ಸೊನ್ನೆಯಿಂದ 100% ಕ್ಕೆ ಫೋನ್ ಚಾರ್ಜಿಂಗ್ ನಿಲ್ಲಿಸಿ

By Shwetha
|

ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ತೊಂದರೆ ಕೊಡುವಂತಹ ಪ್ರಮುಖ ಸಮಸ್ಯೆ ಎಂದರೆ ಬ್ಯಾಟರಿಯಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಡಿವೈಸ್‌ಗಳಲ್ಲಿರುವ ಬ್ಯಾಟರಿಗಳಿಗೆ 300-500 ಆವರ್ತನಗಳಿವೆ ಎಂಬುದಾಗಿ ಹೇಳುತ್ತಾರೆ. ಆಪಲ್ ಹೇಳುವಂತೆ ಅವರ ಬ್ಯಾಟರಿಗಳು 80 ಶೇಕಡಾದಷ್ಟು ಚಾರ್ಜ್ ಅನ್ನು ತಲುಪುತ್ತವೆ ಎನ್ನುವುದಾಗಿದೆ. ಬ್ಯಾಟರಿಗಳು ಹೆಚ್ಚಿನ ಇಲೆಕ್ಟ್ರಿಸಿಟಿ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಮತ್ತು ದಿನಗಳೆದಂತೆ ಫೋನ್‌ಗೆ ಚಾರ್ಜ್ ಮಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಓದಿರಿ:ಶರವೇಗದಲ್ಲಿ ಫೋನ್‌ ಚಾರ್ಜಿಂಗ್ ಮಾಡಬೇಕೇ? ಇಲ್ಲಿದೆ ಟಿಪ್ಸ್

ಇಂದಿನ ಲೇಖನದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ವೃದ್ಧಿಸುವ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು, ಸೊನ್ನೆಯಿಂದ 100% ದವರೆಗೆ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಸೊನ್ನೆಯಿಂದ 100 ಶೇಕಡಾಕ್ಕೆ ಫೋನ್ ಚಾರ್ಜ್

ಸೊನ್ನೆಯಿಂದ 100 ಶೇಕಡಾಕ್ಕೆ ಫೋನ್ ಚಾರ್ಜ್

ಲಿಯೋನ್ ಬ್ಯಾಟರಿಗಳು ತಮ್ಮ ಚಾರ್ಜ್ ಅನ್ನು 50% ದಷ್ಟು ಹಿಡಿದಿಟ್ಟುಕೊಳ್ಳುತ್ತವೆ. ಇದು ಇದಕ್ಕಿಂತ ಕಡಿಮೆಗೆ ಹೋದಾಗ ಚಾರ್ಜ್ ಮಾಡಿ ಆದರೆ 100% ದಷ್ಟು ಫೋನ್ ಚಾರ್ಜ್ ಅನ್ನು ಮಾಡದಿರಿ.

ಲಿಯೋನ್ ಬ್ಯಾಟರಿ

ಲಿಯೋನ್ ಬ್ಯಾಟರಿ

ಲಿಯೋನ್ ಬ್ಯಾಟರಿಗಳ ಚಾರ್ಜಿಂಗ್ ಲಕ್ಷ್ಯ 40% ದಿಂದ 80% ವಾಗಿರಲಿ. ಬ್ಯಾಟರಿ 20% ಕ್ಕೆ ಇಳಿದಾಗ ಫೋನ್ ಚಾರ್ಜ್ ಮಾಡಿ.

ಪೂರ್ಣ ಬ್ಯಾಟರಿ ಚಾರ್ಜ್

ಪೂರ್ಣ ಬ್ಯಾಟರಿ ಚಾರ್ಜ್

ತಜ್ಞರು ಹೇಳುವಂತೆ ಪೂರ್ಣ ಸೊನ್ನೆಯಿಂದ 100% ದವರೆಗೆ ಫೋನ್ ಚಾರ್ಜ್ ಅನ್ನು ತಿಂಗಳಿಗೆ ಒಮ್ಮೆ ಮಾತ್ರ ನಡೆಸಿದರೆ ಸಾಕಂತೆ. ಲ್ಯಾಪ್‌ಟಾಪ್‌ಗಳಿಗೂ ಇದೇ ನಿಯಮ ಸರಿ.

ರಾತ್ರಿ ಫೋನ್ ಚಾರ್ಜ್ ಮಾಡುವುದು

ರಾತ್ರಿ ಫೋನ್ ಚಾರ್ಜ್ ಮಾಡುವುದು

ಹೆಚ್ಚಿನ ಆಧುನಿಕ ಸ್ಮಾರ್ಟ್‌ಫೋನ್‌ಗಳು ಚಾರ್ಜ್ ಪೂರ್ಣಗೊಂಡಾಗ ಚಾರ್ಜ್ ಅನ್ನು ನಿಲ್ಲಿಸಿಕೊಳ್ಳುತ್ತವೆ. ಆದ್ದರಿಂದ ರಾತ್ರಿಪೂರ್ತಿ ಚಾರ್ಜರ್‌ನಲ್ಲಿ ನಿಮ್ಮ ಫೋನ್ ಅನ್ನು ಬಿಟ್ಟರೂ ಅಷ್ಟೇನೂ ಹಾನಿ ಸಂಭವಿಸಲಿಕ್ಕಿಲ್ಲ.

