಸೆಜ್!

ದೃಢಿಕರಣ ಮೆಸ್ಸೆಜ್!

ವಾಟ್ಸಪ್‌ ಅಥವಾ SMS ಮೂಲಕ ಗ್ರಾಹಕರ ಫೋನಿಗೆ ಬರುವ ಆ ಕನ್ಫರ್ಮ್‌ಮೇಶನ್ ಮೆಸ್ಸೆಜ್ ದುರದ್ದೇಶದ ಲಿಂಕ್ ಹೊಂದಿದ್ದು, ದೃಢಿಕರಣಕ್ಕಾಗಿ ಗ್ರಾಹಕರು ಆ ಲಿಂಕ್‌ನು ಒತ್ತುತ್ತಾರೆ. ಆ ನಂತರದಲ್ಲಿ ಗ್ರಾಹಕರಿಗೆ ಬರುವ OTPಗಳು ಖದೀಮರು ಫೋನಿಗೆ ರವಾನೆಯಾಗುತ್ತವೆ.

ಗ್ರಾಹಕರು ಏನು ಮಾಡಬೇಕು.?

ಗ್ರಾಹಕರು ಏನು ಮಾಡಬೇಕು.?

ನಿಮ್ಮ ಬ್ಯಾಂಕ್‌ ಖಾತೆಯ ಮಾಹಿತಿ ಕೇಳುವ ಮೆಸ್ಸೆಜ್‌ಗಳು ಬಂದರೇ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಬೇಕು. ಒಂದು ವೇಳೆ ನೀವು OTP ನೀಡಿ ಮೋಸಕ್ಕೆ ಒಳಗಾಗಿದ್ದರೇ 1-800-111109 ಈ ನಂಬರ್‌ಗೆ ಕರೆ ಮಾಡಿ ದೂರು ನೀಡಿ. ಅಥವಾ "Problem" ಎಂದು ಟೈಪ್‌ ಮಾಡಿ 9212500888 ನಂಬರ್‌ಗೆ SMS ಮಾಡಬಹುದು ಅಥವಾ Twitter @SBICard_Connect ದೂರು ನೀಡಬಹುದು. ನಿಮ್ಮ ಅಜಾಗರೂಕತೆಯಿಂದ ಮೋಸ ಹೋದರೇ ಅದಕ್ಕೆ ನೀವೆ ಹೊಣೆ.

ಜಾಗೃತರಾಗಿರಿ

ಜಾಗೃತರಾಗಿರಿ

ಬ್ಯಾಂಕ್ ಸಿಬ್ಬಂದಿ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಯಾವುದೇ ಮಾಹಿತಿ ಮತ್ತು OTP ಕೇಳುವುದಿಲ್ಲ. ಹೀಗಾಗಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಈ ಬಗ್ಗೆ ಬ್ಯಾಂಕ್‌ನವರು ನಿರಂತರ ಮಾಹಿತಿಯನ್ನು ನೀಡುತ್ತಲೇ ಇದ್ದು, ಗ್ರಾಹಕರು ಜಾಗೃತರಾಗಬೇಕಿದೆ.

Best Mobiles in India

English summary
State Bank of India (SBI) is warning users about this WhatsApp scam: All you must know.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X