ದೀರ್ಘ ಸಮಯದ ಚಾರ್ಜಿಂಗ್

ದೀರ್ಘ ಸಮಯದ ಚಾರ್ಜಿಂಗ್

ಆದರೆ ಕೆಲವರು ಅನುಭವಿಗಳು ಹೇಳುವಂತೆ ದೀರ್ಘ ಸಮಯದವರೆಗೆ ಫೋನ್ ಚಾರ್ಜಿಂಗ್ ಅನ್ನು ನಡೆಸಬೇಡಿ ಎಂಬುದಾಗಿದೆ. ಲಿಥಿಯಮ್ ಬ್ಯಾಟರಿಗಳು ಹೆಚ್ಚುವರಿ ಚಾರ್ಜ್‌ನಿಂದಾಗಿ ಬಿಸಿಯಾಗುವ ಸಂಭವ ಕೂಡ ಇದೆ.

ವೇಗವಾದ ಬ್ಯಾಟರಿ ಚಾರ್ಜರ್

ವೇಗವಾದ ಬ್ಯಾಟರಿ ಚಾರ್ಜರ್

ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ವೇಗವಾದ ಚಾರ್ಜಿಂಗ್ ವ್ಯವಸ್ಥೆಗೆ ಅನುಕೂಲಕರವಾಗಿದೆ. ಸ್ಯಾಮ್‌ಸಂಗ್ ಈ ತಂತ್ರಜ್ಞಾನವನ್ನು "ಅಲ್ಟ್ರಾ ಫಾಸ್ಟ್ ಚಾರ್ಜಿಂಗ್" ಎಂಬುದಾಗಿ ಹೆಸರಿಸಿದೆ. ಮೋಟೋರೋಲಾ ತನ್ನ ಡ್ರಾಯ್ಡ್ ಟರ್ಬೊ ಬರೇ 15 ನಿಮಿಷಗಳಲ್ಲಿ 8 ಗಂಟೆಗಳ ಚಾರ್ಜಿಂಗ್ ಅನ್ನು ಒದಗಿಸುತ್ತದೆ.

ಯಾವುದೇ ಚಾರ್ಜರ್ ಅನ್ನು ಬಳಸುವುದು

ಯಾವುದೇ ಚಾರ್ಜರ್ ಅನ್ನು ಬಳಸುವುದು

ಯಾವುದೇ ಇತರ ಚಾರ್ಜರ್‌ಗಳನ್ನು ಬಳಸುವ ಸಮಯದಲ್ಲಿ ಫೋನ್ ತಯಾರಕರಿಂದ ಅನುಮತಿಯನ್ನು ಅದು ಪಡೆದುಕೊಂಡಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕಡಿಮೆ ದರದ ಚಾರ್ಜರ್‌ಗಳು ಫೋನ್‌ಗೆ ಹಾನಿಯನ್ನುಂಟು ಮಾಡಬಹುದು.

ಲಿಯೋನ್ ಬ್ಯಾಟರಿ

ಲಿಯೋನ್ ಬ್ಯಾಟರಿ

ಲಿಯೋನ್ ಬ್ಯಾಟರಿಗಳಲ್ಲಿ 0% ಚಾರ್ಜ್ ಮುಗಿಯುವವರೆಗೆ ಚಾರ್ಜಿಂಗ್‌ಗಾಗಿ ಕಾಯಬೇಡಿ. ಆದಷ್ಟು 40-50% ದಷ್ಟು ಚಾರ್ಜ್ ಕಡಿಮೆಯಾದಗಲೇ ಚಾರ್ಜ್ ಮಾಡಿ.

ಹಳೆಯ ಫೋನ್‌

ಹಳೆಯ ಫೋನ್‌

ನೀವು ಹೆಚ್ಚು ಬಳಸದೇ ಇರುವ ಹಳೆಯ ಫೋನ್‌ಗೆ ಕೂಡ ಆಗಾಗ್ಗೆ ಚಾರ್ಜ್ ಮಾಡುತ್ತಿರಿ.

ಫೋನ್ ಚಾರ್ಜಿಂಗ್ ಸಲಹೆ

ಫೋನ್ ಚಾರ್ಜಿಂಗ್ ಸಲಹೆ

ಫೋನ್ ಚಾರ್ಜಿಂಗ್ ಸಲಹೆಗಳಿಂದ ನಿಮ್ಮ ಫೋನ್‌ಗೆ ಯಾವಾಗ ಎಷ್ಟು ಪ್ರಮಾಣದ ಚಾರ್ಜ್ ಅನ್ನು ನಡೆಸಬೇಕು ಎಂಬುದನ್ನು ನೀವು ತಿಳಿದುಕೊಳ್ಳುವಿರಿ.

Best Mobiles in India

English summary
Extend your battery's lifespan with these top tips, including how often you should charge your phone's battery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X